Darshan Puttannaiah

Darshan Puttannaiah ದರ್ಶನ್ ಪುಟ್ಟಣ್ಣಯ್ಯ
ಶಾಸಕರು
ಮೇಲುಕೋಟೆ ವಿಧಾನಸಭಾ ಕ್ಷೇತ್ರ

ಪಾಂಡವಪುರದ ಬಿ ಜಿ ಎಸ್ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಹುಮಾನ ವಿತರಣೆ ಮಾಡಲಾಯಿತು.
05/09/2026

ಪಾಂಡವಪುರದ ಬಿ ಜಿ ಎಸ್ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಹುಮಾನ ವಿತರಣೆ ಮಾಡಲಾಯಿತು.

ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ಪಾಂಡವಪುರ ತಾಲ್ಲೂಕು ಆಡಳಿತದ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಬಳಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ...
05/09/2026

ಪ್ರಜಾಸೇವಾ ಆಂದೋಲನಕ್ಕೆ ಚಾಲನೆ

ಪಾಂಡವಪುರ ತಾಲ್ಲೂಕು ಆಡಳಿತದ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಬಳಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ "ಪ್ರಜಾಸೇವಾ ಆಂದೋಲನ"ಕ್ಕೆ ಚಾಲನೆ ನೀಡಲಾಯಿತು.

ಪಾಂಡವಪುರದಲ್ಲಿ ಇಂದು ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ...
05/09/2026

ಪಾಂಡವಪುರದಲ್ಲಿ ಇಂದು ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

​ಮಕ್ಕಳ ಭವಿಷ್ಯವನ್ನು ತಿದ್ದಿತೀಡಿ ಸಮಾಜಕ್ಕೆ ಕೊಡುಗೆ ನೀಡಿದ ನಮ್ಮ ಶಿಕ್ಷಕರ ಸೇವೆ ಸದಾ ಸ್ಮರಣೀಯ. ಎಲ್ಲಾ ನಿವೃತ್ತ ಶಿಕ್ಷಕರಿಗೂ ಗೌರವಪೂರ್ವಕ ವಂದನೆಗಳು.

05/09/2026

ಕೆ.ಎಸ್. ಪುಟ್ಟಣ್ಣಯ್ಯ ಕ್ಷೀರಧಾರ ಪ್ರಥಮ ವರ್ಷದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ

ಕ್ಯಾತನಹಳ್ಳಿಯ ಗ್ರಾಮಸ್ಥರು, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ (ಮಂಡ್ಯ) ಮತ್ತು ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದೊಂದಿಗೆ ರೈತ ಬಾಂಧವರಿಗಾಗಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.

ರೈತ ನಾಯಕ, ಅಪ್ಪಾಜಿ ಕೆ.ಎಸ್. ಪುಟ್ಟಣ್ಣಯ್ಯ ಅವರ ಸವಿನೆನಪಿನಲ್ಲಿ ನಡೆಯಲಿರುವ "ಕೆ.ಎಸ್. ಪುಟ್ಟಣ್ಣಯ್ಯ ಕ್ಷೀರಧಾರ ಪ್ರಥಮ ವರ್ಷದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ"ಗೆ ಎಲ್ಲ ರೈತ ಬಾಂಧವರಿಗೂ ಆತ್ಮೀಯ ಆಹ್ವಾನ.

ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

- ನಿಮ್ಮ ಪ್ರೀತಿಯ ದರ್ಶನ್ ಪುಟ್ಟಣ್ಣಯ್ಯ

ಕಾರ್ಯಕ್ರಮದ ವಿವರ:
ದಿನಾಂಕ: ಅಕ್ಟೋಬರ್ 1 ಮತ್ತು 2, 2026 (ಗುರುವಾರ ಮತ್ತು ಶುಕ್ರವಾರ)

ಸ್ಥಳ: ವಿಶ್ವೇಶ್ವರಯ್ಯ ಕ್ರೀಡಾಂಗಣ, ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ

#ಹೈನುಗಾರಿಕೆ #ರೈತ #ಮಂಡ್ಯ

05/09/2026

05/09/2026

ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಜಕ್ಕನಹಳ್ಳಿಯಲ್ಲಿ ಜೈವಿಕ ಪಾಂಡವಪುರ – ಬಿ ಆರ್‌ ಸಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಇದು ಜೈವಿಕ ರಸಗೊಬ್ಬರ, ...
04/09/2026

ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಜಕ್ಕನಹಳ್ಳಿಯಲ್ಲಿ ಜೈವಿಕ ಪಾಂಡವಪುರ – ಬಿ ಆರ್‌ ಸಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಇದು ಜೈವಿಕ ರಸಗೊಬ್ಬರ, ಬೆಳೆ ಹಾಗೂ ಕೀಟ ನಿರ್ವಹಣೆಗಾಗಿ ಜೈವಿಕ ಒಳಸುರಿಗಳು ಮತ್ತು ಸಾವಯವ ಕೃಷಿ ಮಾಹಿತಿ ಕೇಂದ್ರವಾಗಿದ್ದು, ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿಸಕ್ರಿಯವಾಗಿ ಕೆಲಸ ನಿರ್ವಹಿಸಲಿದೆ.

#ಜಕ್ಕನಹಳ್ಳಿ #ಸಾವಯವಕೃಷಿ #ರೈತಸೇವೆ

ನಮ್ಮ ಊರು ನಮ್ಮ ಹೆಮ್ಮೆ - ಆಗಸ್ಟ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳ ವಿವರ  ನಮ್ಮ ಊರು, ನಮ್ಮ ಹೆಮ್ಮೆ — ಸಮುದಾಯ ಆಧಾರಿತ ಸ್ವಯಂ ಆಡಳಿತ ಮತ್ತು ಗ...
04/09/2026

ನಮ್ಮ ಊರು ನಮ್ಮ ಹೆಮ್ಮೆ - ಆಗಸ್ಟ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳ ವಿವರ

ನಮ್ಮ ಊರು, ನಮ್ಮ ಹೆಮ್ಮೆ — ಸಮುದಾಯ ಆಧಾರಿತ ಸ್ವಯಂ ಆಡಳಿತ ಮತ್ತು ಗ್ರಾಮ ಸವಾಲು ಚೌಕಟ್ಟು

ಸಮುದಾಯ ಆಧಾರಿತ ಸ್ವಯಂ ಆಡಳಿತ, ಗ್ರಾಮೀಣ ಸ್ವಾವಲಂಬನೆ, ಗ್ರಾಮಗಳ ನಡುವೆ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವ ಪೌರತ್ವ ಪರಿಕಲ್ಪನೆಯೇ ನಮ್ಮ ಊರು ನಮ್ಮ ಹೆಮ್ಮೆ.

ನಮ್ಮ ಊರು ನಮ್ಮ ಹೆಮ್ಮೆ – ಆಗಸ್ಟ್ ತಿಂಗಳ ಪ್ರಗತಿ ವರದಿ!

ಪುಟ್ಟಣ್ಣಯ್ಯ ಫೌಂಡೇಶನ್‌ ವತಿಯಿಂದ ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯಲ್ಲಿ ನಮ್ಮ ಗ್ರಾಮಗಳ ಅಭಿವೃದ್ಧಿ ಹಾಗೂ ರೈತರ ಸಬಲೀಕರಣಕ್ಕಾಗಿ ಹಮ್ಮಿಕೊಳ್ಳಲಾದ "ನಮ್ಮ ಊರು ನಮ್ಮ ಹೆಮ್ಮೆ" ಕಾರ್ಯಕ್ರಮದಡಿ ಆಗಸ್ಟ್ ತಿಂಗಳಿನಲ್ಲಿ ವಿವಿಧ ಗ್ರಾಮಗಳಲ್ಲಿ ಯಶಸ್ವಿಯಾಗಿ ಸಭೆಗಳು ಹಾಗೂ ಕಾರ್ಯಕ್ರಮಗಳು ನಡೆದಿವೆ.

ಆಗಸ್ಟ್ ತಿಂಗಳ ಕಾರ್ಯಕ್ರಮಗಳ ವಿವರ:
ಆಗಸ್ಟ್ 7: ಸಣಬದ ಕೊಪ್ಪಲು
ಆಗಸ್ಟ್ 8: ಚೀಕನಹಳ್ಳಿ
ಆಗಸ್ಟ್ 10: ತಾಳೆಕೆರೆ
ಆಗಸ್ಟ್ 11: ಗಿರಿಯಾರಳ್ಳಿ
ಆಗಸ್ಟ್ 18: ಮಾಡ್ರಹಳ್ಳಿ & ಗೌಡಗೆರೆ
ಆಗಸ್ಟ್ 19: ಚಲ್ಲರಹಳ್ಳಿ ಕೊಪ್ಪಲು
ಆಗಸ್ಟ್ 20: ಸಣಬ
ಆಗಸ್ಟ್ 26: ಹಳೇಬೀಡು
ಆಗಸ್ಟ್ 30: ಗುಜ್ಜಗೋನಹಳ್ಳಿ

ಗ್ರಾಮೀಣ ಪ್ರಗತಿಯತ್ತ ನಮ್ಮ ಹೆಜ್ಜೆ ನಿರಂತರ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!

#ನಮ್ಮಊರುನಮ್ಮಹೆಮ್ಮೆ #ಗ್ರಾಮೀಣಅಭಿವೃದ್ಧಿ #ಮಂಡ್ಯ

04/09/2026

Address

Pandavapura
571434

Telephone

+918548976475

Alerts

Be the first to know and let us send you an email when Darshan Puttannaiah posts news and promotions. Your email address will not be used for any other purpose, and you can unsubscribe at any time.

Contact The Organization

Send a message to Darshan Puttannaiah:

Shortcuts

Share