Satish Gowda For Rajya vokkaligara Sangha

Satish Gowda For Rajya vokkaligara Sangha ಸಮುದಾಯದ ಆಂತರಿಕ ಸರ್ಕಾರ ರಾಜ್ಯ ಒಕ್ಕಲಿಗರದ ಗೌರವ ಘನತೆ ಕಾಪಾಡುವುದು.

ಒಕ್ಕಲಿಗರ ಸಂಘದ ಮೂಲಕ ಒಕ್ಕಲಿಗರ ಹಿತ ಕಾಯುವುದು ಹಾಗು ಒಕ್ಕಲಿಗರ ಸಂಘದ ಮೂಲ ಉದ್ದೇಶ ಸಾಮಾನ್ಯ ಒಕ್ಕಲಿಗರಿಗೆ ತಲುಪುವಂತೆ ಮಾಡುವುದು ಹಾಗು ಆ ಮೂಲಕ ಸಂಘದ ಗೌರವ ಕಾಪಾಡುವುದು..
ರಾಜ್ಯ ಒಕ್ಕಲಿಗರ ಸಂಘ ಸಮುದಾಯದ ಆಂತರಿಕ ಸರ್ಕಾರ ಇಂತಹ ಸರ್ಕಾರವನ್ನು ಸಮುದಾಯದ ಜನರಿಗಾಗಿ ತರುವ ಸಲುವಾಗಿ ಹಿರಿಯ ಜೀವಗಳು ಕಲ್ಲು ಮುಳ್ಳಿನ ಹಾದಿಯನ್ನೇ ಸವೆಸಿದ್ದಾರೆ ಅದರ ಪರಿಣಾಮ ಸಾಮಾನ್ಯ ಗುಡಿಸಲಿನಲ್ಲಿ ಪ್ರಾರಂಭ ಆದ ಸಂಸ್ಥೆ ಜಾತಿವಾರು ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರ ಹೊಮ್ಮಿದೆ .
ಬದಲಾದ ಕಾಲ ಅಟ್ಟದಲ್ಲಿ

ಸಂಘಕ್ಕೆ ಆಯ್ಕೆಯಾಗುವ ನಿರ್ದೇಶಕರ ಮನಸ್ಥಿತಿ ಹಾಗು ಆಯ್ಕೆ ಮಾಡುವ ಸದಸ್ಯರ ವೈಪರೀತ್ಯ ನಡುವೆ ರಾಜ್ಯ ಒಕ್ಕಲಿಗರ ಸಂಘ ಬೇಡದ ವಿಷಯಗಳಿಗೆ ಆಹಾರವಾಗಿದೆ ಸೂಪರ್ ಸಿಡ್ ಆಗಿದೆ 2021 ರ ಪ್ರಾರಂಭದಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದು ನಿರ್ದೇಶಕನಾಗಿ ತಮ್ಮೆಲ್ಲರ ಸಹಕಾರದಿಂದ ಆಯ್ಕೆಯಾದರೆ ಸಂಘದ ಗೌರವ ಉಳಿಸುವ ಜತೆಗೆ ಸಂಘ ಹಾಗು ಸಮುದಾಯದ ನಡುವಿನ ಬಾಂಧವ್ಯದ ಕೊಂಡಿತಾಗುತ್ತೇನೆ ತಳಸ್ಥರದ ಒಕ್ಕಲಿಗರಿಗೂ ಸಹ ಸಂಘದ ಧ್ಯೇಯ ಹಾಗು ಉದ್ದೇಶ ತಲುಪುವಂತೆ ನೋಡಿಕೊಳ್ಳುತ್ತೇನೆ...

ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ, ಪುಗ್ಸಟ್ಟೆಯಾಗಿ ಸಿಕ್ಕ ಭಿಕ್ಷೆಯೂ ಅಲ್ಲ, ತ್ಯಾಗ ಬಲಿದಾನಗಳ ಸಂಕೇತವಿದು,ಕೋಟಿ ಹೋರಾಟದ ಫಲವಿದು.ತಮ್ಮೆಲ್ಲರಿಗೂ...
15/08/2026

ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ,
ಪುಗ್ಸಟ್ಟೆಯಾಗಿ ಸಿಕ್ಕ ಭಿಕ್ಷೆಯೂ ಅಲ್ಲ,
ತ್ಯಾಗ ಬಲಿದಾನಗಳ ಸಂಕೇತವಿದು,
ಕೋಟಿ ಹೋರಾಟದ ಫಲವಿದು.

ತಮ್ಮೆಲ್ಲರಿಗೂ ಸ್ವತಂತ್ರ ದಿನದ ಶುಭಾಶಯಗಳು...

ಜೈ ಹಿಂದ್...🙏

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ ಹೆಚ್ ರಾಮಯ್ಯರ ಸಮಾಧಿಯ ಬಳಿ ಅವರ 147 ...
12/07/2026

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ ಹೆಚ್ ರಾಮಯ್ಯರ ಸಮಾಧಿಯ ಬಳಿ ಅವರ 147 ನೇ ಜಯಂತಿಯನ್ನು ಸರಳವಾಗಿ ಆಚಲಿಸಲಾಯಿತು.

ಈ ವೇಳೆ ಟ್ರಸ್ಟಿನ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ , ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್ , ನಿರ್ದೇಶಕ ಗುರುರಾಜ್ , ಬಿಜೆಪಿ ಮುಖಂಡರಾದ ರಾಕೇಶ್ ಗೌಡ , ಕೆ ಹೆಚ್ ರಾಮಯ್ಯರ ಮೊಮ್ಮಗ ದೇವಿಪ್ರಸಾದ್ ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು..

ಸತೀಶ್ ಗೌಡ ಬೀಡನಹಳ್ಳಿ
ಒಕ್ಕಲಿಗ ಹಿತರಕ್ಷಣ ಬಳಗ

*ಮಾರಗೌಡನಹಳ್ಳಿ ಹೊಂಬೇಗೌಡ ಮರೀಗೌಡ* ಒಕ್ಕಲುತನವೆ ಪ್ರಧಾನವೆನಿಸಿದ ಕುಟುಂಬದಲ್ಲಿ 1916 ರಲ್ಲಿ ಜನಿಸಿದ ಶ್ರೀಯುತರ  110 ನೇ ಜನ್ಮದಿನದ ಜಯಂತೋತ್ಸ...
08/07/2026

*ಮಾರಗೌಡನಹಳ್ಳಿ ಹೊಂಬೇಗೌಡ ಮರೀಗೌಡ* ಒಕ್ಕಲುತನವೆ ಪ್ರಧಾನವೆನಿಸಿದ ಕುಟುಂಬದಲ್ಲಿ 1916 ರಲ್ಲಿ ಜನಿಸಿದ ಶ್ರೀಯುತರ 110 ನೇ ಜನ್ಮದಿನದ ಜಯಂತೋತ್ಸವ ಸಂಭ್ರಮ.

ವ್ಯಕ್ತಿಯಾಗಿ ನಮ್ಮೊಡನೆ ದೈಹಿಕವಾಗಿ ಇಲ್ಲದ ಮರಿಗೌಡರು ತಮ್ಮ ಸಾಧನೆಗಳ ಮೂಲಕ ಇಂದಿಗೂ ಮುಂದೆಯೂ ನಮ್ಮೊಡನೇಯೇ ಇರುತ್ತಾರೆ ಅದಕ್ಕಾಗಿಯೇ ಅವರನ್ನು ತೋಟಗಾರಿಕಾ ಇಲಾಖೆಯ ಪಿತಾಮಹ ಎಂದು ಸಹ ಕರೆಯುತ್ತಾರೆ.

ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಮೂಲಕ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್‌. ಮರಿಗೌಡ ಅವರದು. ದೇಶದ ನಕಾಶೆಯಲ್ಲಿ ‘ತೋಟಗಾರಿಕೆ ಬೀಡು’ ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಹೆಗ್ಗಳಿಕೆಯೂ ಅವರಿಗೇ ಸಲ್ಲಬೇಕು.

ಮರಿಗೌಡರು ಪ್ರಾಥಮಿಕ ಶಾಲೆ ಓದಿದ್ದು ಹತ್ತಿರದ ಬನ್ನೂರಿನಲ್ಲಿ. ವಿಜ್ಞಾನದಲ್ಲಿ ಪದವಿ ಗಳಿಸಿದ್ದು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ. ಲಖನೌ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಗಳಿಸಿದ ಅವರು, ಡಾಕ್ಟರೇಟ್‌ ವ್ಯಾಸಂಗ ಮಾಡಿದ್ದು ಅಮೇರಿಕಾದ ಹಾರ್ವಂಡ್‌ ವಿಶ್ವವಿದ್ಯಾನಿಲಯದಲ್ಲಿ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಹಾಯಕ ಸೂಪರಿಂಡೆಂಟ್‌ ಆಗಿ ಸೇವೆ ಆರಂಭಿಸಿದ್ದ (1942ರಲ್ಲಿ) ಮರಿಗೌಡರು – ವಿಶೇಷ ತರಬೇತಿ ಹಾಗೂ ಡಾಕ್ಟರೇಟ್‌ ವ್ಯಾಸಂಗ ಪಡೆದ ಬಳಿಕ ಲಾಲ್‌ಬಾಗ್‌ ಸೂಪರಿಂಡೆಂಟ್‌ ಆಗಿ 1951ರಲ್ಲಿ ಅಧಿಕಾರ ಸ್ವೀಕರಿಸಿದರು.

ತೋಟಗಾರಿಕೆ ಇಲಾಖೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲದ ಆ ದಿನಗಳಲ್ಲಿ ‘ಉದ್ಯಾನ ಇಲಾಖೆ’ ಎಂಬ ಹೆಸರಿತ್ತು. ಬೆಂಗಳೂರಿನ ಲಾಲ್‌ಬಾಗ್‌ ಇದರ ಕೇಂದ್ರ ಸ್ಥಳ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೋಟಗಾರಿಕಾ ಶಾಖೆ, ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿದ್ದು 1963ರಲ್ಲಿ. ಇದರ ಮೊದಲ ನಿರ್ದೇಶಕರು ಮರಿಗೌಡ. ‘ಉದ್ಯಾನ ಇಲಾಖೆ’ ವ್ಯಾಪ್ತಿಯಲ್ಲಿ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಕೆ.ಆರ್‌.ಎಸ್‌.ನ ಬೃಂದಾವನಗಳು ಮಾತ್ರವಿದ್ದವು. ಆನಂತರ ಇದಕ್ಕೆ ಸೇರ್ಪಡೆಗೊಂಡಿದ್ದು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟ.

ಇವೆಲ್ಲ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಮರಿಗೌಡರನ್ನು ಇಲಾಖೆಗೆ ಕಾಲಿಟ್ಟ ದಿನದಿಂದಲೂ ರೈತರ ಹಿತಚಿಂತನೆ ಕಾಡತೊಡಗಿತ್ತು. ಕೃಷಿ ಕುಟುಂಬದಲ್ಲಿ ಹುಟ್ಟಿ ಸಸ್ಯಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು ಇಂಗ್ಲೆಂಡ್‌ನ ‘ಕ್ಯೂ ಉದ್ಯಾನ’ಕ್ಕೆ ತರಬೇತಿಗೆಂದು ಹೋದಾಗ ಆದ ಅನುಭವಗಳೆಲ್ಲವೂ ರೈತಪರ ದೃಷ್ಟಿಕೋನವನ್ನೇ ಹೊಂದಿದ್ದವು.

‘ಉದ್ಯಾನ ಶಾಖೆ’ಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ಅಂದುಕೊಂಡಿದ್ದನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಿರತರಾದ ಮರಿಗೌಡರು, ಕೇವಲ ಉದ್ಯಾನಗಳ ನಿರ್ವಹಣೆಗೆ ಸೀಮಿತವಾಗಿದ್ದ ಇಲಾಖೆಯನ್ನು ರೈತರ ಬಳಿಗೆ ಕೊಂಡೊಯ್ಯಲು ಮುಂದಾದರು. ರಾಗಿ, ಜೋಳ, ಭತ್ತದೊಂದಿಗೆ ಹಣ್ಣು–ತರಕಾರಿ ಸಹ ಗ್ರಾಮೀಣರ ಬದುಕಿಗೆ ಅನಿವಾರ್ಯ ಎನ್ನುವುದು ಮರಿಗೌಡರ ಮೊದಲ ಮಂತ್ರ. ಗ್ರಾಮಬದುಕಿಗೆ ಪೂರಕವಾಗಿ ತೋಟಗಾರಿಕೆ ನಡೆಯುವುದರಿಂದ ರೈತರ ಬದುಕನ್ನು ಹಸನುಗೊಳಿಸುವುದು ಅವರ ಗುರಿಯಾಗಿತ್ತು.

ರಾಜ್ಯದುದ್ದಕ್ಕೂ ಅನೇಕ ಪಾಳುಬಿದ್ದ ಜಮೀನುಗಳು ಹಣ್ಣು ಹಂಪಲು ಬೆಳೆಯುವ ಕ್ಷೇತ್ರಗಳಾಗಿ ಬೆಳವಣಿಗೆ ಕಂಡವು. ರಾಜ್ಯದ 1800 ಎಕರೆಯಲ್ಲಿ 394 ತೋಟಗಾರಿಕಾ ಕ್ಷೇತ್ರ
ಗಳನ್ನು ಕಟ್ಟಿಕೊಟ್ಟ ಹೆಗ್ಗಳಿಕೆ ಮರಿಗೌಡರದ್ದು! ಇದರಿಂದ ತಾಜಾ ಹಣ್ಣು – ತರಕಾರಿಗಳು ಕಡಿಮೆ ಬೆಲೆಯಲ್ಲಿ ಜನತೆಗೆ ಸಿಕ್ಕಿದರೆ, ಇಲಾಖೆಗೆ ಹೊಸತೊಂದು ಆದಾಯ ಮೂಲ ತೆರೆದುಕೊಂಡಿತು. ಕೃಷಿ ಚಮತ್ಕಾರಗಳನ್ನು ಎಡಬಿಡದೆ ಮಾಡುತ್ತಾ ಹೋದ ಮರಿಗೌಡರು ಜನರಲ್ಲಿ ಸಸ್ಯಪ್ರೀತಿಯನ್ನು ಬೆಳೆಸಿದರು.

ಲಾಲ್‌ಬಾಗ್‌ ಬಹುಬಗೆಯಿಂದ ಅಭಿವೃದ್ಧಿಗೊಳ್ಳಲು ಮರಿಗೌಡರ ಶ್ರಮ ಉಲ್ಲೇಖನೀಯ. ನೂರು ಎಕರೆಗಳಷ್ಟಿರುವ ಕೆಂಪುತೋಟವನ್ನು 240 ಎಕರೆಗಳಿಗೆ ಹಬ್ಬಿಸಲು ಅವರು ಮುಖ್ಯಕಾರಣ. ಉದ್ಯಾನವಾಗಿ ಖ್ಯಾತಿಪಡೆದ ಲಾಲ್‌ಬಾಗ್‌ ಅನ್ನು ತೋಟಗಾರರ ಸಮೂಹಕ್ಕೂ ಗಮನ ಸೆಳೆಯುವಂತೆ ಮಾಡಿದ ಅವರು, ಫಲಪುಷ್ಪ ಪ್ರದರ್ಶನಗಳಿಗೆ ಮೆರುಗು ತಂದರು. ‘ಸಸ್ಯ ಸಂತೆ’ಗಳನ್ನು ಸಂಘಟಿಸಿದರು.

ಸಹಕಾರಿ ತತ್ವದ ಆಧಾರದ ಮೇಲೆ ಹಾಪ್‌ಕಾಮ್ಸ್‌ನಂತಹ ನಿತ್ಯೋಪಯೋಗಿ ಪದಾರ್ಥಗಳ ಮಾರುವ ಮಾರಾಟ ಜಾಲವನ್ನು ನಾಡಿನೆಲ್ಲೆಡೆ ಹರಡಲು ನಾಂದಿ ಹಾಡಿದ್ದು ಮರೀಗೌಡರ ವ್ಯಕ್ತಿತ್ವದ ಫಲ.

ಶಾಲಾ ದಿನಗಳಲ್ಲಿಯೇ ಕವಿ ಕುವೆಂಪು ಅವರ ಒಡನಾಟ ಹೊಂದಿದ್ದ ಮರಿಗೌಡರು, ತೋಟಗಾರಿಕಾ ವಲಯದಲ್ಲಿ ಮಾಡಿದ ಸಾಧನೆಯನ್ನು ಕುವೆಂಪು ತಮ್ಮ ಜೀವನ ವೃತ್ತಾಂತ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲ; ‘ದೇವಾಲಯವೀ ಹೂವಿನ ತೋಟಂ’ – ‘ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ರೀತಿಯ ಅರ್ಥಪೂರ್ಣ ಧ್ಯೇಯವಾಕ್ಯಗಳನ್ನು ಲಾಲ್‌ಬಾಗ್‌ಗಾಗಿ ರಚಿಸಿಕೊಟ್ಟದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್ ಬಾಗ್ ಉಧ್ಯಾನವನದಲ್ಲಿ ಡಾ ಎಂ ಹೆಚ್ ಮರೀಗೌಡರ ಪ್ರತಿಮೆಯನ್ನು ಸ್ಥಾಪಿಸಿರುವುದು ಗೌಡರ ಮೇರುವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

*ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಮರೀಗೌಡರು:-*

ಮರಿಗೌಡರ ಸಹೋದರ ಮಂಚಿಗಯ್ಯನವರು ಒಕ್ಕಲಿಗ ಸಮುದಾಯದ ಪ್ರಥಮ ಇಂಜಿನಿಯರ್ ಎನಿಸಿದ್ದಾರೆ ಎಲ್ಲಾ ಸಮಾಜಗಳ ಹಿತ ಚಿಂತಕರಾದ ಮರೀಗೌಡರು ಹುಟ್ಟಿದ ಜನಾಂಗವನ್ನು ಸಹ ಕಡೆಗಾಣಲಿಲ್ಲ ಅದಕ್ಕಾಗಿಯೇ ಸಮಾಜದ ಸೇವೆ ಮಾಡಲು *1979 ರಿಂದ 84* ಹಾಗು *1987 ರಿಂದ 92* ಎರಡು ಅವಧಿಗೆ ಒಕ್ಕಲಿಗ *ಸಮುದಾಯದ ಆಂತರಿಕ ಸರ್ಕಾರ ರಾಜ್ಯ ಒಕ್ಕಲಿಗರ ಸಂಘದ* ಚುಕ್ಕಾಣಿ ಹಿಡಿದು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.

ತಮ್ಮ ದಕ್ಷತೆಯ ಮಾನದಂಡದ ಆಧಾರದ ಮೇಲೆ ಅಧ್ಯಕರಾಗಿ ಸರ್ಕಾರದ ಮೇಲೆ ಒತ್ತಡ ತಂದು ಕೆಂಪೇಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆದದ್ದು ಮರೀಗೌಡರ ಆಳ್ವಿಕೆ ಅವಧಿಯಲ್ಲಿ ಅದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.

ಅಂದು ಸಮದಾಯದ ಹಿತಕ್ಕಾಗಿ ತಂದ ಸಂಸ್ಥೆಗಳು ಹಲವು ವರ್ಷಗಳು ಒಕ್ಕಲಿಗರ ಹಿತ ಕಾದವು ಸಂಸ್ಥೆ ಬೃಹದಾಕಾರವಾಗಿ ಬೆಳೆಯಿತು ಆದರೆ ಬರುಬರುತ್ತಾ ಅದು ಹಳಿ ತಪ್ಪಿತು.

ಮರೀಗೌಡರು ಹುಟ್ಟೂರಿಗೆ ನನ್ನ ಊರಿಗೆ ಕೇವಲ ಮೂರ್ನಾಲ್ಕು ಕಿಮೀ ಅಂತರ ನಿಜಕ್ಕೂ ಇದು ನನಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯ ತೀರ ದೊಡ್ಡ ಪ್ರಮಾಣದ ಊರಲ್ಲವಾದರು ಕೀರ್ತಿಯ ವಿಷಯದಲ್ಲಿ ನಂಬರ್ 1 ಮರೀಗೌಡ, ಹೊಂಬೇಗೌಡ, ಮಂಚಿಗಯ್ಯರಂತಹ ಶ್ರೆಷ್ಟರ ಪಡೆದ ನಾವು ನಿಜಕ್ಕೂ ಧನ್ಯರು..

*ಸಾಧಕರಿಗೆ ಸಾವಿಲ್ಲ ಎಂಬುದು ಸಾರ್ವಕಾಲಿಕ ಸತ್ಯ..*

ಸತೀಶ್ ಗೌಡ ಬೀಡನಹಳ್ಳಿ ✍️

ಹೆಮ್ಮೆಯಿಂದ ಶೇರ್ ಮಾಡಿ...🙏ಎಲ್ಲಾ ರಾಜರು ರಾಜ್ಯ ವಿಸ್ತಾರ ಮಾಡೋಕೆ ಅಂತ ಯುಧ್ಧ, ತಂತ್ರಗಾರಿಕೆ, ಸ್ನೇಹ ಸಂಬಂಧ, ಮಾಡ್ತಿದ್ದರೆ ಇಲ್ಲೊಬ್ಬ ರಾಜ ತ...
04/06/2026

ಹೆಮ್ಮೆಯಿಂದ ಶೇರ್ ಮಾಡಿ...🙏

ಎಲ್ಲಾ ರಾಜರು ರಾಜ್ಯ ವಿಸ್ತಾರ ಮಾಡೋಕೆ ಅಂತ ಯುಧ್ಧ, ತಂತ್ರಗಾರಿಕೆ, ಸ್ನೇಹ ಸಂಬಂಧ, ಮಾಡ್ತಿದ್ದರೆ ಇಲ್ಲೊಬ್ಬ ರಾಜ ತನ್ನ ರಾಜ್ಯವನ್ನು ಮಾಧರಿಯನ್ನಾಗಿಸಲು ಯೋಜನೆ ರೂಪಿಸುವಲ್ಲಿ ಹಾಗು ಅದರ ಅನುಷ್ಠಾನದಲ್ಲಿ ಮಗ್ನರಾಗಿದ್ದರು ಅವರೇ ನಮ್ಮ ಆಧುನಿಕ ಮೈಸೂರಿನ ಪಿತಾಮಹ ಶ್ರೀಮನ್ಮಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್...

ನೂರು ವರ್ಷಗಳ ಸಾಧನೆಯ ಗುರುತನ್ನು ಮೂರು ದಶಕಗಳಲ್ಲಿ ಮಾಡಿದ ಮಹನೀಯ.

👉1902 ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು.
👉1903 ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ.
👉1905 ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)
👉1907 ವಾಣಿ ವಿಲಾಸಸಾಗರ ಅಣೆಕಟ್ಟೆ (ಮುಕ್ತಾಯ ವರ್ಷ)
👉1907 ಮೈಸೂರು ಪ್ರಜಾ ಪ್ರತಿನಿಧಿ ಸಭೆ.
👉1909 ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ.
👉1909 ಭಾರತದ ಮೊದಲ ಬಾಯ್ಸ್ ಸ್ಕೌಡ್ ತರಬೇತಿ
👉1910 ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ.
👉1913 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
👉1913 ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ.
👉1915 ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
👉1916 ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
👉1916 ಯುವರಾಜ ಕಾಲೇಜು.
👉1916 ಮೈಸೂರು ಚೇಂಬರ್ ಆಫ್ ಕಾಮರ್ಸ್.
👉1917 ಮಹಾರಾಣೀ ಮಹಿಳಾ ಕಾಲೇಜು.
👉1918 ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ
👉1921 ಲಲಿತ ಮಹಲ್ ಅರಮನೆ ಸ್ಥಾಪನೆ.
👉1921 ವಿಜ್ಞಾನ ಕಾಲೇಜು ಬೆಂಗಳೂರು.
👉1923 ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
👉1924 ಮೈಸೂರು ಮೆಡಿಕಲ್ ಕಾಲೇಜು.
👉1925 ಕೃಷ್ಣರಾಜನಗರ ಸ್ಥಾಪನೆ.
👉1925 nihmans ಆಸ್ಪತ್ರೆ ಸ್ಥಾಪನೆ.
👉1927 ಕೃಷ್ಣರಾಜ ಆಸ್ಪತ್ರೆ ಮೈಸೂರು.
👉1928 ಬೆಂಗಳೂರು ಕೆ ಆರ್ ಮಾರುಕಟ್ಟೆ.
👉1930 ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು.
👉1933 ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ.
👉1933 ಕೆ ಆರ್ ಮಿಲ್.
👉1933 ಬೆಂಗಳೂರು ಟೌನ್ ಹಾಲ್.
👉1933 ಸಂತ ಫಿಲೊಮಿನ ಚರ್ಚ್ ಮೈಸೂರು.
👉1934 ವಾಣಿವಿಲಾಸ ಮಕ್ಕಳ ಆಸ್ಪತ್ರೆ.
👉1935 ಮೈಸೂರು ಪೇಪರ್ ಮಿಲ್ ಭದ್ರಾವತಿ.
👉1936 ಮೈಸೂರು ಲ್ಯಾಂಪ್ಸ್.
👉1937 ಮೈಸೂರು ಪೆಂಟ್ ಅಂಡ್ ವಾರ್ನಿಷ್
👉1937 ಪೆಪರ್ ಮಿಲ್ ಬೆಳಗೊಳ
👉1938 ಮಹಾರಾಣಿ ಮಹಿಳಾ ಕಾಲೇಜು
👉1939 ಮಂಡ್ಯ ಜಿಲ್ಲೆ ನಿರ್ಮಾಣ.
👉1939 ಹಿರೇಭಾಸ್ಕರ ಅಣಕಟ್ಟೇ
👉ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನ ಘಟಕ ಜೋಗ.
👉ಬಾಲ್ಯ ವಿವಾಹ ರದ್ದತಿ.
👉ಮಹಿಳಾ ಶಿಕ್ಷಣಕ್ಕೆ ಒತ್ತು.
👉ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ

ಇಂತಹ ಇನ್ನು ಅಸಂಖ್ಯಾತ ಸಾಧನೆ ಮಾಡಿದ ಜನಹಿತ ಚಿಂತಕರು ನಮ್ಮ. ಮೈಸೂರು ರಾಜರು.

ಬದುಕಿನುದ್ದಕ್ಕೂ ಸಮಾಜದ ಹಿತ ಹಾಗು ಅದರ ಅಭಿವೃದ್ದಿ ಭಯಸಿದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ಜಯಂತಿಯಿಂದು ಅಗಲಿದ ಮಹಾ ಚೇತನವನ್ನು ಸ್ಮರಿಸೋಣ.
ನಿನ್ನೆ ಮೊನ್ನೆ ಚನ್ನಕ್ಕ ಅಂತ ಒಂದು ಕಟ್ಟಡನೆ ಸಾಧನೆ ಅಂತ ದಿನ ಬಡಿದುಕೊಳ್ಳುವವರ ಮದ್ಯೆ ನಾಡುಕಟ್ಟಿದ ನಾಲ್ವಡಿಯವರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ .

ಆಳುವ ಸರ್ಕಾರಗಳು ಕೃಷ್ಣರಾಜ ಒಡೆಯರ್ ಜಯಂತಿಯನ್ನು ನಾಡಹಬ್ಬದ ರೀತಿ ಆಚರಿಸಬೆಕು ಆಗ ಮಾತ್ರ ಅವರ ಸಾಧನೆಗಳ ಜತೆಗೆ ನಾಲ್ವಡಿಯವರು ನಮ್ಮ ಮನಸಿನಲ್ಲಿ ಚಿರಕಾಲ ಉಳಿಯುವರು...

ಮರೆಯದಿರು ಮನುಜ ನಾಲ್ವಡಿಯ ಸಾಧನೆಗಳನ್ನ.
ನಾಡ ಜನರಿಗಾಗಿ ಅವರು ತಂದ ಯೋಜನೆಯ ಮೊದಲುಗಳನ್ನ.

ಸತೀಶ್ ಗೌಡ ಬೀಡನಹಳ್ಳಿ ✍
9986403488
ಅಧ್ಯಕ್ಷರು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.

ಮೈಸೂರು ತಾಲ್ಲೂಕಿನ ಲಲಿತಾದ್ರಿಪುರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಡಾ: ಶ್ರೀ ಶ್ರ...
28/04/2026

ಮೈಸೂರು ತಾಲ್ಲೂಕಿನ ಲಲಿತಾದ್ರಿಪುರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಡಾ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಸಚಿವರಾದ ಸಾ ರಾ ಮಹೇಶಣ್ಣ ಅವರಿ ಶಾಸಕದ್ವಯರಾದ ಜಿ ಡಿ ಹರೀಶ್ ಗೌಡ ಹಾಗು ಕೆ ಹರೀಶ್ ಗೌಡ ಅವರು ಇತರ ಪ್ರಮುಖರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾದೆನು...
ಸತೀಶ್ ಗೌಡ ಬೀಡನಹಳ್ಳಿ

ಭೈರವೈಕ್ಯ ಮಂದಿರದ ಮುಂದೆ...
13/04/2026

ಭೈರವೈಕ್ಯ ಮಂದಿರದ ಮುಂದೆ...

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿರುವ ಪೇಟವನ...
13/04/2026

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿರುವ ಪೇಟವನ್ನು ಶ್ರೀಕ್ಷೇತ್ರದಲ್ಲಿ ಪೂಜ್ಯ ಪ್ರಸನ್ನನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದೆವು...

ಜೈ ಶ್ರೀ ಗುರುದೇವ್ ...
ಸತೀಶ್ ಗೌಡ ಬೀಡನಹಳ್ಳಿ

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿದೆ...ಜೈ ಶ...
13/04/2026

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿದೆ...
ಜೈ ಶ್ರೀ ಗುರುದೇವ್ ...
ಸತೀಶ್ ಗೌಡ ಬೀಡನಹಳ್ಳಿ

04/04/2026
ರಾಜ್ಯ ಒಕ್ಕಲಿಗರ ಸಂಘ – 120 ವರ್ಷದ ಗೌರವಯುತ ಪಯಣ.ರಾಜ್ಯ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದು ಇಂದಿಗೆ 120 ವರ್ಷಗಳು ಪೂರ್ತಿಯಾಗಿವೆ. ಈ ಸಂಘದ ...
01/04/2026

ರಾಜ್ಯ ಒಕ್ಕಲಿಗರ ಸಂಘ – 120 ವರ್ಷದ ಗೌರವಯುತ ಪಯಣ.

ರಾಜ್ಯ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದು ಇಂದಿಗೆ 120 ವರ್ಷಗಳು ಪೂರ್ತಿಯಾಗಿವೆ. ಈ ಸಂಘದ ಪರಿಕಲ್ಪನೆಯನ್ನು ಮಾಡಿ, ಅದನ್ನು ಕಾರ್ಯರೂಪಕ್ಕೆ ತಂದು, ಒಕ್ಕಲಿಗ ಸಮಾಜವನ್ನು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತಂದ ಮಹನೀಯರಾದ ಶ್ರೀ ಕೆ.ಹೆಚ್. ರಾಮಯ್ಯನವರು, ಬ್ಯಾರಿಸ್ಟರ್ ಬಿ.ಎನ್. ನಾಗಪ್ಪ, ತಹಶೀಲ್ದಾರ್ ಬಿ. ಚೆನ್ನಿಗಪ್ಪ,ಉರಿಗದ ಬೈಯಣ್ಣ, ಸಿದ್ಧಾಪುರದ ಪಟೇಲ್ ಪುಟ್ಟಣ್ಣ, ಫ್ಲೀಡರ್ ಕೆಂಪಣ್ಣ, ಎಂ.ಎಲ್. ಶ್ಯಾಮಗೌಡ, ಸಿ. ಲಕ್ಷ್ಮಣಗೌಡ ಇವರಾದಿ ಎಲ್ಲಾ ಸಂಸ್ಥಾಪಕರ ದಿವ್ಯ ಚಿಂತನೆಗಳಿಗೆ ನಮ್ಮ ಅನಂತ ನಮನಗಳು 🙏

ನಾವು ಕನಸು ಕಂಡ ರಾಜ್ಯ ಒಕ್ಕಲಿಗರ ಸಂಘವೆಂದರೆ
ರಾಮಯ್ಯರಂತಹ ಮಹನೀಯರು ಮತ್ತು
ಎಂ.ಹೆಚ್. ಮರೀಗೌಡರಂತಹ ಸೈದ್ದಾಂತಿಕ ವ್ಯಕ್ತಿತ್ವಗಳು ಕಟ್ಟಿದ ಸಂಘ.
ಹತ್ತು ಜನರ ಹಣದ ಕಾಫಿ ಸಹ ಕುಡಿಯಬಾರದು ಎಂದು ಮನೆಯಿಂದ ಕಾಫಿ ತಂದು
ಸಭೆಗಳನ್ನು ನಡೆಸುತ್ತಿದ್ದ ನಿಷ್ಠಾವಂತ ನಾಯಕರು ಇದ್ದರು.
ಆದರೆ, ಇಂದಿನ ಬದಲಾಗಿರುವ ಪರಿಸ್ಥಿತಿಯಲ್ಲಿ
ಅವರು ಅಲಂಕರಿಸಿದ ಹುದ್ದೆಗಳ ಗೌರವ ಕುಂದಿದಂತಾಗಿದೆ.
ಸ್ವಾರ್ಥ ಮತ್ತು ಲಾಭದ ಚಿಂತನೆಗಳು ಹೆಚ್ಚುತ್ತಿರುವುದು
ಸಂಘದ ದುಃಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.

ಸಂಘದ ಪುನರುಜ್ಜೀವನ ಅವಶ್ಯಕವಾಗಿದೆ!
ಆ ದಿಕ್ಕಿನಲ್ಲಿ
ನಾವು ಎಲ್ಲರೂ ಸಕಾರಾತ್ಮಕವಾಗಿ ಯೋಚಿಸಿ,
ಒಗ್ಗಟ್ಟಿನಿಂದ ಮುಂದೆ ಸಾಗೋಣ.

ಬೀಡನಹಳ್ಳಿ ಸತೀಶ್ ಗೌಡ
9986403488
2026/27 ರ ರಾಜ್ಯ ಒಕ್ಕಲಿಗರ ಸಂಘದ ಚುನಾವಣ ಅಭ್ಯರ್ಥಿ.
(ಮೈಸೂರು ಚಾಮರಾಜನಗರ ಹಾಗು ಊಟಿ)

Address

Mysore
570023

Telephone

+919986403488

Website

Alerts

Be the first to know and let us send you an email when Satish Gowda For Rajya vokkaligara Sangha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Satish Gowda For Rajya vokkaligara Sangha:

Shortcuts

Share

Category