25/11/2025
ನಮ್ಮ ಅಂಬಾರಗೊಪ್ಪಾ ಗ್ರಾಮದ ಅದ್ಭುತ ಕುಸ್ತಿ ಪ್ರತಿಭೆ ಗೌರಮ್ಮ ಅವರು ಇದೆ 26 ರಂದು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಪಂಜಕುಸ್ತಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದು, ದೇಶಕ್ಕೆ ಹಾಗೂ ನಾಡಿಗೆ ಗೌರವ ತರಲೆಂದು ಆಶಿಸುತ್ತೇನೆ. ಅಂಗವಿಕಲರಾದ ಅವರು ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂದು ನಿರೂಪಿಸಿದ್ದಾರೆ. ಆತ್ಮಸ್ಥೈರ್ಯ ಮತ್ತು ಗುರಿ ನಿಶ್ಚಿತವಾಗಿದ್ದರೆ ಯಶಸ್ಸು ಖಚಿತ ಎನ್ನುವುದು ಗೌರಮ್ಮ ಅವರ ಸಾಧನೆ ನಮಗೆ ತೋರಿಸುತ್ತದೆ. ಶಿಕಾರಿಪುರದಿಂದ ಥೈಲ್ಯಾಂಡ್ ವರೆಗಿನ ಅವರ ಪಯಣ ಸ್ಫೂರ್ತಿದಾಯಕ. ಗೆಲುವು ಅವರದ್ದಾಗಲಿ ಗೌರವ ದೇಶದ್ದಾಗಲಿ ಎನ್ನುತ್ತಾ ಅವರನ್ನು ಖುಷಿಯಿಂದ ಕಳಿಸಿಕೊಡೋಣ!