09/07/2026
ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಎಡ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯ ಮಟ್ಟದ ಸಮಾವೇಶ
ಎನ್. ಟಿ. ಎ ಮತ್ತು ನೀಟ್ ಅನ್ನು ರದ್ದುಗೊಳಿಸಿ, ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಿರಿ, ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಿ ಎಂದು ಆಗ್ರಹಿಸಿ, ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್ಎಫ್,
ಎಸ್ಎಫ್ಐ, ಎಐಡಿಎಸ್ಓ ಹಾಗೂ ಎಐಎಸ್ಎ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶವನ್ನು ಸಂಘಟಿಸಲಾಗಿತ್ತು.
ಸಮಾವೇಶದ ಅತಿಥಿಗಳಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ (ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು), ನಾಡೋಜ ಜಿ ರಾಮಕೃಷ್ಣ (ಸಂಸ್ಕೃತಿ ಚಿಂತಕರು), ಪ್ರೊ ನಿರಂಜನಾರಾಧ್ಯ (ಪ್ರಮುಖ ಶಿಕ್ಷಣ ತಜ್ಞರು), ಶ್ರೀಪಾದ್ ಭಟ್ (ಶಿಕ್ಷಣ ತಜ್ಞರು), ಪ್ರೊ. ಆರ್ ಸುನಂದಮ್ಮ (ವಿಶ್ರಾಂತ ಕುಲಸಚಿವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ,ವಿಜಯಪುರ.) ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಡ ವಿದ್ಯಾರ್ಥಿ ಸಂಘಟನೆಗಳ ನಾಯಕರು ಉಪಸ್ಥಿತರಿದ್ದು, ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.