Team CMRG

Team CMRG ಶಿರಾ ಶಾಸಕರಾದ ಡಾಕ್ಟರ್ ರಾಜೇಶ್ ಗೌಡರ ಮಹಾ?

28/05/2022

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರ ಅಧ್ಯಕ್ಷತೆಯಲ್ಲಿ ಇಂದು ತಾವರೆಕೆರೆ ಗ್ರಾಮದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಮಾನ್ಯ ಶಾಸಕರಾದ Dr CM Rajesh Gowda ರವರ ಮಾರ್ಗದರ್ಶನದಲ್ಲಿ ಸರ್ಕಾರಿ ಸೇವೆಗಳು ಸಾರ್ವಜನಿಕರ ಮನೆ ಬಾಗಿಲಿಗೆ ಎಂಬ ಗುರಿಯನ್ನಿಟ್ಟು ಕ್ಷೇತ್ರ ಕ...
27/01/2022

ಮಾನ್ಯ ಶಾಸಕರಾದ Dr CM Rajesh Gowda ರವರ ಮಾರ್ಗದರ್ಶನದಲ್ಲಿ ಸರ್ಕಾರಿ ಸೇವೆಗಳು ಸಾರ್ವಜನಿಕರ ಮನೆ ಬಾಗಿಲಿಗೆ ಎಂಬ ಗುರಿಯನ್ನಿಟ್ಟು ಕ್ಷೇತ್ರ ಕ್ಷಮತೆ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಿದ ಉಚಿತ ಸೇವೆ ಸಂಚಾರಿ ಜನಸೇವಾ ಕೇಂದ್ರದ ವಾಹನದಲ್ಲಿ ಇಂದು ಚಿರತಹಳ್ಳಿ ಗ್ರಾಮದಲ್ಲಿ ಸರ್ಕಾರಿ ಸೇವೆಗಳನ್ನು ಮಾಡಿರುವಂಥ ವಿವರ.

1) 250 ಕ್ಕಿಂತ ಹೆಚ್ಚು ಆಯುಷ್ಮನ್ ಭಾರತ್ ಕಾರ್ಡ್ ಗಳನ್ನು ಮಾಡಲಾಗಿದೆ.
2) 60 ಕ್ಕಿಂತ ಹೆಚ್ಚು ಈ ಶ್ರಮ ಕಾರ್ಡ್ ಗಳನ್ನು ಮಾಡಲಾಗಿದೆ.
3) 10 ಸದಸ್ಯರಿಗೆ ಪಡಿತರ ಚೀಟಿಗೆ ಹೊಸ ಹೆಸರು ಸೇರ್ಪಡೆಗೆ ಅರ್ಜಿ ಹಾಕಲಾಯಿತು.
4) 2 ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಲಾಯಿತು.

18/01/2022

ಕಳ್ಳಂಬೆಳ್ಳ ಕೆರೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರಾದ Dr CM Rajesh Gowda

ಶಿರಾ ತಾಲೂಕಿನ ಪ್ರಸಿದ್ಧ ಕಳ್ಳಂಬೆಳ್ಳ ಕೆರೆ ಏರಿ ಪಕ್ಕದಲ್ಲಿ ಮಂಗೆ ಬಿದ್ದಿದೆ ಎಂಬ ರೈತರ ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ಗೌಡ ರವರು ಮಂಗೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಏರಿ ದುರಸ್ತಿ ಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

12/01/2022
ನಾಡಿನ ಸಮಸ್ತ ಜನತೆಗೆ ಗೌರಿ ಹಾಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
09/09/2021

ನಾಡಿನ ಸಮಸ್ತ ಜನತೆಗೆ ಗೌರಿ ಹಾಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.

06/09/2021

ರೈತನ ಆದಾಯ ವೃದ್ದಿಸುವಲ್ಲಿ‌ ಪಶು ವೈದ್ಯರ ಪಾತ್ರ ಅಪಾರ.

ನಾವು ಮನುಷ್ಯರ ವೈದ್ಯರು ನಮ್ಮ ರೋಗಿಗಳಿಗೆ ನಿಮ್ಮ ಸಮಸ್ಯೆ ಏನು ಅಂತ ಕೇಳಿ ಚಿಕಿತ್ಸೆ ನೀಡಬಹುದು, ಆದರೆ ಮೂಕ ಪ್ರಾಣಿಯ ವೇದನೆ ಅರ್ಥ ಮಾಡಿಕೊಂಡು ಪಶುವೈದ್ಯರು ಚಿಕಿತ್ಸೆ ನೀಡಬೇಕು, ಆ ವಿಷೇಶ ಶಕ್ತಿ ಈ ಪಶುವೈದ್ಯರಿಗೆ ಆ ದೇವರು ಕೊಟ್ಟಿದ್ದಾನೆ.

ಇನ್ನೂ ನಮ್ಮ ಶಿರಾದ ಪಶುವೈದ್ಯ ರ ಸೇವೆ ಅಪಾರ, ತುಮಕೂರು ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕು ಹೊರತುಪಡಿಸಿದರೆ ಅತಿ ಹೆಚ್ಚು ಅಂದರೆ 25 ಜನ ನುರಿತ ಪಶುವೈದ್ಯರು ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಅದರಲ್ಲಿ 10 ಜನ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ರಾಜ್ಯದಲ್ಲಿಯೇ ಉತ್ತಮ ಸೇವೆಯನ್ನು ನಮ್ಮ ತಾಲೋಕಿನ ಹೈನುಗಾರರಿಗೆ ನೀಡುತ್ತಿದ್ದಾರೆ, ಇದು ನಮ್ಮ ತಾಲೂಕಿನ ಹೆಮ್ಮೆ.

ಕೋವಿಡ್ ಸಂದರ್ಭದಲ್ಲಿ ಕೂಡ ಇವರ ಮೂಕಪ್ರಾಣಿಗಳ ಸೇವೆ ನಿರಂತರವಾಗಿ ಸಾಗಿತ್ತು,
ಹಾಗಾಗಿ ನಾನು ನನ್ನ ಎಲ್ಲಾ ಪಶುವೈದ್ಯರಿಗು ಮತ್ತು ಪಶು ಪರೀಕ್ಷಕರಿಗು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.

06/09/2021

ಶಿರಾದ ಶ್ರೀ ಮಧವ ವಿದ್ಯಾ ಮಂದಿರಕ್ಕೆ ಕ್ಷೇತ್ರ ಕ್ಷಮತೆ ಅಭಿಯಾನದ ಕುಂಚ.

ಶ್ರೀ ಮಾಧವ ವಿದ್ಯಾ ಮಂದಿರದ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಸಕ ಡಾ: ಸಿಎಂ ರಾಜೇಶ್ ಗೌಡರ ಕ್ಷೇತ್ರ ಕ್ಷಮತೆ ಅಭಿಯಾನ ತಂಡ ಶಾಲೆಗೆ ಭೇಟಿ ನೀಡಿತ್ತು, ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ತಮ್ಮ ಶಾಲೆಯನ್ನು ವರ್ಣಮಯಗೊಳಿಸಲು ಮನವಿ ನೀಡಿತು, ತಂಡವು ಸ್ಥಳದಲ್ಲಿಯೇ ಶಾಸಕರ ಜೊತೆಗೆ ಮಾತಾನಾಡಿ ಸದ್ಯದಲ್ಲಿಯೇ ವರ್ಣಮಯಗೊಳಿಸುವ ಕಾರ್ಯ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿತು‌.

Address

Jyothi Nagar Sira
Sira

Telephone

6366077059

Website

Alerts

Be the first to know and let us send you an email when Team CMRG posts news and promotions. Your email address will not be used for any other purpose, and you can unsubscribe at any time.

Share

Category