Magadi Days

Magadi Days This page is an attempt to explore the unexplored Magadi- a historical heritage town located in Ramanagara District, Karnataka State.

It also aims to share other historical, knowledgeable, educational, prominent and contemporary information on everything.

ಮಾಗಡಿಯ ಪ್ರಸಿದ್ಧವಾದ ದನಗಳ ಜಾತ್ರೆ!
09/04/2023

ಮಾಗಡಿಯ ಪ್ರಸಿದ್ಧವಾದ ದನಗಳ ಜಾತ್ರೆ!



ಮಾಗಡಿ ಜಾತ್ರೆ!
06/04/2023

ಮಾಗಡಿ ಜಾತ್ರೆ!







06/04/2023

ಶ್ರೀ ಮಾಗಡಿ ರಂಗನಾಥ ಸ್ವಾಮಿ ರಥೋತ್ಸವ ದಿನದಂದು ಭಕ್ತ ಸಮೂಹ.






ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ, ಮಾಗಡಿ!
17/04/2022

ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ, ಮಾಗಡಿ!

ಶ್ರೀ ಕೆಂಪೇಗೌಡರು – ಸಂಚಿಕೆ ೪ (4)ಕೆಂಪೇಗೌಡರ ಮರಣ ಮತ್ತು ವೀರ ಸಮಾಧಿಯ ಹಿನ್ನೆಲೆ:ವಿಜಯನಗರದ ಪತನಾನಂತರ ಯಲಹಂಕ ನಾಡಿನ ಮೇಲೆ ಶತ್ರುಗಳು ದಂಡೆತ್...
17/04/2022

ಶ್ರೀ ಕೆಂಪೇಗೌಡರು – ಸಂಚಿಕೆ ೪ (4)
ಕೆಂಪೇಗೌಡರ ಮರಣ ಮತ್ತು ವೀರ ಸಮಾಧಿಯ ಹಿನ್ನೆಲೆ:
ವಿಜಯನಗರದ ಪತನಾನಂತರ ಯಲಹಂಕ ನಾಡಿನ ಮೇಲೆ ಶತ್ರುಗಳು ದಂಡೆತ್ತಿ ಬರಬಹುದೆಂದು ಶಂಕಿಸಿ ಸುತ್ತಲ ಕೋಟೆ ಕೊತ್ತಲಗಳಲ್ಲಿ ಪಹರೆಯನ್ನು ಬಿಗಿಗೊಳಿಸಲು ಮಾಗಡಿ, ಹುತ್ರಿದುರ್ಗ, ಹುಲಿಯೂರುದುರ್ಗ ಮತ್ತು ಶಿವಗಂಗೆಗಳಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ. ಹೀಗಿರುವಾಗ ಕುಣಿಗಲ್ ನಿಂದ ಬರುವಾಗ ಮಾಗಡಿಗೆ ಸಮೀಪದ ಕೆಂಪಾಪುರ(ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಮತ್ತು ಕೆಂಚನ ಹಳ್ಳಿ ನಡುವೆ ಇರುವ ಗ್ರಾಮ-ಕೆಂಪೇಗೌಡರ ಸಮಾಧಿ ಸ್ಥಳವೆಂಬ ಕಾರಣಕ್ಕೆ ಕೆಂಪಾಪುರ ಎಂಬ ಹೆಸರು ಬರಲು ಕಾರಣವಾಗಿಹುದು.)ಎಂಬಲ್ಲಿ ನಡೆದ ಭೀಕರ ಯುದ್ದದಲ್ಲಿ ಮಡಿದರೆಂಬುದು ತಿಳಿದುಬರುತ್ತದೆ(ಕಾಲ ಸುಮಾರು 1569-70).

ಅವರು ಮಡಿದ ಸ್ಥಳದಲ್ಲಿ ಪುತ್ರ ಇಮ್ಮಡಿ ಕೆಂಪೇಗೌಡರು ತಂದೆಯವರ ಸ್ಮರಣಾರ್ಥ ವೀರ ಸಮಾಧಿ ಗೋಪುರವನ್ನು ನಿರ್ಮಿಸಿ ಪಕ್ಕದಲ್ಲಿ ಬಸವಣ್ಣನ ದೇವಾಲಯವನ್ನು ನಿರ್ಮಿಸಿರುತ್ತಾರೆ.ಆದರೆ ಸುಮಾರು 4 ಶತಮಾನಗಳ ಕಾಲ ಅಜ್ಞಾತವಾಗಿದ್ದ ಈ ವೀರ ಸಮಾಧಿಯು ದಿನಾಂಕ: 07/03/2015ರಂದು ಕೆಂಪೇಗೌಡರ ಇತಿಹಾಸದ ಕುರಿತು ಅಧ್ಯಯನ ನಡೆಸುತ್ತಿದ್ದ ಮರೂರು ಗ್ರಾಮದ ಪ್ರಶಾಂತರವರಿಗೆ ಕಂಡುಬಂದಿರುತ್ತದೆ.

ಈ ಗೋಪುರ ಮತ್ತು ಗೋಪುರದ ಮೇಲಿದ್ದ "ಪಿರಿಯ ಕೆಂಪೆಯಗಉಡರಯ್ಯನವರು ಕುಣಿಗಿಲಿಂದ ಬಂದು ಯಿಬಳಿ ಜಗಳವನು ಮಾಡಿ ಅಯಿಕ್ಯವಾಗಿ ಕೈಲಾಸಕೆ ಪೋದ ಸ್ಥಳ" ಎಂಬ ಶಾಸನದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಕಳುಹಿಸುವ ಮೂಲಕ ಇತಿಹಾಸಕಾರರುಗಳ ಗಮನ ಸೆಳೆಯುತ್ತಾರೆ. ಇದಕ್ಕೆ ಸ್ಪಂದಿಸಿದ ಕರ್ನಾಟಕ ಇತಿಹಾಸ ಅಕಾಡೆಮಿ ಇದು ಕೆಂಪೇಗೌಡರ ಸಮಾಧಿಯೆಂದು ಸ್ಪಷ್ಟಿಕರಿಸಿರುತ್ತವೆ.
ಸೆಪ್ಟೆಂಬರ್ 3ರಂದು ವಿಜಯವಾಣಿಯ ರಾಮನಗರ ಆವೃತ್ತಿಯಲ್ಲಿ ಮತ್ತು ಸೆಪ್ಟೆಂಬರ್ 9ರಂದು Bangalore Mirror ಪತ್ರಿಕೆಯಲ್ಲಿ ಮೊದಲ ಬಾರಿಗೆ ವರದಿಗಳು ಪ್ರಕಟವಾದವು. ಬಿಬಿಎಂಪಿಯ ಮೇಯರ್ ರವರ ಆದೇಶದ ಮೆರೆಗೆ ದಿನಾಂಕ 31/10/2015ರಂದು ಬೆಂಗಳೂರು ವಿವಿಯ ಕೆಂ.ಮಾ.ಅಧ್ಯಯನ ಸಮಿತಿಯು ಇದು ಕೆಂಪೇಗೌಡರ ವೀರ ಸಮಾಧಿ ಎಂದು.

ಮೂಲ: ವಿಕಿಪೀಡಿಯ

ಶ್ರೀ ಕೆಂಪೇಗೌಡರು – ಸಂಚಿಕೆ ೩ (3)ಗೌಡರ ಆಡಳಿತ ನಿರ್ವಹಣೆ:ನಾಡಿನ ನಿರ್ವಹಣೆಗೆಂದು ನಾಡಪ್ರಭುಗಳ ಆಸ್ಥಾನದಲ್ಲಿ ಎಂಟು ಜನ ಮಂತ್ರಿಗಳಿದ್ದರು. ತಮ್...
17/04/2022

ಶ್ರೀ ಕೆಂಪೇಗೌಡರು – ಸಂಚಿಕೆ ೩ (3)
ಗೌಡರ ಆಡಳಿತ ನಿರ್ವಹಣೆ:
ನಾಡಿನ ನಿರ್ವಹಣೆಗೆಂದು ನಾಡಪ್ರಭುಗಳ ಆಸ್ಥಾನದಲ್ಲಿ ಎಂಟು ಜನ ಮಂತ್ರಿಗಳಿದ್ದರು. ತಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಏನೇ ಸಂಭವಿಸಿದರೂ ವರದಿ ತರಿಸಿಕೊಂಡು ಆ ಊರಿನ ಹಿರಿಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಗ್ರಾಮಗಳಲ್ಲಿ ಸುಲಲಿತವಾಗಿ ಆಡಳಿತ ನಡೆಸಲು ಅನುಕೂಲವಾಗುವಂತೆ ಕೂಟ ಅಥವಾ ಗ್ರಾಮ ಪಂಚಾಯತಿ ವ್ಯವಸ್ಥೆ ತರಲಾಗಿತ್ತು.

ಸಾಮಾಜಿಕ ವ್ಯವಹಾರಗಳನ್ನು ವಿಚಾರಿಸುವುದು, ತೆರಿಗೆ ವಸೂಲಾತಿ, ಕೆರೆ-ಕಟ್ಟೆ, ರಸ್ತೆಗಳ ದುರಸ್ತಿ ಕಾರ್ಯ, ದೇವಾಲಯಗಳ ಉಸ್ತುವಾರಿ, ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಇತ್ಯಾದಿಗಳು ಗ್ರಾಮ ಪಂಚಾಯ್ತಿಗಳ ಕಾರ್ಯಗಳಾಗಿದ್ದವು. ಆಗಿನ ಕಾಲಕ್ಕಾಗಲೇ ಆಡಳಿತ ವಿಕೇಂದ್ರಿಕರಣ ಗೊಂಡಿದ್ದರ ಪರಿಣಾಮವಾಗಿ ಶ್ಯಾನುಭೋಗ, ಪಟೇಲ, ಜೋಯಿಸ, ಬಡಗಿ, ಕಮ್ಮಾರ, ನಾಯಿಂದ, ತೋಟಿ, ತಳವಾರ, ನೀರುಗಂಟಿ, ಅಕ್ಕಸಾಲೆ, ಕುಂಬಾರ ಕಾರ್ಯ ವಿಭಾಗಗಳಿದ್ದವು. ತಮ್ಮಂದಿರಲ್ಲೊಬ್ಬರಾದ ಬಸವಯ್ಯರನ್ನು ರಾಮಗಿರಿಯ ಉಸ್ತುವಾರಿಗೂ ಮತ್ತು ಕೆಂಪಸೋಮಯ್ಯ ನವರನ್ನು ಶಿವಗಂಗೆಯನ್ನು ನೋಡಿಕೊಳ್ಳಲೆಂದು ನೇಮಿಸಿದ್ದರು.

ಕೋಟೆಗಳು:
ಸುಭದ್ರ ರಾಜಧಾನಿಯ ನಿರ್ಮಾಣದ ಜೊತೆ ಜೊತೆಗೆ ನಾಡಿನ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಗಳನ್ನು ಕಟ್ಟಿಸಿ ಸೈನಿಕರನ್ನು ನಿಯೋಜಿಸಿದರು. ಸೈನಿಕರ ಕುಟುಂಬದವರಿಗೆಂದೇ ಕೋಟೆಗಳ ಸಮೀಪದಲ್ಲಿಯೇ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಕೋಟೆಗಳ ನಿರ್ಮಾಣಕ್ಕೆ ಹತ್ತಿರದಲ್ಲೇ ದೊರೆಯುತ್ತಿದ್ದ ಕಲ್ಲು ಮತ್ತು ಮಣ್ಣಿನ ಇಟ್ಟಿಗೆಗಳನ್ನು ಬಳಸಿ ತ್ವರಿತಗತಿಯಲ್ಲಿ ಕಟ್ಟಲಾಯಿತು. ಅವುಗಳಲ್ಲಿ ಕೆಲವನ್ನು ಹಿರಿಯಕೆಂಪೇಗೌಡರ ನಂತರದ ಪೀಳಿಗೆಯವರು ತಮ್ಮ ಕಾಲದಲ್ಲಿ ಅಭಿವೃದ್ದಿ ಪಡಿಸುತ್ತಾ ಹೋದರು.
ಹೀಗಾಗಿ ಇಂದಿಗೂ ಕೆಂಪೇಗೌಡರ ಕಾಲದ ಏಳು ಪ್ರಮುಖ ಕೋಟೆಗಳು ಪ್ರಮುಖವಾಗಿವೆ.

ಅವೆಂದರೆ-
-ಬೆಂಗಳೂರಿನ ಕೋಟೆ
-ಮಾಗಡಿ ಕೋಟೆ
-ಸಾವನದುರ್ಗ ಕೋಟೆ ಮತ್ತು ನೆಲಪಟ್ಟಣ
-ಹುತ್ರಿದುರ್ಗದ ಏಳು ಸುತ್ತಿನ ಕೋಟೆ
-ಹುಲಿಯೂರುದುರ್ಗದ ಕೋಟೆ
-ಕುದೂರಿನ ಭೈರವನದುರ್ಗದ ಕೋಟೆ
-ರಾಮನಗರದ ರಾಮದುರ್ಗ ಕೋಟೆ

ಮೂಲ: ವಿಕಿಪೀಡಿಯ

ಶ್ರೀ ಕೆಂಪೇಗೌಡರು – ಸಂಚಿಕೆ ೨ (2)ರಾಜಧಾನಿಯ ನಿರ್ಮಾಣಕ್ಕೆ ಸ್ಥಳದ ಆಯ್ಕೆ:ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕ...
17/04/2022

ಶ್ರೀ ಕೆಂಪೇಗೌಡರು – ಸಂಚಿಕೆ ೨ (2)
ರಾಜಧಾನಿಯ ನಿರ್ಮಾಣಕ್ಕೆ ಸ್ಥಳದ ಆಯ್ಕೆ:
ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಈ ಎಲ್ಲಾ ವೈಭವಗಳನ್ನು ಮರು ಪ್ರತಿಷ್ಠಾಪಿಸುವ ಬಯಕೆ ಮನೆ ಮಾಡಿತ್ತು. ಇದರಿಂದಾಗಿ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನೂ ಮನದಟ್ಟು ಮಾಡಿಕೊಂಡು ಬಂದಿದ್ದರು.
ನಗರ ನಿರ್ಮಾಣಕ್ಕೆ ಸೂಕ್ತ ಜಾಗವನ್ನರಸುತ್ತಾ ಅಮಾತ್ಯ ವೀರಣ್ಣ ಹಾಗೂ ಕೆಲ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದೂರ ದಾಟಿ ಎತ್ತರದ ಪ್ರದೇಶವೊಂದಕ್ಕೆ ಬರುವ ಕೆಂಪೇಗೌಡರಿಗೆ ಸಣ್ಣ-ಪುಟ್ಟ ತೊರೆಗಳಿಂದ ಕೂಡಿದ ಹಸಿರಿನಿಂದ ನಳನಳಿಸುತ್ತಿದ್ದ ಕಾಡು ಎದುರಾಗುತ್ತದೆ. ಕಾಡಿನ ನಡುವೆ ಸಾಗುತ್ತಿದ್ದಂತೆ ಒಂದು ವಿಸ್ಮಯಕಾರಿ ಘಟನೆ ಕೆಂಪೇಗೌಡರ ಎದುರಿನಲ್ಲೇ ನಡೆಯುತ್ತದೆ. ಪುಟ್ಟ ಮೊಲವೊಂದು ತನ್ನನ್ನು ತಿನ್ನಲೆಂದು ಬಂದ ಬೇಟೆ ನಾಯಿಯೊಂದನ್ನು ಓಡಿಸಿಕೊಂಡು ಹೋಗುತ್ತಿರುವುದು ಕೆಂಪೇಗೌಡರಿಗೆ ಕಂಡುಬರುತ್ತದೆ.
ಇಲ್ಲಿರುವ ಸಾಮಾನ್ಯ ಮೊಲವೊಂದಕ್ಕೆ ಇಷ್ಟು ಧೈರ್ಯವಿರಬೇಕಾದರೆ ಇದು ಖಂಡಿತ ವೀರಭೂಮಿಯೇ ನಿಜ ಎನಿಸುತ್ತದೆ. ಹೀಗಾಗಿ ನಗರ ನಿರ್ಮಾಣಕ್ಕೆ ಇದೇ ಸೂಕ್ತವಾದ ಪ್ರದೇಶವೆಂದು ಕೆಂಪೇಗೌಡರು ಭಾವಿಸುತ್ತಾರೆ. ಅಲ್ಲದೆ ನಾನಾಕಡೆಗಳಿಂದ ತೊರೆಗಳಾಗಿ ಹರಿದು ಅರ್ಕಾವತಿ ನದಿಗೆ ಸೇರುತ್ತಿದ್ದ ಪ್ರದೇಶವೂ ಇದಾದ್ದರಿಂದ ನೀರಾವರಿಗೂ ಯೋಗ್ಯವಾಗಿದೆಯೆಂದು ಗೌಡರು ತೀರ್ಮಾನಿಸುತ್ತಾರೆ. ತಮ್ಮ ಪರಿವಾರದ ಹಿರಿಯರೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆಯುತ್ತಾರೆ.

ಜ್ಯೋತಿಷಿಗಳನ್ನೂ, ಭೂಗರ್ಭ-ನೀರಾವರಿ ತಜ್ಞರನ್ನೂ ವಾಸ್ತುಶಿಲ್ಪಿಗಳನ್ನೂ ಕರೆಸಿ ಸ್ಥಳ ಮತ್ತು ಪರಿಸರದ ಪರಿಶೀಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ರಾಜಧಾನಿಯ ನಿರ್ಮಾಣದ ಅನುಮತಿಗಾಗಿ ವಿಜಯನಗರದ ಅರಸರ ಅಚ್ಯುತರಾಯರನ್ನು ಭೇಟಿ ಮಾಡುತ್ತಾರೆ. ಸಂತಸಗೊಂಡ ಅರಸರು ಗೌಡರ ಕಾರ್ಯಕ್ಕೆ ಶುಭಕೋರಿ ಅಗತ್ಯ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿ ಕಳುಹಿಸುತ್ತಾರೆ.
ಕೆಂಪೇಗೌಡರ ತಾಯಿ ಕೆಂಪಾಂಬೆ ಮತ್ತು ಪತ್ನಿ ಚೆನ್ನಮಾಂಬೆ(ಸೋದರ ಮಾವನ ಮಗಳು) ಇಬ್ಬರೂ ಹಳೆ ಬೆಂಗಳೂರಿನವರು. ಹಾಗಾಗಿ ಇಬ್ಬರ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರಿಟ್ಟಿರೆಂಬುದು ಹಲವು ವಿದ್ವಾಂಸರ ಅಭಿಪ್ರಾಯ.

ರಾಜಧಾನಿಗೆ ನಾಮಕರಣ:
ಬೆಂಗಳೂರಿನ ಹೆಸರಿನ ಮೂಲ ಕುರಿತು ಮತ್ತಷ್ಟು ಊಹೆಗಳು
-ಬೆಣಚು ಕಲ್ಲೂರು: ಬೆಣಚು ಕಲ್ಲುಗಳಿಂದ ಕೂಡಿದ್ದರಿಂದಾಗಿ.
-ಬೆಂಗುಮರಗಳೂರು: ಈ ಪ್ರದೇಶದಲ್ಲಿದ್ದ ಬೆಂಗು ಮರಗಳಿಂದಾಗಿ.
-ಬೆಂಗಾವಲೂರು: ಗಂಗರು ಬೆಂಗಾವಲಿಗೆಂದು ನಿರ್ಮಿಸಿದ ಕಾರಣಕ್ಕಾಗಿ.
-ವೆಂಗಳೂರು: ತಮಿಳಿನ ಶಾಸನವನ್ನು ಉಲ್ಲೇಖಿಸಿ.
-ಬೆಂದ ಕಾಡೂರು: ಇಲ್ಲಿದ್ದ ಕಾಡನ್ನು ಕಡಿಸಿ-ಸುಡಿಸಿ ನಗರ ನಿರ್ಮಿಸಿದ ಕಾರಣ.
-ವೆಂಕಟೂರು: ವೆಂಕಟರಮಣ ಸ್ವಾಮಿ ಗುಡಿಯನ್ನು ಕಟ್ಟಿಸಿದ ಕಾರಣ.
ಬೆಂಗಳೂರು ನಗರಕ್ಕೆ ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ಅಚ್ಯುತರಾಯರ ನೆನಪಿನಲ್ಲಿ ‘ದೇವರಾಯಪಟ್ಟಣ’ ಎಂಬ ಪ್ರತಿನಾಮವೂ ಬಂದಿತ್ತು. ಬಹುಶಃ ಅಚ್ಯುತರಾಯರ ಅವಧಿಯಲ್ಲೇ ಶುರುವಾದ ಆಂತರಿಕ ಕಲಹಗಳ ಕಾರಣ ವಿಜಯನಗರ ಸಾಮ್ರಾಜ್ಯದ ಘನತೆ ಕಡಿಮೆಯಾಗುತ್ತಾ ಹೋದ ಕಾರಣದಿಂದ ಆ ಹೆಸರು ಉಳಿದುಕೊಳ್ಳಲಿಲ್ಲ ಎನ್ನಲಾಗಿದೆ.

ಮೂಲ: ವಿಕಿಪೀಡಿಯ

ಶ್ರೀ ಕೆಂಪೇಗೌಡರು - ಸಂಚಿಕೆ ೧ (1)ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ...
21/03/2022

ಶ್ರೀ ಕೆಂಪೇಗೌಡರು - ಸಂಚಿಕೆ ೧ (1)
ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.
ವಿಜಯನಗರದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ವ್ಯಾಪ್ತಿಯು ಹಿರಿಯ ಕೆಂಪೇಗೌಡರ ಕಾಲದಲ್ಲಿ ಈಗಿನ ಬೆಂಗಳೂರಿನ ಹೊರವಲಯದಲ್ಲಿರುವ ಆವತಿಯಿಂದ ಹಿಡಿದು ಕೋಲಾರ, ಶಿವಗಂಗೆ, ಹುಲಿಕಲ್, ಕುಣಿಗಲ್, ಹುಲಿಯೂರುದುರ್ಗ, ಹುತ್ರಿದುರ್ಗ, ಮಾಗಡಿ, ರಾಮನಗರ, ಸಾವನದುರ್ಗದವರೆಗೂ ವಿಸ್ತರಿಸಿತ್ತು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.
ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರ ನಂತರ ಇವರ ಸಂತತಿಯವರಿಗೆ ಮಾಗಡಿ ಕೆಂಪೇಗೌಡರೆಂಬ ಹೆಸರು ಬಂದಿದೆ. ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಇವರ ಕೊನೆಯ ಪೀಳಿಗೆಯವರು ಸದ್ಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಯಲಹಂಕದಲ್ಲಿ ಜನಿಸಿದ ಮೊದಲನೆಯ ಕೆಂಪೇಗೌಡರು.
ಒಮ್ಮೆ ಯುವಕರಾಗಿದ್ದ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಮಲ್ಲಯುದ್ದ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲರಾಯರನ್ನು ಸೋಲಿಸಿ ಶ್ರೀಕೃಷ್ಣ ದೇವರಾಯರಿಂದ ಮೆಚ್ಚುಗೆ ಗಳಿಸುತ್ತಾರೆ. ಅಲ್ಲಿಂದೀಚೆಗೆ ಕೆಂಪೇಗೌಡರ ಭುಜಬಲದ ಬಗ್ಗೆ ತಂದೆಯವರಿಗೆ ನಂಬಿಕೆ ಬಂದು ವಿಜಯನಗರದ ಅರಸರ ಪರವಾಗಿ ತಾವು ಭಾಗವಹಿಸುವ ಯುದ್ದಗಳಲ್ಲಿ ಮಗನನ್ನೂ ಕರೆದೊಯ್ಯುತ್ತಾರೆ. ವಿಜಯನಗರದ ಸಾರ್ವಭೌಮತೆಗೆ ಧಕ್ಕೆ ತರಲು ಹೊಂಚು ಹಾಕುತ್ತಿದ್ದ ಶತೃ ಸಾಮಂತರನ್ನು ಸದೆಬಡಿಯುತ್ತಾರೆ.

ಮೂಲ: ವಿಕಿಪೀಡಿಯ

ಕೆಳದಿಯ ಚನ್ನಮ್ಮ ಕ್ರಿ.ಶ.೧೬೭೨ರಿಂದ ಕ್ರಿ.ಶ.೧೬೯೭ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ...
08/03/2022

ಕೆಳದಿಯ ಚನ್ನಮ್ಮ ಕ್ರಿ.ಶ.೧೬೭೨ರಿಂದ ಕ್ರಿ.ಶ.೧೬೯೭ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ ಮಗನಾದ ರಾಜರಾಮನಿಗೆ ನೀಡಿದ ಆಶ್ರಯ ಮತ್ತು ಅದರ ಪರಿಣಾಮವಾಗಿ ಯುದ್ಧಕ್ಕೆ ಬಂದ ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು ಅವಳ ಆಳ್ವಿಕೆಯ ಅತ್ಯಂತ ಮಹತ್ವದ ಸಂಗತಿಗಳಲ್ಲಿ ಒಂದು. ತನ್ನ ಸ್ಥಿರ ಸಂಕಲ್ಪ, ದೂರದೃಷ್ಟಿ ಹಾಗೂ ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದಳೆಂದು ಚೆನ್ನಮ್ಮ ಪ್ರಸಿದ್ಧಳಾಗಿದ್ದಾಳೆ.
ಚೆನ್ನಮ್ಮಳು ಕೋಟಿಪುರದ ನಾಯಕ ಸಮುದಾಯಕ್ಕೆ ಸೇರಿದ ಮಗಳು ಹಾಗು ಒಂದನೆಯ ಸೋಮಶೇಖರನಾಯಕನ (1664-1679) ಮಡದಿ. ಲಿಂಗಣ್ಣಕವಿಯ ಕೆಳದಿನೃಪವಿಜಯ ಎಂಬ ಗ್ರಂಥ ಹಾಗೂ ಇತರ ಆಧಾರಗಳಿಂದ ಚೆನ್ನಮ್ಮನ ಆಳ್ವಿಕೆಯ ಮುಖ್ಯ ಘಟನೆಗಳು ತಿಳಿದು ಬರುತ್ತವೆ. 1690ರಲ್ಲಿ ಕೆಳದಿ ಮತ್ತು ಮೊಘಲ್ ಸೈನ್ಯಗಳ ನಡುವೆ ಯುದ್ಧ ನಡೆಯಿತು. ಕದನದಲ್ಲಿ ಮೊಘಲ್ ಸೇನೆ ಪರಾಭವಗೊಂಡು ಪಲಾಯನ ಮಾಡಿತು. ಕಣಿವೆಗಳಲ್ಲಿ ವೈರಿಸೈನ್ಯವನ್ನು ಸಿಲುಕಿಸಿ ಔರಂಗಜೇಬನು ಒಪ್ಪಂದಕ್ಕೆ ಬರುವಂತೆ ಮಾಡಿದಳು. ಮೊಘಲರ ಸೋಲಿನಿಂದ ರಾಣಿ ಚೆನ್ನಮ್ಮಾಜಿಯ ಕೀರ್ತಿ ಇಡೀ ಭಾರತದಲ್ಲಿ ಹಬ್ಬಿತು. ಈ ಸಂಗತಿಯನ್ನು ಕುರಿತ ಜನಪದ ಗೀತೆಗಳು ಇಂದಿಗೂ ಕನ್ನಡನಾಡಿನಲ್ಲಿ ಪ್ರಚಾರದಲ್ಲಿವೆ.
ದಕ್ಷ ಆಡಳಿತಗಾರಳಾದ ಚೆನ್ನಮ್ಮ ಮತವಿಚಾರಗಳಲ್ಲಿ ಉದಾರ ನೀತಿ ಹೊಂದಿದ್ದಳು.



source: wikipedia

ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು!ಮಾಗಡಿ ಪಟ್ಟಣದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯವು ಅತ್ಯಂತ ಹಳೆಯ ಹಾಗೂ ಪಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ...
01/03/2022

ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು!
ಮಾಗಡಿ ಪಟ್ಟಣದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯವು ಅತ್ಯಂತ ಹಳೆಯ ಹಾಗೂ ಪಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಪುರಾವೆಗಳ ಪ್ರಕಾರ 505 ವರ್ಷಗಳ ಸುಧೀರ್ಘ ಇತಿಹಾಸ ಈ ದೇವಸ್ತಾನಕ್ಕಿದೆ.

ದೇವಸ್ಥಾನದ ಮೂಲ ಮಾಹಿತಿಗಳ ಪ್ರಕಾರ ಕೆಂಪೇಗೌಡರ ತಾಯಿಗೆ ಕಾಶಿಯಾತ್ರೆ ಮಾಡಬೇಕೆಂಬ ಬಯಕೆ ಇರುತ್ತದೆ, ವಯಸ್ಸಾದ ಕಾರಣ ಸಾಧ್ಯವಾಗುವುದಿಲ್ಲ, ಇದರಿಂದಾಗಿ ಕಾಶಿಯಿಂದ ಸಾಲಿಗ್ರಾಮ ಶಿವಲಿಂಗವನ್ನು ತಂದು ಮೃತ್ಯುಂಜಯ ಪೀಠದಲ್ಲಿ ಶ್ರೀ ಸೋಮೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಶ್ರೀ ಭ್ರಮರಾಂಭಿಕ ಅಮ್ಮನವರು ಈ ದೇವಾಲಯದ ಶಕ್ತಿ ದೇವತೆ. ಇದಷ್ಟೇ ಅಲ್ಲದೆ ಸತ್ಯನಾರಾಯಣ ಸ್ವಾಮಿಯವರು ಇಲ್ಲಿ ಬಹಳ ವಿಶೇಷವಾಗಿದ್ದು ಈ ದೇವಾಲಯ ಸ್ಥಾಪನೆ ಕಾಲದಲ್ಲೇ ಶ್ರೀ ಸತ್ಯನಾರಾಯಣ ಸ್ವಾಮಿಯವರನ್ನು ಕೆಂಪೇಗೌಡರು ಸ್ಥಾಪಿಸುತ್ತಾರೆ ಎಂದು ಹೇಳಲಾಗಿದೆ. ಇಷ್ಟು ವೈಶಿಷ್ಟಗಳ ಜೊತೆಗೆ ಇಲ್ಲಿ ಕಂಚಿನ ಶಬ್ದ ಬರುವ ಕಂಬದ ಪಕ್ಕದಲ್ಲಿಯೇ ಕೆಂಪೇಗೌಡರು ನ್ಯಾಯ ತೀರ್ಮಾನಗಳನ್ನು ನೀಡುತ್ತಿದ್ದ ಸ್ಥಳವೂ ಸಹ ಇಲ್ಲಿದೆ.

#ಮಹಾಶಿವರಾತ್ರಿ

Landscape view from Savandurga hill, Magadi. PC: Naveen B Ramu
24/02/2022

Landscape view from Savandurga hill, Magadi.


PC: Naveen B Ramu

Address

Magadi
Ramanagara
562120

Alerts

Be the first to know and let us send you an email when Magadi Days posts news and promotions. Your email address will not be used for any other purpose, and you can unsubscribe at any time.

Share