BJP Ranebennur - ನಗರ ಮಂಡಲ

BJP Ranebennur - ನಗರ ಮಂಡಲ Contact information, map and directions, contact form, opening hours, services, ratings, photos, videos and announcements from BJP Ranebennur - ನಗರ ಮಂಡಲ, Political Party, BJP office Railway Station Road Near Canara Bank, Ranebennur.

BJP Ranebennur Official Page

📍 ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

ನವ ಭಾರತ ನಿರ್ಮಾಣಕ್ಕಾಗಿ, ಸಶಕ್ತ ರಾಣೆಬೆನ್ನೂರಿಗಾಗಿ!

ನಿಮ್ಮ ಸೇವೆಗಾಗಿ ಸದಾ ಸಿದ್ಧ. ಕಮಲದ ಗುರುತಿಗೆ ನಮ್ಮ ಬೆಂಬಲ.🪷

ರಾಣೇಬೆನ್ನೂರು ನಗರದ ಹೊರವಲಯದ ಯುಟಿಪಿ ಕಚೇರಿಯ ಎದುರು ರಾಣೇಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು ಭಾರತೀಯ ಜನತಾ ಪಕ್ಷದ ವತಿಯಿಂದ ತುಂಗಾ ಮೇಲ್ದ...
06/08/2026

ರಾಣೇಬೆನ್ನೂರು ನಗರದ ಹೊರವಲಯದ ಯುಟಿಪಿ ಕಚೇರಿಯ ಎದುರು ರಾಣೇಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು ಭಾರತೀಯ ಜನತಾ ಪಕ್ಷದ ವತಿಯಿಂದ ತುಂಗಾ ಮೇಲ್ದಂಡೆ ಯೋಜನೆಯಿಂದ ಹಿರೇಕೆರೂರು-ರಟ್ಟೀಹಳ್ಳಿ ತಾಲೂಕಿನ ಸರ್ವಜ್ಞ, ಅಸುಂಡಿ, ದುರ್ಗಾದೇವಿ, ಗುಡ್ಡಾದಮಾದಾಪೂರ ಹಾಗೂ ಮಡ್ಲೂರ ಏತ ನೀರಾವರಿ ಯೋಜನೆಗಳು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ.

ಈ ರೈತಪರ ಹೋರಾಟದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ,ಮಾಜಿ ಸಚಿವರಾದ ಶ್ರೀ B.C.Patil ಮಾಜಿ ಶಾಸಕರಾದ ಶ್ರೀ ಡಿ.ಎಮ್.ಸಾಲಿ,ಬಿಜೆಪಿ ಪಕ್ಷದ ಹಿರಿಯರು ಶ್ರೀ ಕೆ.ಶಿವಲಿಂಗಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದಣ್ಣ ಚಿಕ್ಕಬಿದರಿ, ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಗಂಗಾಧರ ಬಾಣದ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀ ಪರಮೇಶ ಗೂಳಣ್ಣನವರ, ರಾಣೆಬೆನ್ನೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಕಾಟಿ, ರಾಣೆಬೆನ್ನೂರು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ ಸುಭಾಶ ಶಿರಗೇರಿ, ಬಿಜೆಪಿ ರಟ್ಟಿಹಳ್ಳಿ ಮಂಡಲದ ಅಧ್ಯಕ್ಷರಾದ ಶ್ರೀ ದೇವರಾಜ ನಾಗಣ್ಣನವರ, ರಾಣೆಬೆನ್ನೂರು ನಗರಸಭಾ ಮಾಜಿ ಸದಸ್ಯರಾದ ಶ್ರೀ ಮಲ್ಲಣ್ಣ ಅಂಗಡಿ, ರಾಣೆಬೆನ್ನೂರು ಬಿಜೆಪಿ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೌನೇಶ ತಳವಾರ ಸೇರಿದಂತೆ ಪಕ್ಷದ ಹಿರಿಯರು ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..

|

BJP Karnataka | BJP Haveri - ಬಿಜೆಪಿ ಹಾವೇರಿ | Bjp Ranebennur | Vijayendra Yediyurappa

"ಮೋದಿಜಿ ಆಗೇ ಬಡೋ, ಹಮ್ ತುಮಾರೇ ಸಾಥ್ ಹೈ"ಪ್ರತಿಭಟನೆಯ ಹೆಸರಲ್ಲಿ ದೇಶದ ಯುವ ಜನತೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಎಡ ಪಂಥೀಯ ಸಂಘಟನೆ ಹ...
24/07/2026

"ಮೋದಿಜಿ ಆಗೇ ಬಡೋ, ಹಮ್ ತುಮಾರೇ ಸಾಥ್ ಹೈ"

ಪ್ರತಿಭಟನೆಯ ಹೆಸರಲ್ಲಿ ದೇಶದ ಯುವ ಜನತೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಎಡ ಪಂಥೀಯ ಸಂಘಟನೆ ಹಾಗೂ Indian National Congress ಪಕ್ಷದ ದ್ವಿಮುಖ ನೀತಿ ಖಂಡಿಸಿ ಇಂದು ಹಾವೇರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು...

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರು ಸಹ ಸಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಎಡ ಪಂಥೀಯ ಸಂಘಟನೆಗಳು ಹೋರಾಟದ ನೆಪದಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಆಲೋಚನೆಯ ವಿರುದ್ಧ ಮತ್ತು ಪ್ರತಿಭಟನೆಯ ಹೆಸರಲ್ಲಿ ದೇಶ ವಿರೋಧಿ, ಧರ್ಮ ವಿರೋಧಿ ಘೋಷನೆಗಳನ್ನು ಹಾಕುತ್ತ ಯುವ ಜನತೆಯಲ್ಲಿ ದೇಶ ವಿರೋಧಿ ಭಾವನೆ ಮೂಡಿಸುತ್ತಿರುವುದನ್ನು ಖಂಡಿಸಲಾಯಿತು..

ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಶ್ರೀ ಬಿ ಸಿ ಪಾಟೀಲ ಅವರು, ಮಾಜಿ ಶಾಸಕರಾದ ಶ್ರೀ ಶಿವರಾಜ ಸಜ್ಜನರ, ಶ್ರೀ ಭೋಜರಾಜ ಕರೂದಿ, ಶ್ರೀ ಗವಿಸಿದ್ದಪ್ಪ ದ್ಯಾಮಣ್ಣವರ ಹಾಗೂ ವಿದ್ಯಾರ್ಥಿ ನಾಯಕರಾದ ಶ್ರೀ ಸಾಗರ ಪೊಲೀಸಗೌಡ್ರ, ಪೂರ್ವಿ ನೆವಲೇಖರ ಮಾತನಾಡಿದರು...ಜಿಲ್ಲೆಯ ಬಿಜೆಪಿ ಪಕ್ಷದ ಹಿರಿಯರು ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..

| Bharatiya Janata Party (BJP) | Nitin Nabin | BJP Karnataka |

ಕೋಮು ಗಲಭೆಗಳಿಗೆ ಪ್ರಚೋದನೆ, ಸಮಾಜ ದ್ರೋಹಿ ಚಟುವಟಿಕೆ ಮತ್ತು Indian National Congress - Karnataka ಸರಕಾರದ ಕಾನೂನು ವೈಫಲ್ಯದ ವಿರುದ್ಧ ಬ...
16/07/2026

ಕೋಮು ಗಲಭೆಗಳಿಗೆ ಪ್ರಚೋದನೆ, ಸಮಾಜ ದ್ರೋಹಿ ಚಟುವಟಿಕೆ ಮತ್ತು Indian National Congress - Karnataka ಸರಕಾರದ ಕಾನೂನು ವೈಫಲ್ಯದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಇಂದು ಹಾವೇರಿಯಲ್ಲಿ ಮಾಡಲಾಯಿತು...

ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ಎಂಜಿ ರಸ್ತೆ ಮಾರ್ಗವಾಗಿ - ಮಹಾತ್ಮ ಗಾಂಧಿ ಸರ್ಕಲ್ ಬಳಿ ಬೃಹತ್ ಬಹಿರಂಗ ಸಭೆ ಮಾಡಲಾಯಿತು...

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ Vijayendra Yediyurappa ನವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸಂಸದರು ಸನ್ಮಾನ್ಯ ಶ್ರೀ Basavaraj Bommai ಅವರು, ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ Virupakshappa Ballari ಅವರು, ಮಾಜಿ ಸಚಿವರು ಹಾಗೂ ಕೆ.ಆರ್. ಪುರಂ ಶಾಸಕರಾದ ಸನ್ಮಾನ್ಯ ಶ್ರೀ ಬೈರತಿ ಬಸವರಾಜ್ ಅವರು, ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್ ವಿ ಸಂಕನೂರು ಅವರು, ಮಾಜಿ ಸಚಿವರಾದ ಸನ್ಮಾನ್ಯ ಶ್ರೀ B.C.Patil ಅವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಜ್ ಸಜ್ಜನ್ ಅವರು, ಹಾವೇರಿ ತಾಲೂಕು ಮುಖಂಡರಾದ ಸನ್ಮಾನ್ಯ ಶ್ರೀ ಗವಿಸಿದಪ್ಪ ದ್ಯಾಮಣ್ಣನವರ, ಶಿಗ್ಗಾಂವಿ ತಾಲೂಕು ಮುಖಂಡರಾದ ಸನ್ಮಾನ್ಯ ಶ್ರೀ ಭರತ್ ಬೊಮ್ಮಾಯಿ, ಜಿಲ್ಲಾ ಪ್ರಭಾರಿಗಳಾದ ಸನ್ಮಾನ್ಯ ಶ್ರೀ ಎಸ್. ದತ್ತಾತ್ರೇಯ, ವಿಭಾಗ ಸಹ ಪ್ರಭಾರಿಗಳಾದ ಸನ್ಮಾನ್ಯ ಶ್ರೀ ಭೋಜರಾಜ ಕರೂದಿ, ರಾಜ್ಯ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಶರಣು ತಳ್ಳಿಕೆರೆ ಅವರು ಸೇರಿದಂತೆ ಹಾವೇರಿ ಜಿಲ್ಲಾ ಪಕ್ಷದ ಹಿರಿಯರು ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು...

06/07/2026
ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪ...
06/07/2026

ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ನಮನಗಳು.

ಭಾರತೀಯ ಜನತಾ ಪಾರ್ಟಿ ನಗರಮಂಡಲದ ವತಿಯಿಂದ ರಾಣೇಬೆನ್ನೂರು ನಗರದಲ್ಲಿ ಬರುವ ಒಂದು ವೃತ್ತಕ್ಕೆ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ನಾಮಕರಣ ಮಾಡಲು ರಾಣೇಬೆನ್ನೂರು ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪ...
06/07/2026

ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ನಮನಗಳು.

ಜನ್ಮ ಜಯಂತಿಯ ಅಂಗವಾಗಿ ನಗರದ ಬೂತ್ ನಂಬರ್ 106 ರಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.

ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪ...
06/07/2026

ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮ ಜಯಂತಿಯನ್ನು ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ಪಕ್ಷದ ಅಧ್ಯಕ್ಷರಿಗೂ,ಮುಖಂಡರುಗಳಿಗೂ,ಪದಾಧಿಕಾರಿಗಳಿಗೂ ಕಾರ್ಯಕರ್ತರಿಗೂ ಧನ್ಯವಾದಗಳು.

ಭಾರತೀಯ ಜನತಾ ಪಾರ್ಟಿ ರಾಣೇಬೆನ್ನೂರು ನಗರ ಮಂಡಲ.ದಿನಾಂಕ 22/ 06 /2026 ರಾಣೆಬೆನ್ನೂರಿನ ನಗರ ಮಂಡಲ ಸಂಗೊಳ್ಳಿರಾಯಣ್ಣ ಶಕ್ತಿಕೇಂದ್ರದ , B. L. ...
24/06/2026

ಭಾರತೀಯ ಜನತಾ ಪಾರ್ಟಿ ರಾಣೇಬೆನ್ನೂರು ನಗರ ಮಂಡಲ.

ದಿನಾಂಕ 22/ 06 /2026 ರಾಣೆಬೆನ್ನೂರಿನ ನಗರ ಮಂಡಲ ಸಂಗೊಳ್ಳಿರಾಯಣ್ಣ ಶಕ್ತಿಕೇಂದ್ರದ , B. L. A-2 ಮತ್ತು ಬೂತ್ ಅಧ್ಯಕ್ಷರ
(S I R )
"ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ" ಪೂರ್ವಭಾವಿ ಸಭೆ.

ಸಭೆ :- 1) ವಾರ್ಡ್ -5- ಬೂತ್ (148,149), ವಾರ್ಡ್- 6 - ಬೂತ್ (146,147), ವಾರ್ಡ್ -22 - ಬೂತ್ (139,140), ವಾರ್ಡ್ -23 - (141,142)
ವಾರ್ಡ್ -24 ( 144,145).

ಸಮಯ :- ಮದ್ಯಾಹ್ನ :- 3:30 ಕೇ

ಸ್ಥಳ:- ವಿನಾಯಕ ದೇವಸ್ಥಾನ ,ವಿನಾಯಕ ನಗರ, ಸೂರಜ್ ಹೋಟೆಲ್ ರೋಡ್,ರಾಣೇಬೆನ್ನೂರು.

ಸಭೆ - 2 ) ವಾರ್ಡ್ - 12 (93,97,94), ವಾರ್ಡ್ - 13 (95,96,98),ವಾರ್ಡ್ - 17 ( 118),ವಾರ್ಡ್ - 18 (117,125), ವಾರ್ಡ್ - 19 (105,105), ವಾರ್ಡ್ - 20 (99,100,106,107), ವಾರ್ಡ್ - 21(101,102,103)

ಸಮಯ :- 6:00 ಸಾಯಂಕಾಲ
ಸ್ಥಳ :- ಭಾರತೀಯ ಜನತಾ ಪಾರ್ಟಿ ಕಾರ್ಯಾಲಯ,ರೈಲ್ವೆ ಸ್ಟೇಷನ್ ರೋಡ್, ರಾಣೆಬೆನ್ನೂರು.

ಸಭೆಗೆ ಅಪೇಕ್ಷಿತರು :
* ಶಕ್ತಿಕೇಂದ್ರ ಪ್ರಮುಖರು.
* ಬಿ ಎಲ್ ಎ- 2.
* ಬೂತ್ ಅಧ್ಯಕ್ಷರು ಮತ್ತು ಬೂತಿನ ಸಮಿತಿ.
* ನಗರ ಸಭೆಯ ಚುನಾಯಿತ ಪರಾಜಿತ ಮಾಜಿ ಸದಸ್ಯರುಗಳು.
* ವಾರ್ಡಿನ ಪ್ರಮುಖರು.

ಈ ಸಭೆಯನ್ನು :-
ಡಾ.ಎ.ಹೆಚ್.ಶಿವಯೋಗಿ ಸ್ವಾಮಿ
S I R ಪ್ರಭಾರಿ
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರು ಇವರು ತೆಗೆದುಕೊಳ್ಳಲಿದ್ದಾರೆ, ಶ್ರೀ ಅರುಣ್ ಕುಮಾರ್ ಪೂಜಾರ್ ಮಾಜಿ ಶಾಸಕರು ರಾಣೇಬೆನ್ನೂರು, ಶ್ರೀ ನಿಂಗರಾಜ್ ಕೋಡಿಹಳ್ಳಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿ ಎಲ್ ಎ-1,ಮಾಜಿ ನಗರಸಭಾ ಸದಸ್ಯರು,ಹಾವೇರಿ ಜಿಲ್ಲೆಯ ಉಪಾಧ್ಯಕ್ಷರು ಮತ್ತು ಶ್ರೀ ಕಲ್ಯಾಣ್ ಕುಮಾರ್ ಶೆಟ್ಟರ್ S. I. R ನ ಉಸ್ತುವಾರಿಗಳು ಇವರೆಲ್ಲರೂ ಕೂಡ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಪದಾಧಿಕಾರಿಗಳು,ಪಕ್ಷದ ಮುಖಂಡರು, ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗಮಿಸಿ ಯಶಸ್ವಿಗೊಳಿಸದರು.

ಅಧ್ಯಕ್ಷರು
ನಗರ ಮಂಡಲ
ಭಾರತೀಯ ಜನತಾ ಪಾರ್ಟಿ ರಾಣೇಬೆನ್ನೂರು.

Address

BJP Office Railway Station Road Near Canara Bank
Ranebennur
581115

Website

Alerts

Be the first to know and let us send you an email when BJP Ranebennur - ನಗರ ಮಂಡಲ posts news and promotions. Your email address will not be used for any other purpose, and you can unsubscribe at any time.

Shortcuts

Share