ಒಕ್ಕಲಿಗ ಹಿತರಕ್ಷಣ ಬಳಗ

  • Home
  • India
  • Mysore
  • ಒಕ್ಕಲಿಗ ಹಿತರಕ್ಷಣ ಬಳಗ

ಒಕ್ಕಲಿಗ ಹಿತರಕ್ಷಣ ಬಳಗ ಒಕ್ಕಲಿಗರಿಂದ ಒಕ್ಕಲಿಗರ ಸಂಘಟನೆಗಾಗಿ ಮತ್ತು ಸೇವೆಗಾಗಿ ಸಂಘಟಿತರಾಗೋಣ ಜಾಗೃತರಾಗೋಣ...

ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ, ಪುಗ್ಸಟ್ಟೆಯಾಗಿ ಸಿಕ್ಕ ಭಿಕ್ಷೆಯೂ ಅಲ್ಲ, ತ್ಯಾಗ ಬಲಿದಾನಗಳ ಸಂಕೇತವಿದು,ಕೋಟಿ ಹೋರಾಟದ ಫಲವಿದು.ತಮ್ಮೆಲ್ಲರಿಗೂ...
15/08/2026

ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ,
ಪುಗ್ಸಟ್ಟೆಯಾಗಿ ಸಿಕ್ಕ ಭಿಕ್ಷೆಯೂ ಅಲ್ಲ,
ತ್ಯಾಗ ಬಲಿದಾನಗಳ ಸಂಕೇತವಿದು,
ಕೋಟಿ ಹೋರಾಟದ ಫಲವಿದು.

ತಮ್ಮೆಲ್ಲರಿಗೂ ಸ್ವತಂತ್ರ ದಿನದ ಶುಭಾಶಯಗಳು...

ಜೈ ಹಿಂದ್...🙏
ಸತೀಶ್ ಗೌಡ ಬೀಡನಹಳ್ಳಿ
Satish Gowda For Rajya vokkaligara Sangha

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ ಹೆಚ್ ರಾಮಯ್ಯರ ಸಮಾಧಿಯ ಬಳಿ ಅವರ 147 ...
12/07/2026

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ ಹೆಚ್ ರಾಮಯ್ಯರ ಸಮಾಧಿಯ ಬಳಿ ಅವರ 147 ನೇ ಜಯಂತಿಯನ್ನು ಸರಳವಾಗಿ ಆಚಲಿಸಲಾಯಿತು.

ಈ ವೇಳೆ ಟ್ರಸ್ಟಿನ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ , ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್ , ನಿರ್ದೇಶಕ ಗುರುರಾಜ್ , ಬಿಜೆಪಿ ಮುಖಂಡರಾದ ರಾಕೇಶ್ ಗೌಡ , ಕೆ ಹೆಚ್ ರಾಮಯ್ಯರ ಮೊಮ್ಮಗ ದೇವಿಪ್ರಸಾದ್ ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು..

Satish Gowda For Rajya vokkaligara Sangha
ಸತೀಶ್ ಗೌಡ ಬೀಡನಹಳ್ಳಿ

04/06/2026
ಹೆಮ್ಮೆಯಿಂದ ಶೇರ್ ಮಾಡಿ...🙏ಎಲ್ಲಾ ರಾಜರು ರಾಜ್ಯ ವಿಸ್ತಾರ ಮಾಡೋಕೆ ಅಂತ ಯುಧ್ಧ, ತಂತ್ರಗಾರಿಕೆ, ಸ್ನೇಹ ಸಂಬಂಧ, ಮಾಡ್ತಿದ್ದರೆ ಇಲ್ಲೊಬ್ಬ ರಾಜ ತ...
04/06/2026

ಹೆಮ್ಮೆಯಿಂದ ಶೇರ್ ಮಾಡಿ...🙏

ಎಲ್ಲಾ ರಾಜರು ರಾಜ್ಯ ವಿಸ್ತಾರ ಮಾಡೋಕೆ ಅಂತ ಯುಧ್ಧ, ತಂತ್ರಗಾರಿಕೆ, ಸ್ನೇಹ ಸಂಬಂಧ, ಮಾಡ್ತಿದ್ದರೆ ಇಲ್ಲೊಬ್ಬ ರಾಜ ತನ್ನ ರಾಜ್ಯವನ್ನು ಮಾಧರಿಯನ್ನಾಗಿಸಲು ಯೋಜನೆ ರೂಪಿಸುವಲ್ಲಿ ಹಾಗು ಅದರ ಅನುಷ್ಠಾನದಲ್ಲಿ ಮಗ್ನರಾಗಿದ್ದರು ಅವರೇ ನಮ್ಮ ಆಧುನಿಕ ಮೈಸೂರಿನ ಪಿತಾಮಹ ಶ್ರೀಮನ್ಮಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್...

ನೂರು ವರ್ಷಗಳ ಸಾಧನೆಯ ಗುರುತನ್ನು ಮೂರು ದಶಕಗಳಲ್ಲಿ ಮಾಡಿದ ಮಹನೀಯ.

👉1902 ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು.
👉1903 ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ.
👉1905 ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)
👉1907 ವಾಣಿ ವಿಲಾಸಸಾಗರ ಅಣೆಕಟ್ಟೆ (ಮುಕ್ತಾಯ ವರ್ಷ)
👉1907 ಮೈಸೂರು ಪ್ರಜಾ ಪ್ರತಿನಿಧಿ ಸಭೆ.
👉1909 ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ.
👉1909 ಭಾರತದ ಮೊದಲ ಬಾಯ್ಸ್ ಸ್ಕೌಡ್ ತರಬೇತಿ
👉1910 ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ.
👉1913 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
👉1913 ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ.
👉1915 ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
👉1916 ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
👉1916 ಯುವರಾಜ ಕಾಲೇಜು.
👉1916 ಮೈಸೂರು ಚೇಂಬರ್ ಆಫ್ ಕಾಮರ್ಸ್.
👉1917 ಮಹಾರಾಣೀ ಮಹಿಳಾ ಕಾಲೇಜು.
👉1918 ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ
👉1921 ಲಲಿತ ಮಹಲ್ ಅರಮನೆ ಸ್ಥಾಪನೆ.
👉1921 ವಿಜ್ಞಾನ ಕಾಲೇಜು ಬೆಂಗಳೂರು.
👉1923 ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
👉1924 ಮೈಸೂರು ಮೆಡಿಕಲ್ ಕಾಲೇಜು.
👉1925 ಕೃಷ್ಣರಾಜನಗರ ಸ್ಥಾಪನೆ.
👉1925 nihmans ಆಸ್ಪತ್ರೆ ಸ್ಥಾಪನೆ.
👉1927 ಕೃಷ್ಣರಾಜ ಆಸ್ಪತ್ರೆ ಮೈಸೂರು.
👉1928 ಬೆಂಗಳೂರು ಕೆ ಆರ್ ಮಾರುಕಟ್ಟೆ.
👉1930 ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು.
👉1933 ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ.
👉1933 ಕೆ ಆರ್ ಮಿಲ್.
👉1933 ಬೆಂಗಳೂರು ಟೌನ್ ಹಾಲ್.
👉1933 ಸಂತ ಫಿಲೊಮಿನ ಚರ್ಚ್ ಮೈಸೂರು.
👉1934 ವಾಣಿವಿಲಾಸ ಮಕ್ಕಳ ಆಸ್ಪತ್ರೆ.
👉1935 ಮೈಸೂರು ಪೇಪರ್ ಮಿಲ್ ಭದ್ರಾವತಿ.
👉1936 ಮೈಸೂರು ಲ್ಯಾಂಪ್ಸ್.
👉1937 ಮೈಸೂರು ಪೆಂಟ್ ಅಂಡ್ ವಾರ್ನಿಷ್
👉1937 ಪೆಪರ್ ಮಿಲ್ ಬೆಳಗೊಳ
👉1938 ಮಹಾರಾಣಿ ಮಹಿಳಾ ಕಾಲೇಜು
👉1939 ಮಂಡ್ಯ ಜಿಲ್ಲೆ ನಿರ್ಮಾಣ.
👉1939 ಹಿರೇಭಾಸ್ಕರ ಅಣಕಟ್ಟೇ
👉ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನ ಘಟಕ ಜೋಗ.
👉ಬಾಲ್ಯ ವಿವಾಹ ರದ್ದತಿ.
👉ಮಹಿಳಾ ಶಿಕ್ಷಣಕ್ಕೆ ಒತ್ತು.
👉ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ

ಇಂತಹ ಇನ್ನು ಅಸಂಖ್ಯಾತ ಸಾಧನೆ ಮಾಡಿದ ಜನಹಿತ ಚಿಂತಕರು ನಮ್ಮ. ಮೈಸೂರು ರಾಜರು.

ಬದುಕಿನುದ್ದಕ್ಕೂ ಸಮಾಜದ ಹಿತ ಹಾಗು ಅದರ ಅಭಿವೃದ್ದಿ ಭಯಸಿದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ಜಯಂತಿಯಿಂದು ಅಗಲಿದ ಮಹಾ ಚೇತನವನ್ನು ಸ್ಮರಿಸೋಣ.
ನಿನ್ನೆ ಮೊನ್ನೆ ಚನ್ನಕ್ಕ ಅಂತ ಒಂದು ಕಟ್ಟಡನೆ ಸಾಧನೆ ಅಂತ ದಿನ ಬಡಿದುಕೊಳ್ಳುವವರ ಮದ್ಯೆ ನಾಡುಕಟ್ಟಿದ ನಾಲ್ವಡಿಯವರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ .

ಆಳುವ ಸರ್ಕಾರಗಳು ಕೃಷ್ಣರಾಜ ಒಡೆಯರ್ ಜಯಂತಿಯನ್ನು ನಾಡಹಬ್ಬದ ರೀತಿ ಆಚರಿಸಬೆಕು ಆಗ ಮಾತ್ರ ಅವರ ಸಾಧನೆಗಳ ಜತೆಗೆ ನಾಲ್ವಡಿಯವರು ನಮ್ಮ ಮನಸಿನಲ್ಲಿ ಚಿರಕಾಲ ಉಳಿಯುವರು...

ಮರೆಯದಿರು ಮನುಜ ನಾಲ್ವಡಿಯ ಸಾಧನೆಗಳನ್ನ.
ನಾಡ ಜನರಿಗಾಗಿ ಅವರು ತಂದ ಯೋಜನೆಯ ಮೊದಲುಗಳನ್ನ.

ಸತೀಶ್ ಗೌಡ ಬೀಡನಹಳ್ಳಿ ✍
9986403488
ಅಧ್ಯಕ್ಷರು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.
Satish Gowda For Rajya vokkaligara Sangha

ರಾಜ್ಯ ಒಕ್ಕಲಿಗರ ಸಂಘ – 120 ವರ್ಷದ ಗೌರವಯುತ ಪಯಣ.ರಾಜ್ಯ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದು ಇಂದಿಗೆ 120 ವರ್ಷಗಳು ಪೂರ್ತಿಯಾಗಿವೆ. ಈ ಸಂಘದ ...
01/04/2026

ರಾಜ್ಯ ಒಕ್ಕಲಿಗರ ಸಂಘ – 120 ವರ್ಷದ ಗೌರವಯುತ ಪಯಣ.

ರಾಜ್ಯ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದು ಇಂದಿಗೆ 120 ವರ್ಷಗಳು ಪೂರ್ತಿಯಾಗಿವೆ. ಈ ಸಂಘದ ಪರಿಕಲ್ಪನೆಯನ್ನು ಮಾಡಿ, ಅದನ್ನು ಕಾರ್ಯರೂಪಕ್ಕೆ ತಂದು, ಒಕ್ಕಲಿಗ ಸಮಾಜವನ್ನು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತಂದ ಮಹನೀಯರಾದ ಶ್ರೀ ಕೆ.ಹೆಚ್. ರಾಮಯ್ಯನವರು, ಬ್ಯಾರಿಸ್ಟರ್ ಬಿ.ಎನ್. ನಾಗಪ್ಪ, ತಹಶೀಲ್ದಾರ್ ಬಿ. ಚೆನ್ನಿಗಪ್ಪ,ಉರಿಗದ ಬೈಯಣ್ಣ, ಸಿದ್ಧಾಪುರದ ಪಟೇಲ್ ಪುಟ್ಟಣ್ಣ, ಫ್ಲೀಡರ್ ಕೆಂಪಣ್ಣ, ಎಂ.ಎಲ್. ಶ್ಯಾಮಗೌಡ, ಸಿ. ಲಕ್ಷ್ಮಣಗೌಡ ಇವರಾದಿ ಎಲ್ಲಾ ಸಂಸ್ಥಾಪಕರ ದಿವ್ಯ ಚಿಂತನೆಗಳಿಗೆ ನಮ್ಮ ಅನಂತ ನಮನಗಳು 🙏

ನಾವು ಕನಸು ಕಂಡ ರಾಜ್ಯ ಒಕ್ಕಲಿಗರ ಸಂಘವೆಂದರೆ
ರಾಮಯ್ಯರಂತಹ ಮಹನೀಯರು ಮತ್ತು
ಎಂ.ಹೆಚ್. ಮರೀಗೌಡರಂತಹ ಸೈದ್ದಾಂತಿಕ ವ್ಯಕ್ತಿತ್ವಗಳು ಕಟ್ಟಿದ ಸಂಘ.
ಹತ್ತು ಜನರ ಹಣದ ಕಾಫಿ ಸಹ ಕುಡಿಯಬಾರದು ಎಂದು ಮನೆಯಿಂದ ಕಾಫಿ ತಂದು
ಸಭೆಗಳನ್ನು ನಡೆಸುತ್ತಿದ್ದ ನಿಷ್ಠಾವಂತ ನಾಯಕರು ಇದ್ದರು.
ಆದರೆ, ಇಂದಿನ ಬದಲಾಗಿರುವ ಪರಿಸ್ಥಿತಿಯಲ್ಲಿ
ಅವರು ಅಲಂಕರಿಸಿದ ಹುದ್ದೆಗಳ ಗೌರವ ಕುಂದಿದಂತಾಗಿದೆ.
ಸ್ವಾರ್ಥ ಮತ್ತು ಲಾಭದ ಚಿಂತನೆಗಳು ಹೆಚ್ಚುತ್ತಿರುವುದು
ಸಂಘದ ದುಃಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.

ಸಂಘದ ಪುನರುಜ್ಜೀವನ ಅವಶ್ಯಕವಾಗಿದೆ!
ಆ ದಿಕ್ಕಿನಲ್ಲಿ
ನಾವು ಎಲ್ಲರೂ ಸಕಾರಾತ್ಮಕವಾಗಿ ಯೋಚಿಸಿ,
ಒಗ್ಗಟ್ಟಿನಿಂದ ಮುಂದೆ ಸಾಗೋಣ.

ಬೀಡನಹಳ್ಳಿ ಸತೀಶ್ ಗೌಡ
9986403488

Pls join my whatsup channel ..🙏
26/03/2026

Pls join my whatsup channel ..🙏

Follow Satish Gowda Beednahalli's WhatsApp channel. ಸಮುದಾಯ ಮತ್ತು ಸಂಘಟನೆ.... Join 194 followers for the latest updates.

21/03/2026

2021ರಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ನನ್ನ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದಿಂದ 7,852 ಅಮೂಲ್ಯ ಮತಗಳನ್ನು ನೀಡಿ ನನಗೆ ನೈತಿಕ ಗೆಲುವು ತಂದುಕೊಟ್ಟ ಪ್ರತಿೊಬ್ಬ ಪ್ರಜ್ಞಾವಂತ ಬಂಧುಗಳಿಗೂ ನನ್ನ ಹೃದಯದಾಳದ ನಮಸ್ಕಾರಗಳು.

ಆ ಚುನಾವಣೆಯಲ್ಲಿ ನನಗೆ ಸಿಕ್ಕಿದ್ದು ಕೇವಲ ಮತಗಳಲ್ಲ — ಅದು ನಿಮ್ಮ ಪ್ರೀತಿ, ನಿಮ್ಮ ನಂಬಿಕೆ, ನನ್ನ ಮೇಲಿಟ್ಟಿದ್ದ ವಿಶ್ವಾಸದ ಆಶೀರ್ವಾದವಾಗಿತ್ತು. ನೀವು ಕೊಟ್ಟ ಆ ಬೆಂಬಲ ನನ್ನ ಬದುಕಿನ ದಾರಿಯಲ್ಲಿ ಒಂದು ದೊಡ್ಡ ಧೈರ್ಯವಾಯಿತು, ಸಮಾಜದ ಪರವಾಗಿ ಇನ್ನಷ್ಟು ಕೆಲಸ ಮಾಡಲು ಒಂದು ಶಕ್ತಿಯಾಯಿತು. ಆ ಪ್ರೀತಿಯ ಋಣವನ್ನು ನಾನು ಜೀವನಪೂರ್ತಿ ಮರೆಯಲಾರೆ.

ಈಗ 2026ರ ವರ್ಷಾಂತ್ಯದಲ್ಲಿ ಅಥವಾ 2027ರ ಆರಂಭದಲ್ಲಿ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ ಹಾಗೂ ಊಟಿ ಭಾಗದಿಂದ ಮತ್ತೊಮ್ಮೆ ನಿಮ್ಮ ಸೇವಕನಾಗಿ ಸ್ಪರ್ಧಿಸುತ್ತಿದ್ದೇನೆ.
ನನ್ನ ಮನದಾಳದಲ್ಲಿ ಸದಾ ಹೊತ್ತಿರುವುದು ನಮ್ಮ ಸಮುದಾಯದ ನೋವು, ಮತ್ತು ಭವಿಷ್ಯದ ಚಿಂತನೆ. ಸಮುದಾಯದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು, ನಮ್ಮ ಜನರ ಧ್ವನಿಯಾಗಬೇಕು, ನಮ್ಮ ಹಕ್ಕುಗಳಿಗೆ ಬಲವಾಗಬೇಕು ಎಂಬ ಬದ್ಧತೆಯೊಂದೇ ನನ್ನನ್ನು ಮತ್ತೆ ನಿಮ್ಮ ಮುಂದೆ ಕರೆದುಕೊಂಡು ಬಂದಿದೆ.

ಆದ್ದರಿಂದ ಪ್ರೀತಿಯ ಬಂಧುಗಳೇ, ನನಗೆ ಒಂದು ಅವಕಾಶ ನೀಡಿ. ನೀವು 2021ರಲ್ಲಿ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ದ್ವಿಗುಣಗೊಳಿಸಿ ಈ ಬಾರಿಯೂ ನನ್ನ ಮೇಲೆ ಭರವಸೆ ಇಟ್ಟು, ನಿಮ್ಮ ಅಮೂಲ್ಯ ಮತದಾನದ ಮೂಲಕ ಗೆಲುವಿನ ದಾರಿಗೆ ಕೊಂಡೊಯ್ಯಬೇಕಾಗಿ ವಿನಮ್ರವಾಗಿ ಬೇಡಿಕೊಳ್ಳುತ್ತೇನೆ.

ನಿಮ್ಮ ಒಂದು ಮತ ನನ್ನ ವೈಯಕ್ತಿಕ ಗೆಲುವಿಗಲ್ಲ — ಅದು ನಮ್ಮ ಸಮುದಾಯದ ಗೌರವಕ್ಕೆ, ನಮ್ಮ ಏಕತೆಗೆ, ನಮ್ಮ ಭವಿಷ್ಯಕ್ಕೆ ಬಲ ತುಂಬುವ ಮತವಾಗಿರುತ್ತದೆ.

ನಿಮ್ಮ ಪ್ರೀತಿ ನನ್ನ ಉಸಿರು,
ನಿಮ್ಮ ವಿಶ್ವಾಸ ನನ್ನ ಶಕ್ತಿ,
ನಿಮ್ಮ ಆಶೀರ್ವಾದವೇ ನನ್ನ ಗೆಲುವಿನ ಬೆಳಕು.

ನಿಮ್ಮವ..
ಬೀಡನಹಳ್ಳಿ ಸತೀಶ್ ಗೌಡ .
9986403488

19/03/2026

ಯುಗಾದಿ ಹಬ್ಬ ತಮ್ಮೆಲ್ಲರ ಬದುಕಿನಲ್ಲಿ ಹೊಸತನವ ತರಲಿ ಎಂಬ ಶುಭ ಕಾಮನೆಗಳು... @ ಸತೀಶ್ ಗೌಡ ಬೀಡನಹಳ್ಳಿ Satish Gowda For Rajya vokkaligara Sangha

ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ,ಭೂಮಿಯ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟ...
14/03/2026

ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ,ಭೂಮಿಯ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟ ವ್ಯಕ್ತಿ ಗೋಪಾಲಗೌಡರು ಕಾಲ್ನಡಿಗೆಯಲ್ಲಿ ಇಡೀ ಮಲೆನಾಡನ್ನು ಸುತ್ತಿ ಜನಜಾಗೃತಿಗೊಳಿಸಿ ಅವರ ಹಕ್ಕಿಗಾಗಿ ಹೋರಾಟ ಮಾಡಿದವರು.

ನನ್ನ ಜಾತಿ ನೋಡಿ ಮತ ಹಾಕುವೆಯಾದರೆ, ನಿನ್ನ ಮತವೇ ನನಗೆ ಬೇಡ" ಎಂದು ಮತದಾರನಿಗೆ ನೇರವಾಗಿ ಹೇಳಿದವರು "ಶಾಂತವೇರಿ ಗೋಪಾಲಗೌಡ"ರು.

ಗೋಪಾಲಗೌಡರಿಗೆ ಒಮ್ಮೆ ಮುಖ್ಯ ಮಂತ್ರಿಯಾಗುವಂತೆ ರಾಜ್ಯಪಾಲರಿಂದ ಆಹ್ವಾನ ಬರುತ್ತದೆ.ಇಂದಿರಾ ಕಾಂಗ್ರೆಸ್ ಮತ್ತು ನಿಜಲಿಂಗಪ್ಪ ಕಾಂಗ್ರೆಸ್ ಎಂಬ ಗೊಂದಲದಲ್ಲಿ ಸಿಕ್ಕ ಈ ಅವಕಾಶವನ್ನು ಇಂದಿನ ಕಾಲದ ಯಾವುದೇ ರಾಜಕಾರಣಿಯಾಗಿದ್ದರೂ ಅದನ್ನು ಶರವೇಗದಲ್ಲಿ ಸ್ವೀಕರಿಸಿ ಹರಿಬಿರಿಯಲ್ಲಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಹುಟ್ಟಿದ್ದಕ್ಕೆ ಮುಖ್ಯ ಮಂತ್ರಿಯಾಗಿಯಾದರೂ ಸಾಯೋಣ ಎನ್ನುತ್ತಿದ್ದರು. ಆದರೆ ಗೌಡರಿಗೆ ಬಂದ ಆಹ್ವಾನವನ್ನು ತಿರಸ್ಕರಿಸಿದರು. ಮುಖ್ಯ ಮಂತ್ರಿಯಾಗುವಷ್ಟು ಜನಾದೇಶ ತನ್ನ ಪರವಾಗಿಲ್ಲದಿರುವುದರಿಂದ ಮುಖ್ಯ ಮಂತ್ರಿ ಹುದ್ದೆ ಒಪ್ಪಿಕೊಳ್ಳಲಾಗದೆಂದರು.

ತಮ್ಮ ಹರತಾಳ ಹೋರಾಟದ ಫಲವಾಗಿ ಏಳುವರೆ ಲಕ್ಷ ಕುಟುಂಬಗಳು ಗೇಣಿ ಹಕ್ಕು ಪಡೆದುಕೊಂಡರೂ ಗೋಪಾಲಗೌಡರಿಗೆ ತಮ್ಮ ಊರಿನಲ್ಲಿ ಒಂದು ಹುಲ್ಲಿನ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ.ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ಹುಲ್ಲಿನ ಮನೆಯೇ ಇವರ ಆಸ್ತಿ .ಮೂರು ಬಾರಿ ಶಾಸಕರಾಗಿದ್ದ ಗೌಡರು ಪ್ರಭಾವಿ ವಿರೋಧ ಪಕ್ಷದ ನಾಯಕರು.ಬೆಂಗಳೂರಿನ ವಿಕ್ಟೋರಿಯಾ ಸರಕಾರಿ ಆಸ್ಪತ್ರೆಯಲ್ಲಿ ಇವರು ನಿಧನರಾಗುವಾಗ ಬೆಂಗಳೂರಿನಲ್ಲಿವರಿಗೆ ಸ್ವಂತ ಮನೆ ಇರಲಿ,ತನ್ನ ಹೆಂಡತಿ ಮಕ್ಕಳಿಗಾಗಿ ಒಂದು ನಿವೇಶನವೂ ಇರಲಿಲ್ಲ. ವೀರೇಂದ್ರ ಪಾಟೀಲ್ ರವರ ಸರ್ಕಾರ ಬೆಂಗಳೂರಿನಲ್ಲಿ ಉಚಿತವಾಗಿ ಇವರಿಗೆ ನಿವೇಶನ ನೀಡಿದಾಗ,‘ರಾಜ್ಯದ ಎಲ್ಲ ನಿವೇಶನ ರಹಿತರಿಗೆ ನಿವೇಶನ ನೀಡಿದ ನಂತರ ನನಗೆ ನೀಡಿ’ ಎಂದು ತಿರಸ್ಕರಿಸಿ ಒಬ್ಬ ರಾಜಕಾರಣಿಯಾಗಿ ರಾಜಕಾರಣದಲ್ಲಿ ಇತರರಿಗೆ ಮಾದರಿಯಾಗಿ ಬಾಳಿದವರು ಗೌಡರು.

ಒಮ್ಮೆ ಗೌಡರನ್ನು ಕಾಣಲು ಬಂದ ಸ್ನೇಹಿತರು ಅವರ ಮನೆಯಲ್ಲಿ ಮಕ್ಕಳು ಇರುವುದನ್ನ ಮನಗಂಡು ಬಿಸ್ಕತ್ ತಂದಿರುತ್ತಾರೆ ಇದನ್ನು ಗಮನಿಸಿದ ಗೋಪಾಲಗೌಡರು ನೀವೇನೋ ನಮ್ಮ ಮಕ್ಕಳಿಗೆ ಪ್ರೀತಿಯಿಂದ ಬಿಸ್ಕತ್ ತಂದುಕೊಡ್ತಿರ ಅವರು ತಿಂದು ಅದರ ರುಚಿ ಹೊತ್ತಿಸಿಕೊಂಡರೆ ನಾವು ಬಿಸ್ಕತ್ ತಂದು ಕೊಡಲು ಕಾಸು ಇರಬೇಕಲ್ಲ ಹಾಗಾಗಿ ನೀವು ತಂದ ಬಿಸ್ಕತ್ ವಾಪಸ್ ಕೊಂಡೊಯ್ಯಿರಿ ಎಂದು ಹೇಳಿದವರು.

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಅದು ಅವರ ಆದರ್ಶ ಸಮಾಜವಾದಿ ಗುಣ ರಾಜಕೀಯವೆಂದರೆ ಉದ್ಯಮವೆಂದು ಭಾವಿಸಿರುವ ಈ ಕಾಲಘಟ್ಟದಲ್ಲಿ ಕಾಲಿ ಕೈಯಲ್ಲಿ ಬಂದು ಹೋರಾಟ ಮಾಡಿ ಜನರಿಂದ ಬಂದ ಅಧಿಕಾರವನ್ನು ಜನರಿಗಾಗೀಯೆ ನಿರ್ವಹಣೆ ಮಾಡಿ ಖಾಲಿ ಕೈಯಲ್ಲೆ ನಮ್ಮನ್ನಗಲಿದ ಆದರ್ಶ ಪುರುಷ ಗೋಪಾಲಗೌಡರ ತತ್ವ ಸಿದ್ದಾಂತಗಳು ಚಿರಾಯು. ಇಂದು ಅವರ 103 ನೇ ಜನ್ಮ ದಿನದ ಈ ಸಂಧರ್ಭದಲ್ಲಿ ಅವರ ಆದರ್ಶಗಳು ಅಮರವಾಗಿ ನಮ್ಮೊಡನೆ ಇವೆ ಮುಂದೆಯೂ ಇರುತ್ತವೆ...

ಸತೀಶ್ ಗೌಡ ಬೀಡನಹಳ್ಳಿ ✍️
Satish Gowda For Rajya vokkaligara Sangha

Address

Mysore
Mysore

Website

Alerts

Be the first to know and let us send you an email when ಒಕ್ಕಲಿಗ ಹಿತರಕ್ಷಣ ಬಳಗ posts news and promotions. Your email address will not be used for any other purpose, and you can unsubscribe at any time.

Shortcuts

Share

Category