Anikethana Seva trust

Anikethana Seva trust this page is about political, art and literature.

23/08/2026
ಪತ್ರಿಕಾ ಪ್ರಕಟಣೆಅಭಿಮನ್ಯುವನ್ನು ನಿಶಾನೆ ಆನೆಯಾಗಿ ಬಳಸಿಕೊಂಡು ಗೌರವಯುತ ಬೀಳ್ಕೊಡುಗೆ ನೀಡಬೇಕುಕಾಂಗ್ರೆಸ್ ನಗರ ಉಪಾಧ್ಯಕ್ಷ ಕೆ.ವಿ. ಮಲ್ಲೇಶ್ ಆ...
20/08/2026

ಪತ್ರಿಕಾ ಪ್ರಕಟಣೆ
ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಬಳಸಿಕೊಂಡು ಗೌರವಯುತ ಬೀಳ್ಕೊಡುಗೆ ನೀಡಬೇಕು
ಕಾಂಗ್ರೆಸ್ ನಗರ ಉಪಾಧ್ಯಕ್ಷ ಕೆ.ವಿ. ಮಲ್ಲೇಶ್ ಆಗ್ರಹ

ಮೈಸೂರು: ವಯಸ್ಸಿನ ನೆಪವೊಡ್ಡಿ ಏಕಾಏಕಿ ಅಭಿಮನ್ಯು ಆನೆಯನ್ನು ದಸರಾ ಮಹೋತ್ಸವದಿಂದ ಕೈಬಿಟ್ಟಿರುವುದು ಸರಿಯಲ್ಲ. ಅಂಬಾರಿ ಆನೆಯಾಗಿ ಬಳಸಲು ಸಾಧ್ಯವಿಲ್ಲದಿದ್ದರೆ, ಕನಿಷ್ಠ ನಿಶಾನೆ ಆನೆಯಾಗಿಯಾದರೂ ಅಭಿಮನ್ಯುವನ್ನು ದಸರಾ ಗಜಪಡೆಯೊಂದಿಗೆ ಕರೆತಂದು ಗೌರವಯುತ ಬೀಳ್ಕೊಡುಗೆ ನೀಡಬೇಕು ಎಂದು ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಆಗ್ರಹಿಸಿದ್ದಾರೆ.

ಅಭಿಮನ್ಯು ಕೇವಲ ಅಂಬಾರಿ ಹೊರುತ್ತಿದ್ದ ಆನೆಯಲ್ಲ. ಮೈಸೂರಿಗರ ಪಾಲಿಗೆ ಆತ ಭಾವನಾತ್ಮಕ ನಂಟು ಹೊಂದಿರುವ ಗಜ. ಹೆಸರಿಗೆ ತಕ್ಕಂತೆ ಧೈರ್ಯ, ಶಾಂತತೆ, ನಿಷ್ಠೆ ಹಾಗೂ ನಾಯಕತ್ವ ಗುಣಗಳನ್ನು ಹೊಂದಿರುವ ಅಭಿಮನ್ಯು ಅರಣ್ಯ ಇಲಾಖೆಯ ಹೆಮ್ಮೆಯೂ ಹೌದು. ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ನಾಡಿನ ಜನರ ಮನೆಮಾತಾಗಿದ್ದಾನೆ. ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಬೆನ್ನಮೇಲೆ ಹೊತ್ತು ರಾಜವೈಭವದಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮೈಸೂರಿಗರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಅಭಿಮನ್ಯುವನ್ನು ಏಕಾಏಕಿ ದಸರೆಯಿಂದ ಕೈಬಿಟ್ಟಿರುವುದು ಬೇಸರದ ಸಂಗತಿ. ಕನಿಷ್ಠ ಈ ಬಾರಿಯಾದರೂ ದಸರಾ ಗಜಪಡೆಯೊಂದಿಗೆ ಕರೆತಂದು ಗೌರವಯುತ ಬೀಳ್ಕೊಡುಗೆ ನೀಡಬೇಕಿತ್ತು. ಆದರೆ ಅದಕ್ಕೂ ಅವಕಾಶ ನೀಡದ ಅರಣ್ಯ ಇಲಾಖೆಯ ನಿರ್ಧಾರ ಮೈಸೂರಿನ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಮಲ್ಲೇಶ್ ಹೇಳಿದ್ದಾರೆ.

ಈ ಹಿಂದೆ 60 ವರ್ಷ ಪೂರೈಸಿದ ಬಲರಾಮ ಹಾಗೂ ಅರ್ಜುನ ಆನೆಗಳನ್ನು ನಿಶಾನೆ ಆನೆಗಳಾಗಿ ದಸರಾ ಮಹೋತ್ಸವದಲ್ಲಿ ಬಳಸಿಕೊಂಡ ಉದಾಹರಣೆಗಳಿವೆ. ಇವು ತೀರ ಹಳೆಯ ಘಟನೆಗಳೇನಲ್ಲ. ಅರ್ಜುನ ಆನೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂಬಾರಿ ಹೊರುವುದರಿಂದ ನಿವೃತ್ತಿ ಪಡೆದಿದ್ದರೂ, ಆನೆಯನ್ನು ಸೆರೆ ಕಾರ್ಯಾಚರಣೆ ಸೇರಿದಂತೆ ಇತರೆ ಕಾರ್ಯಗಳಿಗೆ ಇಲಾಖೆ ಬಳಸಿಕೊಂಡಿತ್ತು. ಆನೆ ಸೆರೆ ಕಾರ್ಯಾಚರಣೆಯಲ್ಲಿದ್ದಾಗಲೇ ಅರ್ಜುನ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ದಸರೆಗೆ ಬೇಡವೆಂದರೆ ಕಾರ್ಯಾಚರಣೆಗಳಿಗೂ ಬೇಡ

ಅಭಿಮನ್ಯುವಿಗೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಸರೆಯಿಂದ ನಿವೃತ್ತಿ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದರೆ, ಅದೇ ನಿಯಮವನ್ನು ಇತರೆ ಕಾರ್ಯಾಚರಣೆಗಳಿಗೂ ಅನ್ವಯಿಸಬೇಕು. ದಸರಾ ಮಹೋತ್ಸವಕ್ಕೆ ಮಾತ್ರ ವಯಸ್ಸಿನ ನಿಯಮ, ಆದರೆ ಇತರೆ ಅಪಾಯಕಾರಿ ಕಾರ್ಯಾಚರಣೆಗಳಿಗೆ ಅದೇ ಆನೆಯನ್ನು ಬಳಸುವುದು ಯಾವ ನ್ಯಾಯ? ದಸರೆಗೆ ಬೇಡವೆಂದರೆ ಮುಂದೆ ಯಾವುದೇ ಆನೆ ಸೆರೆ ಅಥವಾ ಇತರೆ ಅಪಾಯಕಾರಿ ಕಾರ್ಯಾಚರಣೆಗಳಿಗೂ ಅಭಿಮನ್ಯುವನ್ನು ಬಳಸಬಾರದು ಎಂದು ಕೆ.ವಿ. ಮಲ್ಲೇಶ್ ಒತ್ತಾಯಿಸಿದ್ದಾರೆ.

ಗಜಪಡೆಯಲ್ಲಿ ಹಿರಿಯ, ಅನುಭವಿ ಆನೆಯ ಅಗತ್ಯವಿದೆ

ಈ ಬಾರಿಯ ದಸರಾ ಗಜಪಡೆಯಲ್ಲಿ ಅನುಭವಿ ಹಾಗೂ ಹಿರಿಯ ಆನೆಯ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ಘೋಷಿಸಿರುವ ಆನೆಗಳಲ್ಲಿ ಅಂಬಾರಿ ಹೊತ್ತ ಅನುಭವ ಹೊಂದಿರುವ ಆನೆ ಇಲ್ಲದಿರುವುದು ಗಮನಾರ್ಹ. ಹಿಂದಿನ ದಸರಾಗಳಲ್ಲಿ ನಿವೃತ್ತ ಆನೆಗಳನ್ನು ನಿಶಾನೆ ಆನೆಗಳಾಗಿ ಬಳಸಿಕೊಳ್ಳುವ ಮೂಲಕ ಗಜಪಡೆಯಲ್ಲಿನ ಅನುಭವಿ ಹಾಗೂ ಹಿರಿಯ ಆನೆಗಳ ಕೊರತೆಯನ್ನು ನೀಗಿಸಲಾಗುತ್ತಿತ್ತು.

ಅಭಿಮನ್ಯುವಿನಂತಹ ಹಿರಿಯ ಹಾಗೂ ಅನುಭವಿ ಆನೆ ಗಜಪಡೆಯಲ್ಲಿದ್ದರೆ, ಇತರೆ ಆನೆಗಳನ್ನು ನಿಯಂತ್ರಿಸಲು ಹಾಗೂ ಹೊಸ ಆನೆಗಳಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ. ದಸರಾ ಮೆರವಣಿಗೆಯನ್ನು ಹೆಚ್ಚು ಸುರಕ್ಷಿತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಭಿಮನ್ಯುವಿನ ಅನುಭವವೂ ನೆರವಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜನರ ಭಾವನೆಗಳನ್ನು ಗೌರವಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕನಿಷ್ಠ 2ನೇ ಹಂತದ ದಸರಾ ಆನೆಗಳ ಆಯ್ಕೆಯಲ್ಲಾದರೂ ಅಭಿಮನ್ಯುವನ್ನು ಪರಿಗಣಿಸಿ ನಿಶಾನೆ ಆನೆಯಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಆ ಮೂಲಕ ಅಭಿಮನ್ಯುವಿಗೆ ಮೈಸೂರಿನ ಜನತೆಯ ಪರವಾಗಿ ಗೌರವಯುತ ಬೀಳ್ಕೊಡುಗೆ ನೀಡಬೇಕು ಎಂಬುದು ನಾಡಿನ ಜನರ ಅಭಿಲಾಷೆ ಹಾಗೂ ಹಕ್ಕೊತ್ತಾಯವಾಗಿದೆ ಎಂದು ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.

ಕೆ.ವಿ. ಮಲ್ಲೇಶ್
ಉಪಾಧ್ಯಕ್ಷ, ಮೈಸೂರು ನಗರ ಕಾಂಗ್ರೆಸ್
ಮಾಜಿ ಸದಸ್ಯ, ಮೈಸೂರು ಮಹಾನಗರ ಪಾಲಿಕೆ
ಅಧ್ಯಕ್ಷ, ಅನಿಕೇತನ ಸೇವಾ ಟ್ರಸ್ಟ್

*ಬಂದ್ ಯಾರಿಗಾಗಿ ? ಏತಕ್ಕಾಗಿ ? ಬಂದ್ ಹೆಸರಲ್ಲಿ ಜನರಿಗೇ ಶಿಕ್ಷೆ ಏಕೆ ?*ರಾಜಕೀಯ ಹಾರಾಟಗಳಾಗಲಿ, ಸಾಮಾಜಿಕ ಸಮಸ್ಯೆಗಳಾಗಲಿ, ಅಥವಾ ಭಾಷಾ ಸಮಸ್ಯೆ...
12/08/2026

*ಬಂದ್ ಯಾರಿಗಾಗಿ ? ಏತಕ್ಕಾಗಿ ? ಬಂದ್ ಹೆಸರಲ್ಲಿ ಜನರಿಗೇ ಶಿಕ್ಷೆ ಏಕೆ ?*

ರಾಜಕೀಯ ಹಾರಾಟಗಳಾಗಲಿ, ಸಾಮಾಜಿಕ ಸಮಸ್ಯೆಗಳಾಗಲಿ, ಅಥವಾ ಭಾಷಾ ಸಮಸ್ಯೆಯ ಹೋರಾಟಗಳಾಗಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಇಡೀ ಸಮಾಜವನ್ನೇ ಸ್ತಬ್ಧಗೊಳಿಸುವ ಬಂದ್ ಎಂಬ ಸಂಸ್ಕೃತಿ ಇನ್ನು ಮುಂದುವರಿಯಬೇಕೇ ಎಂಬ ಪ್ರಶ್ನೆಯನ್ನು ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ. ಒಂದು ದಿನದ ಬಂದ್‌ನಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ ಎಂಬುದು ಚರ್ಚೆಯ ವಿಷಯವಾಗಿರಬಹುದು. ಇದರಿಂದ ಸಾಮಾನ್ಯ ಜನರಿಗೆ ಆಗುವ ನಷ್ಟದ ಬಗ್ಗೆ ಕಳಕಳಿಯಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಎಂಬ ಪದವೇ ಇಂದು ತನ್ನ ಅರ್ಥ ಕಳೆದುಕೊಂಡಂತಿದೆ. ಬಂದ್ ಯಾರ ವಿರುದ್ಧ ? ಯಾರಿಗಾಗಿ ? ಏತಕ್ಕಾಗಿ ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವೇ ಇಲ್ಲದಂತಾಗಿದೆ.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದಾದರೂ ಒಂದು ಸಂಘಟನೆ, ರಾಜಕೀಯ ಪಕ್ಷ ಅಥವಾ ಸಮುದಾಯಕ್ಕೆ ಸಣ್ಣ ಅಸಮಾಧಾನವಾದರೇ ಸಾಕು, ಕ್ಷಣಾರ್ಧದಲ್ಲಿ ಕರೆ ನೀಡುವುದು ಬಂದ್. ಆದರೆ ಈ ಬಂದ್ ಎನ್ನುವ ಮಾರಕ ಅಸ್ತ್ರದ ಹಿಂದಿನ ಅಸಲಿ ಮರ್ಮ ಯಾರಿಗಾದರೂ ಅರ್ಥವಾಗಿದೆಯೇ ? ಅಥವಾ ಇದು ಕೇವಲ ಜನರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸುವ ಹಠ ಮಾರಿತನವೇ ? ಗಂಭೀರವಾಗಿ ಯೋಚಿಸಬೇಕಾದ ಹಾಗೂ ಈ ವಿಚಾರವಾಗಿ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ನನ್ನದು. ಇದು ಯಾರ ಪರವೂ ಅಲ್ಲ, ಯಾರ ವಿರುದ್ದವೂ ಅಲ್ಲ. ಇದು ಜನರಿಂದ, ಜನರಿಗಾಗಿ ಜನರ ಭಾವನೆ, ಜನರಿಗೋಸ್ಕರ ಅಷ್ಟೇ. ಇದು ಓದಿದ ಮೇಲಾದರೂ ಬಂದ್‌ನ ಬಂದ್ ಮಾಡಿದರೆ ಅಷ್ಟೇ ಸಾಕು.

*ಹಿಂದೆ ಬಂದ್*

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಂದ್‌ಗೆ ಒಂದು ಉದ್ದೇಶವಿತ್ತು. ಆಗ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಹೊಡೆತ ನೀಡಲಾಗುತ್ತಿತ್ತು. ಅದು ವಿದೇಶಿ ಆಡಳಿತದ ವಿರುದ್ಧದ ಹೋರಾಟವಾಗಿತ್ತು. ಅಸಹಕಾರ ಚಳುವಳಿಯ ಉದ್ದೇಶ ಸಹಾ ಇದೇ ಆಗಿತ್ತು. ಆಗಿನ ಸರ್ಕಾರ ನಮ್ಮದಾಗಿರಲಿಲ್ಲ, ಅದು ನಮ್ಮನ್ನು ಶೋಷಿಸುತ್ತಿದ್ದ ಪರಕೀಯರ ಸರಕಾರವಾಗಿತ್ತು.
​ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಏಕೆಂದರೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ನಮ್ಮದು 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಇರುವ ಪ್ರಜಾಪ್ರಭುತ್ವ ಸರ್ಕಾರ. ಇಲ್ಲಿ ಅಧಿಕಾರದಲ್ಲಿರುವವರೂ ನಮ್ಮವರೇ, ಆಡಳಿತ ಯಂತ್ರವೂ ನಮ್ಮದೇ. ಹೀಗಿರುವಾಗ, ನಮ್ಮದೇ ಸರ್ಕಾರದ ವಿರುದ್ಧ ಬಂದ್ ಆಚರಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿದರೆ, ಬಸ್‌ಗಳನ್ನು ಜಖಂ ಗೊಳಿಸಿದರೆ, ಕೈಗಾರಿಕೆಗಳನ್ನು ಮುಚ್ಚಿಸಿದರೆ ನಿಜಕ್ಕೂ ನಷ್ಟವಾಗುವುದು ಯಾರಿಗೆ ? ಸರ್ಕಾರಕ್ಕೆ ಅಂದರೆ ನಮಗೇ. ಬಂದ್ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದರೆ, ಅದು ನಮಗೆ ನಾವೇ ಕತ್ತೆಲೆಗೆ ದೂಡಿಕೊಂಡಂತೆ ಮತ್ತು ನಮ್ಮ ಕೈಯಾರೆ ನಮಗೆ ನಾವೇ ನಷ್ಟ ಮಾಡಿಕೊಂಡ ಹಾಗೆ.

*ಬಂದ್ ಸಮಸ್ಯೆಗಳು*

ಆಸ್ಪತ್ರೆಗೆ ತೆರಳುವ ರೋಗಿಗಳ ನರಳಾಟ ಹೇಳತೀರದ್ದಾಗುತ್ತದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ಗರ್ಭಿಣಿಯರು, ಹೃದಯ ರೋಗಿಗಳು ರಸ್ತೆಯಲ್ಲಿ ವಾಹನಗಳಿಲ್ಲದೆ ಒದ್ದಾಡುವ ದೃಶ್ಯ ಮನಕಲುಕುವಂತಿರುತ್ತದೆ. ಇದು ​ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಪರೀಕ್ಷೆಗಳೋ ಅಥವಾ ತರಗತಿಗಳೋ ಇರುವ ಸಂದರ್ಭದಲ್ಲಿ ಘೋಷಿಸುವ ಬಂದ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತವೆ. ​ದಿನಗೂಲಿ ನೌಕರರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಆ ದಿನ ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎನ್ನುವ ಬಡ ಕೂಲಿ ಕಾರ್ಮಿಕರ ಗೋಳು ಕೇಳುವವರೇ ಇಲ್ಲದಂತಾಗುತ್ತದೆ. ದಿನಗೂಲಿ ಕಾರ್ಮಿಕರಿಗೆ. ಅಂಗಡಿ ತೆಗೆಯುವ ಸಣ್ಣ ವ್ಯಾಪಾರಿಗಳಿಗೆ. ಆಟೋ, ಟ್ಯಾಕ್ಸಿ ಚಾಲಕರಿಗೆ. ಹೋಟೆಲ್ ನಡೆಸುವವರಿಗೆ. ಶಾಲೆಗೆ ಹೋಗಬೇಕಾದ ಮಕ್ಕಳಿಗೆ. ಆಸ್ಪತ್ರೆಗೆ ಹೋಗಬೇಕಾದ ರೋಗಿಗಳಿಗೆ. ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ. ಪ್ರಯಾಣಿಕರಿಗೆ. ಸಾಮಾನ್ಯ ಜನರ ಬದುಕನ್ನೇ ಬಂದ್ ಅಸ್ತವ್ಯಸ್ತಗೊಳಿಸುವ ಬಂದ್ ಹಾಗೂ ಬಂದ್‌ನ ಹೆಸರಿನಲ್ಲಿ ರಸ್ತೆ ತಡೆ, ಬಸ್ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇವು ಪ್ರಜಾಪ್ರಭುತ್ವದ ಲಕ್ಷಣಗಳಲ್ಲ.

*ಬಂದ್ ನಾಯಕರು*

ಅತ್ಯಂತ ನೋವಿನ ಸಂಗತಿ ಎಂದರೆ, ಬಂದ್ ಕರೆ ನೀಡುವ ಬಹುತೇಕ ನಾಯಕರು ನೆಪ ಮಾತ್ರಕ್ಕೆ ಬೀದಿಗಿಳಿಯುತ್ತಾರೆ. ನಂತರ ಭದ್ರತೆಯ ನೆಪವೊಡ್ಡಿ ಪೊಲೀಸರ ವಶಕ್ಕೆ ಹೋಗುತ್ತಾರೆ. ಆದರೆ ಬೀದಿಯಲ್ಲಿ ಸಿಲುಕಿಕೊಳ್ಳುವವರು ಸಾಮಾನ್ಯ ಜನ. ಬಂದ್‌ನಿಂದ ಹೊಟ್ಟೆ ಪಾಡಿಗಾಗಿ ದುಡಿಯುವ ಕಾರ್ಮಿಕನಿಗೆ ಆ ದಿನದ ಕೂಲಿ ಕೈತಪ್ಪುತ್ತದೆ. ತುರ್ತು ಚಿಕಿತ್ಸೆಗೆ ತೆರಳಬೇಕಾದ ರೋಗಿ ಸಂಕಷ್ಟ ಅನುಭವಿಸುತ್ತಾನೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿ ಆತಂಕದಲ್ಲಿ ದಿನ ಕಳೆಯುತ್ತಾನೆ. ಈ ಎಲ್ಲರ ಹಿಡಿಶಾಪ ಯಾರಿಗೆ ತಟ್ಟುತ್ತದೆ ? ಖಂಡಿತಾ ಹೋರಾಟಗಳು ಅಗತ್ಯ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಹಕ್ಕು. ಆದರೆ ಜನ ಜೀವನವನ್ನು ಬಂದ್ ಮಾಡಿ ಅಲ್ಲ. ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಹೋರಾಟ ನಡೆಸುವುದು ನಿಜವಾದ ಪ್ರಜಾಪ್ರಭುತ್ವದ ಮಾರ್ಗ.

*ಬಂದ್ ಪರಿಹಾರವಲ್ಲ. ಸಂವಾದವೇ ಪರಿಹಾರ*

ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ನಡೆಸುವ ಹೋರಾಟ ಯಾವತ್ತೂ ನ್ಯಾಯ ಸಮ್ಮತವಾಗಲಾರದು. ಜನರ ಪರದಾಟದ ಮೇಲೆ ಕಟ್ಟಿದ ಯಾವುದೇ ಹೋರಾಟಕ್ಕೆ ಇತಿಹಾಸದಲ್ಲಿ ಗೌರವ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಸಂವಿಧಾನ ನಮಗೆ ಹಕ್ಕು ನೀಡಿದೆ. ಆದರೆ ಆ ಪ್ರತಿಭಟನೆಯು ಇತರರ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಿರಬಾರದು. ಬಂದ್ ಎನ್ನುವುದು ಸಮಸ್ಯೆಗಳಿಗೆ ಪರಿಹಾರವಲ್ಲ, ಅದೊಂದು ವಿನಾಶಕಾರಿ ದಾರಿ. ಇನ್ನು ಮುಂದಾದರೂ ಈ ಅವೈಜ್ಞಾನಿಕ ಬಂದ್ ಸಂಸ್ಕೃತಿಗೆ ತಿಲಾಂಜಲಿ ಹಾಕಿ, ಚರ್ಚೆಗಳು ಮತ್ತು ಕಾನೂನುಬದ್ಧ ಹೋರಾಟಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪರಿಪಕ್ವತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ.

*ಕೊನೆ ಮಾತು*

ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಇಂದು ಬೇಕಾಗಿರುವುದು ಬಂದ್ ಅಲ್ಲ, ಬದಲಿಗೆ ನೆಮ್ಮದಿ ಶಾಂತಿ ಹಾಗೂ ಅಭಿವೃದ್ದಿ ಅಭಿವೃದ್ಧಿ ಮಾತ್ರ. ಜನರಿಗೆ ಬೇಕಾಗಿರುವುದು ಸ್ಥಗಿತವಲ್ಲ, ಸ್ಥಿರತೆ. ಹೋರಾಟ ಇರಲಿ, ಆದರೆ ಅದು ಜನರ ಬದುಕನ್ನು ಕತ್ತಲೆಗೆ ತಳ್ಳುವಂತಿರದೆ, ಪರಿಹಾರದ ಬೆಳಕಿನತ್ತ ಕೊಂಡೊಯ್ಯುವಂತಿರಲಿ. "
ಬಂದ್ ಭೂತಕ್ಕೆ ತೆರೆ ಬಿದ್ದಾಗಲೇ ಪ್ರಜಾಪ್ರಭುತ್ವದ ನಿಜವಾದ ಗೆಲುವು ಸಾಧ್ಯ.

*ರಾಮ್ ಮೈಸೂರು*

10/08/2026

ಕಾರ್ಯಕ್ರಮಕ್ಕೆ ಪ್ರೀತಿಯ ಆಹ್ವಾನ

08/08/2026

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ 'ಕ್ವಿಟ್ ಇಂಡಿಯಾ ಚಳುವಳಿ'ಯನ್ನು ಸ್ಮರಿಸುವ ದಿನ ಇಂದಾಗಿದೆ. ಮಹಾತ್ಮ ಗಾಂಧೀಜಿಯವರು ನೀಡಿದ "ಮಾಡು ಇಲ್ಲವೇ ಮಡಿ" ಎಂಬ ಕರೆ, ಬ್ರಿಟಿಷ್ ಆಡಳಿತಕ್ಕೆ ಭಾರತವನ್ನು ತೊಲಗಲು ನೀಡಿದ ಅಂತಿಮ ಎಚ್ಚರಿಕೆಯಾಗಿತ್ತು. ಆ ಕರೆಗೆ ಕೋಟ್ಯಂತರ ಭಾರತೀಯರು ಜಾತಿ, ಮತ, ಧರ್ಮದ ಭೇದ ಮರೆತು ದೇಶಾದ್ಯಂತ ಬ್ರಿಟಿಷರ ವಿರುದ್ಧ ರಸ್ತೆಗಿಳಿದು ಹೋರಾಡಿದರು.

ಸಾರ್ವಜನಿಕರೇ ಮುನ್ನಡೆಸಿದ ಈ ಅಭೂತಪೂರ್ವ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಪಾಯವನ್ನೇ ಅಲ್ಲಾಡಿಸಿ, ಭಾರತದ ಸ್ವಾತಂತ್ರ್ಯಕ್ಕೆ ಅಂತಿಮ ದಾರಿ ಮಾಡಿಕೊಟ್ಟಿತು. ಈ ದಿನದಂದು ನಮ್ಮ ನಾಯಕರ ತ್ಯಾಗ, ಧೈರ್ಯ ಹಾಗೂ ರಾಷ್ಟ್ರಪ್ರೇಮವನ್ನು ಸ್ಮರಿಸೋಣ.

ಮುದ್ದರಾಮ ಪ್ರತಿಷ್ಠಾನ (ರಿ), ಮೈಸೂರು ಆಯೋಜಿಸಿರುವ "ಮುದ್ದರಾಮ ಪ್ರಶಸ್ತಿಪ್ರದಾನ ಸಮಾರಂಭ – 2026" ಅತ್ಯಂತ ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯ...
25/07/2026

ಮುದ್ದರಾಮ ಪ್ರತಿಷ್ಠಾನ (ರಿ), ಮೈಸೂರು ಆಯೋಜಿಸಿರುವ "ಮುದ್ದರಾಮ ಪ್ರಶಸ್ತಿಪ್ರದಾನ ಸಮಾರಂಭ – 2026" ಅತ್ಯಂತ ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯಕ್ರಮವಾಗಿದೆ. ಸಮಾಜ ಸೇವೆ, ಶಿಕ್ಷಣ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಗಣ್ಯರನ್ನು ಗೌರವಿಸುವ ಈ ಸಮಾರಂಭ ಯಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇವೆ.

ಈ ಸಮಾರಂಭದಲ್ಲಿ ನನ್ನ ಹಿತೈಷಿಗಳು, ನಾಡಿನ ಖ್ಯಾತ ವಾಗ್ಮಿಗಳು, ಸಂಸ್ಕೃತಿ ಚಿಂತಕರಾದ ಪ್ರೊ. ಎಂ. ಕೃಷ್ಣೇಗೌಡ ಅವರಿಗೆ ಈ ಸಾಲಿನ ಮುದ್ದುರಾಮ ಪ್ರಶಸ್ತಿಯನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ.

ಪ್ರೊ. ಎಂ. ಕೃಷ್ಣೇಗೌಡರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತೇವೆ. ನಿಮ್ಮ ಸಾನ್ನಿಧ್ಯವು ಕಾರ್ಯಕ್ರಮದ ಗೌರವವನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಸಮಾಜ ಸೇವಕರಿಗೆ ಪ್ರೋತ್ಸಾಹವಾಗಲಿದೆ.

ಬನ್ನಿ...
ಸಾಧಕರನ್ನು ಅಭಿನಂದಿಸೋಣ, ಮುದ್ದರಾಮ ಪ್ರಶಸ್ತಿಪ್ರದಾನ ಸಮಾರಂಭ – 2026 ಅನ್ನು ಯಶಸ್ವಿಗೊಳಿಸೋಣ.

ದಿನಾಂಕ: 26-07-2026, ಭಾನುವಾರ
ಸಮಯ: ಸಂಜೆ 6:00 ಗಂಟೆಗೆ
ಸ್ಥಳ: ನವಜ್ಯೋತಿ ಸಭಾಂಗಣ, ಜೆಎಸ್‌ಎಸ್‌ ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು

ಕೆ.ವಿ. ಮಲ್ಲೇಶ್‌
ಸದಸ್ಯ, ಮೈಸೂರು ಮಹಾನಗರ ಪಾಲಿಕೆ 2028-2018
ಅಧ್ಯಕ್ಷ, ಅನಿಕೇತನ ಸೇವಾ ಟ್ರಸ್ಟ್‌
ಉಪಾಧ್ಯಕ್ಷ, ಮೈಸೂರು ನಗರ ಕಾಂಗ್ರೆಸ್

Respected Girish,Happy birthday to you.May Goddess Chamundeshwari bless you with good health, peace, and power.
18/07/2026

Respected Girish,
Happy birthday to you.
May Goddess Chamundeshwari bless you with good health, peace, and power.

Address

#186, Anikethana Road South, I Block, Kuvempunagara
Mysore
5700023

Telephone

984521845

Website

Alerts

Be the first to know and let us send you an email when Anikethana Seva trust posts news and promotions. Your email address will not be used for any other purpose, and you can unsubscribe at any time.

Shortcuts

Share