13/05/2023
ಇಲ್ನೋಡಿ
ಅದ್ಯಾಕೆ ಚಿಂತೆ, ಬೇಸರ, ಕೋಪ.
ರಾಜ್ಯದ ಜನರು ಸರಿಯಾದ ತೀರ್ಮಾನ ಮಾಡಿದ್ದಾರೆ ಹೌದು ಕಾಂಗ್ರೆಸ್ ಗೆದ್ದದ್ದು ಚಲೋ ಆಯಿತು ಅನ್ಕೊಳ್ಳಿ.
ಅದು ಬಿಟ್ಟು ಹಿಂದೂಗಳಿಗೆ ಕಷ್ಟ ಆಗುತ್ತದೆ, ಕೊಲೆ ಮಾಡ್ತಾರೆ, ಬದುಕೋಕೆ ಬಿಡಲ್ಲ ಕೇಸ್ ಆಗ್ತಾರೆ, ಅದು ಇದು ಅಂತ ಮಾತಾನಾಡೋದು ಏಕೆ. ಯಾವನು ಏನು ಮಾಡೋಕೆ ಆಗುವುದಿಲ್ಲ.
ಎಷ್ಟೋ ವರ್ಷ ಹಿಂದೂಸ್ಥಾನವನ್ನು ಆಳಿದ ಮೊಘಲರೆ ಏನು ಮಾಡುವುದಕ್ಕೆ ಆಗಲಿಲ್ಲ, ಯಾವುದೋ ಒಂದು ಪಕ್ಷ ಹಿಂದೂಗಳನ್ನು ಏನೋ ಮಾಡಿ ಬಿಡುತ್ತದೆ ಎನ್ನುವ ಭಯ ಏಕೆ.?
ಅಧಿಕಾರ ಕೊಟ್ಟರು ಸರಿಯಾಗಿ ಬಳಸಿಕೊಳ್ಳದಂತೆ ಇರುವ ಬಿಜೆಪಿ ಭಯ ಪಡಲಿ ಅವರು ರೋಡ್ ಗೆ ಬರಲಿ.
ಈ ಬಿಜೆಪಿ ಅವರ ದುರಂಕಾರ ಸ್ಪಲ್ಪ ಕಡಿಮೆ ಆಗಬೇಕು, ಅಧಿಕಾರದಲ್ಲಿದಾಗ ಏನು ಮಾಡಿದ್ದಾರೆ.? ಅಷ್ಟು ಮಾಡಿದ್ದಾರೆ.?
ಕೆಜಿ ಹಳ್ಳಿ ಡಿಜೆ ಹಳ್ಳಿಯ ವಿಷಯದಲ್ಲಿ ಅಪರಾಧಗಳಿಗೆ ಆದ ಶಿಕ್ಷೆ ಏನು? ಕಠಿಣಕ್ರಮ ನಾ..?
ಪಾದರಾಯನ ಪುರದಲ್ಲಿ ಆದ ಗಲಿಭೆಗೆ ಶಿಕ್ಷೆ ಏನು ಕಠಿಣ ಕ್ರಮ ನಾ.?
ಗೋ ರಕ್ಷಕರನ್ನು ನೋಡಿಕೊಂಡ ರೀತಿ.?
ಹಿಂದೂ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ.? ಶಿವಮೊಗ್ಗದಲ್ಲಿ
ಕೊಲೆ ಮಾಡಿದ ಕೊಲೆಗಾರರನ್ನು ಜೈಲಿನಲ್ಲಿ ಐಶಾರಾಮಿ ಜೀವನ ಮಾಡಲು ಬಿಟ್ಟಿದ್ದರು, ಅದನ್ನು ಪ್ರಶ್ನಿಸಿದ ಹರ್ಷನ ಅಕ್ಕನಿಗೆ ಗೃಹ ಸಚಿವ ಆಡಿದ ಮಾತುಗಳು ಏನು..?
ಮೈಸೂರಿನ ಬೆಟ್ಟದಲ್ಲಿ ಆತ್ಯಾಚಾರ ಆಗಿದ್ದಾಗ ದಾವಣಗೆರೆ MP ಸಿದ್ದೇಶ್ ಅವರು ಕೊಟ್ಟ ಉತ್ತರ ಏನು.?
ಈ R ಅಶೋಕ್ ಪ್ರಮೋದ್ ಮೋತಾಲಿಕ್ ಯಾರು ನನಗೆ ಗೊತ್ತಿಲ್ಲ ಅಂದಿದ್ದು.?
ಕಾರ್ಯಕರ್ತರ ಮೇಲಾದ ಕೇಸ್ ತೆಗೆದು ಹಾಕುತ್ತೇವೆ ಅಂದಿದ್ದು..?
ಇವರ ಅಧಿಕಾರದಲ್ಲಿ ಇದ್ದಾಗಲೇ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಕಡೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆಗಿದೆ. ಎಷ್ಟೋ ಕಡೆ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ಇದಕ್ಕೆ ಏನು ಶಿಕ್ಷೆ ಕೊಡ್ಟಿದ್ದಾರೆ ಹೇಳಿ..? ಈ ರೀತಿ
ಹೇಳುತ್ತಾ ಹೋದರೆ ಸಾವಿರ ಉದಾಹರಣೆಗೆ ಇದೆ.
ಅಭಿವೃದ್ಧಿ ಜೊತೆಗೆ ಜನರ ಸಂಪರ್ಕ ಮಾಡಿಲ್ಲ ಏಕೆ..? ಯೋಜನೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ ಏಕೆ.?
ಎಲ್ಲಾದಕ್ಕೂ ಮೋದಿ ಮೋದಿ ಅಂದ್ರೆ, ಮೋದಿ ಮೇಲೆ ನಮಗೂ ಗೌರವ ಇದೆ ಗುರು, ಆದರೆ ನಿಮ್ಮ ಕೊಡುಗೆ ಏನು..? ಹೇಳಿ
ಇವರಿಗೆ ಸರಿಯಾದ ಪಾಠ ಕಲಿಸಿದ್ದಾರೆ ನಾಡಿನ ಜನ.
ಯಾವಾಗಲೂ ಕಠಿಣ, ಕ್ರಮ ಕಠಿಣ, ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಹೇಳಿಕೆ ಅಷ್ಟೇ ನಿಮ್ಮದು.
ಎಲ್ಲಾದಕ್ಕೂ ಮೋದಿ ಎಲ್ಲಾದಕ್ಕೂ ಯಾಕ್ರೋ ನಿಮಗೆ ತಕ್ಕತ್ತು ಧಮ್ ಇಲ್ವಾ.?
ಭವಿಷ್ಯದ ಕನಸು ಅಭಿವೃದ್ಧಿ ಜನಸೇವೆ ಯಾವುದು ಮಾಡುವುದಕ್ಕೆ ಬರುವುದಿಲ್ಲವೇ..?
ಬಿಜೆಪಿಯಲ್ಲಿ ಅಷ್ಟೇ ಹಿಂದೂಗಳು ಇಲ್ಲ. ಅವರು ನಮ್ಮನ್ನು ಕೆಲಸಕ್ಕೂ ಇಟ್ಟುಕೊಂಡಿಲ್ಲ. ಎಲ್ಲಾ ಪಕ್ಷದಲ್ಲೂ ಹಿಂದೂತ್ವವಾದಿಗಳು ದೇಶಪ್ರೇಮಿಗಳು ಇದ್ದಾರೆ. ನಾವೇ ನಮ್ಮಿಂದಲೇ ಎನ್ನುವ ಬಿಜೆಪಿಗೆ ಇನ್ನಾದರು ಬುದ್ದಿ ಬರಲಿ.
ಅಭಿವೃದ್ಧಿ ಮಾಡಿ, ಕೆಲಸ ಮಾಡಿ ಜನರೇ ಗೆಲ್ಲಿಸುತ್ತಾರೆ. ಹಿಂದೂಕಾರ್ಯಕರ್ತರೆ ಯಾವ ಕಾರಣಕ್ಕೂ ಭಯ ಬೇಡ, ಎಚ್ಚರಿಕೆಯಿಂದ ಸೇವೆ ಮಾಡಿ ಅಷ್ಟೇ.
ಜೈ ಶ್ರೀ ರಾಮ್
ಧರ್ಮ ಸೋತಿಲ್ಲ, ಸೋಲುವುದು ಇಲ್ಲ
team yuva sankalpa