Raju M Tallur

Raju M Tallur ಮಾಜಿ ಅಧ್ಯಕ್ಷರು, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ.

ಇಂದು ಜಿಲ್ಲಾ ಅಭ್ಯಾಸ ವರ್ಗದಲ್ಲಿ ಭಾಗಿಯಾಗಿದ ಕ್ಷಣಗಳು ಬಹಳ ಅರ್ಥಪೂರ್ಣವಾಗಿದ್ದವು.ಪಕ್ಷದ ಸಂಘಟನೆ ಬಲವರ್ಧನೆ, ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ ...
31/05/2026

ಇಂದು ಜಿಲ್ಲಾ ಅಭ್ಯಾಸ ವರ್ಗದಲ್ಲಿ ಭಾಗಿಯಾಗಿದ ಕ್ಷಣಗಳು ಬಹಳ ಅರ್ಥಪೂರ್ಣವಾಗಿದ್ದವು.
ಪಕ್ಷದ ಸಂಘಟನೆ ಬಲವರ್ಧನೆ, ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ ಹಾಗೂ ವಿಚಾರಧಾರೆಗಳ ಕುರಿತು ನಡೆದ ಚರ್ಚೆಗಳು ಹೊಸ ಉತ್ಸಾಹವನ್ನು ತುಂಬಿದವು.
ಹಿರಿಯ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಭಾಗಿಯಾಗುವ ಅವಕಾಶ ದೊರೆತಿದ್ದು ಸಂತಸದ ಸಂಗತಿಯಾಯಿತು.

ಇಂದು ಹಾಗೂ ನಾಳೆ ನಡೆಯುತ್ತಿರುವ ಜಿಲ್ಲಾ ಪ್ರಶಿಕ್ಷಣ ಅಭಿಯಾನದ 26,ಜಿಲ್ಲೆ ಯ 18ನೇ ಪ್ರಶಿಕ್ಷಣದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು.ಈ ಕಾರ್ಯಕ್ರ...
30/05/2026

ಇಂದು ಹಾಗೂ ನಾಳೆ ನಡೆಯುತ್ತಿರುವ ಜಿಲ್ಲಾ ಪ್ರಶಿಕ್ಷಣ ಅಭಿಯಾನದ 26,ಜಿಲ್ಲೆ ಯ 18ನೇ ಪ್ರಶಿಕ್ಷಣದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.
ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಗೆ ಇಂತಹ ಪ್ರಶಿಕ್ಷಣ ಶಿಬಿರಗಳು ಮಹತ್ವದ ಪಾತ್ರವಹಿಸುತ್ತವೆ.

ಇಂದು ಸೊರಬ ಮಂಡಲದ ಪ್ರಶಿಕ್ಷಣ ವರ್ಗದ ಉದ್ಘಾಟನೆಯನ್ನು ಮಾನ್ಯ ಸಂಸದರಾದ B. Y. Raghavendra ಅವರು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಭಾಗಿಯಾಗ...
28/05/2026

ಇಂದು ಸೊರಬ ಮಂಡಲದ ಪ್ರಶಿಕ್ಷಣ ವರ್ಗದ ಉದ್ಘಾಟನೆಯನ್ನು ಮಾನ್ಯ ಸಂಸದರಾದ B. Y. Raghavendra ಅವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರಕಿದ್ದು ಸಂತಸದ ವಿಷಯ. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಪಕ್ಷ ಸಂಘಟನೆ ಬಲಪಡಿಸುವ ದಿಕ್ಕಿನಲ್ಲಿ ಇಂತಹ ಪ್ರಶಿಕ್ಷಣ ವರ್ಗಗಳು ಕಾರ್ಯಕರ್ತರಿಗೆ ಹೊಸ ಚೈತನ್ಯ ಮತ್ತು ಮಾರ್ಗದರ್ಶನ ನೀಡುತ್ತವೆ.

ಮಧ್ಯ ಕರ್ನಾಟಕದ ಹೆಮ್ಮೆಯ ಜಿಲ್ಲೆ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಬಸಪ್ಪಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ಮಾನ್...
26/05/2026

ಮಧ್ಯ ಕರ್ನಾಟಕದ ಹೆಮ್ಮೆಯ ಜಿಲ್ಲೆ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಬಸಪ್ಪಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ, ಮಾನ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ B. Y. Raghavendra ಅವರ ಜೊತೆಗೂಡಿ ಇಂದು ಭಾಗಿಯಾಗುವ ಅವಕಾಶ ದೊರಕಿತು.

ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕ ಭಾಗದ ಜನರಿಗೆ ನ್ಯಾಯಾಂಗ ಸೇವೆಗಳು ಇನ್ನಷ್ಟು ಸುಲಭವಾಗಿ ದೊರಕುವ ಉದ್ದೇಶದಿಂದ ನಡೆಯುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಜನರ ಹಿತದೃಷ್ಟಿಯಿಂದ ಈ ಬೇಡಿಕೆ ಶೀಘ್ರದಲ್ಲೇ ಈಡೇರಲಿ ಎಂಬ ಆಶಯ ವ್ಯಕ್ತಪಡಿಸುತ್ತೇನೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹಾರ...
24/05/2026

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹಾರ್ದಿಕ ಸ್ವಾಗತ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ Nitin Nabin ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು!ಸಾರ್ವಜನಿಕ ಜೀವನದಲ್ಲಿ ನಿಮ್ಮ ಪಯಣವು ...
23/05/2026

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ Nitin Nabin ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು!

ಸಾರ್ವಜನಿಕ ಜೀವನದಲ್ಲಿ ನಿಮ್ಮ ಪಯಣವು ಸಮರ್ಪಣೆ, ಸಂಘಟನಾ ಬದ್ಧತೆ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಹೊಂದಿರುವ ಆತ್ಮೀಯ ಸಂಪರ್ಕದ ಪ್ರತೀಕವಾಗಿದೆ. ನಿಮ್ಮ ಶಾಂತ ಸ್ವಭಾವ ಮತ್ತು ಪಕ್ಷವನ್ನು ಮತ್ತಷ್ಟು ಬಲಪಡಿಸುವ ದಿಟ್ಟ ನಿಲುವು ದೇಶದಾದ್ಯಂತ ನನ್ನಂತಹ ಅನೇಕ ಕಾರ್ಯಕರ್ತರಿಗೆ ಸದಾ ಪ್ರೇರಣೆಯಾಗಿದೆ.

ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಶುಭವಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಪಕ್ಷವು ಇನ್ನಷ್ಟು ಉನ್ನತಿಗೆ ಏರಲಿ ಎಂಬುದು ನಮ್ಮೆಲ್ಲರ ಆಶಯ.

ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು...
15/05/2026

ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಸಾಯಿ ಭೋಸಲೆ ಅವರ ಪುತ್ರನಾಗಿ ಜನಿಸಿದ ಅಪ್ರತಿಮ ಪರಾಕ್ರಮಿ, ಧರ್ಮರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜನ್ಮ...
14/05/2026

ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಸಾಯಿ ಭೋಸಲೆ ಅವರ ಪುತ್ರನಾಗಿ ಜನಿಸಿದ ಅಪ್ರತಿಮ ಪರಾಕ್ರಮಿ, ಧರ್ಮರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜನ್ಮದಿನದಂದು ಶತ ಶತ ನಮನಗಳು.

ಇಂದು ಸಮಾಜದ ರಾಜ್ಯಾಧ್ಯಕ್ಷರಾದ ಹನುಮಂತಪ್ಪನವರು ಹಾಗು ಅವರ ತಂಡದವರು ನನ್ನ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿ ಸಮಾಜದ ಅಭಿವೃದ್ಧಿ ಹಾಗೂ ವಿವಿಧ ಪ್...
13/05/2026

ಇಂದು ಸಮಾಜದ ರಾಜ್ಯಾಧ್ಯಕ್ಷರಾದ ಹನುಮಂತಪ್ಪನವರು ಹಾಗು ಅವರ ತಂಡದವರು ನನ್ನ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿ ಸಮಾಜದ ಅಭಿವೃದ್ಧಿ ಹಾಗೂ ವಿವಿಧ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಸಮಾಜದ ಹಿತಕ್ಕಾಗಿ ಕೈಗೊಳ್ಳಬೇಕಾದ ಹೋರಾಟಗಳು ಮತ್ತು ಸಂಘಟನಾ ಬಲವರ್ಧನೆ ಕುರಿತು ಸಹ ಸಮಗ್ರವಾಗಿ ಮಾತುಕತೆ ನಡೆಯಿತು.

ಸಮಾಜದ ಏಕತೆ, ಹಕ್ಕುಗಳು ಹಾಗೂ ಅಭಿವೃದ್ಧಿಗಾಗಿ ನಮ್ಮ ಪ್ರಯತ್ನ ಸದಾ ಮುಂದುವರಿಯಲಿದೆ.

— ರಾಜು ಎಂ ತಲ್ಲೂರು

ಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನ. ಇವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸುವ ಸಲುವಾಗಿ ವಿಶ್ವ ದಾದಿಯರ ...
12/05/2026

ಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನ. ಇವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸುವ ಸಲುವಾಗಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ.

ಆಸ್ಪತ್ರೆ, ರೋಗಿಗಳ ಸೇವೆಯಲ್ಲಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥ ಸೇವೆಗೈಯ್ಯುವ ಎಲ್ಲಾ ದಾದಿಯರಿಗೆ ಧನ್ಯವಾದಗಳು ಹಾಗೂ ವಿಶ್ವ ದಾದಿಯರ ದಿನದ ಶುಭಾಶಯಗಳು.

Address

ಸ್ಪೂರ್ತಿ ಫ್ಯುಯಲ್ಸ್, ಎಸ್ಸಾರ್ ಪೆಟ್ರೋಲ್ ಬಂಕ್ ಹಿಂಭಾಗ, ಉಳವಿ ಸಾಗರ ರಸ್ತೆ, ಸೊರಬ
Sorab
577429

Alerts

Be the first to know and let us send you an email when Raju M Tallur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Raju M Tallur:

Share