29/03/2026
ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮಾ.29ರಂದು ಬೆಳಗ್ಗೆ 46ನೇ ತಂಡದ ಪೊಲೀಸ್ ಉಪ ನಿರೀಕ್ಷಕರು(ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಸಿಎಂ ಶ್ರೀ ಸಿದ್ದರಾಮಯ್ಯ ರವರು ಭಾಗವಹಿಸಿದ್ದರು.
ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ 8 ಗಂಟೆಗೆ ಅಕಾಡೆಮಿಯ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು ಆಗಮಿಸಿದ್ದರು. ಗೃಹ ಸಚಿವ ಡಾ. ಜಿ. ಪರಮೇಶ್ವರ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಜತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹಾದೇವಪ್ಪ ರವರು, ಪಶು ಸಂಗೋಪನ ಮತ್ತು ರೇಷ್ಮೆಇಲಾಖೆ, ಸಚಿವರಾದ ಕೆ. ವೆಂಕಟೇಶ್ ಅವರು, ನರಸಿಂಹ ಕ್ಷೇತ್ರದ ಶಾಸಕರಾದ ಶ್ರೀ ತನ್ವೀರ್ ಸೇಟ್ ರವರು,ಡಿಜಿಪಿ ಡಾ.ಎಂ. ಎ. ಸಲೀಂ ರವರು, ತರಬೇತಿ ವಿಭಾಗದ ಎಡಿಜಿಪಿ ಶ್ರೀ ದೇವ ಜ್ಯೋತಿ ರೇ ರವರು,ಅಕಾಡೆಮಿಯ ನಿರ್ದೇಶಕ ಶ್ರೀ. ವಿಷ್ಣುವರ್ಧನ ಎನ್ ಐಪಿಎಸ್ ರವರು ಹಾಗೂ ಉಪ ನಿರ್ದೇಶಕ ಶ್ರೀ ಚೆನ್ನಬಸವಣ್ಣ ಎಸ್ ಎಲ್ ಐಪಿಎಸ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
"46ನೇ ತಂಡದಲ್ಲಿ 327 ಪೊಲೀಸ್ ಉಪ
ನಿರೀಕ್ಷಕ ಪ್ರಶಿಕ್ಷಣಾರ್ಥಿಗಳಿದ್ದು ಇವರಲ್ಲಿ 90 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದರೆ, 237 ಮಂದಿ ಪುರುಷ ಪ್ರಶಿಕ್ಷಣಾರ್ಥಿಗಳಿದ್ದಾರೆ. ಇವರಲ್ಲಿ ಒಬ್ಬರು ದಂತ ವೈದ್ಯ ಪದವಿ ಪಡೆದಿದ್ದರೆ, 56 ಮಂದಿ ವಿವಿಧ ಸ್ನಾತಕೋತ್ತರ ಪದವಿ ಹಾಗೂ ಉಳಿದ 143 ಮಂದಿ ವಿವಿಧ ಪದವಿ ಶಿಕ್ಷಣ ಪಡೆದವರಾಗಿದ್ದಾರೆ,'' ''ಈ ಕಾರ್ಯಕ್ರಮದಲ್ಲಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ, ಅತ್ಯುತ್ತಮ ಒಳಾಂಗಣ ಪ್ರಶಿಕ್ಷಣಾರ್ಥಿ, ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ, ಅತ್ಯುತ್ತಮ ಹೊರಾಂಗಣ ಪ್ರಶಿಕ್ಷಣಾರ್ಥಿ, ಉತ್ತಮ ರೈಫಲ್ ಫೈರಿಂಗ್, ಉತ್ತಮ ಪಿಸ್ತೂಲ್ ಫೈರಿಂಗ್ ಪ್ರಶಸ್ತಿಯನ್ನು ನೀಡಲಾಯಿತು. ಅಕಾಡೆಮಿಯ ಸಹಾಯಕ ನಿರ್ದೇಶಕರು ಶ್ರೀ ರೇಣುಕಾರಾಧ್ಯ, ಶ್ರೀ. ಕುಮಾರ್, ಶ್ರೀ ಸಂದೇಶ್ ಕುಮಾರ್ ಹಾಗೂ ಶ್ರೀ ವೆಂಕಟೇಶ್ ಹಾಗೂ ಶ್ರೀ ನರಸಿಂಹ ಟಿ ಇದ್ದರು.