Mysuru District Police

Mysuru District Police ಮೈಸೂರು ಜಿಲ್ಲಾ ಪೊಲೀಸ್ ಘಟಕವು ಸಾಮಾಜಿಕ ಜಾಲತಾಣಗಳ ಮೂಲಕವು ಸಹ ಸದಾ ನಿಮ್ಮ ಸೇವೆಯಲ್ಲಿದೆ.
(402)

📚ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಗುರುವಿನ ಜ್ಞಾನವೇ ಬದುಕಿನ ಬೆಳಕು;ಗುರುವಿನ ಮಾರ್ಗದರ್ಶನವೇ ಯಶಸ್ಸಿನ ದಾರಿ.ನಮ್ಮ ಬದುಕಿಗೆ ಜ್ಞಾನ,...
05/09/2026

📚ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಗುರುವಿನ ಜ್ಞಾನವೇ ಬದುಕಿನ ಬೆಳಕು;
ಗುರುವಿನ ಮಾರ್ಗದರ್ಶನವೇ ಯಶಸ್ಸಿನ ದಾರಿ.

ನಮ್ಮ ಬದುಕಿಗೆ ಜ್ಞಾನ, ಮೌಲ್ಯ ಮತ್ತು ದಿಕ್ಕು ನೀಡುವ ಪ್ರತಿಯೊಬ್ಬ ಶಿಕ್ಷಕರಿಗೂ ಈ ಶುಭ ದಿನದಂದು ಹೃತ್ಪೂರ್ವಕ ಕೃತಜ್ಞತೆಗಳು.

ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು! 💐

#ಶಿಕ್ಷಕರದಿನಾಚರಣೆ

ಇಂದು ಸಂಜೆ ಬಿಳಿಕೆರೆ, ಸರಗೂರು ಮತ್ತು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿ,...
04/09/2026

ಇಂದು ಸಂಜೆ ಬಿಳಿಕೆರೆ, ಸರಗೂರು ಮತ್ತು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿ, ಅಪರಾಧ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.

ಅನುಮಾನಾಸ್ಪದ ವ್ಯಕ್ತಿ ಅಥವಾ ವಾಹನ ಕಂಡರೆ ನಿರ್ಲಕ್ಷ್ಯ ಮಾಡಬೇಡಿ — ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

#ಜನಸ್ನೇಹಿಪೊಲೀಸ್ #ಅಪರಾಧತಡೆ #ಸಾರ್ವಜನಿಕಸುರಕ್ಷತೆ

ಮೈಸೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು, 2024ನೇ ಸಾಲಿನಿಂದ 2026ನೇ ಸಾಲಿನ ಆಗಸ್ಟ್ ಮಾಹೆಯ...
04/09/2026

ಮೈಸೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು, 2024ನೇ ಸಾಲಿನಿಂದ 2026ನೇ ಸಾಲಿನ ಆಗಸ್ಟ್ ಮಾಹೆಯವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿರುವ ಕುರಿತು ಪ್ರಗತಿ ವರದಿಯನ್ನು ಪರಿಶೀಲಿಸುವ ಸಲುವಾಗಿ, ಇಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಯಿತು.

ಸಭೆಯಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಅಪರಾಧ ಪ್ರಕರಣಗಳ ಪತ್ತೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಪ್ರಕರಣಗಳ ಶೀಘ್ರ ಮತ್ತು ಪರಿಣಾಮಕಾರಿ ತನಿಖೆ, ಬಾಕಿ ಪ್ರಕರಣಗಳ ಪತ್ತೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಅಗತ್ಯ ಸೂಕ್ತ ನಿರ್ದೇಶನಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ನಾಗೇಶ್ ಎಲ್. ರವರು ಉಪಸ್ಥಿತರಿದ್ದರು.
#ಮೈಸೂರು

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಎಲ್ಲಾ ಸಮುದಾಯಗಳ ಮುಖಂಡರನ್ನು ಆಹ್ವಾನಿಸಿ ಶಾಂತಿ ಸಭೆಯನ್ನು ನಡೆ...
04/09/2026

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಎಲ್ಲಾ ಸಮುದಾಯಗಳ ಮುಖಂಡರನ್ನು ಆಹ್ವಾನಿಸಿ ಶಾಂತಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪಾಲಿಸಬೇಕಾದ ನಿಯಮಗಳ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.

Karnataka State Police IGP SR Mysuru

ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
04/09/2026

ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

ಇಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕ್ ಸಿ ರವರು ಗೌರ...
04/09/2026

ಇಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕ್ ಸಿ ರವರು ಗೌರವ ವಂದನೆ ಸ್ವೀಕರಿಸಿ, ಪರಿವೀಕ್ಷಣೆ ನಡೆಸಿದರು.
#ಮೈಸೂರು

ಇಂದು ಸಂಜೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿ, ಅಪರಾಧ ತಡೆಗಟ್ಟುವಿಕೆ...
03/09/2026

ಇಂದು ಸಂಜೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಲ್ನಡಿಗೆ ಗಸ್ತು ನಡೆಸಿ, ಅಪರಾಧ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.

ಅನುಮಾನಾಸ್ಪದ ವ್ಯಕ್ತಿ ಅಥವಾ ವಾಹನ ಕಂಡರೆ ನಿರ್ಲಕ್ಷ್ಯ ಮಾಡಬೇಡಿ — ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

#ಜನಸ್ನೇಹಿಪೊಲೀಸ್ #ಅಪರಾಧತಡೆ #ಸಾರ್ವಜನಿಕಸುರಕ್ಷತೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆಟ್ಟದಪುರ ಪೊಲೀಸ್‌ ಠಾಣೆ ಮೊ.ಸಂ. 52/2026 ಪ್ರಕರಣದ ಕುರಿತು ಸ್ಪಷ್ಟಿಕರಣ. #ಬೆಟ್ಟದಪುರ
03/09/2026

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆಟ್ಟದಪುರ ಪೊಲೀಸ್‌ ಠಾಣೆ ಮೊ.ಸಂ. 52/2026 ಪ್ರಕರಣದ ಕುರಿತು ಸ್ಪಷ್ಟಿಕರಣ.
#ಬೆಟ್ಟದಪುರ

ಶಿರಸ್ತ್ರಾಣ ( ಹೆಲ್ಮೆಟ್) ನಿಮ್ಮ ಜೀವವನ್ನು ಅಪಘಾತಗಳಿಂದ ಕಾಪಾಡುವುದು ಮಾತ್ರವಲ್ಲ , ನಿಮ್ಮ ಮೇಲೆ ನಿಮ್ಮ ಕುಟುಂಬ ಹೊಂದಿರುವ ಭರವಸೆಗಳನ್ನು ಸಹ ...
03/09/2026

ಶಿರಸ್ತ್ರಾಣ ( ಹೆಲ್ಮೆಟ್) ನಿಮ್ಮ ಜೀವವನ್ನು ಅಪಘಾತಗಳಿಂದ ಕಾಪಾಡುವುದು ಮಾತ್ರವಲ್ಲ , ನಿಮ್ಮ ಮೇಲೆ ನಿಮ್ಮ ಕುಟುಂಬ ಹೊಂದಿರುವ ಭರವಸೆಗಳನ್ನು ಸಹ ರಕ್ಷಣೆ ಮಾಡುತ್ತದೆ . ಹೆಲ್ಮೆಟ್ ಧರಿಸಿ ಜೀವ ಉಳಿಸಿ.

ಕಳೆದು ಹೋಗಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ, ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು...
03/09/2026

ಕಳೆದು ಹೋಗಿದ್ದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ, ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು.

Address

Office Of The Superintendent Of Police , District Police Office , T. Hari Krishna Circle , Jalpuri
Mysore
570019

Alerts

Be the first to know and let us send you an email when Mysuru District Police posts news and promotions. Your email address will not be used for any other purpose, and you can unsubscribe at any time.

Shortcuts

Share