ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ

  • Home
  • India
  • Sagar
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ ರೈತರಿಗಾಗಿ ರೈತರಿಗೋಸ್ಕರ

18/07/2026

ನಾವು ಮಾಡೋ ರಕ್ತದಾನದಿಂದ ಸಂಕಷ್ಟದಲ್ಲಿರುವವರಿಗೆ ಹೊಸ ಜೀವನ ಕಲ್ಪಿಸಿದಂತಾಗುತ್ತೆ,ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ ಸಾಗರ ತಾಲೂಕಿನ ಬಂದ ಗದ್ದೆಯ ಕಮಲಮ್ಮನವರ ಕುಟುಂಬವೂ ಒಂದು.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಮಾಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಜೀವದಾನ ಅಂದರೆ ರಕ್ತದಾನ,ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದೆ ಬರಬೇಕು,

ರಕ್ತದಾನ ಶ್ರೇಷ್ಠ ದಾನ ನಮ್ಮ ದೇಹದ ರಕ್ತದ ಒಂದು ಸಣ್ಣ ಭಾಗ ನರಳುತ್ತಿರುವ ಜೀವಕ್ಕೆ ಆಸರೆಯಾಗಬಹುದು,

ಆತ್ಮೀಯರೇ ತಮಗೆಲ್ಲಾ ತಿಳಿದಿರುವಂತೆ ನಮ್ಮ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ದಿನಾಂಕ 22/7/26 ರಂದು ರಕ್ತದಾನ ಶಿಬಿರವನ್ನು ಇಟ್ಟುಕೊಂಡಿದ್ದೇವೆ ,
ಈ ಸಮಯದಲ್ಲಿ ನಾವೆಲ್ಲಾ ರಕ್ತದಾನ ಮಾಡೋಣ,ಇನ್ನೊಬ್ಬರ ಜೀವ ಉಳಿಸೋಣ🙏🙏
#ದಿನೇಶ್_ಶಿರವಾಳ
#ಶಿವಮೊಗ್ಗ_ಜಿಲ್ಲಾ_ರೈತಸಂಘ

17/07/2026

ಸಾಗರ ತಾಲೂಕಿನಲ್ಲಿರುವ ಕೆಲವೇ ಕೆಲವು ಅವಿಭಕ್ತ ಕುಟುಂಬಗಳಲ್ಲಿ(ಜಾಯಿಂಟ್ ಫ್ಯಾಮಿಲಿ)ಒಂದಾದ, ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಾ ಕುಟುಂಬಗಳಿಗೂ ಮಾದರಿಯಾದ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಹಿರೇನಲ್ಲೂರು ಗ್ರಾಮಪಂಚಾಯತಿಯ ಸಣ್ಮನೆ ಗ್ರಾಮದ ಚಂದ್ರಶೇಖರ ಅವರ ಕುಟುಂಬವೂ ಒಂದು.ಅವರ ಕುಟುಂಬದ ಒಂದು ಕಿರು ಪರಿಚಯವನ್ನು ಇಂದು ನಮ್ಮ ಸಂಘಟನೆಯ ಕಾರ್ಯದ್ಯಕ್ಷರಾದ ರಮೇಶ್ ಕೆಳದಿ ಅವರ ಜೊತೆ ಹಂಚಿಕೊಂಡರು.

ಅವಿಭಕ್ತ ಕುಟುಂಬವು ಭಾರತೀಯ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿದೆ,ಇದು ಕೇವಲ ಒಟ್ಟಿಗೆ ವಾಸಿಸುವುದಲ್ಲ ,ಬದಲಿಗೆ ಪರಸ್ಪರ ಪ್ರೀತಿ,ತ್ಯಾಗ,ಹಂಚಿಕೊಳ್ಳುವಿಕೆ ಮತ್ತು ಭಾವನಾತ್ಮಕ ಬೆಂಬಲದ ಸಂಕೇತವಾಗಿದೆ.

ಅವಿಭಕ್ತ ಕುಟುಂಬದಿಂದ ಮಕ್ಕಳು ಅಜ್ಜ ಅಜ್ಜಿಯರ ಪ್ರೀತಿ ಮತ್ತು ಮಾರ್ಗದರ್ಶನದಲ್ಲಿ ಬೆಳೆಯುತ್ತಾರೆ,ಹಿರಿಯರಿಂದ ನೈತಿಕ ಮೌಲ್ಯಗಳು,ಸಂಪ್ರದಾಯಗಳು, ಗೌರವವನ್ನು ಸುಲಭವಾಗಿ ಮಕ್ಕಳು ಕಲಿಯುತ್ತಾರೆ.

ಅವಿಭಕ್ತ ಕುಟುಂಬದಿಂದ ಮನೆ ನಿರ್ವಹಣೆ,ದಿನಸಿ ಖರ್ಚುಗಳು ಮತ್ತು ಇತರೆ ಆರ್ಥಿಕ ಹೊರೆಗಳು ಎಲ್ಲರಲ್ಲೂ ಹಂಚಿ ಹೋಗುವುದರಿಂದ ಆರ್ಥಿಕವಾಗಿ ಹೆಚ್ಚು ಅನುಕೂಲಕರವಾಗಿ ಮನೆಗೆ ಆರ್ಥಿಕ ಭದ್ರತೆ ದೊರೆಯುತ್ತದೆ.

ಗಂಡ,ಹೆಂಡತಿ,ಮಕ್ಕಳು ಅಥವ ಗಂಡ ಹೆಂಡತಿ ಒಟ್ಟಿಗೆ ಇದ್ದರೆ ಮಾತ್ರ ಅವಿಭಕ್ತ ಕುಟುಂಬ ಅಂತ ಹೇಳುವ ಈಗಿನ ಕಾಲದಲ್ಲಿ ನಿಮ್ಮಕುಟುಂಬ ಇತರರಿಗೆ ಮಾದರಿಯಾಗಿದೆ,ಹೀಗೆಯೇ ಮುಂದೆಯೂ ಕೂಡ ಹೀಗೆ ಸಹಬಾಳ್ವೆಯಿಂದ ಬಾಳುವಂತಾಗಲಿ ಎಂದು ಹಾರೈಸುತ್ತೇವೆ🙏

#ಅವಿಭಕ್ತ_ಕುಟುಂಬ

17/07/2026

ಸಾಗರ ತಾಲೂಕು ತಾಳಗುಪ್ಪ ಹೋಬಳಿ ಹಿರೇನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಮನೆ ಗ್ರಾಮದ ಅಂಗನವಾಡಿ ಕೇಂದ್ರ ಶಿಥಿಲಾವಸ್ತೆ ತಲುಪಿದ್ದು ಈ ಸಂಬಂಧ ಇಂದು ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿವಮೊಗ್ಗ ಜಿಲ್ಲಾ ಕಾರ್ಯಾಧ್ಯಕ್ಷರಾದ ರಮೇಶ್ ಕೆಳದಿಯವರು ಸ್ಥಳ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಆತ್ಮೀಯರೇ..ದಿನಾಂಕ 22/7/2026 ರಂದು ನಮ್ಮ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಳೆದ ವರ್ಷದಂತ...
13/07/2026

ಆತ್ಮೀಯರೇ..
ದಿನಾಂಕ 22/7/2026 ರಂದು ನಮ್ಮ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ರಕ್ತ ದಾನ ಶಿಬಿರವನ್ನು ಮಾಡಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದೇವೆ.

ಹಾಗಾಗಿ ಎಲ್ಲರ ಒಮ್ಮತದಂತೆ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸುವುದು ಅತ್ಯಂತ ಶ್ರೇಷ್ಠ, ಅರ್ಥಪೂರ್ಣ ಮತ್ತು ಸಮಾಜಮುಖಿ ಚಿಂತನೆಯಾಗಿದೆ ,
ತುರ್ತಾಗಿ ರಕ್ತ ಬೇಕಾದವರಿಗೆ ಜೀವದಾನ ಮಾಡುವಂತಹ ಸತ್ಕಾರ್ಯವಾಗಿದೆ.

ಇತರರ ಜೀವ ಉಳಿಸುವ ಈ ಕಾರ್ಯಕ್ರಮವು ಹುಟ್ಟು ಹಬ್ಬದ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಈ ಸಾಮಾಜಿಕ ಕಾರ್ಯಕ್ರಮದಿಂದ ನಾವು ದಾನ ಮಾಡುವ ಒಂದು ಯೂನಿಟ್ ರಕ್ತವು ತುರ್ತು ಚಿಕಿತ್ಸೆ, ಅಪಘಾತ ಅಥವಾ ಹೆರಿಗೆ ಸಮಯದಲ್ಲಿ ಮೂರು ಜೀವಗಳನ್ನು ಉಳಿಸಬಲ್ಲದು.

ನಿಯಮಿತ ರಕ್ತದಾನ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ.

ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸುವ ಈ ಸಾಮಾಜಿಕ ಕಾರ್ಯಕ್ರಮಕ್ಕೆ ತಾವೆಲ್ಲ ಬಂದು ರಕ್ತದಾನ ಮಾಡಿ ಅಂತ ವಿನಂತಿಸುತ್ತೇವೆ.🙏
#ಶಿವಮೊಗ್ಗ_ಜಿಲ್ಲಾ_ರೈತಸಂಘ

13/07/2026

"ಸರ್ಕಾರದ ಹಠಮಾರಿತನ ದೋರಣೆಗೆ ದಿಕ್ಕಾರ"

ರೈತ ಮಹಿಳೆಯರಿಂದ ಇಂದು ಪೊರಕೆ ಚಳುವಳಿ,
ಮುಂದೆ ಚಪ್ಪಲಿ ಚಳುವಳಿ?

ಸರ್ಕಾರಗಳ ಜನಪ್ರತಿನಿಧಿಗಳ ಮೊಂಡುತನ, ಹುಚ್ಚಾಟಕ್ಕೆ ನೌಕರರು ಬಲಿಯಾಗಬೇಕು ಅಷ್ಟೇ..

ರೈತರ ಕೃಷಿ ಭೂಮಿಯ ಸ್ವಾಧೀನವನ್ನು ಸರ್ಕಾರ ಬಹಳ ಉತ್ಸಾಹದಿಂದ ಮಾಡುತ್ತದೆ. ಆದರೆ ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ತಾತ್ಸಾರ ತೋರುತ್ತವೆ. ಕೆರೆ, ಕಟ್ಟೆಗಳು, ರಸ್ತೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವಲ್ಲಿ ವಿಲವಾಗಿವೆ

ಕೃಷಿ ಭೂಮಿ ಸ್ವಾಧೀನದಿಂದ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನೀರಿನ ರಕ್ಷಣೆ ಜೊತೆಗೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ .

ಇಂದಿನ ಬರಗಾಲದ ಪರಿಸ್ಥಿತಿಗೆ ಅಧಿಕ ಕೈಗಾರಿಕೀಕರಣವೇ ಕಾರಣ. ಹೀಗಾಗಿ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಯಾಗಲಿ.

ಕೃಷಿ ಇಲ್ಲದೆ ದೇಶದಲ್ಲಿ ಅರ್ಥ ವ್ಯವಸ್ಥೆಯೇ ಇರುವುದಿಲ್ಲ. ರೈತರಿಲ್ಲದೆ ದೇಶವಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಆಗ ದೇಶ ಮತ್ತು ಕೃಷಿ ಎರಡೂ ಅಭಿವೃದ್ಧಿಯಾಗುತ್ತದೆ .

ಬಿಡದಿ ರೈತರ ಹೋರಾಟಕ್ಕೆ ಜಯವಾಗಲಿ

ಜೈ ಜವಾನ್ ಜೈ ಕಿಸಾನ್
#ಬಿಡದಿ

13/07/2026

"ಸರ್ಕಾರದ ಹಠಮಾರಿತನ ದೋರಣೆಗೆ ದಿಕ್ಕಾರ"

ರೈತರ ಕೃಷಿ ಭೂಮಿಯ ಸ್ವಾಧೀನವನ್ನು ಸರ್ಕಾರ ಬಹಳ ಉತ್ಸಾಹದಿಂದ ಮಾಡುತ್ತದೆ. ಆದರೆ ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ತಾತ್ಸಾರ ತೋರುತ್ತವೆ. ಕೆರೆ, ಕಟ್ಟೆಗಳು, ರಸ್ತೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವಲ್ಲಿ ವಿಲವಾಗಿವೆ

ಕೃಷಿ ಭೂಮಿ ಸ್ವಾಧೀನದಿಂದ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನೀರಿನ ರಕ್ಷಣೆ ಜೊತೆಗೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ .

ಇಂದಿನ ಬರಗಾಲದ ಪರಿಸ್ಥಿತಿಗೆ ಅಧಿಕ ಕೈಗಾರಿಕೀಕರಣವೇ ಕಾರಣ. ಹೀಗಾಗಿ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಯಾಗಲಿ.

ಕೃಷಿ ಇಲ್ಲದೆ ದೇಶದಲ್ಲಿ ಅರ್ಥ ವ್ಯವಸ್ಥೆಯೇ ಇರುವುದಿಲ್ಲ. ರೈತರಿಲ್ಲದೆ ದೇಶವಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಆಗ ದೇಶ ಮತ್ತು ಕೃಷಿ ಎರಡೂ ಅಭಿವೃದ್ಧಿಯಾಗುತ್ತದೆ .

ಬಿಡದಿ ರೈತರ ಹೋರಾಟಕ್ಕೆ ಜಯವಾಗಲಿ

ಜೈ ಜವಾನ್ ಜೈ ಕಿಸಾನ್

ಅಗಲಿದ ಗಾನಕೋಗಿಲೆ ಜಾನಕಿ ಅಮ್ಮನವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.ದೇಶ ಕಂಡ ಶ್ರೇಷ್ಠ ಗಾಯಕಿ, ನಾದದರಸಿ ಎಸ್ ಜಾನಕ...
11/07/2026

ಅಗಲಿದ ಗಾನಕೋಗಿಲೆ ಜಾನಕಿ ಅಮ್ಮನವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.

ದೇಶ ಕಂಡ ಶ್ರೇಷ್ಠ ಗಾಯಕಿ, ನಾದದರಸಿ ಎಸ್ ಜಾನಕಿ ಅಮ್ಮನವರು ವಿಧಿವಶರಾದ ಸುದ್ದಿ ಕೇಳಿ ತುಂಬ ದುಃಖವಾಯಿತು.

ಕನ್ನಡದಲ್ಲೇ 10 ಸಾವಿರಕ್ಕಿಂತ ಹೆಚ್ಚು ಹಾಡುಗಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕಿಂತ ಹೆಚ್ಚಿನ ಗೀತೆಗಳನ್ನು ಹಾಡಿದ ಅವರ‌ ಮಧುರ ಧ್ವನಿ ಸಮಸ್ತ ಸಂಗೀತ ರಸಿಕರ ಮನಸ್ಸಲ್ಲಿ ಚಿರಾಯುವಾಗಿರಲಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಗರ ತಾಲೂಕು ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಗೌತಮಪುರ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಸ್ಥಳೀಯ...
06/07/2026

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಗರ ತಾಲೂಕು ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಗೌತಮಪುರ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಸ್ಥಳೀಯ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ತಾಲ್ಲೂಕು ಉಪಾಧ್ಯಕ್ಷರವರೆಗಿನ ನಿಮ್ಮ ಪಯಣ ಸಂಘಟನೆ ಹಾಗೂ ಜನ ಸಾಮಾನ್ಯರ ಜೊತೆಗಿನ ನಿಮ್ಮ ಒಡನಾಟಕ್ಕೆ ಒಲಿದ ಜಯವಾಗಿದೆ . ಹೀಗೆ ಜನಸಾಮಾನ್ಯರ,ರೈತರ ಆಶೋತ್ತರಗಳಿಗೆ ಸ್ಪಂದಿಸುವಂತಾಗಲಿ ಅಂತ ಆಶಿಸುತ್ತೇವೆ.

Address

Sagara
Sagar

Website

Alerts

Be the first to know and let us send you an email when ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Share

Category