Raichur Congress Committee

Raichur Congress Committee Contact information, map and directions, contact form, opening hours, services, ratings, photos, videos and announcements from Raichur Congress Committee, Political organisation, Gunj Road Near Gunj Cricle, Beside Goshala Raichur, Raichur.

ಬನ್ನಂಜೆ ಗೋವಿಂದಾಚಾರ್ಯರ 90ನೇ ಹುಟ್ಟುಹಬ್ಬದ ಅಂಗವಾಗಿ ರಾಯಚೂರು ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಬನ್ನಂಜೆ 90 ವಿಶ್ವನಮನ ಕಾರ್ಯಕ್ರಮವನ್ನು ಉದ...
20/12/2025

ಬನ್ನಂಜೆ ಗೋವಿಂದಾಚಾರ್ಯರ 90ನೇ ಹುಟ್ಟುಹಬ್ಬದ ಅಂಗವಾಗಿ ರಾಯಚೂರು ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಬನ್ನಂಜೆ 90 ವಿಶ್ವನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ. ಇದೇ ವೇಳೆ 'ಬನ್ನಂಜೆ: ಬಲ್ಲವರು ಕಂಡಂತೆ' ಎನ್ನುವ ಕೃತಿ ಬಿಡುಗಡೆ ಮಾಡಿದೆ. ಈ ವೇಳೆ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ರವರು, ಡಾ. ತ್ರಿವಿಕ್ರಮ ಜೋಶಿರವರು, ಶ್ರೀಮತಿ ವೀಣಾ ಬನ್ನಂಜೆರವರು, ಶ್ರೀ ಮಲೆಪುರಂ ವೆಂಕಟೇಶ್ ರವರು, ಶ್ರೀ ರೋಹಿತ್ ಚಕ್ರತೀರ್ಥರವರು ಉಪಸ್ಥಿತರಿದ್ದರು.

ರಾಯಚೂರು ನಗರದ ಬಸವ ಕೇಂದ್ರದಲ್ಲಿ ಮರುಳ ಶಂಕರ ದೇವ ಪ್ರಸಾದ ನಿಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಉದ್ಘಾಟಿಸಿದೆ. ಈ ವೇಳೆ ಬಸವ ತತ್ವ ಹ...
20/12/2025

ರಾಯಚೂರು ನಗರದ ಬಸವ ಕೇಂದ್ರದಲ್ಲಿ ಮರುಳ ಶಂಕರ ದೇವ ಪ್ರಸಾದ ನಿಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿದೆ. ಈ ವೇಳೆ ಬಸವ ತತ್ವ ಹಾಗೂ ಸಾಂಸ್ಕೃತಿಯ ರಾಯಭಾರಿ ವಿಶ್ವಗುರು ಬಸವಣ್ಣನ ಕುರಿತು ಮಾತನಾಡಿದೆ. ಈ ವೇಳೆ ಸಚಿವರಾದ ಶ್ರೀ ಎನ್ ಎಸ್ ಬೋಸರಾಜುರವರು, ಶಾಸಕರಾದ ಡಾ. ಶಿವರಾಜ್ ಪಾಟೀಲ್ ಬಸವ ಕೇಂದ್ರದ ಅಧ್ಯಕ್ಷರಾದ ಶ್ರೀ ರಾಜನ ಗೌಡ ಕೋಳೂರು, ಬಸವ ಕೇಂದ್ರದ ಸದಸ್ಯರಾದ ಶ್ರೀ ಅರವಿ ನಾಗನಗೌಡ, ಶ್ರೀ ಸೂಗಪ್ಪ ಸಾಹುಕಾರ್,ಶ್ರೀ ಗಿರಿಜಾ ಶಂಕರ್ ಶ್ರೀ ಚನ್ನಬಸಪ್ಪ ಸೇರಿದಂತೆ ಬಸವ ಕೇಂದ್ರದ ಸದಸ್ಯರು ಪದಾಧಿಕಾರಿಗಳು ಹಾಗೂ ಅಕ್ಕನ ಬಳಗದ ಎಲ್ಲಾ ಸದಸ್ಯರು ಈ ಹಾಜರಿದ್ದರು.

ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ವತಿಯಿಂದ ರಾಯಚೂರಿನಲ್ಲಿ ಇಂದು ಹಮ್ಮಿಕೊಂಡಿದ್ದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್...
20/12/2025

ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ವತಿಯಿಂದ ರಾಯಚೂರಿನಲ್ಲಿ ಇಂದು ಹಮ್ಮಿಕೊಂಡಿದ್ದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದೆ. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಬರಗೂರು ರಾಮಚಂದ್ರಪ್ಪನವರು, ಡಾ. ಎಲ್ ಹನುಮಂತಯ್ಯನವರು ಸಾಹಿತಿಗಳು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಜಯದೇವಿ ಗಾಯಕವಾಡರವರು, ಡಾ. ಅರ್ಜುನ್ ಗೋಳಸಂಗಿ ಅಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ, ಡಾ. ಮನು ಬಳಿಗಾರ್ ಸಾಹಿತಿಗಳು, ರಾಯಚೂರು ನಗರದ ಶಾಸಕರಾದ ಡಾ. ಶಿವರಾಜ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

19/12/2025

ನರೇಗಾ ರದ್ದು, ಬಡವರ್ಗಕ್ಕೆಗುದ್ದು!
ಸಾಂವಿಧಾನಿಕ ಹಕ್ಕನ್ನು ಕಸಿಯುವ ಪ್ರಯತ್ನ.



Rahul Gandhi Indian National Congress - Karnataka

*ವಿಶಾಖಪಟ್ಟಣ-ಮಹೆಬೂಬ್ ನಗರ ರೈಲು ರಾಯಚೂರುವರೆಗೆ ವಿಸ್ತರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಜಿ ಕುಮಾರ ನಾಯಕ ಮನವಿ.*ವಿಶಾಖಪಟ್ಟಣದಿಂದ ಮ...
19/12/2025

*ವಿಶಾಖಪಟ್ಟಣ-ಮಹೆಬೂಬ್ ನಗರ ರೈಲು ರಾಯಚೂರುವರೆಗೆ ವಿಸ್ತರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಜಿ ಕುಮಾರ ನಾಯಕ ಮನವಿ.*

ವಿಶಾಖಪಟ್ಟಣದಿಂದ ಮೆಹಬೂಬ್ ನಗರ ನಡುವೆ ಪ್ರತಿ ದಿನ ಓಡಾಡುತ್ತಿರುವ ರೈಲನ್ನು ರಾಯಚೂರವರೆಗೆ ವಿಸ್ತರಿಸುವಂತೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಹಾಗೂ ತೆಲಂಗಾಣದ ಮಹಿಬೂಬ್ ನಗರ ಸಂಸದರಾದ ಡಿ.ಕೆ.ಅರುಣ ಅವರು ಕೇಂದ್ರದ ರೈಲ್ವೆ ಸಚಿವ ಶ್ರೀ ಅಶ್ವಿನ್ ವೈಷ್ಣವ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿಶಾಖಪಟ್ಟಣದಿಂದ ಮೆಹಬೂಬ್ ನಗರ ನಡುವೆ ಪ್ರತಿದಿನ ಓಡಾಡುತ್ತಿರುವ ರೈಲನ್ನು ರಾಯಚೂರ ವರೆಗೆ ವಿಸ್ತರಿಸಬೇಕು. ಇದರಿಂದಾಗಿ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬರಲಿದೆ ಎಂದು ರಾಯಚೂರ ಜಿಲ್ಲಾ ಕಮ್ಮಾ ಸಮಾಜದ ಜಿಲ್ಲಾಧ್ಯಕ್ಷರಾದ ಪ್ರಸಾದ್ ಮಾಜಿ ಅಧ್ಯಕ್ಷರಾದ ಆನಂದ್, ಕೊಂಡಯ್ಯ, ರಮೇಶ್ ಬೋಸ್ ಸೇರಿದಂತೆ ಇನ್ನಿತರ ಮುಖಂಡರು ನವದೆಹಲಿಗೆ ತೆರಳಿ ಈ ಸಂಬಂಧ ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದರು.

ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರನಾಯಕ ಮತ್ತು ಮಹಿಬೂಬ್ ನಗರ್ ಲೋಕಸಭಾ ಸದಸ್ಯರಾದ ಡಿ.ಅರುಣ ಅವರಿಗೆ ಭೇಟಿ ಮಾಡಿ ರೈಲು ವಿಸ್ತರಣೆಯ ಬಗ್ಗೆ ಮಾಹಿತಿ ನೀಡಿದರು. ಇದನ್ನು ತಕ್ಷಣ ಪರಿಗಣನೆಗೆ ತೆಗೆದುಕೊಂಡ ಉಭಯ ಲೋಕಸಭಾ ಸದಸ್ಯರು ತಕ್ಷಣ ನಿಯೋಗಕ್ಕೆ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರಿಗೆ ಭೇಟಿ ಮಾಡಿಸಿದರು. ಕಮ್ಮಾ ಸಮಾಜದ ಮನವಿ ಆಲಿಸಿದ ಸಚಿವರು ಇಬ್ಬರು ಲೋಕಸಭಾ ಸದಸ್ಯರು ಲಿಖಿತವಾಗಿ ಈ ರೈಲು ಒದಗಿಸುವಂತೆ ಮನವಿ ಪತ್ರ ನೀಡಿದರೆ, ತಕ್ಷಣ ಕ್ರಮ ಜರುಗಿಸುವುದಾಗಿ, ಭರವಸೆ ನೀಡಿದರು.
ಸದ್ಯ ಈ ರೈಲು ವಿಶಾಖಪಟ್ಟಣ ಮೂಲಕ ಬಂದು ಮಹಬೂಬನಗರ ನಗರದಲ್ಲಿ ಬೆಳಗ್ಗೆ 9:30 ಗಂಟೆಯಿಂದ ವೃಥಾ ನಿಲ್ಲುತ್ತದೆ ಇದರಿಂದ ಇತರ ರೈಲುಗಳ ಓಡಾಟಕ್ಕೆ ಅಡಚಣೆಯಾಗುತ್ತದೆ.
ಇದನ್ನು ರಾಯಚೂರವರೆಗೆ ವಿಸ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಇಲಾಖೆಗೆ ಆದಾಯದ ಮೂಲ ಗಟ್ಟಿಪಡಿಸಿಕೊಳ್ಳಬೇಕು ಎಂದರು.
ಈ ರೈಲು ಮಕ್ತಲ, ಕೃಷ್ಣಾ ಮೂಲಕ ರಾಯಚೂರಗೆ 12:00ಗೆ ಬರುತ್ತದೆ ಒಂದು ತಾಸು ಇಲ್ಲಿ ನಿಲುಗಡಿಯಾದರೂ, ಮತ್ತೆ 3:00ಗೆ ಮಹಬೂನಗರ ತಲುಪಿ ಅಲ್ಲಿಂದ ವಿಶಾಖಪಟ್ಟಣಕ್ಕೆ ತೆರಳಲು ಸಮಯಾವಕಾಶವಿದೆ. ಮತ್ತೆ ಸಂಜೆ 4: ಗಂಟೆಗೆ ವಿಶಾಖಪಟ್ಟಣಂ ಕಡೆಗೆ ಪ್ರಯಾಣ ಬೆಳೆಸಬಹುದು ಎಂದು ಮಾಹಿತಿ ನೀಡಿದರು. ಈ ರೈಲಿನ ಸಂಖ್ಯೆಯು 1 2861 ಮತ್ತು 12862 ಆಗಿದೆ. ವಿಶಾಖಪಟ್ಟಣಂ ಈ ರೈಲು ಮೂರು ರಾಜ್ಯಗಳನ್ನು ಹಾದು ಹೋಗುತ್ತದೆ ಇದು ಅಲ್ಲದೆ ಪವಿತ್ರ ಧರ್ಮಸ್ಥಳದ ಅನ್ನಾವರಂ ಮತ್ತು ಸಿಂಹಾಚಲಂ ಬರುತ್ತದೆ ಇದರಿಂದ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ರಾಯಚೂರು ನಗರ ಹಿರಿಯ ನಾಗರಿಕರಾದ ಎಸ್. ನಾಗೇಶ್ವರರಾವ್ ಮತ್ತು ಕೃಷ್ಣ ಗ್ರಾಮದ ಅರ್ಚಕರಾದ ಮತ್ತು ಗಡಿನಾಡು ಕನ್ನಡಿಗ ಹೋರಾಟಗಾರರಾದ ಅಮರ ದೀಕ್ಷೀತ ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಗಳಿಂದ ತೆಗೆಯಬಹುದು ಆದರೆ, ಭಾರತೀಯರ ಹೃದಯದಿಂದಲ್ಲ. ಗಾಂಧಿ ಎನ್ನುವುದು ಕೇವಲ‌ ಒಂದು ಹೆ...
17/12/2025

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಗಳಿಂದ ತೆಗೆಯಬಹುದು ಆದರೆ, ಭಾರತೀಯರ ಹೃದಯದಿಂದಲ್ಲ. ಗಾಂಧಿ ಎನ್ನುವುದು ಕೇವಲ‌ ಒಂದು ಹೆಸರಲ್ಲ, ಅದು ಈ ದೇಶದ ಜನರ ಸಾಕ್ಷಿಪ್ರಜ್ಞೆ. ಭಾರತದ ಶಾಂತಿ ನಿಲುವು, ಸಹೋದರತೆ, ಮಾನವೀಯತೆ ಹಾಗೂ ನೈತಿಕ ಸ್ಥೈರ್ಯದಲ್ಲಿ ಅವರು ಜೀವಂತವಾಗಿದ್ದಾರೆ.

17/12/2025

*ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾದ ವಿಮಾ ತಿದ್ದುಪಡಿ ವಿಧೇಯಕ -2025ನ ಅಪಾಯದ ಬಗ್ಗೆ ಮಾತನಾಡಿದ ಸಂಸದ ಜಿ ಕುಮಾರ ನಾಯಕ*

ಸಾರ್ವಜನಿಕ ವಲಯದ ಎಲ್ಐಸಿ ವಿಮಾ ಸಂಸ್ಥೆಯಲ್ಲಿ ವಿದೇಶಿ ಬಂಡವಾಳ‌ ಹರಿವು ಹೆಚ್ಚಳವಾಗಿದ್ದು, ವಿದೇಶಿ ಧನಶಕ್ತಿಯ ಮುಂದೆ ಜನರ ಹಣ ಚಿಕ್ಕದಾಗಿದೆ. ದೇಶದ ಅತ್ಯುನ್ನತ ವಿಮಾ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ‌ ತರುತ್ತಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಧ್ವನಿ ಎತ್ತಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ‌ ಶಾಮನೂರು ಶಿವಶಂಕರಪ್ಪ (95) ಅವರ ನಿಧನ ಸುದ್ದಿ ತಿಳ...
14/12/2025

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ‌ ಶಾಮನೂರು ಶಿವಶಂಕರಪ್ಪ (95) ಅವರ ನಿಧನ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು.
ಸಮಾಜ ಸೇವೆ ಹಾಗೂ ಸಾರ್ವಜನಿಕ ಜೀವನದಲ್ಲಿ ಅವರ ಕೊಡುಗೆ ಸದಾಕಾಲ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ದುಃಖಿತ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ.

11/12/2025

Today, once again, I raised the issues of maize and sugarcane farmers in Parliament and urged the Union Government to ensure immediate and meaningful redressal to provide relief to Karnataka Farmers.

ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರ ಈ ಕೂಡಲೇ ಸ್ಪಂದಿಸಬೇಕೆಂದು ಇಂದು ಲೋಕಸಭೆಯಲ್ಲಿ ಮತ್ತೆ ಧ್ವನಿ ಎತ್ತಿದೆ. ಕರ್ನಾಟಕದ‌ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹರಿಸುವಂತೆ ಆಗ್ರಹಿಸಿದೆ.


Siddaramaiah Sharnabasappa Gowda Darshanapur DK Shivakumar Congress - The Soul Of India Indian National Congress - Karnataka

ಇಂದು ಕರ್ನಾಟಕದ ಕಾಂಗ್ರೆಸ್ ಸಂಸದರೊಂದಿಗೆ ನಾನು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್ ಅವರನ್ನು ಭೇಟಿಯಾಗಿ, ರಾಜ್ಯದ ಕಬ್ಬು,...
10/12/2025

ಇಂದು ಕರ್ನಾಟಕದ ಕಾಂಗ್ರೆಸ್ ಸಂಸದರೊಂದಿಗೆ ನಾನು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್ ಅವರನ್ನು ಭೇಟಿಯಾಗಿ, ರಾಜ್ಯದ ಕಬ್ಬು, ಜೋಳ ಮತ್ತು ತೊಗರಿಬೇಳೆ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಂಕಷ್ಟದ ಕುರಿತು ಸವಿವರ ಮನವಿಗಳನ್ನು ವೈಯಕ್ತಿಕವಾಗಿ ಸಲ್ಲಿಸಿದೆ.

ನಮ್ಮ ರೈತರು ಗಂಭೀರ ಸಂಕಷ್ಟದಲ್ಲಿದ್ದಾರೆ, ಏಕೆಂದರೆ:

▶️ ಕಬ್ಬಿನ ನ್ಯಾಯಸಮ್ಮತ, ಲಾಭದಾಯಕ ದರವನ್ನು (FRP) 2019ರಿಂದ ಇಂದಿನವರೆಗೆ ಪರಿಷ್ಕರಿಸಲಾಗಿಲ್ಲ. ಇದೇ ವೇಳೆ ಸಕ್ಕರೆ ಉತ್ಪಾದನಾ ವೆಚ್ಚವು ಪ್ರತಿವರ್ಷವೂ ಏರಿಕೆಯಾಗುತ್ತಿದ್ದು, ಬೆಲೆಯ ಅಂತರ ಹೆಚ್ಚಾಗಿ ಕಾರ್ಖಾನೆಗಳು ಹಾಗೂ ರೈತರು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

▶️ ಜೋಳದ ಮಾರುಕಟ್ಟೆ ಬೆಲೆಗಳು MSP ಯ ಅರ್ಧ ಮಟ್ಟಕ್ಕೆ ಕುಸಿದಿವೆ. ರೈತರಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಯಾವುದೇ ಲಾಭದಾಯಕ ಅಥವಾ ನ್ಯಾಯಸಮ್ಮತ ಮಾರ್ಗಗಳು ದೊರೆಯುತ್ತಿಲ್ಲ. ಇದರಿಂದ ಅವರಿಗೆ ಭಾರೀ ನಷ್ಟವಾಗುತ್ತಿದೆ.

▶️ ತೊಗರಿಬೇಳೆಯ ಮಾರುಕಟ್ಟೆ ಬೆಲೆಗಳು MSP ಗಿಂತಲೂ ಬಹಳ ಕೆಳಮಟ್ಟಕ್ಕೆ ಇಳಿದಿವೆ, ಇದರಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾನ್ಯ ಸಚಿವರು ನಮ್ಮ ಮಾತುಗಳನ್ನು ಆದರದಿಂದ ಕಿವಿಗೊಟ್ಟು ಕೇಳಿ, ಕೇಂದ್ರ ಸರ್ಕಾರವು ಈ ವಿಷಯಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಅಗತ್ಯ ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸಮಯ ಅತ್ಯಂತ ನಿರ್ಣಾಯಕ—ನಮ್ಮ ರೈತರಿಗೆ ಸಮಯೋಚಿತ ಹಸ್ತಕ್ಷೇಪ, ನ್ಯಾಯಸಮ್ಮತ ಬೆಲೆ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ಹಿತಕರ ನೀತಿಗಳು ಅತ್ಯಂತ ಅಗತ್ಯ.

ಲೋಕಸಭೆಯ ರೂಲ್ ನಂ. 377 ಅಡಿ, ಕಲ್ಯಾಣ–ಕರ್ನಾಟಕ ಮತ್ತು ಉತ್ತರ ಭಾರತೀಯ ರಾಜ್ಯಗಳ ನಡುವೆ ರೈಲು ಸಂಪರ್ಕವನ್ನು ಬಲಪಡಿಸುವ ತುರ್ತು ಅಗತ್ಯವನ್ನು ನಾ...
08/12/2025

ಲೋಕಸಭೆಯ ರೂಲ್ ನಂ. 377 ಅಡಿ, ಕಲ್ಯಾಣ–ಕರ್ನಾಟಕ ಮತ್ತು ಉತ್ತರ ಭಾರತೀಯ ರಾಜ್ಯಗಳ ನಡುವೆ ರೈಲು ಸಂಪರ್ಕವನ್ನು ಬಲಪಡಿಸುವ ತುರ್ತು ಅಗತ್ಯವನ್ನು ನಾನು ಮಂಡಿಸಿದೆ. ರಾಯಚೂರು, ಕಲಬುರಗಿ ಹಾಗೂ ಸಮೀಪದ ಪ್ರದೇಶಗಳು ದಶಕಗಳಿಂದಲೇ ಸಂಪರ್ಕದ ಕೊರತೆಯಿಂದ ಬಳಲುತ್ತಿವೆ.

ರಾಯಚೂರಿನ ಮೂಲಕ ಬೆಂಗಳೂರಿಗೆ ಎಕ್ಸ್‌ಪ್ರೆಸ್‌, ಪ್ಯಾಸೆಂಜರ್ ರೈಲು ಸೇವೆಗಳು, ಪ್ರತಿದಿನ ಹೈದರಾಬಾದ್‌ಗೆ ರೈಲುಗಳು, ಹಾಗೆಯೇ ರಾಯಚೂರು–ವಿಶಾಖಪಟ್ಟಣ ನೇರ ರೈಲು—ಸಾಮಾನ್ಯ ಸೌಕರ್ಯಕ್ಕಷ್ಟೇ ಅಲ್ಲ; ದಕ್ಷಿಣ ಭಾರತದ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೋಗಿಗಳಿಗೆ ಇದು ಅತ್ಯಂತ ಅವಶ್ಯಕ.

ಕರ್ನಾಟಕದ ಐತಿಹಾಸಿಕವಾಗಿ ಕಡಿಮೆ ರೈಲು ಸಾಂದ್ರತೆ ಹೊಂದಿದ್ದು, ಅದರ ಸುಧಾರಣೆ ಈ‌ ಕ್ಷಣದ ಅಗತ್ಯ.
ಕಲ್ಯಾಣ–ಕರ್ನಾಟಕದ ಜನರಿಗೆ ನ್ಯಾಯಸಮ್ಮತವಾದ ಸಂಪರ್ಕ ಕಲ್ಪಿಸಲು ಈ ದೀರ್ಘಕಾಲದ ಬೇಡಿಕೆಗಳನ್ನು ತ್ವರಿತವಾಗಿ ಪರಿಹರಿಸಲು ರೈಲ್ವೆ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ನಾನು ಒತ್ತಿ ಹೇಳಿದ್ದೇನೆ.

Under Rule 377 in the Lok Sabha, I raised the urgent need to strengthen rail connectivity between Kalyana-Karnataka and the Northern States. Raichur, Kalaburagi and nearby regions have been underserved for decades.

Fast passenger services to Bengaluru via Raichur, daily trains to Hyderabad, and a direct Raichur–Visakhapatnam train are essential—not just for convenience, but for students, labourers and patients across South India.

Karnataka’s historically low railway density demands immediate action. I urged the Railway Ministry to address these long-pending gaps and ensure fair connectivity for the people of Kalyana-Karnataka.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಸಮಿತಿಗೆ‌ ರಾಯಚುರು ಜಿಲ್ಲೆಯ ಸಂಸದರು ಜಿ.ಕುಮಾರ ನಾಯಕರವರನ್ನು ನಾಮನಿರ್ದೇಶನ ಮಾಡಿದಕ್ಕಾಗಿ ಕಾಂಗ...
06/12/2025

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಸಮಿತಿಗೆ‌ ರಾಯಚುರು ಜಿಲ್ಲೆಯ ಸಂಸದರು ಜಿ.ಕುಮಾರ ನಾಯಕರವರನ್ನು ನಾಮನಿರ್ದೇಶನ ಮಾಡಿದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಬಾರಿ ಲೋಕಸಭೆಯಿಂದ ನಾಮನಿರ್ದೇಶಿತವಾದ ಇಬ್ಬರು ಸದಸ್ಯರೂ ಆಯ್ಕೆಯಾಗಿದ್ದಾರೆ.ಹಾಗೆ ಇವರ ಸಹೋದ್ಯೋಗಿ ಹಾಗೂ ಸಹ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು.

ಭಾರತದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲೊಂದು ಆಗಿರುವ IISc ನಲ್ಲಿ ಸೇವೆ ಸಲ್ಲಿಸುವ ಅವಕಾಶ ಜಿಲ್ಲೆಗೆ ಹಾಗೂ ಮಾನ್ಯ ಸಂಸದರಿಗೆ ಮಹತ್ತರ ಗೌರವ ಮತ್ತು ಸೌಭಾಗ್ಯ. ಸಂಸ್ಥೆಯ ಮುಂದಿನ ಪ್ರಗತಿಗೆ ಇವರ ಕೊಡುಗೆ ನೀಡಲು ಎದುರುನೋಡುತ್ತಿದ್ದೇವೆ .ಇವರ ಸಮೂಹ ಪ್ರಯತ್ನಗಳು IISc ಯ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಿ, ಭಾರತದ ವೈಜ್ಞಾನಿಕ ಭವಿಷ್ಯವನ್ನು ಬಲಗೊಳಿಸಲಿದೆ ಎಂಬ ನಂಬಿಕೆ ರಾಯಚೂರು ಜನರಿಗೆ ಇದೆ.

IISc Bangalore
Indian National Congress - Karnataka
G Kumar Naik
Sharnabasappa Gowda Darshanapur
Basanagouda Daddal
BasanaGouda Badarli
Yadgir - ಯಾದಗಿರಿ
Raichur Congress Committee
Tv9Kannada
Inc42

Address

Gunj Road Near Gunj Cricle, Beside Goshala Raichur
Raichur
584101

Alerts

Be the first to know and let us send you an email when Raichur Congress Committee posts news and promotions. Your email address will not be used for any other purpose, and you can unsubscribe at any time.

Contact The Organization

Send a message to Raichur Congress Committee:

Share