05/09/2026
ತಿ. ನರಸೀಪುರ :- ಶಿಕ್ಷಣವೆಂದರೆ ಕೇವಲ ಅಕ್ಷರ ಅಭ್ಯಾಸವಲ್ಲ, ಅದು ಮನುಷ್ಯನ ವ್ಯಕ್ತಿತ್ವವನ್ನು ಅರಳಿಸಿ ಸಜ್ಜನತೆಯನ್ನಾಗಿಸುವ ಸಂಸ್ಕಾರ ಎಂದು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ಹೇಳಿದರು,
ತಾಲೂಕಿನ ಬನ್ನೂರು ಪಟ್ಟಣದ ಬನ್ನೂರು ಲಯನ್ಸ್ ಎಜುಕೇಶನ್ ಸೊಸೈಟಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಿಗೆ ಅಭಿನಂದಿಸಿ ಮಾತನಾಡಿದ ಅವರು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಾಗ ಸಮಾಜವನ್ನು ಕತ್ತಲೆಯಿಂದ ಬೆಳಕಿನಡೆ ಮುನ್ನಡೆಸುವ ಗುರುವಿನ ಮಹತ್ವವನ್ನು ಸ್ಮರಿಸುವುದು ಅತ್ಯಂತ ಪ್ರಸ್ತುತ ಎಂದರು,
ಶಿಕ್ಷಕ ಕೇವಲ ಪಠ್ಯವನ್ನು ಬೋಧಿಸುವ ಉದ್ಯೋಗಿ ಎಲ್ಲಾ ಬದಲಿಗೆ ಭವಿಷ್ಯದ ತಲೆ ಮಾರನ್ನು ರೂಪಿಸುವ ಶಿಲ್ಪಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸತ್ಯ ಕರುಣೆ ಶಿಸ್ತು ಮತ್ತು ಸಮಾನತೆಯ ಮೌಲ್ಯಗಳನ್ನು ಬಿತ್ತುವ ಮೂಲಕ ಅವರ ನೈತಿಕ ದಿಕ್ಸೂಚಿಯಾಗಿದ್ದಾರೆ ಎಂದು ಬಣ್ಣಿಸಿದರು,
ಬನ್ನೂರು ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎಸ್ ರಾಮಚಂದ್ರ ಮಾತನಾಡಿ ಶಿಕ್ಷಕ ವೃತ್ತಿಗೆ ತನ್ನದೇ ಆದ ಜನತೆ ಮತ್ತು ಹಿರಿಮೆ ಇದೆ, ಅಜ್ಞಾನದ ಅಂದಕಾರವನ್ನು ಕಳೆಯುವ ಅಕ್ಷರದ ಬೆಳಕು ಮೂಡಿಸುವ ಈ ಕೆಲಸ ಮಕ್ಕಳ ಬದುಕನ್ನು ರೂಪಿಸುತ್ತದೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಬಾಲ್ಯದಲ್ಲೇ ಪ್ರತಿಭೆಯನ್ನ ಗುರುತಿಸಿ ಪ್ರೋತ್ಸಾಹಿಸುವವರು ಶಿಕ್ಷಕರು, ಅವರ ಮಾತುಗಳಿಂದ ಪ್ರೇರಣೆ ಸ್ಪೂರ್ತಿ ಪಡೆದು ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡವರು ಸಾಧನೆಯ ಪದದಲ್ಲಿ ಸಾಗುತ್ತಾರೆ ಎಂದು ಹೇಳಿದರು,
ಇಂದು ನಾನು ಯಾವ ಸ್ಥಾನದಲ್ಲಿದ್ದರೂ ಅದರ ಹಿಂದೆ ನನ್ನ ಶಿಕ್ಷಕರ ಆಶೀರ್ವಾದ ಮತ್ತು ಮಾರ್ಗದರ್ಶನ ಇದೆ, ಹಣ ಸಂಪಾದನೆಗಿಂತ,ವಿದ್ಯೆ ಸಂಪಾದನೆ ದೊಡ್ಡದು, ಪರಿಶ್ರಮದಿಂದ ಓದಿ ಜೀವನದಲ್ಲಿ ದೊಡ್ಡವರಾಗಿ ಎಂಬ ಗುರುಗಳು ಹೇಳಿದ ಮಾತುಗಳು ಇಂದಿಗೂ ಅಕ್ಷರ ಸಹ ಸತ್ಯವಾಗಿದೆ ಎಂದರು,
ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಶ್ವಾರ್ಚನೆ ಮಾಡಿ ನಂತರ ಶಿಕ್ಷಕ ವೃಂದದವರಿಗೆ ಅಭಿನಂದಿಸಿದರು,
ಕಾರ್ಯಕ್ರಮದಲ್ಲಿ ವೈ. ಎನ್. ರಾಮಸ್ವಾಮಿ,
ಮುಖ್ಯ ಶಿಕ್ಷಕರಾದ ಶ್ರೀಮತಿ ರಾಣಿ,ಯೋಗರಾಜ್, ಲಯನ್ಸ್ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ ದವರುಗಳು ಉಪಸತ್ತಿದ್ದರು