SIO Sirsi

SIO Sirsi Contact information, map and directions, contact form, opening hours, services, ratings, photos, videos and announcements from SIO Sirsi, Social service, Sirsi.

Students Islamic Organisation of India (SIO) is an ideological organization working in the country since its inception on 19th October 1982 for the social progress and development of the students’ fraternity.

25/02/2024

ವಿಷಯ - ಉತ್ತಮ ಸಂತಾನ ಪ್ರವಾದಿವರ್ಯರು(ಸ) ಹೇಳಿದರು
*"ಮನುಷ್ಯನು ಸಾಯುವಾಗ ಅವನ ಕರ್ಮಗಳ ಅವಧಿ ಮುಗಿದು ಬಿಡುತ್ತದೆ. ಆದರೆ ಮೂರು ವಿಧದ ಕರ್ಮಗಳ ಪುಣ್ಯ ಆತನ ಮರಣಾನಂತರವೂ ಆತನಿಗೆ ಸಿಗುತ್ತಲೇ ಇರುತ್ತದೆ. ಮೊದಲನೆಯದು ಅವನು ಮಾಡಿದ ಶಾಶ್ವತ ಸ್ವರೂಪದ ದಾನ, ಎರಡನೆಯದು ಅವನು ಜನರಿಗೆ ಬಿಟ್ಟು ಹೋದ ಉಪಯುಕ್ತವಾದ ವಿದ್ಯೆ, ಮೂರನೆಯದು ಅವನ ತರಬೇತಿಯ ಪರಿಣಾಮವಾಗಿ ಸಜ್ಜನರಾಗಿ ಬೆಳೆದು ತಮ್ಮ ಹೆತ್ತವರಿಗಾಗಿ ಪ್ರಾರ್ಥಿಸುವ ಮಕ್ಕಳು."*

06/06/2022
*💦KSEEB ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆಯಾದ ಬಹುಆಯ್ಕೆ ಪ್ರಶ್ನೆ ಆಧಾರಿತ ಪ್ರಶ್ನೆಪತ್ರಿಕೆ & ಮಾದರಿ OMR ...
13/06/2021

*💦KSEEB ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆಯಾದ ಬಹುಆಯ್ಕೆ ಪ್ರಶ್ನೆ ಆಧಾರಿತ ಪ್ರಶ್ನೆಪತ್ರಿಕೆ & ಮಾದರಿ OMR ಶೀಟ್ ಡೌನ್‌ಲೋಡ್ ಮಾಡಲು 👇🏿ಈ ಲಿಂಕ್ ಬಳಸಿ*
*http://bit.ly/kseebmodelpapers*

###xx

05/04/2021

🟠🔻🔺🔻🔺🔻🔺🔻🔺🔻🔺🔻🔺🟠
*_ತಪ್ಪು ಕಲ್ಪನೆಗಳು..._*
_ಶಾಂತಿ ಪ್ರಕಾಶನ ಮಂಗಳೂರು_
✍🏻 *ಇಬ್ರಾಹೀಮ್ ಸಈದ್*
👉🏻 *_ಸಂಚಿಕೆ - 3_*
*~~~~~~~~~~~~~~~~~~~~~~~~~~~~~~~*
*ಅಧ್ಯಾಯ - ೦೧*
*_ಏಕದೇವ ವಿಶ್ವಾಸ_*
*ಅಕ್ಷಮ್ಯ ಅಪರಾಧ*
ಜನರು ತಾವಾಗಿ ಎಷ್ಟು ಮಂದಿ ದೇವರುಗಳನ್ನು ಸೃಷ್ಟಿಸಿಕೊಂಡಿದ್ದರೂ ವಾಸ್ತವದಲ್ಲಿ ದೇವತ್ವವು ಸಂಪೂರ್ಣವಾಗಿ ಏಕೈಕನೂ ಅಮರನೂ ಆದ ಅಲ್ಲಾಹನಿಗೆ ಮಾತ್ರ ಸೇರಿದೆ. ಈ ಅಗಾಧ ವಿಶ್ವದ ಸೃಷ್ಟಿ, ನಿಯಂತ್ರಣ, ಪರಿಪಾಲನೆಯ ಕಾರ್ಯಗಳನ್ನು ಯಾರ ನೆರವೂ, ಸಹಭಾಗಿತ್ವವೂ ಇಲ್ಲದೆ ಆತನೇ ಮಾಡುತ್ತಿರುವನು. ವಿಶ್ವದ ನೈಜ ಒಡೆತನ ಮತ್ತು ಅಧಿಪತ್ಯವು ಅವನಿಗೇ ಸೇರಿದೆ. ಅವನ ವ್ಯಕ್ತಿತ್ವದಲ್ಲಾಗಲೀ, ಗುಣ ವಿಶೇಷಗಳಲ್ಲಾಗಲೀ, ಅಧಿಕಾರಗಳಲ್ಲಾಗಲೀ, ಹಕ್ಕುಗಳಲ್ಲಾಗಲೀ ಯಾರೂ ಪಾಲುದಾರರಿಲ್ಲ. ಈ ವಿಶ್ವಾಸವು ಇಸ್ಲಾಮಿನ ಜೀವಾಳವಾಗಿದೆ. ಆದುದರಿಂದಲೇ ಪವಿತ್ರ ಕುರ್ಆನ್ ಬಹುದೇವಾರಾಧನೆ ಮುಂತಾದ ಏಕದೇವ ವಿಶ್ವಾಸಕ್ಕೆ ವಿರುದ್ಧವಾದ ಎಲ್ಲ ರೀತಿಯ ವಿಚಾರ ಆಚಾರಗಳನ್ನು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ:
*_ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿ ದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು._*
*{ಕುರ್ಆನ್-ಅಧ್ಯಾಯ:4/ಸೂಕ್ತ:48}*
ಇನ್ನೊಂದೆಡೆ ಪವಿತ್ರ ಕುರ್ಆನ್ ಬಹುದೇವತ್ವವನ್ನು ಅತಿದೊಡ್ಡ ಅನ್ಯಾಯವೆಂದು ಸಾರಿದೆ:
*_"ಖಂಡಿತವಾಗಿಯೂ 'ಬಹುದೇವವಿಶ್ವಾಸ' (ಬಹುದೇವಾರಾಧನೆಯು)ಮಹಾ ಅಕ್ರಮವಾಗಿದೆ"_*
*{ಕುರ್ಆನ್-ಅಧ್ಯಾಯ:3/ಸೂಕ್ತ:13}*
ಮತ್ತೊಂದೆಡೆ ಪವಿತ್ರ ಕುರ್ಆನ್ ಬಹುದೇವ ವಿಶ್ವಾಸವು ಮನುಷ್ಯನನ್ನು ಪರಲೋಕದಲ್ಲಿ ಸ್ವರ್ಗಕ್ಕೆ ಅನರ್ಹಗೊಳಿಸಿ ಶಾಶ್ವತ ನರಕ ಯಾತನೆಗೆ ಗುರಿಪಡಿಸುವುದೆಂದು ಸಾರಿದೆ:
*_ಅಲ್ಲಾಹನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳನ್ನಾಗಿ ಮಾಡಿದವನಿಗೆ ಅಲ್ಲಾಹನು ಸ್ವರ್ಗವನ್ನು 'ನಿಷಿದ್ಧ'ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವು 'ನರಕ' ಆಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ._*
*{ಕುರ್ಆನ್-ಅಧ್ಯಾಯ:5/ಸೂಕ್ತ:72}*
_ಈ ವಿವರಣೆಗಳಿಂದ ಒಬ್ಬ ಸಾಮಾನ್ಯ ವಾಚಕನಿಗೂ ಏಕದೇವ ವಿಶ್ವಾಸದ ಮಹತ್ವ ಮತ್ತು ಬಹುದೇವವಿಶ್ವಾಸದ ದುಷ್ಪರಿಣಾಮ ತಿಳಿಯದಿರಲಾರದು. ಮಾತ್ರವಲ್ಲ ಮುಸ್ಲಿಮರು ತಮ್ಮ ಈ ಏಕದೇವವಿಶ್ವಾಸದ ಬಗ್ಗೆ ಏಕೆ ಇಷ್ಟು ಭಾವುಕರಾಗಿದ್ದಾರೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ಅಲ್ಲಾಹನ ಹೊರತು ಯಾರನ್ನೇ ಆಗಲಿ ಪೂಜಿಸುವುದು, ಪೂಜ್ಯನೆಂದು ಪರಿಗಣಿಸುವುದು, ಪ್ರಾರ್ಥನೆಗಳನ್ನು ಸಲ್ಲಿಸುವುದು, ಇತರ ವ್ಯಕ್ತಿಗಳ, ಶಕ್ತಿಗಳ ಅಥವಾ ವಸ್ತುಗಳ ಮುಂದೆ ಕೈ ಕಟ್ಟಿ ನಿಲ್ಲುವುದು, ಶಿರಬಾಗುವುದು, ಸಾಷ್ಟಾಂಗವೆರಗುವುದು, ಅವರಿಗೆ ಹರಕೆ ಹೊರುವುದು, ಅವರನ್ನು ಆಪತ್ಕಾಲದಲ್ಲಿ ಕರೆದು ಪ್ರಾರ್ಥಿಸುವುದು ಇತ್ಯಾದಿಗಳೆಲ್ಲವೂ ಮುಸ್ಲಿಮರ ಮಟ್ಟಿಗೆ ಅಕ್ಷಮ್ಯ ಅಪರಾಧಗಳು. ಈ ದೇವೇತರರು ದೇವಚರರೋ, ದೇವದೂತರೋ ಅಥವಾ ಮಹಾತ್ಮರೋ ಎಂಬುದು ನಗಣ್ಯ._
_ಹೆತ್ತ ತಾಯಿಯಾಗಲೀ, ಹುಟ್ಟಿಗೆ ಕಾರಣನಾದ ತಂದೆಯಾಗಲೀ, ವಿದ್ಯೆ ಕಲಿಸಿದ ಗುರುಗಳಾಗಲೀ, ಮಾರ್ಗದರ್ಶನ ಮಾಡುವ ನಾಯಕರಾಗಲೀ ಇವರೆಲ್ಲ ಗೌರವಾರ್ಹರೇ. ಆದರೆ ಅವರಾರೂ ಮನುಷ್ಯನ ಪಾಲಿಗೆ ದೇವರೋ ದೇವಸಮಾನರೋ ಖಂಡಿತ ಅಲ್ಲ. ಅಂತೆಯೇ ಮಾತೃಭೂಮಿ ಪ್ರೀತ್ಯರ್ಹವೇ ಹೊರತು ಪೂಜನೀಯವಲ್ಲ. ಈ ವಿಷಯದಲ್ಲಿ ಮುಸ್ಲಿಮರು ಯಾರ ಒತ್ತಡಕ್ಕೂ ಮಣಿಯಬಾರದು ಮತ್ತು ಯಾರಿಗಾಗಿಯೂ ದೇವೇತರ ಶಕ್ತಿ, ವ್ಯಕ್ತಿ ಅಥವಾ ವಸ್ತುಗಳನ್ನು ಪೂಜಿಸಬಾರದೆಂದು ಪವಿತ್ರ ಕುರ್ಆನ್ ಆಜ್ಞಾಪಿಸಿದೆ. ಆದುದರಿಂದಲೇ ಮುಸ್ಲಿಮರು ಇಂತಹ ವಿಷಯಗಳಲ್ಲಿ ಯಾವುದೇ ಹೊಂದಾಣಿಕೆಗೆ ಸಿದ್ಧರಾಗುವುದಿಲ್ಲ._
*~~~~~~~~~~~~~~~~~~~~~~~~~~~~~~*
*ಮುಂದುವರಿಯುವುದು...*
🟠🔻🔺🔻🔺🔻🔺🔻🔺🔻🔺🔻🔺🟠

03/04/2021

🟠🔻🔺🔻🔺🔻🔺🔻🔺🔻🔺🔻🔺🟠
*_ತಪ್ಪು ಕಲ್ಪನೆಗಳು..._*
_ಶಾಂತಿ ಪ್ರಕಾಶನ ಮಂಗಳೂರು_
✍🏻 *ಇಬ್ರಾಹೀಮ್ ಸಈದ್*
👉🏻 *_ಸಂಚಿಕೆ - 2_*
*~~~~~~~~~~~~~~~~~~~~~~~~~~~~~~~*
*ಅಧ್ಯಾಯ - ೦೧*
*_ಏಕದೇವ ವಿಶ್ವಾಸ_*
*ಮೂಲವಚನ*
_ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ರಸೂಲುಲ್ಲಾಹ್_ ಅರ್ಥಾತ್ "ಅಲ್ಲಾಹನ ಹೊರತು ದಾಸ್ಯ ಮತ್ತು ಆರಾಧನೆಗೆ ಅರ್ಹನಾದವನು ಯಾರು ಇಲ್ಲ. ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ" ಎಂಬುದು ಇಸ್ಲಾಮಿನ ಮೂಲ ವಚನ. ಈ ಪವಿತ್ರ ವಚನವೇ ಪವಿತ್ರ ಕುರ್ಆನಿನ ಶಿಕ್ಷಣಗಳ ತಿರುಳು. ಮನುಷ್ಯನ ಎಲ್ಲ ರೀತಿಯ ಆರಾಧನೆ, ದಾಸ್ಯ ಮತ್ತು ಅನುಸರಣೆಗೆ ಅರ್ಹನಾದವನು ಅಲ್ಲಾಹನು ಮಾತ್ರ. ಆತನ ದೇವತ್ವದಲ್ಲಿ ಯಾರೂ ಭಾಗಿದಾರರಿಲ್ಲ ಅವನು ಏಕೈಕನು, ಚಿರಂತನನು, ನಿರಾಕಾರನು, ಸ್ವಯಂ ಜೀವಂತನು, ಅನಾದಿ, ಅನಂತನು, ಎಲ್ಲ ಅತ್ಯುತ್ತಮ ಗುಣಗಳೂ ಅತ್ಯುನ್ನತ ಮಟ್ಟದಲ್ಲಿ ಆತನಲ್ಲಿ ಸಮ್ಮಿಳಿತವಾಗಿದೆ. ಆತನು ಸರ್ವ ಸದ್ಗುಣ ಸಂಪನ್ನನು. ಎಲ್ಲ ಕೊರತೆ-ನ್ಯೂನತೆಗಳಿಂದ ಮತ್ತು ಮನುಷ್ಯನಿಗೆ ಊಹಿಸಲು ಸಾಧ್ಯವಾಗುವ ಯಾವುದೇ--- ರೀತಿಯ ದೌರ್ಬಲ್ಯಗಳಿಂದ ಅವನು ಸಂಪೂರ್ಣ ಮುಕ್ತನಾಗಿರುವನು.
ಪವಿತ್ರ ಕುರ್ಆನಿನ ಪ್ರತಿಯೊಂದು ಪುಟದಲ್ಲೂ ಮೇಲೆ ಪ್ರಸ್ತಾಪಿಸಿದ ಏಕದೇವ ಕಲ್ಪನೆಯ ವಿವರಣೆಗಳು ಬೇರೆಬೇರೆ ರೀತಿಯಲ್ಲಿ ಬಂದಿವೆ. ಆ ಪೈಕಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇವೆ.
*_"ಹೇಳಿರಿ- ಅವನು ಅಲ್ಲಾಹನು, ಏಕೈಕನು. ಅಲ್ಲಾಹನು ನಿರಪೇಕ್ಷನು. ಅವನಿಗಾರೂ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಯಾರೂ ಸರಿಸಮಾನರಿಲ್ಲ._*
*{ಕುರ್ಆನ್-ಅಧ್ಯಾಯ:112}*
ಈ ಅಧ್ಯಾಯದಲ್ಲಿ ದೇವನಿಗೆ ಸಹಭಾಗಿಗಳಿರುವವರು, ಪುತ್ರ-ಪುತ್ರಿಯರಿರುವರು ಹಾಗೂ ಅವನಿಗೆ ಮಡದಿ ಮಕ್ಕಳಿರುವರು ಎಂಬ ಕಲ್ಪನೆಗಳನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ.
ಇನ್ನೊಂದು ಕಡೆ ಪವಿತ್ರ ಕುರ್ಆನಿನಲ್ಲಿ ಏಕದೇವ ಕಲ್ಪನೆಯನ್ನು ಈ ರೀತಿ ಸ್ಪಷ್ಟಪಡಿಸಲಾಗಿದೆ:
*"ಅಲ್ಲಾಹ್ ಚಿರಂತನು, ಸ್ವಯಂಜೀವಂತನು. ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವಶ್ರೇಷ್ಠನೂ ಆಗಿರುತ್ತಾನೆ."*
*{ಕುರ್ಆನ್-ಅಧ್ಯಾಯ:2/ಸೂಕ್ತ:255}*
*~~~~~~~~~~~~~~~~~~~~~~~~~~~~~~*
*ಮುಂದುವರಿಯುವುದು...*
🟠🔻🔺🔻🔺🔻🔺🔻🔺🔻🔺🔻🔺🟠

21/03/2021

🟠🔻🔺🔻🔺🔻🔺🔻🔺🔻🔺🔻🔺🟠
*_ತಪ್ಪು ಕಲ್ಪನೆಗಳು..._*
_ಶಾಂತಿ ಪ್ರಕಾಶನ ಮಂಗಳೂರು_
✍🏻 *ಇಬ್ರಾಹೀಮ್ ಸಈದ್*
👉🏻 *_ಸಂಚಿಕೆ - 1_*
*~~~~~~~~~~~~~~~~~~~~~~~~~~~~~~~*
*ಅಧ್ಯಾಯ - ೦೧*
*_ಏಕದೇವ ವಿಶ್ವಾಸ_*
ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮೂಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧವು ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ.
ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ. ಅವನೇ ಸಮಸ್ತ ವಿಶ್ವವನ್ನೂ ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಅಧಿಪತ್ಯವು ಅವನಿಗೇ ಸೇರಿದೆ. ಆ ಏಕ ದೇವನನ್ನೇ ಪವಿತ್ರ ಕುರ್'ಆನಿನಲ್ಲಿ *ಅಲ್ಲಾಹ್* ಎಂದು ಕರೆಯಲಾಗಿದೆ. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಪರಿಪಾಲಕನೂ ಒಡೆಯನೂ ಅಧಿಪತಿಯೂ ಅಲ್ಲಾಹನೇ ಆಗಿರುವಾಗ ಮನುಷ್ಯನ ಆರಾಧನೆ, ದಾಸ್ಯ ಮತ್ತು ಅನುಸರಣೆಗಳೂ ಆತನಿಗೆ ಸಲ್ಲಬೇಕೆಂಬುದು ಬುದ್ಧಿಯ ಬೇಡಿಕೆಯಾಗಿದೆ.
*_ಅಲ್ಲಾಹ್ : ಮುಸ್ಲಿಮರ ದೇವರು?_*
ನಿಜವಾಗಿ *ಅಲ್ಲಾಹ್* ಕೇವಲ ಮುಸ್ಲಿಮರ ದೇವರಲ್ಲ. *ಶ್ರೀರಾಮ, ಶ್ರೀಕೃಷ್ಣರು* ಹಿಂದುಗಳ ದೇವರಾಗಿರುವಂತೆ, ಯೇಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ, *ಅಲ್ಲಾಹ್* ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್'ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ:
*"ಸರ್ವ ಸ್ತುತಿಯೂ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು"*
*{ಕುರ್'ಆನ್: ಅಧ್ಯಾಯ:1/ಸೂಕ್ತ:1}*
ಪವಿತ್ರ ಕುರ್ಆನಿನ ಕೊನೆಯ ಅಧ್ಯಾಯದಲ್ಲಿ ಅಲ್ಲಾಹನನ್ನು ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ:
*_ಹೇಳಿರಿ- ನಾನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ, ಮತ್ತು ಮನುಷ್ಯರ ಆರಾಧ್ಯನ ಅಭಯ ಯಾಚಿಸುತ್ತೇನೆ_*
*{ಕುರ್'ಆನ್: ಅಧ್ಯಾಯ:114/ಸೂಕ್ತ:1,2,3}*
ಪವಿತ್ರ ಕುರ್ಆನಿನ ಒಂದೇ ಬಂದು ಸೂಕ್ತದಲ್ಲಾಗಲೀ, ಪ್ರವಾದಿ ಮುಹಮ್ಮದ್'ರ(ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು "ಮುಸ್ಲಿಮರ ದೇವರು* ಎಂದು ಪ್ರಸ್ತಾಪಿಸಿಲ್ಲ. ಪವಿತ್ರ ಕುರ್'ಆನ್'ನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣ ನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ-ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಘಂಟಾಘೋಷವಾಗಿ ಸಾರುತ್ತದೆ.
*~~~~~~~~~~~~~~~~~~~~~~~~~~~~~~~*
*ಮುಂದುವರಿಯುವುದು...*
🟠🔻🔺🔻🔺🔻🔺🔻🔺🔻🔺🔻🔺🟠

20/03/2021

*_ತಪ್ಪು ಕಲ್ಪನೆಗಳು..._*
*_ಶಾಂತಿ ಪ್ರಕಾಶನ ಮಂಗಳೂರು_*
ಲೇಖಕರು:- *ಇಬ್ರಾಹೀಮ್ ಸಈದ್*
*~~~~~~~~~~~~~~~~~~~~~~~~~~~~~~~*
ಇಸ್ಲಾಮಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ವ್ಯಾಪಕವಾಗಿವೆ.
*ಜಿಹಾದ್, ಕಾಫಿರ್, ಬಹುಪತ್ನಿತ್ವ, ಪರ್ದಾ, ತಲಾಖ್, ಇಸ್ಲಾಮಿನ ಶಿಕ್ಷಾಪದ್ಧತಿ, ಇಸ್ಲಾಮಿನಲ್ಲಿ ಸ್ತ್ರೀಯ ಸ್ಥಾನಮಾನ.....*
ಇತ್ಯಾದಿ ವಿಷಯಗಳ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನೀಗಿಸುವುದೇ 👉🏻 *_ತಪ್ಪು ಕಲ್ಪನೆಗಳು..._* 👈🏻 ಈ ಗ್ರಂಥದ ಉದ್ದೇಶ.
ಇಂದಿನ ವೈಷಮ್ಯ ಪೂರ್ಣ ಕೋಮು ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಈ ಪುಸ್ತಕದ ಅಧ್ಯಯನವು ಸಹಕಾರಿಯಾಗಬಲ್ಲುದು.
*~~~~~~~~~~~~~~~~~~~~~~~~~~~~~~~*
ಓದುಗರೇ,
ನಿರೀಕ್ಷಿಸಿರಿ...

16/10/2020

He created the heavens without pillars that you see. ( Quran)

Address

Sirsi
581401

Alerts

Be the first to know and let us send you an email when SIO Sirsi posts news and promotions. Your email address will not be used for any other purpose, and you can unsubscribe at any time.

Share

Category