Native Sirsi

Native Sirsi Contact information, map and directions, contact form, opening hours, services, ratings, photos, videos and announcements from Native Sirsi, Landmark & historical place, M. G. Road, Sirsi.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.ತಾಯೀ ಮರಿಕಾಂಬೆ ಸಕಲರಿಗೂ ಆರೋಗ್ಯ ಐಶ್ವರ್ಯ ನೀಡಲೆಂದು ಪ್ರಾರ್ಥಿಸುವ.
31/07/2020

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
ತಾಯೀ ಮರಿಕಾಂಬೆ ಸಕಲರಿಗೂ ಆರೋಗ್ಯ ಐಶ್ವರ್ಯ ನೀಡಲೆಂದು ಪ್ರಾರ್ಥಿಸುವ.

26/05/2020
ಅಮ್ಮನವರ ಜಯಂತಿ
01/05/2020

ಅಮ್ಮನವರ ಜಯಂತಿ

ವಿಷಾದನೀಯ , ತಾಯಿ ಮಾರಿಕಾಂಬೆ ಪ್ಲೇಗ್ ಮಹಾಮಾರಿಯನ್ನು ಓಡಿಸಿ ಶಿರಸೀಪುರವನ್ನು ರಕ್ಷಿಸಿದ ಹಾಗೆ ಈ ಕರೊನ ಮಹಾಮಾರಿ ಇಂದ ತನ್ನ ಭಕ್ತರನ್ನು ರಕ್ಷಿಸ...
20/03/2020

ವಿಷಾದನೀಯ , ತಾಯಿ ಮಾರಿಕಾಂಬೆ ಪ್ಲೇಗ್ ಮಹಾಮಾರಿಯನ್ನು ಓಡಿಸಿ ಶಿರಸೀಪುರವನ್ನು ರಕ್ಷಿಸಿದ ಹಾಗೆ ಈ ಕರೊನ ಮಹಾಮಾರಿ ಇಂದ ತನ್ನ ಭಕ್ತರನ್ನು ರಕ್ಷಿಸಲಿ 🙏

ಉತ್ತರಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಹೆಚ್.ಸಿ. 1311 - ರಮೇಶ ಮುಚ್ಚುಂಡಿ ಯವರು ಸಿರ್ಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಮಗ...
13/02/2020

ಉತ್ತರಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಹೆಚ್.ಸಿ. 1311 - ರಮೇಶ ಮುಚ್ಚುಂಡಿ ಯವರು ಸಿರ್ಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಮಗೆ ವಹಿಸಿದ ಬೀಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಲ್ಲದೇ ಕುಡಿತದ ಚಟಕ್ಕೆ ಒಳಗಾದವರನ್ನು ಮದ್ಯ ವ್ಯಸನ ತ್ಯಜಿಸುವಂತೆ ಮಾಡಿಸುವಲ್ಲಿ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಾಹನ ಸಂಚಾರ ನಿಯಮದ ಬಗ್ಗೆ, ಮಾದಕ ವ್ಯಸನಕ್ಕೆ ಒಳಗಾಗದಂತೆ ಹಾಗೂ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿರುತ್ತಾರೆ.

ರಮೇಶ ಮುಚ್ಚುಂಡಿಯವರು ಶಿರಸಿ ಠಾಣಾ ವ್ಯಾಪ್ತಿಯ ಅನೇಕ ಶಾಲಾ ಕಾಲೇಜಗಳಿಗೆ ಭೇಟಿ ನೀಡಿ ಸಂಚಾರ ನಿಯಮ ಪಾಲನೆ, ಪೊಕ್ಸೋ ಕಾಯ್ದೆ, ಮಾದಕ ವಸ್ತುಗಳ ಸೇವನೆ ಹಾಗೂ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ತಮ್ಮ ಮಾತಿನ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳುವಳಿಕೆ ನೀಡಿರುತ್ತಾರೆ. ಅಲ್ಲದೇ ಸುಮಾರು 25 ಕ್ಕೂ ಹೆಚ್ಚು ಕುಟುಂಬಸ್ಥರು ಗಂಡನ ಕುಡಿತದ ಚಟದಿಂದ ಹೆಂಡತಿ ಅನುಭವಿಸುತ್ತಿರುವ ನೋವಿನೊಂದಿಗೆ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ, ಅಂತಹ ಚಟಕ್ಕೆ ಒಳಗಾದ ವ್ಯಕ್ತಿಯನ್ನು ಕುಡಿತ ಚಟ ಬಿಡಿಸುವಂತಹ ಸಂಸ್ಥೆಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ವಿಶೇಷ ಚಿಕಿತ್ಸೆ ನೀಡಿ, ಅವರು ಕುಡಿತದ ಚಟ ಬಿಟ್ಟು ತಮ್ಮ ಸಂಸಾರದೊಂದಿಗೆ ಸಂತೋಷದಿಂದ ಜೀವನ ಮಾಡಲು ಸಹಕಾರಿಯಾಗಿದ್ದಾರೆ.

ತಮ್ಮ ಬೀಟ್ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ, ಸಾರ್ವಜನಿಕರೊಂದಿಗೆ ಸಾಮರಸ್ಯದಿಂದ ಬೆರೆತು ಸಾರ್ವಜನಿಕರೊಂದಿಗೆ ಒಳ್ಳೆ ಸಂಬಂಧ ಹೊಂದಿದ್ದು, ಬೀಟ್ನಜ ಸಮಸ್ಯೆಗಳಿಗೆ ಸಾರ್ವಜನಿಕರ ವಿಶ್ವಾಸದೊಂದಿಗೆ ಅವರೊಂದಿಗೆ ಬೆರೆತು ಸಮಸ್ಯೆಗಳನ್ನು ಬಗೆಹರಿಸಿದಲ್ಲದೇ ಅನೇಕ ಅಪರಾಧ ಪ್ರಕರಣ, ಮಿಸ್ಸಿಂಗ್ ಪ್ರಕರಣಗಳ ಪತ್ತೆಯಲ್ಲಿ ಉತ್ತಮ ಸೇವೆ ಮಾಡಿ ಸಾರ್ವಜನಿಕರ ಪ್ರಸಂಶೆಗೆ ಕಾರಣರಾಗಿರುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಇತರ ಸಿಬ್ಬಂದಿಗಳಿಗೂ ಮಾದರಿಯಾಗಲಿ ಎಂಬ ದೃಷ್ಠಿಯಿಂದ ಇಲಾಖೆಯ ವತಿಯಿಂದ ಇವರ ಸೇವೆಯನ್ನು ಪ್ರಶಂಶಿಸಿ, ಬಹುಮಾನ ನೀಡಿರುತ್ತೇವೆ. SP Karwar

 #ಅಂತರಾಷ್ಟ್ರೀಯ_ಸಿ_ಎಫ್_ಎ_ಪರೀಕ್ಷೆಯಲ್ಲಿ_ರಾಧಿಕಾ_ಹೆಗಡೆ_ತೇರ್ಗಡೆ.ಶಿರಸಿ: ಭಾರತ, ಅಮೇರಿಕ, ಆಸ್ಟ್ರೇಲಿಯಾ, ಚೀನಾ, ಯುನೈಟೆಡ್ ಕಿಂಗಡಂ ಸೇರಿದಂ...
01/02/2020

#ಅಂತರಾಷ್ಟ್ರೀಯ_ಸಿ_ಎಫ್_ಎ_ಪರೀಕ್ಷೆಯಲ್ಲಿ_ರಾಧಿಕಾ_ಹೆಗಡೆ_ತೇರ್ಗಡೆ.

ಶಿರಸಿ: ಭಾರತ, ಅಮೇರಿಕ, ಆಸ್ಟ್ರೇಲಿಯಾ, ಚೀನಾ, ಯುನೈಟೆಡ್ ಕಿಂಗಡಂ ಸೇರಿದಂತೆ ಪ್ರಪಂಚದ 178 ನಗರದಲ್ಲಿ ನಡೆಯುವ ಅಂತರಾಷ್ಟ್ರೀಯ ಗುಣಮಟ್ಟದ ಸಿಎಫ್‍ಎ (ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ) ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ತೇರ್ಗಡೆ ಆಗಿದ್ದಾಳೆ.

ಕಳೆದ ಡಿಸೆಂಬರನಲ್ಲಿ ಮುಂಬಯಿ ಸೇರಿದಂತೆ ಏಕಕಾಲಕ್ಕೆ ಪ್ರಪಂಚದ ವಿವಿಧಡೆ ಈ ಪರೀಕ್ಷೆ ನಡೆದಿದ್ದು, ಕೇವಲ ಶೇ.42ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಕಳೆದ ಏಳು ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ಕಡಿಮೆ ಫಲಿತಾಂಶ ಬಂದಿದೆ. ಪ್ರತೀ ವರ್ಷ ಬದಲಾಗುವ ಪರೀಕ್ಷಾ ಮಾದರಿ ಇದಾಗಿದ್ದು, ಇದನ್ನು ಎದುರಿಸಲು ಕನಿಷ್ಠ 300 ತಾಸು ವಿದ್ಯಾರ್ಥಿ ಓದಲೇ ಬೇಕಾಗುತ್ತದೆ. ಕೇವಲ ಇಂಗ್ಲೀಷ ಭಾಷೆಯಲ್ಲಿ ಬರೆಯಬೇಕಾದ ಪರೀಕ್ಷೆ ವಾಣಿಜ್ಯ, ಆರ್ಥಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಪರೀಕ್ಷೆ ಬರೆಯಬೇಕಾದರೆ ಒಬ್ಬ ವಿದ್ಯಾರ್ಥಿ 1150 ಡಾಲರ್ ಮೊತ್ತ ತುಂಬಬೇಕಾಗುತ್ತದೆ. ಈ ಪರೀಕ್ಷಾ ತೇರ್ಗಡೆ ಆದವರಿಗೆ ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ.

ರಾಧಿಕಾ ಹೆಗಡೆ ಜಿಲ್ಲೆಯ ಪ್ರಸಿದ್ದ ಸಹಕಾರಿ ಹುಳಗೋಳದ ಜಿ.ಎಂ.ಹೆಗಡೆ ಹಾಗೂ ರಾಧಾ ಹೆಗಡೆ ಮೊಮ್ಮಗಳು. ಪೂನಾದ ಕೃಷಿ ತಜ್ಣ ಡಾ. ಸತೀಶ ಹೆಗಡೆ ಹಾಗೂ ಆರತಿ ಹೆಗಡೆ ಪುತ್ರಿ.

ಶಿರಸಿಯ ಮೂಲ ಗ್ರಾಮ ದೇವತೆ ಮರ್ಕಿ ದುರ್ಗಿ ವರ್ಧಂತಿ ಉತ್ಸವ.
30/01/2020

ಶಿರಸಿಯ ಮೂಲ ಗ್ರಾಮ ದೇವತೆ ಮರ್ಕಿ ದುರ್ಗಿ ವರ್ಧಂತಿ ಉತ್ಸವ.

Address

M. G. Road
Sirsi
581401

Telephone

+91 98642 98642

Website

Alerts

Be the first to know and let us send you an email when Native Sirsi posts news and promotions. Your email address will not be used for any other purpose, and you can unsubscribe at any time.

Share