Inc Sirsi-Siddapura

Inc Sirsi-Siddapura Official Sirsi-Siddapura Assembly Youth Congress.

12/10/2025
11/10/2025

ಇಂದು ಬೆಂಗಳೂರು ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ನನ್ನ ಮಾತುಗಳು:

• ಬೆಂಗಳೂರು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ವಿಶ್ವದ ಹಲವು ದೇಶಗಳ ಜನರು ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವುದು ಮಾತ್ರವಲ್ಲ, ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇಂದು ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿ ಇದೆ. ಇಂತಹ ಬೃಹತ್‌ ನಗರದ ಸಮರ್ಪಕ ಆಡಳಿತ ಕೇವಲ ಒಂದು ಪಾಲಿಕೆಯಿಂದ ಸಾಧ್ಯವಿಲ್ಲ ಎಂಬ ಚರ್ಚೆ ಇತ್ತು.

• ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಹೆಚ್ಚು ಕಾರ್ಪೊರೇಶನ್‌ ರಚನೆ ಸಾಧ್ಯತೆಗಳ ಕುರಿತು ವರದಿ ನೀಡಲು ಸಮಿತಿ ರಚಿಸಿದ್ದೆ. ಸಮಿತಿ ಮಧ್ಯಂತರ ವರದಿಯನ್ನು ಸಹ ನೀಡಿತ್ತು. ಆದರೆ ನಂತರ ಬಂದ ಸರ್ಕಾರಗಳಲ್ಲಿ ಈ ಕುರಿತು ಯಾವುದೇ ತೀರ್ಮಾನ ಆಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಸಮಿತಿ ಪುನರ್ರಚಿಸಿದೆವು. ಇದೀಗ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ನಾವು ಕಾನೂನು ತಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿದ್ದೇವೆ. ಇದೀಗ ಐದು ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ.

• ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮೇ 15 ರಂದು ಜಾರಿಗೆ ಬಂತು. ಜನರಿಗೆ ಪೂರಕವಾದ, ಅವರ ಆಶೋತ್ತರಗಳನ್ನು ಈಡೇರಿಸುವ ಆಡಳಿತ ನೀಡುವ ಉದ್ದೇಶದಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಬಿಜಿಎ ರಚಿಸಿದ್ದೇವೆ. ಅಧಿಕಾರದ ವಿಕೇಂದ್ರೀಕರಣ ಇದರಿಂದ ಸಾಧ್ಯವಾಗಲಿದೆ.

• ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮುಂದಿನ ದಿನಗಳಲ್ಲಿ ಬೆಂಗಳೂರಿನ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವುದು, ಸಮರ್ಪಕ ಕಸ ವಿಲೇವಾರಿ, ಸಂಚಾರ ದಟ್ಟಣೆ ಕಡಿಮೆ ಮಾಡುವುದು, ರಸ್ತೆ, ಚರಂಡಿ ವ್ಯವಸ್ಥೆ ಚೆನ್ನಾಗಿರುವಂತೆ ಮಾಡಲಿದೆ. ಬೆಂಗಳೂರು ನಗರವನ್ನು ಚೊಕ್ಕಟವಾಗಿ ಇಡಲು, ನಗರದ ಸೌಂದರ್ಯ ಹೆಚ್ಚಿಸಲು ಮತ್ತು ಎಲ್ಲಾ ಐದು ನಗರ ಪಾಲಿಕೆಗಳ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ.

• ಈ ಎಲ್ಲಾ ಕಾರ್ಯಕ್ಕೆ ಸರ್ಕಾರದ ಜೊತೆಗೆ ಸಮನ್ವಯ ಅಗತ್ಯ. ಮುಂದಿನ ದಿನಗಳಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಗಳು, ಬೆಂಗಳೂರು ನಾಗರಿಕರಿಗೆ ಸೇವೆ ಒದಗಿಸುತ್ತಿರುವ ಬಿಡಿಎ, ಬಿಡಬ್ಲುಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಸಂಸ್ಥೆಗಳು ಜಿಬಿಎ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿವೆ.

• ಐದು ನಗರಪಾಲಿಕೆಗಳಿಗೆ ಸಮರ್ಪಕವಾದ ಆಡಳಿತ ಕಚೇರಿಗಳನ್ನು ನಿರ್ಮಿಸಲು ಸ್ಥಳವನ್ನು ಗುರುತಿಸಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಆಯಾ ಕಾರ್ಪೊರೇಶನ್‌ಗಳು ತಮ್ಮ ಹಂತದಲ್ಲಿಯೇ ಕಸ ವಿಲೇವಾರಿ ಸಮರ್ಪಕವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ.

• ಎಲ್ಲಾ ನಗರಸಭೆ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಕಸ ವಿಲೇವಾರಿ, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಫುಟ್‌ಪಾತ್‌ಗಳು ಸಾಧ್ಯವಾದಷ್ಟು ವಿಸ್ತಾರವಾಗಿರುವಂತೆ ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದೇನೆ.

• ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೊ ಲೈನ್‌ನಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯನ್ನು ಹೆಚ್ಚಿಸುವ ಕುರಿತು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಣ್ಣ ಬಸ್ಸುಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸಲು ಸಾರಿಗೆ ಸಚಿವರಿಗೆ ಸೂಚನೆ.

• ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರಿಗೆ ಅತ್ಯುತ್ತಮ ನಾಗರಿಕ ಸೌಲಭ್ಯ, ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದ್ದೇನೆ.

• ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಇಲ್ಲಿ ಅವಕಾಶವಿದೆ. ಆದರೆ ಕೆಲವು ಜನಪ್ರತಿನಿಧಿಗಳು ಈ ಅವಕಾಶ ಕಳೆದುಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ವಿರೋಧವಿರುವವರು, ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧವಿರುವವರು ಈ ಸಭೆಯನ್ನು ಬಹಿಷ್ಕರಿಸಿದ್ದಾರೆ.

11/10/2025
11/10/2025
11/10/2025
11/10/2025

ನಾಡಿನ ಸಮಸ್ತ ಹೆಣ್ಣುಮಕ್ಕಳಿಗೆ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು.
ಹೆಣ್ಣುಮಕ್ಕಳು ಎದುರಿಸುವ ಲಿಂಗ ಆಧಾರಿತ ತಾರತಮ್ಯ, ಬಾಲ್ಯವಿವಾಹ, ಶಿಕ್ಷಣದ ಕೊರತೆ, ಹಿಂಸೆ ಮತ್ತು ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದೇ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಉದ್ದೇಶವಾಗಿದೆ. ನಾಡಿನ ಎಲ್ಲಾ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾ ಪಣ ತೊಡಲಿದೆ.

ನಮಸ್ಕಾರ 🙏  ಕಳೆದ ಎರಡು ವರ್ಷದ ಹಿಂದೆ ನಾವು ನಮ್ಮ ಜನಾಂಗದವರು ಸೇರಿ ಎಲ್ಲರಂತೆ ನಾವು ಶಾಸಕರನ್ನು ಊರಿಗೆ ಕರೆಸಿ ನಮ್ಮ ಸಮಸ್ಯೆ ಬಗ್ಗೆ ಮಾಹಿತಿಯನ...
11/10/2025

ನಮಸ್ಕಾರ 🙏 ಕಳೆದ ಎರಡು ವರ್ಷದ ಹಿಂದೆ ನಾವು ನಮ್ಮ ಜನಾಂಗದವರು ಸೇರಿ ಎಲ್ಲರಂತೆ ನಾವು ಶಾಸಕರನ್ನು ಊರಿಗೆ ಕರೆಸಿ ನಮ್ಮ ಸಮಸ್ಯೆ ಬಗ್ಗೆ ಮಾಹಿತಿಯನ್ನು ನೀಡಿದ್ದೆವು ಅವಾಗ ಅವರು ನಿಮಗೆ ನಮ್ಮ ಸರಕಾರದಿಂದ ಏನು ಕೆಲಸ ಆಗಬೇಕು ಅಂತಾ ಕೇಳಿದ್ದರು ಸುಮಾರು ಕೆಲಸದ ಲಿಸ್ಟ್ ಕಳಿಸಿದ್ದು ಅದರಲ್ಲಿ ಸಾವಿರಾರು ಜನರು ತಿರುಗುವ ರಸ್ತೆ ಬಗ್ಗೆ ಅಪಾರ ಆಸಕ್ತಿಯುಳ್ಳ ಜನಪ್ರಿಯ ಶಾಸಕರು ನಮ್ಮ ಊರಿಗೆ ಸುಮಾರು 80 ಲಕ್ಷ ದಲ್ಲಿ ಕಾಂಕ್ರೆಟ್ ರಸ್ತೆ ಯನ್ನು ಶೀಘ್ರದಲ್ಲಿ ಮಂಜೂರು ಮಾಡಿಸಿ ಈಗ ರಸ್ತೆ ಕೆಲಸ ಪೂರ್ಣ ವಾಗಿದೆ ಇನ್ನು ಸ್ವಲ್ಪ ರಸ್ತೆ ಉಳಿದಿದ್ದು ಇನ್ನು ಉಳಿದ ರಸ್ತೆ ಕೆಲಸ ಕ್ಕೆ ಬೇಕಾದ ಹಣ ಮಂಜೂರು ಮಾಡುವ ವಿಶ್ವಾಸ ಕೊಟ್ಟಿದ್ದಾರೆ ಹೀಗೆ ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಸದಾ ಇರಲಿ ನಾವು ಯಾವತ್ತು ನಿಮ್ಮ ಜನಪರ ಅಭಿವೃದ್ಧಿ ಕೆಲ್ಸಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ 🤝🙏💐💐
Bhimanna Naik
Inc Sirsi-Siddapura
ಶಿರಸಿ

09/10/2025

ಭಾರತದ AI ಹಬ್ 👉 ಸಿಲಿಕಾನ್ ಸಿಟಿ ಬೆಂಗಳೂರು!

ಅಮೆರಿಕಾದ ಅಂಥ್ರಾಪಿಕ್ ಸಂಸ್ಥೆ ತನ್ನ ಮೊದಲ AI ಸಂಶೋಧನಾ ಕಚೇರಿಯನ್ನು ಬೆಂಗಳೂರುನಲ್ಲಿ ಆರಂಭಿಸಿದೆ.
ಇದರಿಂದ ಭಾರತದಲ್ಲಿನ 50% AI ಪ್ರತ್ಯೇಗಗಳು ಈಗ ಬೆಂಗಳೂರಿನಲ್ಲೇ ನೆಲೆಗೊಂಡಿವೆ.

ಈ ಯಶಸ್ಸು ಕಾಂಗ್ರೆಸ್ ಸರ್ಕಾರದ ದೃಷ್ಟಿಪೂರ್ವಕ ನೀತಿ ಮತ್ತು ತಂತ್ರಜ್ಞಾನ ಪ್ರೋತ್ಸಾಹದಿಂದ,
ಕರ್ನಾಟಕವನ್ನು ವಿಶ್ವದ AI ನವೀನತಾ ಕೇಂದ್ರದತ್ತ ಮುನ್ನಡೆಸುತ್ತಿದೆ.

ಅಭಿವೃದ್ಧಿಯ ಹರಿಕಾರರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...
09/10/2025

ಅಭಿವೃದ್ಧಿಯ ಹರಿಕಾರರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತನು ತಮಗೆ ಧೀರ್ಘಾಯುಷ್ಯ ನೀಡಲಿ ಹಾಗೂ ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಕರುಣಿಸಲಿ ಎಂದು ಶುಭ ಕೋರುತ್ತೇನೆ.
Bhimanna Naik Indian National Congress - Karnataka
@

07/10/2025

ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹಿಳಾ ಶಕ್ತಿಗೆ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮೀ, ಶಕ್ತಿಗೆ ಪಾರ್ವತಿ – ಎಲ್ಲಕ್ಕೂ ಮಿಗಿಲಾಗಿ, ಬದುಕಿಗೆ ಅರ್ಥ ನೀಡುವ ಅನನ್ಯ ಸ್ಫೂರ್ತಿ ಹೆಣ್ಣು.

ನನ್ನ ಜೀವನಕ್ಕೆ ಅರ್ಥ ತುಂಬಿದ ತಾಯಂದಿರಿಗೆ, ಸಹೋದರಿಯರಿಗೆ ಹಾಗೂ ಎಲ್ಲ ಮಹಿಳಾ ಸ್ನೇಹಿತೆಯರಿಗೆ ನಾನೆಂದೂ ಚಿರಋಣಿ.

06/10/2025

ವನ್ಯಜೀವಿ ಸಪ್ತಾಹ ಶಿರಸಿ
Bhimanna Naik
Indian National Congress - Karnataka
#ಶಿರಿಸಿ

Address

Siddapur
Siddapur
581355

Alerts

Be the first to know and let us send you an email when Inc Sirsi-Siddapura posts news and promotions. Your email address will not be used for any other purpose, and you can unsubscribe at any time.

Share