27/05/2026
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಅವರ ಆದೇಶ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಚಂದನ್ ಅವರ ಸೂಚನೆ ಮೇರೆಗೆ ದಿನಾಂಕ 26-05-2026ನೇ ಮಂಗಳವಾರ ರಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ನೀಟ್ ಪರೀಕ್ಷೆ ಪೇಪರ್ ಸೋರಿಕೆ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆ ಮತ್ತು ಅಗತ್ಯವಸ್ತುಗಳ ಬೆಲೆಯನ್ನು ಏರಿಕೆಯಾಗಿರುವುದನ್ನು ಖಂಡಿಸಿ ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವಾಜ್ ಖಾನ್ ರವರ ಅಧ್ಯಕ್ಷತೆಯಲ್ಲಿ , ಹಾಗೂ ಟಿ ನರಸೀಪುರ ಬ್ಲಾಕ್ ಅಧ್ಯಕ್ಷರಾದ ಪ್ರದೀಪ್ ನಿಲಸೋಗೆ ಹಾಗೂ ಬನ್ನೂರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ವಾಸಿಮ್ ರವರ ನೇತೃತ್ವದಲ್ಲಿ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು..
ನಂತರ ಟಿ ನರಸೀಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಟಿ ನರಸೀಪುರ ತಾಲೂಕಿನ ಕಚೇರಿಗೆ ಭೇಟಿ ನೀಡಿ NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಟಿ ನರಸೀಪುರ ಯುವ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿ ಆಗ್ರಹಿಸಿದರೂ..
ಈ ಸಂಧರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದನ್ ಗೌಡ ರವರು, ಸೋಸಲೆ ದೇವರಾಜು, ಕನ್ನಯಾಕನಹಳ್ಳಿ ಕುಮಾರ್, ತೊಟ್ಟವಾಡಿ ರಾಜೇಂದ್ರ, ಕೇತಹಳ್ಳಿ ಸಿದ್ದಶೆಟ್ಟಿ,ಹರೀಶ , ಸುನಿಲ್ ರಾಜು, ಯರಗನಹಳ್ಳಿ ರಂಗರಾಮು, ತೊಟ್ಟವಾಡಿ ರವಿ,ರಾಜೇಂದ್ರ ಬನ್ನೂರು ಸೈಯದ್ ಮಜರ್, ಗಂಗಾಧರ ಚೌಹಳ್ಳಿ, ಹೆಮ್ಮಿಗೆ ರವಿ, ಕಲಿಯೂರು ಸತ್ಯ, ಮತ್ತು ಹ್ಯಾಕನೂರು ಕುಮಾರ್, ಮಹದೇವಸ್ವಾಮಿ, ಮಾವಿನಹಳ್ಳಿ ಮಹಮ್ಮದ್ ಸೈಯದ್, ಸೋಸಲೆ ಕಾರ್ತಿಕ್, ಅಭಿ ಕುಕ್ಕುರು, ತಲಕಾಡು ರಂಗಸ್ವಾಮಿ, ಚತುರ್ ಗೌಡ ಸೇರಿದಂತೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರ ಹಾಗೂ ಟಿ ನರಸೀಪುರ ಬ್ಲಾಕ್ ಮತ್ತು ಬನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉಪಸ್ತಿತರಿದ್ದರು..