Riddhi Siddhi Vinayaka Geleyara Balaga.Arakere

Riddhi Siddhi Vinayaka Geleyara Balaga.Arakere Contact information, map and directions, contact form, opening hours, services, ratings, photos, videos and announcements from Riddhi Siddhi Vinayaka Geleyara Balaga.Arakere, Social service, Madhugiri main Road, Arakere, Tumkur.

ಸ್ವಚ್ಚತೆಯೆಂಬುದು ಕೆಲಸವಾಗಬಾರದು ಅಭ್ಯಾಸವಾಗಬೇಕು 🤗ಇಂದು ನಮ್ಮ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವಂತಹ ಮಲ್ಲೇನಹಳ್ಳಿಯ ಸರ್ಕಾರಿ ಪ...
25/09/2022

ಸ್ವಚ್ಚತೆಯೆಂಬುದು ಕೆಲಸವಾಗಬಾರದು ಅಭ್ಯಾಸವಾಗಬೇಕು 🤗
ಇಂದು ನಮ್ಮ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವಂತಹ ಮಲ್ಲೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ವನ್ನು ರಿದ್ಧಿ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮಲ್ಲೇನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜ್ ಹಾಗೂ ನಂಜಪ್ಪ ಮತ್ತು ವಾಟರ್ ಮ್ಯಾನ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯ ಸುತ್ತಮುತ್ತಲಿನ ಸ್ವಚ್ಚತಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲಾಯಿತು
ಇದಕ್ಕೆ ಸಹಕಾರವನ್ನು ನೀಡಿದಂತಹ ನಮ್ಮ ಸಂಘದ ಎಲ್ಲಾ ಸದಸ್ಯರಿಗೂ ಹೃತ್ಪೂರ್ವಕವಾದ ಧನ್ಯವಾದಗಳು 🙏

ಇಂದು  ನಮ್ಮ ಅರಕೆರೆ ಗ್ರಾಮದಲ್ಲಿ ಕಡುಬಡವರಿಗೆ {Food kit } ಫುಡ್  ಕಿಟ್ ಗಳನ್ನು ರಿದ್ದಿ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಅಫ್ರ...
20/09/2022

ಇಂದು ನಮ್ಮ ಅರಕೆರೆ ಗ್ರಾಮದಲ್ಲಿ ಕಡುಬಡವರಿಗೆ
{Food kit } ಫುಡ್ ಕಿಟ್ ಗಳನ್ನು ರಿದ್ದಿ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಅಫ್ರೋಜ್ ಖಾನ್ ಅವರ ಸಹಕಾರದಿಂದ ವಿತರಣ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೆವು
ಈ ಸಂದರ್ಭದಲ್ಲಿ
ಅಧ್ಯಕ್ಷರಾದ ಸಂತೋಷ್ ಕುಮಾರ್
ಉಪಾಧ್ಯಕ್ಷರಾದ ಪ್ರದೀಪ್
ಖಜಾಂಜಿಯಾದ ಸೈಯದ್ ಬಾಹರ್
ಕಾರ್ಯದರ್ಶಿಯಾದ ನವೀನ್ ನಿರ್ದೇಶಕರಾದ ಮುರಳಿ
ಸದಸ್ಯರಾದ ದೇವರಾಜ್ ನಾಯಕ್
ಹಾಗೂ ಗ್ರಾಮದ ಮುಖಂಡರಾದ
ಶ್ರೀಯುತ ಆಂಜಿನಮೂರ್ತಿ ಉಮೇಶ್ ಅವರು ಇದ್ದರು ಇವರೆಲ್ಲರ ಸಹ ಸಮ್ಮುಖದಲ್ಲಿಇಂದು ಫುಡ್ ಕಿಟ್ ಗಳನ್ನು ವಿತರಿಸಲಾಯಿತು
ದಯವಿಟ್ಟು ಎಲ್ಲರೂ ಇಂತಹ ಸಮಾಜಮುಖಿ ಕೆಲಸಗಳಿಗೆ ಕೈ ಜೋಡಿಸಿ ಪ್ರೋತ್ಸಾಹಿಸಿ
ಎಲ್ಲರಿಗೂ ಧನ್ಯವಾದಗಳು🙏

ಇಂದು  ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಧ್ಯೇಯವನ್ನು ಇಟ್ಟುಕೊಂಡು ನಮ್ಮ ಅರಕೆರೆ ಗ್ರಾಮದಲ್ಲಿ ಇರುವಂತಹ ಅಂಗನವಾಡಿ ಕೇಂದ್ರ ಹಾಗೂ ಪಶು ಚಿಕಿತ್ಸಾಲ...
18/09/2022

ಇಂದು ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಧ್ಯೇಯವನ್ನು ಇಟ್ಟುಕೊಂಡು ನಮ್ಮ ಅರಕೆರೆ ಗ್ರಾಮದಲ್ಲಿ ಇರುವಂತಹ ಅಂಗನವಾಡಿ ಕೇಂದ್ರ ಹಾಗೂ ಪಶು ಚಿಕಿತ್ಸಾಲಯದ ಸುತ್ತಮುತ್ತಲಿನ ಸ್ವಚ್ಚತಾ ಕಾರ್ಯಕ್ರಮವನ್ನು ನಮ್ಮ ರಿದ್ಧಿ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ನಮ್ಮ ಅರಕೆರೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಎಲ್ಲರೂ ಸೇರಿ ಸ್ವಚ್ಚತಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏
ಹೀಗೆ ನಮ್ಮ ಮುಂದಿನ ಕಾರ್ಯಕ್ರಮವನ್ನು ನೀವೆಲ್ಲರೂ ಬಂದು ಜೊತೆಗೂಡಿ ಯಶಸ್ವಿಗೊಳಿಸಬೇಕಾಗಿ ವಿನಂತಿ 🙏
ರಿದ್ದಿ ಸಿದ್ದಿ ವಿನಾಯಕ ಗೆಳೆಯರ ಬಳಗ ಅರಕೆರೆ 🤗

13/09/2022

ಇಂದು ಮುಂಜಾನೆ ರಿದ್ಧಿ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಖಜಾಂಚಿ ಹಾಗೂ ಕಾರ್ಯದರ್ಶಿ ಮತ್ತು ಸಂಘದ ಎಲ್ಲಾ ನಿರ್ದೇಶಕರು ಸದಸ್ಯರ ಸಮ್ಮುಖದಲ್ಲಿ ಇಂದು ಮುಂಜಾನೆ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವಂತಹ ಗ್ರಾಮಗಳಾದ ಹೊಸಹಳ್ಳಿ ಅಮಲಾಪುರ ಹಿರೇಗುಂಡಗಲ್ ರಾಮಗೊಂಡನಹಳ್ಳಿ ಕುಚ್ಚಂಗಿ ಕುಚ್ಚಂಗಿಪಾಳ್ಯ ಹಾಗೂ ಮಲ್ಲೇನಹಳ್ಳಿ ಗ್ರಾಮದ ಎಲ್ಲಾ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವೀಕ್ಷಣೆಗೆಂದು ಹೋರಾಟ ಒಂದು ಸಣ್ಣ ವೀಡಿಯೋ ತುಣುಕು
ಈ ಎಲ್ಲಾ ಶಾಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿ ಎಲ್ಲರಲ್ಲೂ ವಿನಂತಿ 🙏
ಸರ್ಕಾರಿ ಶಾಲೆಯನ್ನು ಉಳಿಸಿ ಹಾಗು ಬೆಳೆಸಿ 🤗

12/09/2022

ಇಂದು ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ರಿದ್ಧಿ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಸ್ವಚ್ಛತೆ ಮತ್ತು ಕಸ ವಿಲೇವಾರಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಕೊಟ್ಟಂತಹ ಸಂದರ್ಭ ಹಾಗೆ ಶಾಲೆಯ ಶಿಕ್ಷಕರು ಮತ್ತು ಮಕ್ಕಳ ವತಿಯಿಂದ ನಮ್ಮ ಸಂಘದ ಕಾರ್ಯ ಮೆಚ್ಚಿ ನಮ್ಮ ಸಂಘದ ಎಲ್ಲರಿಗೂ ಕೊಟ್ಟ ಗೌರವದ ಚಪ್ಪಳೆ 🙏
ಎಲ್ಲರಿಗೂ ಧನ್ಯವಾದಗಳು

ನಿನ್ನೆ ನಾವೆಲ್ಲರೂ ನೋಡಿದಂತಹ ಅರಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಅಕ್ಕಪಕ್ಕದ ಸ್ವಚ್ಚತಾ ಕಾರ್ಯವನ್ನು ಇಂದು ನಮ್ಮ ರಿದ್ಧಿ ಸಿದ್ಧಿ...
11/09/2022

ನಿನ್ನೆ ನಾವೆಲ್ಲರೂ ನೋಡಿದಂತಹ ಅರಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಅಕ್ಕಪಕ್ಕದ ಸ್ವಚ್ಚತಾ ಕಾರ್ಯವನ್ನು ಇಂದು ನಮ್ಮ ರಿದ್ಧಿ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಸ್ವಚ್ಛತೆಯನ್ನು ಮಾಡಿ ನಮ್ಮ ಸರ್ಕಾರಿ ಶಾಲೆಯನ್ನು ಕಸ ಮುಕ್ತ
ಶಾಲೆಯನ್ನಾಗಿಸುವಲ್ಲಿ ಯಶಸ್ವಿಯಾಗಿ ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದೇವೆ ಹೀಗೆ ಇನ್ನೂ ಮುಂದಿನ ನಮ್ಮ ಸಂಘದ ವತಿಯಿಂದ ಹಲವಾರು ಸಮಾಜ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಆ ಒಂದು ಸಂಧರ್ಭದಲ್ಲೂ ಎಲ್ಲರೂ ಸಹಕರಿಸಿ ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಸಮಾಜಕ್ಕೆ ಮಾದರಿಯಾಗಬೇಕು ಹಾಗೆಯೇ ಯಾರಾದರೂ ನಮ್ಮ ಕಾರ್ಯಕ್ರಮವನ್ನು ಮೆಚ್ಚಿ ಸಹಾಯಹಸ್ತ ಚಾಚುವ ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂದು ನಿಮ್ಮಲ್ಲಿ ವಿನಂತಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ
Santosh =866 056 0842
Syed =8660916489
Pradeep = 99723 01022
Naveen =94489 05387
ಎಲ್ಲರಿಗೂ ಧನ್ಯವಾದಗಳು 🙏

Address

Madhugiri Main Road, Arakere
Tumkur
572106

Website

Alerts

Be the first to know and let us send you an email when Riddhi Siddhi Vinayaka Geleyara Balaga.Arakere posts news and promotions. Your email address will not be used for any other purpose, and you can unsubscribe at any time.

Share

Category