14/09/2023
ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ ಉದ್ಯಾನವನ ನಿರ್ವಹಣೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ
ಡಾಕ್ಟರ್ ವಿಷ್ಣು ಸೇನಾ ಸಮಿತಿ ಸಂಘದ ಸದಸ್ಯರು ಮನವಿ ಪತ್ರ ನೀಡಿ ಮನವಿ ಮಾಡಿದರು
ನಗರದ ನಜರ್‌ಬಾದ್ ವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ಉದ್ಯಾನವನವನ್ನು ನಿರ್ವಹಣೆ ಅವಕಾಶ ನೀಡಬೇಕೆಂದು
ಡಾಕ್ಟರ್ ವಿಷ್ಣು ಸೇನಾ ಸಮಿತಿ ಸಂಘದ
ಅಧ್ಯಕ್ಷರಾದ ಎಂ ಡಿ ಪಾರ್ಥಿಸಾರಥಿ ರವರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಮನವಿ ಪತ್ರ ನೀಡಿ ಮನವಿ ಮಾಡಿದರು
ಬಳಿಕ ಮಾತನಾಡಿದ ಡಾ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ
ಎಂ ಡಿ ಪಾರ್ಥಸಾರಥಿ ಮಾತನಾಡಿ
ಕನ್ನಡ ಚಿತ್ರರಂಗದಲ್ಲಿ ಲಕ್ಷಾಂತರ ಕಲಾಭಿಮಾನಿಗಳನ್ನ ಸಂಪಾದಿಸಿರುವ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಸಂಸ್ಕಾರಗಳ ನೀಡುವ ಸಂಸ್ಕೃತಿಯನ್ನ ಉಳಿಸುವ ಚಿತ್ರಗಳ ನಟನೆಯ ಮೂಲಕ ವಿಶ್ವವಿಖ್ಯಾತರಾಗಿರುವ ನಮ್ಮ ಮೈಸೂರಿನವರಾದ ಡಾ. ವಿಷ್ಣುವರ್ಧನ ರವರು 224 ಚಿತ್ರಗಳಲ್ಲಿ ನಟಿಸಿದ್ದಾರೆ, ಚಿತ್ರರಂಗವಲ್ಲದೇ ಸಾಮಾಜಿಕವಾಗಿಯೂ ಸಹ ಆಶ್ರಯವಿಲ್ಲದವರಿಗೆ ಧ್ವನಿಯಿಲ್ಲದವರಿಗೆ ನೆರವಾಗಿದ್ದಾರೆ, ಅನಾಥಾಶ್ರಮ, ಹಿರಿಯ ನಾಗರೀಕ ಕೇಂದ್ರಗಳಲ್ಲಿ ಬಡವರಿಗೆ ಆಶ್ರಯ ನೀಡಿದ್ದಾರೆ, ಮಹಿಳೆಯರಿಗೆ ಶಿಕ್ಷಣ ಕೊಡಿಸಿದ್ದಾರೆ, ಸಾವಿರಾರು ಮಂದಿಗೆ ಹೃದಯ ಶಸ್ತ್ರ ಚಿಕಿತ್ಸೆ, ಸೇರಿದಂತೆ ಪ್ರತಿಯೊಬ್ಬರಲ್ಲೂ ಸೇವಾಮನೋಭವ ಮನಾವೀಯತೆ ಗುಣಗಳನ್ನ ತೋರಿಸಿಕೊಟ್ಟಿದ್ದಾರೆ, ಕಳೆದ ಹತ್ತಾರು ವರ್ಷಗಳಿಂದ ಕರ್ನಾಟಕವಲ್ಲದೇ ವಿಶ್ವದೆಲ್ಲೆಡೆಯಿಂದ ಮೈಸೂರಿಗೆ ಬರುವ ಕೋಟ್ಯಾಂತರ ಅಭಿಮಾನಿಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಉದ್ಯಾನ ವಿಷ್ಣುವರ್ಧನ ರವರ ನೆನಪಿನಲ್ಲಿ ಖುಷಿಯಿಂದ ಬರುತ್ತಿದ್ದಾರೆ, ಅದರ ಎದುರುಗಡೆ ನಟಸಾರ್ವಭೌಮ ಡಾ. ರಾಜಕುಮಾರ್ ರವರ ಉದ್ಯಾನವೂ ಇದೆ, ಮೈಸೂರು ಕಲಾವಿದರ ತವರೂರು ಮೈಸೂರು ಇತಿಹಾಸ ಪರಂಪರೆ ಕಲೆ ಸಾಹಿತ್ಯದ ಬಗ್ಗೆ ಅಭಿರುಚಿಯನ್ನ ಹೊಂದಿದ್ದ ಕನ್ನಡ ಚಿತ್ರರಂಗದ ಸಾಹಸಿಂಹ ಡಾ. ವಿಷ್ಣುವರ್ಧನ್ ರವರ ಹೆಸರಿನಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಲಭಾಗದಲ್ಲಿ ಅಭಿಮಾನಿಗಳು ಖುಷಿಯಿಂದ ಸೇರುತ್ತಿರುವ ಉದ್ಯಾನಕ್ಕೆ ನಿರ್ವಹಣೆ ಅವಕಾಶ ಕಲ್ಪಸಿಕೊಡಬೇಕಾಗಿ ತಮ್ಮಲ್ಲಿ ಹೃದಯಪೂರ್ವಕವಾಗಿ ಲಕ್ಷಂತರ ವಿಷ್ಣುವರ್ಧನ ಅಭಿಮಾನಿಗಳ ಪರವಾಗಿ ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ವಕೀಲರಾದ ರವೀಂದ್ರ, ವಿಷ್ಣು ಅಭಿಮಾನಿ ಬಳಗದ ಸದಸ್ಯರುಗಳಾದ ಸಿದ್ದಪ್ಪ, ಹರೀಶ್ ನಾಯ್ಡು, ಬಸವರಾಜು, ಮಹದೇವ್, ರಾಮಕೃಷ್ಣ, ಪಾಪು, ಮಧು, ಮುಬಾರಕ್, ಮದನ್ ಕುಮಾರ್, ಹಾಗೂ ಇನ್ನಿತರ ಅಭಿಮಾನಿಗಳು ಹಾಜರಿದ್ದರು