ಶ್ರೀ ರಾಮಯೋಗೀಶ್ವರ ಮಠ, ಮಂಡ್ಯ Sree Ramayogeshwara Math, Mandya

  • Home
  • India
  • Pandavapura
  • ಶ್ರೀ ರಾಮಯೋಗೀಶ್ವರ ಮಠ, ಮಂಡ್ಯ Sree Ramayogeshwara Math, Mandya

ಶ್ರೀ ರಾಮಯೋಗೀಶ್ವರ ಮಠ, ಮಂಡ್ಯ Sree Ramayogeshwara Math, Mandya ಶ್ರೀ ರಾಮಯೋಗೀಶ್ವರ ಮಠ ಬೇಬಿ ಬೆಟ್ಟ ಚಿನಕುರಳಿ ಹೋಬಳಿ ಪಾಂಡವಪುರ ತಾಲೂಕು ಮಂಡ್ಯ ಜಿಲ್ಲೆ 571455

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ, ಚಿನಕುರಳಿ ಹೋಬಳಿಯ ಬೇಬಿ ಗ್ರಾಮದ ಹೊರಭಾಗದಲ್ಲಿರುವ ಬೇಬಿ ಬೆಟ್ಟದಲ್ಲಿ ಸುಮಾರು 600 ವರ್ಷಗಳ ಹಿಂದೆ ಇತಿಹಾಸ ಪ್ರಸಿದ್ಧ ಶ್ರೀರಾಮಯೋಗೀಶ್ವರ ಮಠವು ಸ್ಥಾಪನೆಯಾಗಿದೆ. ಬೆಳಗಾವಿ ಜಿಲ್ಲೆಯ ಮುರುಗೋಡು ಮಹಾಂತ ಶಿವಯೋಗಿಗಳ ಮಠದಲ್ಲಿ ಇದ್ದ ಶ್ರೀ ಮರಿದೇವರು ಸ್ವಾಮಿಗಳು ಲೋಕಸಂಚಾರಕ್ಕೆಂದು ಬಂದವರು, ಕೊಳ್ಳೇಗಾಲ ತಾಲ್ಲೂಕಿನ ಶಂಭುಲಿಂಗೇಶ್ವರ ಬೆಟ್ಟಕ್ಕೆ ಬಂದು ಹತ್ತು ವರ್ಷಗಳ ಕಾಲ ನೆಲೆನಿಂತು ಅನುಷ್ಠಾನಗೊಂಡು ಬೇಬಿ ಬೆಟ್ಟಕ್ಕೆ ಬರುತ್ತಾರೆ. ಹಿಂದೆ ಶ್ರೀ ರಾಮ

ಯೋಗಿಶ್ವರರು ನೆಲೆಸಿ , ಅನೇಕ ದಿನಗಳ ಕಾಲ ಅನುಷ್ಠಾನಗೊಂಡಿದ್ದ ಈ ಕ್ಷೇತ್ರದಲ್ಲಿ ಮಠ ಸ್ಥಾಪನೆಗೊಂಡಿತ್ತು. ಇವರ ನಂತರ ಮಠಾಧೀಶರು ಯಾರೂ ಇಲ್ಲದೆ ಜೀರ್ಣಾವಸ್ಥೆಗೆ ಬಂದಿತ್ತು. ಶಂಭುಲಿಂಗೇಶ್ವರ ಬೆಟ್ಟದಿಂದ ನೇರವಾಗಿ ಇಲ್ಲಿಗೆ ಶ್ರೀ ಮರಿ ದೇವರು ಸ್ವಾಮಿಗಳು ಬಂದವರೇ ಇಲ್ಲಿನ ಗ್ರಾಮಸ್ಥರ ಕಷ್ಟ ಸುಖಗಳಿಗೆ ಸ್ಪಂದಿಸಿ ಮಠವನ್ನು ಸ್ಥಾಪನೆ ಮಾಡುತ್ತಾರೆ . ಹೀಗೆ ಸ್ಥಾಪಿತಗೊಂಡ ಮಠಕ್ಕೆ 1950 ರಲ್ಲಿ ಪಟ್ಟಾಧಿಕಾರಗೊಂಡು ಭಕ್ತರಲ್ಲಿ ಧಾರ್ಮಿಕಜಾಗೃತಿಯನ್ನು ಮೂಡಿಸಲು ಶ್ರಮಿಸಿ, ಈ ಬೆಟ್ಟದ ಮೇಲೆ ಧಾರ್ಮಿಕ ಜ್ಯೋತಿಯನ್ನು ಬೆಳಗಿಸಿದರು. ಬೆಟ್ಟದಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಗೊಂಡ ಶ್ರೀ ಮರಿದೇವರು ಸ್ವಾಮಿಗಳು ದೀರ್ಘ ಕಾಲ ಬದುಕಿ ಈ ನೆಲದಲ್ಲಿ ಧರ್ಮ ಸಾಕಾರಗೊಳ್ಳುವಂತೆ ಮಾಡಿದ ಗುರುವರ್ಯರು. ಈ ಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಶ್ರೀ ಸದಾಶಿವ ಸ್ವಾಮಿಗಳನ್ನು ನೇಮಕ ಮಾಡಿಕೊಂಡರು. ಉತ್ತರಾಧಿಕಾರಿಗಳಿಗೆ ಮಠವನ್ನು ವಹಿಸಿಕೊಟ್ಟು ದೀರ್ಘ ಅನುಷ್ಠಾನದಲ್ಲಿ ಧ್ಯಾನಾಸಕ್ತರಾದರು. ಇದಾದ ಕೆಲವೇ ವರ್ಷಗಳಲ್ಲಿ ಬೆಟ್ಟದ ಮೇಲಿನ ಮಠದಲ್ಲಿ ನೆಲೆಗೊಳ್ಳಲಾಗದೆ ತಮ್ಮ ಉತ್ತರಾಧಿಕಾರಿಗೆ ಪೂರ್ಣ ಜವಾಬ್ದಾರಿಯನ್ನು ಒಪ್ಪಿಸಿ , ಬೇಬಿ ಗ್ರಾಮದ ಹತ್ತಿರ ನೂತನ ಮಠವನ್ನು ಸ್ಥಾಪನೆ ಮಾಡಿದರು. ಹಿರಿಯ ಗುರುಗಳಿಂದ ಅಧಿಕಾರವನ್ನು ವಹಿಸಿಕೊಂಡ ಶ್ರೀ ಸದಾಶಿವಸ್ವಾಮಿಗಳು ಮಠವನ್ನು ಅಭಿವೃದ್ಧಿ ಪಡಿಸುತ್ತಾ, ಶರಣ ತತ್ವಗಳನ್ನು ಅನುಷ್ಠಾನಗೊಳಿಸುತ್ತಾ 2018 ಜುಲೈ, 4 ರಂದು ಲಿಂಗೈಕ್ಯರಾದರು. ನಂತರ 25-11-2021 ರಂದು
ಶ್ರೀ ಮಠದ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿ.ಎನ್. ಗಿರೀಶ್ ಎಂಬ ವಟುವನ್ನು ವಿರಾಕ್ತಾಶ್ರಮ ಸ್ವೀಕರಿಸಿ ಶ್ರೀ ಶಿವಬಸವ ಸ್ವಾಮಿಗಳು ಎಂದು ನಾಮಕರಣ ಮಾಡಲಾಯಿತು.
ಈಗ ಶ್ರೀ ಶಿವಬಸವ ಸ್ವಾಮಿಗಳು ಸಿದ್ಧಗಂಗೆಯ ನಡೆದಾಡುವ ದೇವರು ಶ್ರೀ ಶ್ರೀಶಿವಕುಮಾರ ಶಿವಯೋಗಿಗಳವರ ಆಶೀರ್ವಾದದಿಂದ ಹಾಗು ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಅನುಗ್ರಹ ಆಶೀರ್ವಾದದಿಂದ ಶ್ರೀರಾಮಯೋಗೀಶ್ವರ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ.

ಶ್ರೀ ಶಿವಬಸವ ಸ್ವಾಮೀಜಿ ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ
02/08/2026

ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮ ಶ್ರೀ ಗುರವೇ ನಮಃಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ನಡೆಸುವ, ...
29/07/2026

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮ ಶ್ರೀ ಗುರವೇ ನಮಃ
ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ನಡೆಸುವ, ಬದುಕಿನ ಮೌಲ್ಯಗಳನ್ನು ಕಲಿಸುವ ಪ್ರತಿಯೊಬ್ಬರಿಗೂ ಗುರುಪೂರ್ಣಿಮೆಯ ದಿನದಂದು ಭಕ್ತಿಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಗುರುಗಳ ನಿಸ್ವಾರ್ಥ ಮಾರ್ಗದರ್ಶನವೇ ಜೀವನದ ದಾರಿದೀಪ. ಗುರುವಿಲ್ಲದೆ ಗುರಿ ಇಲ್ಲ ಎಂಬ ತತ್ವವನ್ನು ಎಲ್ಲರೂ ಅರಿಯಬೇಕಿದೆ.

ಪರಮ ಪೂಜ್ಯ ಶ್ರೀ ಸಿದ್ದಗಂಗಾ ಮಠದ ಶ್ರೀಗಳಾದಶ್ರೀ ಸಿದ್ಧಲಿಂಗಮಹಾಸ್ವಾಮಿಗಳಜನ್ಮದಿನದಂದು ಭಕ್ತಿಪೂರ್ವಕಪ್ರಣಾಮಗಳುಶ್ರೀ ಶಿವಬಸವ ಸ್ವಾಮೀಜಿಶ್ರೀ ರ...
22/07/2026

ಪರಮ ಪೂಜ್ಯ ಶ್ರೀ ಸಿದ್ದಗಂಗಾ ಮಠದ ಶ್ರೀಗಳಾದ
ಶ್ರೀ ಸಿದ್ಧಲಿಂಗಮಹಾಸ್ವಾಮಿಗಳ
ಜನ್ಮದಿನದಂದು ಭಕ್ತಿಪೂರ್ವಕ
ಪ್ರಣಾಮಗಳು

ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜನ್ಮದಿನದ ಶು...
20/07/2026

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು *
ಶ್ರೀಕ್ಷೇತ್ರ ಆದಿಚುಂಚನಗಿರಿ ಮಠವು ಭಕ್ತಿ ಮತ್ತು ಜ್ಞಾನದ ಪವಿತ್ರ ಸಂಗಮ. ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅನೇಕ ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸಮಾಜಮುಖಿ ಸೇವೆಯ ಈ ಪವಿತ್ರ ಪರಂಪರೆ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸೇವೆ ಮುಂದುವರಿಸುವ ಶಕ್ತಿಯನ್ನು ದೇವರು ಸ್ವಾಮೀಜಿಯವರಿಗೆ ಕೊಡಲಿ ಎಂದು ಹಾರೈಸುತ್ತೇವೆ......
ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

ಇಂದು ಪರಮಪೂಜ್ಯ ಶ್ರೀ ಶ್ರೀ ಶಿವಬಸವ ಸ್ವಾಮೀಜಿ ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ , ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಸ್ವಾಮಿಯ ದರ್ಶನ ಮಾಡಲ...
18/07/2026

ಇಂದು ಪರಮಪೂಜ್ಯ ಶ್ರೀ ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ , ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಸ್ವಾಮಿಯ ದರ್ಶನ ಮಾಡಲಾಯಿತು ಮಲೆ ಮಹದೇಶ್ವರ ಸ್ವಾಮಿಯ ಇಂದಿನ ದರ್ಶನ 🙏
ಶುಭ ಮುಂಜಾನೆ

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಆತ್ಮೀಯ ಶರಣಬಂದುಗಳೇ ಹಾಗೂ ಶ್ರೀಮಠದ ಸದ್ಭಕ್ತರೇ ಈ ಮೂಲಕ ತಮಗೆ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯದ ಮಾಜಿ ಮುಖ...
06/07/2026

ಓಂ ಶ್ರೀ ಗುರುಬಸವ ಲಿಂಗಾಯ ನಮಃ
ಆತ್ಮೀಯ ಶರಣಬಂದುಗಳೇ ಹಾಗೂ ಶ್ರೀಮಠದ ಸದ್ಭಕ್ತರೇ ಈ ಮೂಲಕ ತಮಗೆ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ನಾಡು ಕಂಡ ಧೀಮಂತ ರೈತ ಮಾಜಿ ಮುಖ್ಯ ಮಂತ್ರಿ ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರು ಕಾರ್ಯಕ್ರಮದ ನಿಮಿತ್ತ ಭೂಕನಕೆರೆ ಗೆ ಆಗಮಿಸುತ್ತಿದ್ದು ಭಕ್ತಾದಿಗಳ ಅಪೇಕ್ಷೆ ಮೇರೆಗೆ ಶ್ರೀ ರಾಮಯೋಗೀಶ್ವರ ಮಠ ಬೇಬಿ ಬೆಟ್ಟ ಮಠಕ್ಕೆ ಆಗಮಿಸಿದರು
ಈ ಸಂದರ್ಭದಲ್ಲಿ ಬೇಬಿ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಸದಾಶಿವಸ್ವಾಮೀಜಿಗಳ ಗದ್ದುಗೆ ಗೆ ನಮಸ್ಕರಿಸಿ ಪೂಜ್ಯ ಶ್ರೀ ಗಳ ಆಶೀರ್ವಾದ ಪಡೆದ ಸುಂದರ ಕ್ಷಣಗಳು

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಶಾಖಾ ಮಠದ ಉದ್ಘಾಟನೆಗೆ ಧಾರವಾಡ ಕ್ಕೆ ಬೇಟಿ ನೀಡಿದ ಸಂತಸದ ಕ್ಷಣಗಳು ಶ್ರೀ ಶಿವಬಸವ ಸ್ವಾಮೀಜಿ ಶ್ರೀ ರಾಮಯೋ...
17/06/2026

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಶಾಖಾ ಮಠದ ಉದ್ಘಾಟನೆಗೆ ಧಾರವಾಡ ಕ್ಕೆ ಬೇಟಿ ನೀಡಿದ ಸಂತಸದ ಕ್ಷಣಗಳು
ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

ಶ್ರೀ ಶಿವಬಸವ ಸ್ವಾಮೀಜಿ ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ
04/06/2026

ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

ಶ್ರೀ ಶಿವಬಸವ ಸ್ವಾಮೀಜಿ ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ
28/05/2026

ಶ್ರೀ ಶಿವಬಸವ ಸ್ವಾಮೀಜಿ
ಶ್ರೀ ರಾಮಯೋಗೀಶ್ವರ ಮಠ.ಬೇಬಿ ಬೆಟ್ಟ

Address

Https://goo. Gl/maps/EPucLhDYGTxiDkMQ 7
Pandavapura
571455

Website

Alerts

Be the first to know and let us send you an email when ಶ್ರೀ ರಾಮಯೋಗೀಶ್ವರ ಮಠ, ಮಂಡ್ಯ Sree Ramayogeshwara Math, Mandya posts news and promotions. Your email address will not be used for any other purpose, and you can unsubscribe at any time.

Shortcuts

Share

Category