Anantha Kumar D R

Anantha Kumar D R Public figure

20/05/2026

ಮೋದಿ ಜೀ ನಿಜವಾಗಿಯೂ ಮೆಲೋನಿಗೆ “Melody” ಕೊಟ್ಟು ಬಂದಿದ್ದಾರೆ ಅಂತೆ 😂😂😂

ಬುದ್ಧನಾಗಲಾರೇ, ಆದರೆ ಬುದ್ಧನಾಗುವ ಪ್ರಯತ್ನವನ್ನು ಬಿಡಲಾರೆ.ಬುದ್ಧ ಪೂರ್ಣಿಮೆಯ ಶುಭಾಶಯಗಳು
01/05/2026

ಬುದ್ಧನಾಗಲಾರೇ, ಆದರೆ ಬುದ್ಧನಾಗುವ ಪ್ರಯತ್ನವನ್ನು ಬಿಡಲಾರೆ.

ಬುದ್ಧ ಪೂರ್ಣಿಮೆಯ ಶುಭಾಶಯಗಳು

SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.ಜೀವನದಲ್ಲಿ ಸೋಲುಗಳು ಮತ್ತು ತಪ್ಪುಗಳು ಅತ್ಯಂತ ಮಹತ್...
23/04/2026

SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಜೀವನದಲ್ಲಿ ಸೋಲುಗಳು ಮತ್ತು ತಪ್ಪುಗಳು ಅತ್ಯಂತ ಮಹತ್ವದ ಪಾಠಗಳನ್ನು ಕಲಿಸುತ್ತವೆ. ನಿಮ್ಮ ಅನುತ್ತೀರ್ಣವೂ ಕೂಡ ಜೀವನದಲ್ಲಿ ಒಳ್ಳೆಯ ಪಾಠವನ್ನೇ ನೀಡುತ್ತದೆ. ಫೇಲ್ ಆದಾಗ, ಪಾಸ್ ಆಗಲು ಹೇಗೆ ಸಿದ್ಧರಾಗಬೇಕು ಎಂಬ ಅನುಭವವನ್ನು ಇದು ನೀಡುತ್ತದೆ. ಆದ್ದರಿಂದ ಚಿಂತಿಸಬೇಡಿ. ಮುಂದಿನ ಪರೀಕ್ಷೆಯಲ್ಲಿ ಹೇಗೆ ಯಶಸ್ಸು ಸಾಧಿಸಬೇಕು ಎಂಬುದರ ಬಗ್ಗೆ ಯೋಚಿಸಿ ಮತ್ತು ಇನ್ನಷ್ಟು ಶ್ರಮಿಸಿ.

– ಚಿಕ್ಕಮಾರನಹಳ್ಳಿ ಅನಂತ

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಶ್ರೀ ಬಸವ ಜಯಂತಿಯ ಶುಭಾಶಯಗಳುಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ. "ಇವ ನಮ್ಮವ, ಇವ ನಮ್ಮವ, ಇವ ನಮ...
20/04/2026

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಶ್ರೀ ಬಸವ ಜಯಂತಿಯ ಶುಭಾಶಯಗಳು

ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ.
"ಇವ ನಮ್ಮವ, ಇವ ನಮ್ಮವ, ಇವ ನಮ್ಮವ" ನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ....

(ಒಂದು ಸಾಮಾಜಿಕ ‌ನಾಟಕದಲ್ಲಿ ಬಸವಣ್ಣನವರ ಪತ್ರದಾರಿಯಾಗಿ ಅಭಿನಯಿಸಿದ್ದಾಗ ತೆಗೆದ ಫೋಟೊ)

ಸಾರ್ವಜನಿಕ ಹಣ RSS ಪ್ರಚಾರಕ್ಕಾ? ಸರ್ಕಾರದ ಪಾತ್ರದ ಮೇಲೆ ಗಂಭೀರ ಪ್ರಶ್ನೆRTI ಮೂಲಕ ಬಹಿರಂಗವಾದ ಮಾಹಿತಿಯ ಪ್ರಕಾರ, ಕೇಂದ್ರ ಸಂಸ್ಕೃತಿ ಸಚಿವಾಲಯ...
16/04/2026

ಸಾರ್ವಜನಿಕ ಹಣ RSS ಪ್ರಚಾರಕ್ಕಾ? ಸರ್ಕಾರದ ಪಾತ್ರದ ಮೇಲೆ ಗಂಭೀರ ಪ್ರಶ್ನೆ

RTI ಮೂಲಕ ಬಹಿರಂಗವಾದ ಮಾಹಿತಿಯ ಪ್ರಕಾರ, ಕೇಂದ್ರ ಸಂಸ್ಕೃತಿ ಸಚಿವಾಲಯವು RSS ಸಂಸ್ಥೆಯ 100 ವರ್ಷಗಳ ಆಚರಣೆಗೆ ಸಂಬಂಧಿಸಿದಂತೆ ಪ್ರಿಂಟ್ ಮೀಡಿಯಾದಲ್ಲಿ ಜಾಹೀರಾತು ನೀಡಲು ₹76,13,129 ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ.

ಈ ವಿಚಾರವು ಗಂಭೀರ ಪ್ರಶ್ನೆ ಎತ್ತುತ್ತದೆ:
ಭಾರತ ಸರ್ಕಾರವೇ ಈಗ RSS ಪ್ರಚಾರ ಯಂತ್ರವಾಗಿದೆಯೇ?

RSS ಒಂದು ಖಾಸಗಿ ಸಂಘಟನೆ. ಅದು ಸರ್ಕಾರದ ಅಧಿಕೃತ ಸಂಸ್ಥೆಯಲ್ಲ.! ಆದರೂ ಅದರ ಶತಮಾನೋತ್ಸವಕ್ಕೆ ಸರ್ಕಾರದ ಹಣವನ್ನು ಬಳಸಿರುವುದು, ಸರ್ಕಾರ ಮತ್ತು ನಡುವಿನ ಅತಿಯಾದ ರಾಜಕೀಯ ಸಂಬಂಧವನ್ನು ದೇಶದ ಜನರಿಗೆ ತೋರಿಸುತ್ತದೆ.

ಜನರ ತೆರಿಗೆ ಹಣವನ್ನು ಶಿಕ್ಷಣ, ಆರೋಗ್ಯ, ಉದ್ಯೋಗ, ರೈತರ ಕಲ್ಯಾಣಕ್ಕಾಗಿ ಬಳಸಬೇಕಾದ ಸರ್ಕಾರ, ಒಂದು ನಿರ್ದಿಷ್ಟ ತಾತ್ವಿಕ ಸಂಘಟನೆಯ ಪ್ರಚಾರಕ್ಕೆ ಹಣ ಖರ್ಚು ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.

ಭಾರತವು ಸಂವಿಧಾನಾಧಾರಿತ, ಧರ್ಮನಿರಪೇಕ್ಷ ರಾಷ್ಟ್ರ. ಸರ್ಕಾರವು ಎಲ್ಲರ ಸರ್ಕಾರವಾಗಿರಬೇಕು. ಆದರೆ ಒಂದು ಸಂಘಟನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಬಳಸುವುದು ರಾಜ್ಯ ಯಂತ್ರವೇ RSS ರಾಜಕೀಯವನ್ನು ಬಲಪಡಿಸುವ ಪ್ರಯತ್ನವೇ? ಎಂಬ ಅನುಮಾನವನ್ನು ಹುಟ್ಟಿಸುತ್ತದೆ.

ಸಾರ್ವಜನಿಕ ಹಣವು ಜನರ ವಿಶ್ವಾಸ.
ಆ ಹಣವನ್ನು ಸಂಘಟನೆಯ ಪ್ರಚಾರಕ್ಕೆ ಬಳಸುವುದು ಸಂವಿಧಾನದ ಆತ್ಮಕ್ಕೆ ವಿರುದ್ದವಾಗಿದೆ.

ಜನರ ಹಣದ ಬಗ್ಗೆ ಜನರೆ ಪ್ರಶ್ನೆ ಕೇಳಬೇಕು —
ಪ್ರಜಾಪ್ರಭುತ್ವದಲ್ಲಿ ಸರ್ಕಾರವೇ ಉತ್ತರ ನೀಡಬೇಕು.

ಇದು ಎಲ್ಲಾ ಯುವಶಕ್ತಿಗಳ ಒಗ್ಗಟ್ಟಿಗೆ ಸಂದ ಜಯವಾಗಿತ್ತು, ಈಗ ತಾಲ್ಲೂಕು ಕಚೇರಿಯಲ್ಲಿ ಉಚಿತ ಕಾನೂನು ಸಲಹೆಗಾರರು ಇದ್ದಾರೆ ನನ್ನ ತಾಲ್ಲೂಕಿನ ಜನ ಸ...
10/04/2026

ಇದು ಎಲ್ಲಾ ಯುವಶಕ್ತಿಗಳ ಒಗ್ಗಟ್ಟಿಗೆ ಸಂದ ಜಯವಾಗಿತ್ತು, ಈಗ ತಾಲ್ಲೂಕು ಕಚೇರಿಯಲ್ಲಿ ಉಚಿತ ಕಾನೂನು ಸಲಹೆಗಾರರು ಇದ್ದಾರೆ ನನ್ನ ತಾಲ್ಲೂಕಿನ ಜನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ❤️💛

09/04/2026

ದಯವಿಟ್ಟು ಶೇರ್ ಮಾಡುವ ಮೂಲಕ ಸಹಾಯ ಮಾಡಿ 🙏🙏

ತುರ್ತಾಗಿ ರಕ್ತ ಬೇಕಾಗಿದೆ

ಓಪನ್ ಹಾರ್ಟ್‌ ಸರ್ಜರಿಗಾಗಿ ರಕ್ತ ಬೇಕಾಗಿದೆ ಕಳೆದ ಒಂದು ವಾರಗಳಿಂದಲೂ ಹುಡುಕಲಾಗುತ್ತಿದೆ ದಯವಿಟ್ಟು ಸಹಾಯ ಮಾಡಿ

ರಕ್ತದ ಗುಂಪು A- ನೆಗೆಟಿವ್

ಸಂಪರ್ಕಿಸಿ :- 9036175287

09/04/2026

ತುರ್ತಾಗಿ ರಕ್ತ ಬೇಕಾಗಿದೆ

ಓಪನ್ ಹಾರ್ಟ್‌ ಸರ್ಜರಿಗಾಗಿ ರಕ್ತ ಬೇಕಾಗಿದೆ ಕಳೆದ ಒಂದು ವಾರಗಳಿಂದಲೂ ಹುಡುಕಲಾಗುತ್ತಿದೆ ದಯವಿಟ್ಟು ಸಹಾಯ ಮಾಡಿ

ರಕ್ತದ ಗುಂಪು A- ನೆಗೆಟಿವ್

ಸಂಪರ್ಕಿಸಿ :- 9036175287

Address

Chikkamaranahalli
Nelamangala
562123

Telephone

+919738422789

Website

Alerts

Be the first to know and let us send you an email when Anantha Kumar D R posts news and promotions. Your email address will not be used for any other purpose, and you can unsubscribe at any time.

Contact The Organization

Send a message to Anantha Kumar D R:

Share

Category