SDPI Mangalore NORTH Assembly

SDPI Mangalore NORTH Assembly ಎಸ್‌ಡಿಪಿಐ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಧಿಕೃತ ಖಾತೆ
ಹಸಿವು ಮುಕ್ತ ಸ್ವಾತಂತ್ರ್ಯ
ಭಯ ಮುಕ್ತ ಸ್ವಾತಂತ್ರ್ಯ

ರಸ್ತೆ ದುರಸ್ಥಿಗೊಳಿಸಲು ಮನವಿ ಕಾಟಿಪಳ್ಳ  3 ನೇ ವಾರ್ಡ್ ಸುಲ್ತಾನ್ ನಗರದ  2 ನೇ ಅಡ್ಡ ರಸ್ತೆ ಮತ್ತು ನೂರುಲ್ ಹುದಾ ಶಾಲೆಯ ಹಿಂಭಾಗದ ರಸ್ತೆಯನ್ನ...
06/10/2025

ರಸ್ತೆ ದುರಸ್ಥಿಗೊಳಿಸಲು ಮನವಿ

ಕಾಟಿಪಳ್ಳ 3 ನೇ ವಾರ್ಡ್ ಸುಲ್ತಾನ್ ನಗರದ 2 ನೇ ಅಡ್ಡ ರಸ್ತೆ ಮತ್ತು ನೂರುಲ್ ಹುದಾ ಶಾಲೆಯ ಹಿಂಭಾಗದ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಎಸ್ಡಿಪಿಐ ಕಾಟಿಪಳ್ಳ 3ನೇ ವಾರ್ಡ್ ಸಮಿತಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಉಪಕಚೇರಿ ಸುರತ್ಕಲ್ ಆಯುಕ್ತರಿಗೆ SDPI ಕಾಟಿಪಳ್ಳ ವಾರ್ಡ್ ಅಧ್ಯಕ್ಷ ರೆಹಮಾನ್ ಕಾಟಿಪಳ್ಳ ಅವರ ನೇತ್ರತ್ವದಲ್ಲಿ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ವಾರ್ಡ್ ಕಾರ್ಯದರ್ಶಿ ಜೈನುದ್ದಿನ್ ಕಾಟಿಪಳ್ಳ ಮತ್ತು
ಜೊತೆ ಕಾರ್ಯದರ್ಶಿ ನಿಶಾದ್ ಕಾಟಿಪಳ್ಳ ಉಪಸ್ಥಿತರಿದ್ದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅ...
15/09/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಫತ್ತಹ್ ಕಾಟಿಪಳ್ಳ ಹಾಗೂ ಹಲವು ಯುವಕರು ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಹಸಿವು ಮುಕ್ತ ಭಯ ಮುಕ್ತ ಚಳುವಳಿಗೆ ಸೇರ್ಪಡೆಯಾದರು.

ಘಣತೆಯ ರಾಜಕೀಯಕ್ಕಾಗಿ SDPI ಸೇರಿರಿ




12/09/2025

ಮರಣ ಗುಂಡಿ ಹೊಂದಿದ ರಾಷ್ಟ್ರೀಯ ಹೆದ್ದಾರಿ 66 ರ “ಅವೈಜ್ಞಾನಿಕ ಕಾಮಗಾರಿ” : SDPI ಆಕ್ರೋಶಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಳೂರು ...
09/09/2025

ಮರಣ ಗುಂಡಿ ಹೊಂದಿದ ರಾಷ್ಟ್ರೀಯ ಹೆದ್ದಾರಿ 66 ರ “ಅವೈಜ್ಞಾನಿಕ ಕಾಮಗಾರಿ” : SDPI ಆಕ್ರೋಶ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಳೂರು ಬ್ಲಾಕ್ ಸಮಿತಿ ವತಿಯಿಂದ ಕೂಳೂರು ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿ ಮತ್ತು ಅಲ್ಲಲ್ಲಿ ಉಂಟಾಗಿರುವ ಮರಣ ಗುಂಡಿಯಿಂದ ನಿರಂತರವಾಗಿ ನಡೆಯುತ್ತಿರುವ ಅಪಘಾತವನ್ನು ತಡೆಯುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ SDPI ಜಿಲ್ಲಾ ಸಮಿತಿ ಸದಸ್ಯರು ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಯಾಸಿನ್ ಅರ್ಕುಳ ರವರು ಮಾತನಾಡಿ ಇಂದು ಈ ದುರಂತದಿಂದ ಮರಣ ಹೊಂದಿದ ಮಹಿಳೆಯ ಕುಟುಂಬಕ್ಕೆ ಜೀವವನ್ನು ಹಿಂತಿರುಗಿಸುವವರು ಯಾರು.? ಅವರ ಕುಟುಂಬದ ಹೊಣೆಯನ್ನು ಹೊರುವವವರು ಯಾರು? ಆ ಮಹಿಳೆಯ ದಾರುಣ ಅಂತ್ಯಕ್ಕೆ ನೇರ ಹೊಣೆ ಇಲ್ಲಿಯ ಜನ ಪ್ರತಿನಿಧಿಗಳು. ಈ ಅವೈಜ್ಞಾನಿಕ ರಸ್ತೆಯಿಂದಾಗಿ ಸಾವಿಗೀಡಾದ ಮಾಧವಿ ಮತ್ತು ಅಶ್ರಫ್ ಸಾವಿನ ಹೊಣೆ ಹೊತ್ತು ಅವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಹೇಳಿದರು. ಪ್ರತಿಭಟನೆಯ ನೇತೃತ್ವ ವಹಿಸಿದ Sdpi ಕುಳೂರು ಬ್ಲಾಕ್ ಅಧ್ಯಕ್ಷ ನೌಶಾದ್ ಕಾವೂರು ಮಾತನಾಡಿ
ಇಲ್ಲಿ ಒಂದು ಹೊಂಡ ಮುಚ್ಚಬೇಕೆಂದರೆ ಒಂದಾ ರಸ್ತೆ ಅಪಘಾತದಿಂದ ಒಂದು ಜೀವ ಹೋಗಬೇಕು ಇಲ್ಲ ಅಂದರೆ ಗಣ್ಯಾಥಿ ಗಣ್ಯ ನಾಯಕರು ಜೆಲ್ಲೆಗೆ ಆಗಮಿಸಬೇಕಾದ ಪರಿಸ್ಥಿತಿ ಈ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾರ್ಯದರ್ಶಿ ಹರ್ಷದ್ ಅಯ್ಯುಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬದಲಾವಣೆಗಾಗಿ ಕೊಡುಗೆ : ಗುರುಪುರ ಕೈಕಂಬದಲ್ಲಿ SDPI ನಾಯಕರ ಸಭೆ"ಬದಲಾವಣೆಗಾಗಿ ಕೊಡುಗೆ" ಎಂಬ ಘೋಷಣೆಯೊಂದಿಗೆ ಗುರುಪುರ, ಕೈಕಂಬ, ಅಡ್ಡೂರು, ಮಲ್...
30/08/2025

ಬದಲಾವಣೆಗಾಗಿ ಕೊಡುಗೆ : ಗುರುಪುರ ಕೈಕಂಬದಲ್ಲಿ SDPI ನಾಯಕರ ಸಭೆ

"ಬದಲಾವಣೆಗಾಗಿ ಕೊಡುಗೆ" ಎಂಬ ಘೋಷಣೆಯೊಂದಿಗೆ ಗುರುಪುರ, ಕೈಕಂಬ, ಅಡ್ಡೂರು, ಮಲ್ಲೂರು, ಉಳಾಯಿಬೆಟ್ಟು, ಬಜ್ಪೆ ಮತ್ತು ಮೂಡಬಿದ್ರೆ ವ್ಯಾಪ್ತಿಯ ಎಸ್ಡಿಪಿಐ ನಾಯಕರ ಸಭೆಯು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಗುರುಪುರ ಕೈಕಂಬದ ಮೇಘ ಪ್ಲಾಝ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮೂಡಬಿದ್ರೆ ಕ್ಷೇತ್ರ ಉಪಾಧ್ಯಕ್ಷರಾದ ಆಸೀಫ್ ಕೋಟೆಬಾಗಿಲು ಸ್ವಾಗತಿಸಿದರು. ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ಯವರು ಪ್ರಾಸ್ತಾವಿಕ ಮಾತನಾಡಿದರು. ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು 'ಬದಲಾವಣೆಗಾಗಿ ಕೊಡುಗೆ' ಎಂಬ ವಿಚಾರವನ್ನು ಮಂಡಿಸಿದರು. ಸಮಾರೋಪ ಭಾಷಣವನ್ನು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ ಯವರು ಮಾಡಿದರು. ಮಂಗಳೂರು ಉತ್ತರ ಕ್ಷೇತ್ರ ಕಾರ್ಯದರ್ಶಿ ಶಫೀಕ್ ಮಲ್ಲೂರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು. ಈ ಸಂದರ್ಭದಲ್ಲಿ SDPI ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಶಾಹಿಕ್ ಅಡ್ಡೂರು, ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಮ್ತಿಯಾಝ್ ಅಡ್ಡೂರು, ಮೂಡಬಿದ್ರೆ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇರ್ಷಾದ್ ಬಜ್ಪೆ, ಗುರುಪುರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಅಡ್ಡೂರು, ಅಡ್ಯಾರ್ ಬ್ಲಾಕ್ ಅಧ್ಯಕ್ಷರಾದ ಅಝರ್ ಉಳಾಯಿಬೆಟ್ಟು, ಕಾರ್ಯದರ್ಶಿ ಇಕ್ಬಾಲ್ ವಾಮಂಜೂರು ಇತರರು ಉಪಸ್ಥಿತರಿದ್ದರು.




ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಕ್ಷದ...
24/08/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ ವಾರ್ಡ್ ಸಮಿತಿ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಹಸಿವು ಮುಕ್ತ ಭಯ ಮುಕ್ತ ಚಳವಳಿಗೆ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ SDPI ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಜೋಕಟ್ಟೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಕಾಟಿಪಳ್ಳ ವಾರ್ಡ್ ಅಧ್ಯಕ್ಷರಾದ ರೆಹಮಾನ್ ಕಾಟಿಪಳ್ಳ ಹಾಗೂ ಜೊತೆ ಕಾರ್ಯದರ್ಶಿ ನಿಶಾದ್ ಕಾಟಿಪಳ್ಳ ಉಪಸ್ಥಿತರಿದ್ದರು.

ಘನತೆಯ ರಾಜಕೀಯಕ್ಕಾಗಿ ಎಸ್.ಡಿ.ಪಿ.ಐ ಸೇರಿರಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲ...
22/08/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಸಮಿತಿ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಹಲವಾರು ಯುವಕರು ಹಸಿವು ಮುಕ್ತ ಭಯ ಮುಕ್ತ ಚಳುವಳಿಗೆ ಸೇರ್ಪಡೆಯಾದರು.

SDPI ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಜೋಕಟ್ಟೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಸುರತ್ಕಲ್ ಬ್ಲಾಕ್ ಕಾರ್ಯದರ್ಶಿ ಹಫೀರ್ ಚೊಕ್ಕಬೆಟ್ಟು, ಕೃಷ್ಣಾಪುರ ವಾರ್ಡ್ ಉಪಾಧ್ಯಕ್ಷರಾದ ರಶೀದ್ ಕೃಷ್ಣಾಪುರ ಉಪಸ್ಥಿತರಿದ್ದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ವತಿಯಿಂದ ಮಾದ್ಯಮ ಕಾರ್ಯಾಗಾರವು ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು.ಈ ...
20/08/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ವತಿಯಿಂದ ಮಾದ್ಯಮ ಕಾರ್ಯಾಗಾರವು ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ಕಾರ್ಯದರ್ಶಿ ಸಫೀಕ್ ಮಲ್ಲೂರು ಹಾಗೂ ಸುರತ್ಕಲ್ ಬ್ಲಾಕ್ ಮಾದ್ಯಮ ಉಸ್ತುವಾರಿ ಅರಫತ್ ಕಾಟಿಪಳ್ಳ ಉಪಸ್ಥಿತರಿದ್ದರು.

ಕೊಪ್ಪಳದಲ್ಲಿ ಹಲವಾರು ಯುವಕರು ಪಕ್ಷಕ್ಕೆ ಸೇರ್ಪಡೆಅಡ್ಯಾರ್ ಬ್ಲಾಕ್ ವ್ಯಾಪ್ತಿಯ ಕೊಪ್ಪಳ ಪ್ರದೇಶದ ಹಲವಾರು ಯುವಕರು SDPI ಪಕ್ಷದ ತತ್ವ ಸಿದ್ದಾಂತ...
18/08/2025

ಕೊಪ್ಪಳದಲ್ಲಿ ಹಲವಾರು ಯುವಕರು ಪಕ್ಷಕ್ಕೆ ಸೇರ್ಪಡೆ

ಅಡ್ಯಾರ್ ಬ್ಲಾಕ್ ವ್ಯಾಪ್ತಿಯ ಕೊಪ್ಪಳ ಪ್ರದೇಶದ ಹಲವಾರು ಯುವಕರು SDPI ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ SDPI ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಅಡ್ಯಾರ್ ಬ್ಲಾಕ್ ಕಾರ್ಯದರ್ಶಿ ಇಕ್ಬಾಲ್ ವಾಮಂಜೂರು ಉಪಸ್ಥಿತರಿದ್ದರು.

#ಹಸಿವುಮುಕ್ತಸ್ವಾತಂತ್ರ್ಯ
#ಭಯಮುಕ್ತಸ್ವಾತಂತ್ರ್ಯ

_ಸ್ವಾತಂತ್ರ್ಯವನ್ನು ರಕ್ಷಿಸೋಣ__ರಾಷ್ಟ್ರವನ್ನು ಉಳಿಸೋಣ__ಭಾರತದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು SDPI ಮಂಗಳೂರು ಉತ್ತರ ವ...
15/08/2025

_ಸ್ವಾತಂತ್ರ್ಯವನ್ನು ರಕ್ಷಿಸೋಣ_
_ರಾಷ್ಟ್ರವನ್ನು ಉಳಿಸೋಣ_

_ಭಾರತದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಷೇಶವಾಗಿ SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್.ಕೆ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರು ಅಡ್ಡೂರು, ಉಳಾಯಿಬೆಟ್ಟು, ಮಲ್ಲೂರು ಹಾಗೂ ಅಡ್ಯಾರ್ ನಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯವನ್ನು ಕೋರಿದರು.

🇮🇳
15.08.2025

ಕುಪ್ಪೆಪದವು : SDPI ನೂತನ ಕಛೇರಿ ಉದ್ಘಾಟನೆಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಪ್ಪೆಪದವು ಬ್ರಾಂಚ್ ಸಮಿತಿಯ ನೂತನ ಕಛೇರಿಯನ್ನು SDP...
04/08/2025

ಕುಪ್ಪೆಪದವು : SDPI ನೂತನ ಕಛೇರಿ ಉದ್ಘಾಟನೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಪ್ಪೆಪದವು ಬ್ರಾಂಚ್ ಸಮಿತಿಯ ನೂತನ ಕಛೇರಿಯನ್ನು SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್.ಕೆ ಅವರೊಂದಿಗೆ ಕುಪ್ಪೆಪದವು ಬ್ರಾಂಚ್ ಅಧ್ಯಕ್ಷರಾದ ದಾವೂದ್ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರ ಸಹಿತ ಹಲವಾರು ಯುವಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸೇರ್ಪಡೆಗೊಂಡವರಿಗೆ ಪಕ್ಷದ ಶಾಲು ಹಾಕುವುದರ ಮೂಲಕ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ SDPI ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ಕ್ಷೇತ್ರ ಕಾರ್ಯದರ್ಶಿಗಳಾದ ಫಯಾಝ್ ಕಾಟಿಪಳ್ಳ, ಶಫೀಕ್ ಮಲ್ಲೂರು, ಗುರುಪುರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಅಡ್ಡೂರು, ಕಾರ್ಯದರ್ಶಿ ಇರ್ಷಾದ್ ಕೈಕಂಬ, ಗಂಜಿಮಠ ಗ್ರಾಮ ಸಮಿತಿ ಕಾರ್ಯದರ್ಶಿ ಇರ್ಫಾನ್ ಗಂಜಿಮಠ, ಗುರುಪುರ ಗ್ರಾಮ ಸಮಿತಿ ಅಧ್ಯಕ್ಷರಾದ ಸತ್ತಾರ್ ಅಡ್ಡೂರು ಹಾಗೂ ಸ್ಥಳೀಯ ನಾಯಕರು, ಕಾರ್ಯಕರ್ತರು ಊರಿನ ಹಿರಿಯರು ಉಪಸ್ಥಿತರಿದ್ದರು.

ಕುಪ್ಪೆಪದವು ನಲ್ಲಿ ಹಲವಾರು ಯುವಕರೊಂದಿಗೆ ಹಿರಿಯರು SDPI ಪಕ್ಷಕ್ಕೆ ಸೇರ್ಪಡೆ.ಎಸ್‌ಡಿಪಿಐ ಕುಪ್ಪೆಪದವು ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪ...
04/08/2025

ಕುಪ್ಪೆಪದವು ನಲ್ಲಿ ಹಲವಾರು ಯುವಕರೊಂದಿಗೆ ಹಿರಿಯರು SDPI ಪಕ್ಷಕ್ಕೆ ಸೇರ್ಪಡೆ.

ಎಸ್‌ಡಿಪಿಐ ಕುಪ್ಪೆಪದವು ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್.ಕೆ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ಕ್ಷೇತ್ರ ಕಾರ್ಯದರ್ಶಿಗಳಾದ ಫಯಾಝ್ ಕಾಟಿಪಳ್ಳ, ಸಫೀಕ್ ಬದ್ರಿಯಾನಗರ, ಗುರುಪುರ ಬ್ಲಾಕ್ ಅಧ್ಯಕ್ಷರಾದ ಎ.ಕೆ.ರಿಯಾಝ್ ಅಡ್ಡೂರು, ಬ್ಲಾಕ್ ಕಾರ್ಯದರ್ಶಿ ಇರ್ಷಾದ್ ಕೈಕಂಬ, ಗಂಜಿಮಠ ಗ್ರಾಮ ಸಮಿತಿ ಕಾರ್ಯದರ್ಶಿ ಇರ್ಫಾನ್ ಗಂಜಿಮಠ, ಕುಪ್ಪೆಪದವು ಬ್ರಾಂಚ್ ಅಧ್ಯಕ್ಷರಾದ ದಾವೂದ್ ಕುಪ್ಪೆಪದವು ಉಪಸ್ಥಿತರಿದ್ದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಕಾರ್ಯಗಾರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್. ...
30/07/2025

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಕಾರ್ಯಗಾರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್. ಕೆ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತಂಬೆ, ರಾಜ್ಯ ಚುಣಾಯಿತ ಜನಪ್ರತಿನಿಧಿಗಳ ಉಸ್ತುವಾರಿ ಅಬ್ರಾರ್ ಅಹಮದ್, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಹಾಗೂ ಜಿಲ್ಲಾ ಜನಪ್ರತಿನಿಧಿಗಳ ಉಸ್ತುವಾರಿ ಅಶ್ರಫ್ ಅಡ್ಡೂರು, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಾಸೀನ್ ಅರ್ಕುಳ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಮ್, ಪಕ್ಷದ ಉತ್ತರ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

Address

Near Chokkabetu Masjid Chokkabetu
Surathkal

Website

Alerts

Be the first to know and let us send you an email when SDPI Mangalore NORTH Assembly posts news and promotions. Your email address will not be used for any other purpose, and you can unsubscribe at any time.

Share