SFI Students Voice

SFI Students Voice ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದ ಚ?

*ಕೋವಿಡ್ ಸಂಕಷ್ಟದಲ್ಲಿ SFI ಮತ್ತು DYFI  ವತಿಯಿಂದ ರಕ್ತದಾನ*🩸🩸🩸🩸🩸🩸🩸ಕಳೆದ ಒಂದು ತಿಂಗಳಿಂದಲೂ ಕೋವಿಡ್ ತನ್ನ ಆರ್ಭಟವನ್ನುವ ಮುಂದುವರೆಸಿದೆ, ಇಂ...
05/06/2021

*ಕೋವಿಡ್ ಸಂಕಷ್ಟದಲ್ಲಿ SFI ಮತ್ತು DYFI ವತಿಯಿಂದ ರಕ್ತದಾನ*
🩸🩸🩸🩸🩸🩸🩸
ಕಳೆದ ಒಂದು ತಿಂಗಳಿಂದಲೂ ಕೋವಿಡ್ ತನ್ನ ಆರ್ಭಟವನ್ನುವ ಮುಂದುವರೆಸಿದೆ, ಇಂತಹ ಸಂಧರ್ಭದಲ್ಲಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈಗಾಗಲೆ ಸಾವು ನೋವುಗಳಿಂದ ಬೆಡ್ ಗಳು ಸಿಗದೆ, ಆಕ್ಸಿಜನ್ ಸಿಗದೆ ಬಹಳ ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕ್ರಾಂತಿಕಾರಿ ಸಂಘಟನೆಗಳಾದ ಎಸ್.ಎಫ್.ಐ ಮತ್ತು ಡಿ.ಐ.ಎಫ್.ಐ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಾಮೂಹಿಕವಾಗಿ ಸಂಘಟನೆಗಳ ಕಾರ್ಯಕರ್ತರು , ನಾಗರೀಕರು ಎಲ್ಲರು ಒಳಗೊಂಡಂತೆ ರಕ್ತದಾನವನ್ನು ಮಾಡಿದ್ದಾರೆ. ಕರೊನಾ ಕಡಿಮೆಯಾದಂತೆ ಬೇರೆ ಕಾರಣಗಳಿಗೆ ಮತ್ತು ತುರ್ತು ಸಂಧರ್ಭಗಳಲ್ಲಿ ರಕ್ತ ಬೇಕಾಗತ್ತದೆ ಹಾಗಾಗಿ ನಾವು ಎಚ್ಚರದಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ. ಈಗಾಗಲೆ ಖಾಸಗೀ ಆಸ್ಪತ್ರೆಗಳ ಹಾವಳಿಯಿಂದ ಜನರಿಗೆ ಯಾವುದು ಸರಿಯಾದ ಕ್ರಮದಲ್ಲಿ ಮತ್ತು ದರದಲ್ಲಿ ಔಷದಿಗಳು ಸಿಗುತ್ತಿಲ್ಲಾ, ಸರ್ಕಾರಗಳು ಕೂಡ ಕೈಕಟ್ಟಿ ಕುಳಿತಾಗಿದೆ ಹಾಗಾಗಿ ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಬರುವ ಬಡ ಜನರಿಗಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನ ರಕ್ತದಾನವನ್ನುವ ಮಾಡಿ ಜೀವ ಉಳಿಸುವ ಕೆಲಸ ಮಾಡಲಿ ಎಂಬುದೆ ನಮ್ಮ ಆಶಯ. ಶಿಭಿರದಲ್ಲಿ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಡಿ.ಐ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ ರೈತ ಉಖಂಡರಾದ ವಾಸಣ್ಣ, ರಕ್ಷಿತ, ನಂದನ್, ಸ್ವರೂಪ್, ದಿವಾಕರ ಆಜಾದ್ ಇನ್ನಿತರು ಉಪಸ್ಥಿತರಿದ್ದರು.
🩸🚩❤️🩸🚩❤️🙏

ಕೊರೋನಾ ಕುರಿತು ಗ್ರಾಮೀಣ ಪ್ರದೇಶದಲ್ಲಿ ಎಸ್ಎಫ್ಐ ನಿಂದ ಜಾಗೃತಿ ಅರಿವು ಅಭಿಯಾನ.ಬಂಗಾರಪೇಟೆ: ತಾಲ್ಲೂಕಿನಲ್ಲಿ  ದಿನೇ ದಿನೆ ಕೊರೋನಾ ಸೊಂಕು ಹೆಚ್...
10/05/2021

ಕೊರೋನಾ ಕುರಿತು ಗ್ರಾಮೀಣ ಪ್ರದೇಶದಲ್ಲಿ ಎಸ್ಎಫ್ಐ ನಿಂದ ಜಾಗೃತಿ ಅರಿವು ಅಭಿಯಾನ.

ಬಂಗಾರಪೇಟೆ: ತಾಲ್ಲೂಕಿನಲ್ಲಿ ದಿನೇ ದಿನೆ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ಕೋವಿಡ್ -19 ಕುರಿತು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಸಂಘಟನೆ ವತಿಯಿಂದ ಜಾಗೃತಿ ಅರಿವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹುದುಕುಳ ಗ್ರಾಮದಲ್ಲಿ ನಡೆಯ ಕೊರೋನಾ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ ಜನರು ಈ ಕೋವಿಡ್ ಸಾಂಕ್ರಾಮಿಕದಿಂದ ಸುರಕ್ಷಿತವಾಗಿರಲು ಎಲ್ಲರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ, ಮತ್ತು ಕೊರೋನಾ ಸೊಂಕಿಗೆ ಎದುರಿಸಬೇಕಾದ ಅಗತ್ಯವಿಲ್ಲ ಇದನ್ನು ವೈಜ್ಞಾನಿಕವಾಗಿ ವೈಧ್ಯರ ಮಾರ್ಗದರ್ಶನ, ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದ್ದರಿಂದ ಜನರು ಕೋವಿಡ್ ಕುರಿತು ಭಯದಿಂದ ಮೌಢ್ಯತೆ ಕಂದಾಚಾರಗಳನ್ನು ಅನುಸರಿಸಬಾರದು. ವೈಜ್ಞಾನಿಕ ಜೀವನ ವಿಧಾನದಿಂದ ಮಾತ್ರ ಇಂತಹ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದರು. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು ಈ ಕಾರ್ಯಕ್ರಮದಲ್ಲಿ ಎಸ್ಎಫ್ಐ ಕಾರ್ಯಕರ್ತರು "ಜೈ ಭೀಮ್ ಯುವಕರು ಬ್ಯಾನರ್ ಇಡಿದು ಅರಿವು ಮೂಡಿಸಿದರು.

ಈ ಸುದ್ದಿಯನ್ನು ಪ್ರಕಟಿಸಲು ಕೋರುತ್ತೇವೆ.

ಅಜಯ್ ಕುಮಾರ್.
ತಾಲ್ಲೂಕು ಅಧ್ಯಕ್ಷ
ಎಸ್ಎಫ್ಐ ಬಂಗಾರಪೇಟೆ

09/05/2021

*ಆಕ್ಸಿಜನ್ ಸಾಂದ್ರಕಗಳ ಆಮದು ಮೇಲೆ 12% GST ಮನ್ನಾ ಕೋರಿ ಸುಪ್ರೀಂ ಕೋರ್ಟಿಗೆ SFI ಅರ್ಜಿ ಸಲ್ಲಿಕೆ ಕುರಿತು SFI ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಮಾತುಗಳು.*

Share more people's

09/05/2021

ಆಕ್ಸಿಜನ್ ಸಾಂದ್ರಕಗಳ ಆಮದು ಮೇಲೆ 12% GST ಮನ್ನಾ ಕೋರಿ ಸುಪ್ರೀಂ ಕೋರ್ಟಿಗೆ SFI ಅರ್ಜಿ ಸಲ್ಲಿಕೆ ಕುರಿತು SFI ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಮಾತುಗಳು.

Share more people's

ಕಾಮ್ರೇಡ್  #ವಿಠಲ_ಭಂಡಾರಿ  ಲಾಲ್ ಸಲಾಂವಿದ್ಯಾರ್ಥಿ ಯುವಜನ ಚಳುವಳಿಯನ್ನು ನಾಡಿನಲ್ಲಿ ಕಟ್ಟಲು ಸಕ್ರಿಯವಾಗಿ ಶ್ರಮಿಸಿದ ಎಸ್ಎಫ್ಐ ಮಾಜಿ ನಾಯಕರು, ...
07/05/2021

ಕಾಮ್ರೇಡ್ #ವಿಠಲ_ಭಂಡಾರಿ ಲಾಲ್ ಸಲಾಂ
ವಿದ್ಯಾರ್ಥಿ ಯುವಜನ ಚಳುವಳಿಯನ್ನು ನಾಡಿನಲ್ಲಿ ಕಟ್ಟಲು ಸಕ್ರಿಯವಾಗಿ ಶ್ರಮಿಸಿದ ಎಸ್ಎಫ್ಐ ಮಾಜಿ ನಾಯಕರು, ಪ್ರಸ್ತುತ ಸಾಂಸ್ಕೃತಿಕ ರಂಗದಲ್ಲಿ ಪ್ರಗತಿಶೀಲ ಸಾಹಿತ್ಯ, ರಂಗಭೂಮಿಯ ಜೊತೆಗೆ ಸಂವಿಧಾನ ಓದು ಅಭಿಯಾನವನ್ನು ನಾಡಿನಾದ್ಯಂತ ಯಶಸ್ವಿಯಾಗಿ ಪಸರಿಸಲು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಟ, ಮುದ್ರಣ, ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಸಂಚಲನ ಮೂಡಿಸಿದ್ದ ಸಂಗಾತಿ ಕೋವಿಡ್ ಸೊಂಕು ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಖಂಡಿತವಾಗಿಯೂ ನಮ್ಮ ಸಂಗಾತಿ ಈ ಹೋರಾಟದಲ್ಲಿ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಇನ್ನಿಲ್ಲ ಎಂಬ ದುಃಖದ ಸುದ್ದಿ ನಮ್ಮೆಲ್ಲರಿಗೂ ಅಘಾತ ಉಂಟು ಮಾಡಿದೆ.

ಹೋಗಿ ಬನ್ನಿ ಕಾಮ್ರೇಡ್ ನಿಮ್ಮ ಆಶಯಗಳಿಗಾಗಿ ಜನತೆಯ ವಿಮೋಚನಾ ಹೋರಾಟವನ್ನು ಮುಂದುವರಿಸುತ್ತೇವೆ. ✊🏽🚩✊🏽

ಭಾರತ ವಿದ್ಯಾರ್ಥಿ ಫೆಡರೇಶನ್ SFI- ಕರ್ನಾಟಕ ರಾಜ್ಯ ಸಮಿತಿ ಕ್ರಾಂತಿಕಾರಿ ಕೆಂಪು ನಮನಗಳು ಸಲ್ಲಿಸುತ್ತದೆ.✊🏽🌹😰🌹✊🏽

ಕರ್ನಾಟಕ ವಿಶ್ವವಿದ್ಯಾಲಯವು ಪದವಿ ಪರೀಕ್ಷೆಗಳನ್ನು ನಡೆಸದೆ, ಫಲಿತಾಂಶ ಪ್ರಕಟಿಸದೆ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಅಂಕಪಟ್ಟಿ ನೀಡದೇ ಮುಂದಿ...
07/05/2021

ಕರ್ನಾಟಕ ವಿಶ್ವವಿದ್ಯಾಲಯವು ಪದವಿ ಪರೀಕ್ಷೆಗಳನ್ನು ನಡೆಸದೆ, ಫಲಿತಾಂಶ ಪ್ರಕಟಿಸದೆ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಅಂಕಪಟ್ಟಿ ನೀಡದೇ ಮುಂದಿನ ಸೆಮಿಸ್ಟರ್ ಗಳ ಆನ್ಲೈನ್ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುವುದನ್ನು ಬಿಟ್ಟು ಸೆಮಿಸ್ಟರ್ ಪರೀಕ್ಷೆ ಬದಲಿಗೆ ವಾರ್ಷಿಕ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಹಾವೇರಿಯ ಬೆಂಚ್ಚಿಹಳ್ಳಿ ಗ್ರಾಮದಲ್ಲಿ ಎಸ್ಎಫ್ಐ ಕಾರ್ಯಕರ್ತರು ಪೋಸ್ಟರ್ ಪ್ರದರ್ಶನ ಮಾಡಿ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮಹೇಶ್ ನರೇಗಲ್, ಸುರೇಶ ಕರಬಸಮ್ಮನವರ, ಕುಮಾರ ಬ್ಯಾಗಾದಿ, ಪಕ್ಕಿರೇಶ ಜಿ, ವಿನಾಯಕ ಗೋಟಗೊಡಿ,ಮನೋಜ ಮರಿಯಣ್ಣನವರ, ಸುರೇಶ ಜಿ ಭಾಗವಹಿಸಿದ್ದರು.

 ಾರವಾಡ  ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮನೆ ಮನೆಗಳಲ್ಲಿ ಪೋಸ್ಟರ್ ಪ್ರದರ್ಶನ ಮಾಡಿ ಧಾರವಾಡ...
06/05/2021

ಾರವಾಡ
ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಧಾರವಾಡ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮನೆ ಮನೆಗಳಲ್ಲಿ ಪೋಸ್ಟರ್ ಪ್ರದರ್ಶನ ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪದವಿ ಪರೀಕ್ಷೆಗಳನ್ನು ನಡೆಸದೆ, ಫಲಿತಾಂಶ ಪ್ರಕಟಿಸದೆ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಅಂಕಪಟ್ಟಿ ನೀಡದೇ ಮುಂದಿನ ಸೆಮಿಸ್ಟರ್ ಗಳ ಆನ್ಲೈನ್ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುವುದನ್ನು ಬಿಟ್ಟು ಸೆಮಿಸ್ಟರ್ ಪರೀಕ್ಷೆ ಬದಲಿಗೆ ವಾರ್ಷಿಕ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಲಾಯಿತು.
ಪೋಸ್ಟರ್ ಪ್ರದರ್ಶನದಲ್ಲಿ ಎಸ್ಎಫ್ಐ ಮುಖಂಡರಾದ ಪರಶುರಾಮ ಮಳ್ಳಿ, ಅನುಶಾ ಪಿ, ಜ್ಯೋತಿ ಕಮ್ಮಾರ, ಅನು, ಲಕ್ಷ್ಮಣ ಮಕದುಮ್ ಭಾಗವಹಿಸಿದ್ದರು.

05/05/2021

ಯಡಿಯೂರಪ್ಪನವ್ರೆ ನಿಮ್ಮ ಅಭಿಮಾನಿ ಒಬ್ಬರು ನಿಮಗೆ ಒಂದು ಅದ್ಭುತವಾದ ಸಂದೇಶ ನೀಡಿದ್ದಾರೆ ಕೇಳಿಸಿ ಕೊಂಡು ಜೀವನ ಪಾವನ ಮಾಡಿಕೊಳ್ಳಿ..

ಮೇ.24 ರಿಂದ ಆರಂಭವಾಗಬೇಕಿದ್ದ 'ದ್ವಿತೀಯ ಪಿಯುಸಿ ಪರೀಕ್ಷೆ' ಮುಂದೂಡಿಕೆ ಮಾಡಲಾಗಿದೆ ಹಾಗು 'ಪ್ರಥಮ ಪಿಯುಸಿ'ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ...
04/05/2021

ಮೇ.24 ರಿಂದ ಆರಂಭವಾಗಬೇಕಿದ್ದ 'ದ್ವಿತೀಯ ಪಿಯುಸಿ ಪರೀಕ್ಷೆ' ಮುಂದೂಡಿಕೆ ಮಾಡಲಾಗಿದೆ ಹಾಗು 'ಪ್ರಥಮ ಪಿಯುಸಿ'
ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ.

03/05/2021

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡಿಯುತ್ತಿರುವ ದೌರ್ಜನ್ಯ ಮತ್ತು ಕೊರೋನದಲ್ಲಿ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸದೆ ಹಾಗು ವಿದ್ಯಾರ್ಥಿಗಳಿಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಒಬ್ಬ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

ಇದನ್ನು ಶೇರ್ ಮಾಡಿ 🙏

01/05/2021

ಸರ್ವರಿಗೂ #ಉಚಿತವಾಗಿ_ಕೊವೀಡ್_ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ. ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿಸಿ.
ದೇಶದ ಜನರಿಗೆ ಅಗತ್ಯ ಆಕ್ಸಿಜನ್, ವೆಂಟಿಲೇಟರ್, ಬೆಡ್, ಆಸ್ಪತ್ರೆಗಳು, ವೈದ್ಯರನ್ನು ಒದಗಿಸಬೇಕೆಂದು ಏಪ್ರಿಲ್ 30
ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಕೇಂದ್ರ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಪ್ರತಿಭಟನೆ ದಿನದ ಅಂಗವಾಗಿ ಇಂದು ಕೋಲಾರ SFi ಕಛೇರಿಯಿಂದ ಪ್ರತಿಭಟನೆ ನಡೆಸಲಾಯಿತು.





.


ಸರ್ವರಿಗೂ  #ಉಚಿತವಾಗಿ_ಕೊವೀಡ್_ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ. ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿ...
30/04/2021

ಸರ್ವರಿಗೂ #ಉಚಿತವಾಗಿ_ಕೊವೀಡ್_ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ. ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿಸಿ.
ದೇಶದ ಜನರಿಗೆ ಅಗತ್ಯ ಆಕ್ಸಿಜನ್, ವೆಂಟಿಲೇಟರ್, ಬೆಡ್, ಆಸ್ಪತ್ರೆಗಳು, ವೈದ್ಯರನ್ನು ಒದಗಿಸಬೇಕೆಂದು ಏಪ್ರಿಲ್ 30
ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಕೇಂದ್ರ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಪ್ರತಿಭಟನೆ ದಿನದ ಅಂಗವಾಗಿ ಇಂದು ನಮ್ಮ ಮನೆಯಂಗಳದಿಂದಲೇ ಪ್ರತಿಭಟನೆ ನಡೆಸಲಾಯಿತು.





.


Address

Mulbagal

Telephone

+917618767821

Website

Alerts

Be the first to know and let us send you an email when SFI Students Voice posts news and promotions. Your email address will not be used for any other purpose, and you can unsubscribe at any time.

Contact The Organization

Send a message to SFI Students Voice:

Share