Suketh Shetty

Suketh Shetty Life is dedicated to Nation. Humanity and Nation is supreme than caste and religious. Speaker, Writer, Nationalist always fight against injustice. Jai Hind �

30/09/2021

ನಾವು ಬೇರೆಯವರರನ್ನು ಪ್ರಶ್ನಿಸುವಾಗ, ನಾವು ಆ ಕ್ಷಣದಲ್ಲಿ ಎಲ್ಲಿದ್ದೇವು..? ಏನು ಮಾಡುತ್ತಿದ್ದೇವು..? ಎಂಬುದು ಮೊದಲು ನಮ್ಮಲ್ಲಿ ನಾವು ಪ್ರಶ್ನೆ ಮಾಡಿಕೊಳ್ಳಬೇಕು.

ಮತ್ತೆ ನಮಗೆ ಪ್ರಚಾರ ಸಿಗಬೇಕು, ವಿವಾದ ಸೃಷ್ಟಿ ಮಾಡಬೇಕು ಅಂದುಕೊಂಡು ಬೇರೆಯವರ ಬಗ್ಗೆ ಅಪಹಾಸ್ಯ ಮಾಡುತ್ತಾ , ಪ್ರಶ್ನೆ ಮಾಡಲು ತೊಡಗಿದರೆ ಮುಂದೆ ನಮಗೆ ಹಾನಿಯುಂಟಾಗುವುದು ಖಂಡಿತಾ.

ನಿನ್ನೆ ಯಾರೊಬ್ಬರು ಮಹಿಳೆ ಬಜರಂಗದಳದವರು ಕೊರೋನಾ ಸಮಯದಲ್ಲಿ ಎಲ್ಲಿದ್ದರು ಎಂದು ಪ್ರಶ್ನಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇಲ್ಲಿ ಹಿಂದೂ ಸಂಘಟನೆಯ ಹೆಸರನ್ನು ಉಲ್ಲೇಖಿಸಿರುವುದರಿಂದ ನಾನು ಉತ್ತರ ನೀಡಲು ಬಯಸುತ್ತೇನೆ.

ಕೋರೋನಾ ಸಮಯದಲ್ಲಿ ಲಾಕ್ ಡೌನ್ ಆದ ಕಾರಣ ಮನೆಯಿಂದ ಯಾರು ಹೊರಗೆ ಬರುವಂತಿರಲಿಲ್ಲ. ಅಷ್ಟು ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿತ್ತು .

ಅ ಸಮಯದಲ್ಲಿ ತನ್ನ ಜೀವದ ಹಂಗು ತೊರೆದು ಮನೆ ಮನೆಗೆ ದಿನಸಿ ಸಾಮಗ್ರಿ, ಔಷಧಿ ತಲುಪಿಸಿದವರು ಈ ಹಿಂದೂ ಸಂಘಟನೆಯ ಕಾರ್ಯಕರ್ತರು. ಅದರಲ್ಲಿ ನಾನು ಒಬ್ಬ ಎಂದು ಹೇಳಲು ಹೆಮ್ಮೆ ಇದೆ.

ಅಷ್ಟೇ ಅಲ್ಲದೆ ಕೊರೋನಾದಿಂದ ಮರಣ ಹೊಂದಿದವರ ಶವಗಳನ್ನು ಸುಡಲು ಕುಟುಂಬಸ್ಥರೇ ನಿರ್ಲಕ್ಷಿಸುತ್ತಿದ್ದ ಸಂದರ್ಭದಲ್ಲಿ ಅವರವರ ಧರ್ಮಗಳ ರೀತಿಯಲ್ಲಿ ಶವಸಂಸ್ಕಾರ ಮಾಡಿದವರು ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು...

ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಇದ್ದಾಗ ತಕ್ಷಣ ನೂರಾರು ಮಂದಿ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದ್ದು ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು...

ಹೊರ ರಾಜ್ಯದಿಂದ, ಹೊರ ದೇಶದಿಂದ ಬಂದವರಿಗೆ 14 ದಿನಗಳ ಕ್ವಾರೈಂಟೆನ್ ನಲ್ಲಿ ಇರಿಸಬೇಕೆಂಬ ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಹೊರ ದೇಶ, ರಾಜ್ಯದಿಂದ ಬಂದ ಬಂಧುಗಳಿಗೆ ಆಯಾಯ ಗ್ರಾಮಗಳ ಶಾಲೆಗಳಲ್ಲಿ, ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕೇಂದ್ರಗಳಲ್ಲಿ ಕಿಂಚಿತ್ತು ತೊಂದರೆಯಾಗದಂತೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದವರು ಹಿಂದೂ ಸಂಘಟನೆಯ ಕಾರ್ಯಕರ್ತರು...

ಅವರು ಕೇಳಿರುವ ಪ್ರಶ್ನೆಗೆ ನಾನು ಉತ್ತರ ನೀಡಿದ್ದೇನೆ ಎಂದು ಭಾವಿಸುತ್ತೇನೆ. ಈಗ ಕೊರೋನಾ ಸಮಯದಲ್ಲಿ Lavanya Ballal ಅವರು ಎಲ್ಲಿದ್ದರು ಎಂದು ತಿಳಿಸಬಹುದೇ....???

ಇಷ್ಟೆಲ್ಲ ಕಾರ್ಯವನ್ನು ಮಾಡುವಾಗ ನಾವು ಎಲ್ಲಿಯೂ ಧರ್ಮ, ಜಾತಿ, ಪಕ್ಷ, ಪಂಗಡವನ್ನು ಗಮನಿಸಿಯೇ ಇಲ್ಲ. ಇಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಿದ್ದು "ಸರ್ವೇ ಜನ ಸುಖಿನೋ ಭವಂತು" ಎಂಬ ವೇದ ವಾಕ್ಯದೊಂದಿಗೆ...

ಇಲ್ಲಿ ನಿನ್ನೆ ವಿಡಿಯೋದ ಮೂಲಕ ಹೇಳಿರುವ ಮಹಿಳೆಯ ಉದ್ದೇಶವಿಷ್ಟೆ. ಧರ್ಮದ ನಡುವೆ ವಿಷಬೀಜ ಬಿತ್ತಿ, ಕೋಮುಗಲಭೆಗೆ ಕುಮ್ಮಕ್ಕು ಕೊಡುವುದು ಅಷ್ಟೇ...

ಇಂಥವರಿಗೆ ಪ್ರಚಾರದ ತೆವಳು. ನಾವು ಇಂತಹದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದೆ. "ಸರ್ವೇ ಜನ ಸುಖಿನೋ ಭವಂತು" ಎಂಬ ವೇದ ವಾಕ್ಯದೊಂದಿಗೆ ನಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಹೋಗೋಣ.....🙏

ಜೈ ಹಿಂದ್

- Suki Shetty

ಯಶಸ್ಸಿಗೆ ಯಾವುದು ಅಡ್ಡಿಯಾಗಲ್ಲ. ಸಾಧಿಸುವ ಛಲವೊಂದಿದ್ದರೆ ಎಷ್ಟೇ ಅಡಚಣೆಗಳು ಬಂದರೂ ಮೆಟ್ಟಿ ನಿಲ್ಲುವ ಸಾಮರ್ಥ್ಯವಿದೆ ಎಂಬುದಕ್ಕೆ ಸಾಕ್ಷಿ ಇದು....
20/10/2020

ಯಶಸ್ಸಿಗೆ ಯಾವುದು ಅಡ್ಡಿಯಾಗಲ್ಲ. ಸಾಧಿಸುವ ಛಲವೊಂದಿದ್ದರೆ ಎಷ್ಟೇ ಅಡಚಣೆಗಳು ಬಂದರೂ ಮೆಟ್ಟಿ ನಿಲ್ಲುವ ಸಾಮರ್ಥ್ಯವಿದೆ ಎಂಬುದಕ್ಕೆ ಸಾಕ್ಷಿ ಇದು..❤️😍🙏

ಶುಭವಾಗಲಿ ಸಹೋದರಿ...🤩💐

ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು  #ಆತ್ಮ_ನಿರ್ಭರ್ ಭಾರತ್ ಜೊತೆ ಕೈ ಜೋಡಿಸಿ...👍🙏  🇮🇳
12/10/2020

ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು #ಆತ್ಮ_ನಿರ್ಭರ್ ಭಾರತ್ ಜೊತೆ ಕೈ ಜೋಡಿಸಿ...👍🙏

🇮🇳

 #ಆಯುಷ್ಮಾನ್_ಭಾರತ್ತಡವಾಗಿ ಬರೆದಿರುವುದಕ್ಕೆ ಕ್ಷಮೆ ಕೋರುತ್ತೇನೆ..👏ಇದರ ಬಗ್ಗೆ ಅವತ್ತೇ ಬರೆಯಬೇಕೆಂದಿದ್ದೆ, ಆದರೆ ಕಾರ್ಯದ ಮಧ್ಯೆ ಮರೆತು ಹೋಗಿ...
10/10/2020

#ಆಯುಷ್ಮಾನ್_ಭಾರತ್

ತಡವಾಗಿ ಬರೆದಿರುವುದಕ್ಕೆ ಕ್ಷಮೆ ಕೋರುತ್ತೇನೆ..👏

ಇದರ ಬಗ್ಗೆ ಅವತ್ತೇ ಬರೆಯಬೇಕೆಂದಿದ್ದೆ, ಆದರೆ ಕಾರ್ಯದ ಮಧ್ಯೆ ಮರೆತು ಹೋಗಿತ್ತು. ಇವತ್ತು ನನ್ನ ಗುರುಗಳ ಪೋಸ್ಟ್ ನೋಡಿದ ನಂತರ ಬರೆಯಬೇಕೆನಿಸಿತು, ಬರೆದಿದ್ದೇನೆ..... 👍🙏

ಆಯುಷ್ಮಾನ್ ಭಾರತ್ ೨೦೧೮ ಸೆಪ್ಟೆಂಬರ್ 25ರಂದು ದೇಶದಾದ್ಯಂತ ಜಾರಿಗೆ ಬಂದಿತು. ಆಯುಷ್ಮಾನ್ ಭಾರತ್ ಒಂದು ಉತ್ತಮ ಜನಸ್ನೇಹಿ ಯೋಜನೆ. ಅದೆಷ್ಟೋ ಬಡ ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ....

ಈಗ ವಿಷಯಕ್ಕೆ ಬರುತ್ತೇನೆ.

2019 ಫೆಬ್ರವರಿ 9ರಂದು ತಡ ರಾತ್ರಿ ನನ್ನ ಗೆಳೆಯ ಕಾರ್ಯ ಮುಗಿಸಿ ಮನೆಗೆ ಹೋಗುವಾಗ ಬೈಕ್ ಆಕ್ಸಿಡೆಂಟ್ ಆಗುತ್ತದೆ. ತಕ್ಷಣ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಗಾಯದ ಭೀಕರತೆ ನೋಡಿ ಒಳಗೂ ಸೇರಿಸಿಕೊಳ್ಳದೇ, ಆಂಬುಲೆನ್ಸ್ ನಿಂದಲೇ ಇಲ್ಲಿ ಆಗುವುದಿಲ್ಲ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸುತ್ತಾರೆ. ಆದರೆ ಆತನಿಗೆ ನೋವು ತಡೆಯಲಾರದೆ ಆಂಬುಲೆನ್ಸ್ ನಲ್ಲಿ ಇದ್ದವರ ಹತ್ತಿರ ರಿಕ್ವೆಸ್ಟ್ ಮಾಡಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲು ವಿಜ್ಞಾಪನೆ ಮಾಡುತ್ತಾನೆ. ಅವನು ಕೋರಿಕೆಯಂತೆ ಆಂಬುಲೆನ್ಸ್ ನವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸುತ್ತಾರೆ, ಚಿಕಿತ್ಸೆ ಪ್ರಾರಂಭವಾಗುತ್ತದೆ.

ಈ ವಿಷಯ ಬೆಳಿಗ್ಗೆ ನನ್ನ ಗಮನಕ್ಕೆ ಬರುತ್ತದೆ. ಆಸ್ಪತ್ರೆಗೆ ಹೋಗಿ ಎಲ್ಲಾ ವಿಷಯವನ್ನು ತಿಳಿದುಕೊಂಡು ಗೆಳೆಯನೊಂದಿಗೆ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ. ಪರಿಶೀಲಿಸಿದಾಗ ಈತ ತಡರಾತ್ರಿ ಆಗಿರುವುದರಿಂದ ನಿದ್ದೆ ಕಣ್ಣಿನಿಂದ ರಸ್ತೆ ಬದಿಯಲ್ಲಿರುವ ಡಿವೈಡರ್ ಹೊಡೆದಿರುತ್ತಾನೆ. ನಂತರ ಪೋಲಿಸ್ ಸ್ಟೇಷನ್ ಹೋಗಿ ಬೈಕ್ ನೋಡಿದಾಗ ಈತ ಬದುಕಿರುವುದೇ ಪುಣ್ಯ ಎಂದುಕೊಳ್ಳಬೇಕು ಅಷ್ಟು, ಆ ಪರಿಸ್ಥಿತಿಯಲ್ಲಿ ಬೈಕಿತ್ತು..

ಈಗ 5 - 6 ಲಕ್ಷ ರುಪಾಯಿ ಖರ್ಚಿದೆ ಅವನ ಚಿಕಿತ್ಸೆಗೆ. ಆದರೆ ಕುಟುಂಬದವರಿಂದ ಹಣ ಜೋಡಿಸಲು ಸಾಧ್ಯವಿಲ್ಲ. ಅದಕ್ಕೆ ಆಯುಷ್ಮಾನ್ ಭಾರತ್ ಅನ್ವಯಿಸುವುದಿಲ್ಲವೇ ಎಂದು ವೈದ್ಯರ ಹತ್ತಿರ ಕೇಳಿದಾಗ, ನೀವು ಸರ್ಕಾರಿ ಆಸ್ಪತ್ರೆಯಿಂದ ಲೆಟರ್ ತೆಗೆದುಕೊಂಡು ಬರಬೇಕು. ಆವಾಗ ಆಗುತ್ತದೆ ಎಂದು ತಿಳಿಸಿದರು. ಈ ಕಡೆಯಿಂದ ಎಲ್ಲಾರಿಂದ ನೆರವುಗಳು ಪ್ರಾರಂಭಿಸಿದ್ದೆವು.

ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋದಾಗ ಆಯುಷ್ಮಾನ್ ಭಾರತಕ್ಕೆ ಸಂಬಂಧಪಟ್ಟ ಅಧಿಕಾರಿಯಾಗಿದ್ದ ಸಚ್ಚಿದಾನಂದ್ ಮತ್ತು ನನಗೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಅವರು ಈಗ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಯಾಕೆ ಸಾಧ್ಯವಿಲ್ಲ ನಿನ್ನೆ ರಾತ್ರಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಅಲ್ವಾ ? ನೀವೇ ಒಳಗೆ ಸೇರಿಸಿಕೊಳ್ಳಲಿಲ್ಲ ಅಂದೇ. ಅದಕ್ಕೆ ಇಲ್ಲಿ ಚಿಕಿತ್ಸೆ ಇರಲಿಲ್ಲ ನಿಮಗೆ ವೆನ್ಲಾಕ್ ಆಸ್ಪತ್ರೆಗೆ ಹೋಗಲು ತಿಳಿಸಿದ್ದೇವೆ ಅಲ್ವಾ ನಾವು ಎಂದರು. ಆದರೆ ಅವನಿಗೆ ನೋವು ತಡೆಯಲಾರದೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಹೇಳಿದೆ. ಅದು ನಿಮ್ಮ ತಪ್ಪು ಆಯುಷ್ಮಾನ್ ಭಾರತ್ ಸರ್ಕಾರಿ ಆಸ್ಪತ್ರೆಗಳು ಮಾತ್ರ ಆಗುವುದು, ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅ ಚಿಕಿತ್ಸೆ ಇಲ್ಲದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಬಹುದು ಅದು ಸರ್ಕಾರಿ ಆಸ್ಪತ್ರೆಗಳ ಪತ್ರ ಇದ್ದರೆ ಮಾತ್ರ ಅಂತ ಹೇಳಿದರು.... ನಂತರ ಸಿಟ್ಟಾಗಿ ವೈದ್ಯಾಧಿಕಾರಿಗೆ ಮಾತನಾಡಲು ಹೋದೆ ಅವರೊಂದಿಗೆ ಚರ್ಚಿಸಿ, ವಿನಂತಿ ಮಾಡಿದ ನಂತರ ಪತ್ರ ಕೊಡುತ್ತೇನೆ ಎಂದು ತಿಳಿಸಿದರು. ಆದರೆ ಈಗ ಮತ್ತೊಂದು ತೊಂದರೆಗೆ ಸಿಲುಕಿತು. ಅದೇನೆಂದರೆ ಅವನು ಕಾಲಿಗೆ ಆಗಿರುವ ಪೆಟ್ಟಿಗೆ ಒಂದು ಕಾಲು ತೆಗೆಯಬೇಕು, ಆದರೆ ಈ ಚಿಕಿತ್ಸೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಬರುವುದಿಲ್ಲ ಎಂದು ವೈದ್ಯರು ಹೇಳಿದರು. ಇದು ನನ್ನಲ್ಲಿ ಇನ್ನೂ ಗೊಂದಲ ಸೃಷ್ಟಿ ಮಾಡಿತ್ತು. ಇದಕ್ಕೆ ಹೊಣೆ ಯಾರು ವೈದ್ಯರ ಹತ್ತಿರ ಮಾಡಿದೆ. ಆಯುಷ್ಮಾನ್ ಭಾರತ್ ಜಾರಿಗೆ ಮಾಡುವ ಮೊದಲು ಒಂದು ವೈದ್ಯರ ಸಮಿತಿ ರಚನೆಯಾಗಿತ್ತು. ಆ ವೈದ್ಯರ ಸಮಿತಿಯಲ್ಲಿ ಯಾವೆಲ್ಲ ಚಿಕಿತ್ಸೆಗೆ ಆಯುಷ್ಮಾನ್ ಭಾರತ್ ಮಾಡಬಹುದು ಎಂದು ತೀರ್ಮಾನ ಮಾಡಿಕೊಂಡು, ಅದರಂತೆ ಆಯಾ ಆಯಾ ಚಿಕಿತ್ಸೆಗಳಿಗೆ ಕೊಡ್ ವರ್ಡ್ ಕೊಟ್ಟಿದ್ದಾರೆ. ಆ ಪಟ್ಟಿಯಲ್ಲಿ ಈ ಚಿಕಿತ್ಸೆ ಬರುವುದಿಲ್ಲ. ಇದು ಎಲ್ಲಾ ಅಲ್ಲಿಂದಲೇ ಸರಿಯಾಗಬೇಕು ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದರು. ಇನ್ನು ಇದರ ಬಗ್ಗೆ ಪೂರ್ಣವಾಗಿ ತಿಳಿದು ಕೊಳ್ಳಬೇಕೆಂಬ ಯೋಚನೆ ಮೂಡಿತು.

ಮೊದಲು ಗೆಳೆಯ ಹುಷಾರಾಗಿ ಮನೆಗೆ ಬರಬೇಕು, ನಂತರ ಇದರ ಕಡೆ ಗಮನ ಕೊಡೋಣ ಅಂತ ಸುಮ್ಮನಾದೆ. ಅವನ ಗೆಳೆಯರ ಸಹಕಾರದೊಂದಿಗೆ ಅವನ ಚಿಕಿತ್ಸೆಗೆ ಬೇಕಾಗಿದ್ದ ಹಣ ದಾನಿಗಳ ಮುಖಾಂತರ ಸಂಗ್ರಹವಾಯಿತು. ಎಲ್ಲಾ ಚಿಕಿತ್ಸೆ ಮುಗಿದು ಒಂದು ಕಾಲನ್ನು ಕಳೆದುಕೊಂಡು ಮನೆಗೆ ಬಂದ..😓 ಈಗಲೂ work from home ಕೆಲಸ ಮಾಡಿಕೊಂಡು ಮನೆಯಲ್ಲಿಯೇ ಇದ್ದಾನೆ....🙏

ಈಗ ಆಯುಷ್ಮಾನ್ ಭಾರತ್ ಬಗ್ಗೆ ಹೇಳುತ್ತೇನೆ...

ಆಯುಷ್ಮಾನ್ ಭಾರತ್ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಲಕ್ಷ ರೂಪಾಯಿಗಳವರೆಗೆ ನೀಡುವಷ್ಟು ವ್ಯಾಪ್ತಿಯನ್ನು ಹೊಂದಿದೆ ಹಾಗೂ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ...

ಯೋಜನೆಯ ಪ್ರಯೋಜನಗಳು ದೇಶಾದ್ಯಂತ ಬಳಸಬಹುದಾಗಿದ್ದು, ಆಯುಷ್ಮಾನ್ ಭಾರತ್ ಜಾರಿಗೆ ಬಂದ ಸಮಯದಲ್ಲಿ ಈ ಯೋಜನೆಯಡಿ ಬರುವ ಫಲಾನುಭವಿಗೆ ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗಳಿಂದ ಖರ್ಚಿಲ್ಲದೆ ಪ್ರಯೋಜನಗಳನ್ನು ಪಡೆಯಲು ಅವಕಾಶವಿರುತ್ತಿತ್ತು.

ಆದರೆ ಇದನ್ನು ದುರುಪಯೋಗ ಮಾಡಿಕೊಂಡ ಕೆಲವು ಖಾಸಗಿ ಆಸ್ಪತ್ರೆಗಳು ನಕಲಿ ವೈದ್ಯಕೀಯ ಮಸೂದೆಗಳನ್ನು ಸಲ್ಲಿಸುವ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿತು. ಬಹಳ ಹಿಂದೆಯೇ ಡಿಸ್ಚಾರ್ಜ್ ಆಗಿರುವ ವ್ಯಕ್ತಿಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ ಮತ್ತು ಮೂತ್ರಪಿಂಡ ಕಸಿ ಸೌಲಭ್ಯವಿಲ್ಲದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಡೆಸಿದಂತೆ ತೋರಿಸಲಾಗಿದೆ...😉😉

ಉತ್ತರಾಖಂಡ ರಾಜ್ಯದಲ್ಲಿ ಮಾತ್ರ 697 ನಕಲಿ ಪ್ರಕರಣಗಳಿವೆ. ಈ ಯೋಜನೆಯಡಿಯಲ್ಲಿ ನಡೆದ ವಂಚನೆಗಾಗಿ ಆಸ್ಪತ್ರೆಗಳಿಗೆ ಒಂದು ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಡಿಯಲ್ಲಿ ಅನೇಕ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇಂತಹ ಘಟನೆಗಳು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಡೆದಿದೆ..😠

ಇಂತಹ ಅವ್ಯವಹಾರವನ್ನು ತಡೆಗಟ್ಟುವ ಸಲುವಾಗಿ,
ಯಾವುದೇ ವ್ಯಕ್ತಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಆ ಚಿಕಿತ್ಸೆ ಸೌಲಭ್ಯವಿಲ್ಲದಿದ್ದರೆ ಅವರು ಹತ್ತಿರದ ಸೌಲಭ್ಯ ಇರುವ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಬೇಕು, ತುಂಬಾ ತುರ್ತಾಗಿ (emergency case) ಚಿಕಿತ್ಸೆ ಆಗಬೇಕಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಂದು ಪತ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಬರೆದು ಕೊಡಬೇಕು ಎಂಬ ನಿಯಮ ಜಾರಿಗೆ ತಂದಿದ್ದಾರೆ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ, ಅದು ಬದಲಾವಣೆ ಕೂಡ ಆಗಬಹುದು...

ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಮಾಡಿದ ಅವ್ಯವಹಾರಗಳಿಂದ ಜನರು ತೊಂದರೆಗೆ ಸಿಲುಕಿದರು. ಎಮರ್ಜೆನ್ಸಿ ಕೇಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಯೋಚನೆ ಯಾರಿಗೂ ಬರುವುದಿಲ್ಲ. ವ್ಯಕ್ತಿಯ ಪ್ರಾಣ ಉಳಿಸುವ ಸಲುವಾಗಿ ತಕ್ಷಣ ಒಳ್ಳೆಯ ರೀತಿಯಲ್ಲಿ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಏಕೆಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಇದ್ದಷ್ಟು ಸ್ಪೆಷಲಿಟಿ, ಸೌಲಭ್ಯಗಳು ಸರ್ಕಾರಿ ಆಸ್ಪತ್ರೆ ಇಲ್ಲ ಎಂಬ ಯೋಚನೆಯಿಂದ... ಆದರೆ ನಂತರ ಆಸ್ಪತ್ರೆಯ ವೆಚ್ಚ ಭರಿಸಲು ಪರದಾಡುತ್ತಾರೆ. ಕೊನೆಗೆ ಸಾಲ ಮನ್ನಾ ಮಾಡಿದರು ಬಿಲ್ ಕಟ್ಟುತ್ತಾರೆ. 😌

ಸರ್ಕಾರ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಶವಾಗಿ ಇದರ ಬಗ್ಗೆ ಗಮನಿಸಿ ತೀರ ಎಮರ್ಜೆನ್ಸಿ ಕೇಸಿಗೆ ಸರ್ಕಾರಿ ಆಸ್ಪತ್ರೆಗಳ ಪತ್ರವಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಮಾಡುವ ಹಾಗೆ ಮಾಡಿದರೆ ಜನರಿಗೆ ತುಂಬಾ ಉಪಕಾರಿಯಾಗುತ್ತದೆ...

ಎರಡನೇ ವಿಚಾರ ಅಂದರೆ ಕೆಲವು ಚಿಕಿತ್ಸೆಗಳು ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಯಾಕೆ ಎಂಬುದನ್ನು ವಿಮರ್ಶಿಸಬೇಕು. ಇದರಲ್ಲಿ ಖಾಸಗಿ ಆಸ್ಪತ್ರೆಗಳ ಲಾಭಿ ಎದ್ದು ಕಾಣುತ್ತಿದೆ. ಒಂದು ಲಕ್ಷಕ್ಕಿಂತ ಅಧಿಕವಾಗಿ ಖರ್ಚಾಗುವ ಎಲ್ಲಾ ಚಿಕಿತ್ಸೆಗಳಿಗೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಫಲಾನುಭವಿಯಾಗುವಂತೆ ಮಾಡಬೇಕೆಂಬುದು ನನ್ನ ಉದ್ದೇಶ ಮತ್ತು ಆದಷ್ಟು ಎಲ್ಲಾ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರಕುವಂತೆ ಆಗಲಿ ಎಂಬುದು ನನ್ನ ಕೋರಿಕೆ...🙏

ನಿರಂತರವಾಗಿ ವಿಕಸಿಸುತ್ತಿರುವ ವಂಚನೆ - ನಿಯಂತ್ರಣ ವ್ಯವಸ್ಥೆ, ಯೋಜನೆ ಬೆಳೆದಂತೆ ಅದನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಜನರು ಯಾವುದೇ ತೊಂದರೆ ಸಿಲುಕದೆ ತುರ್ತು ಸ್ಥಿತಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಆಗಲಿ ಎಂಬ ಆಶಯದೊಂದಿಗೆ.....

PMO India Narendra Modi Dr. Harsh Vardhan Ministry of Health and Family Welfare, Government of India

- Suki Shetty

 #ವಿಶ್ವ_ಅಂಚೆ_ದಿನ 😍🙏ಅದೊಂದು ಕಾಲವಿತ್ತು. 1980ರ ದಶಕ ಹಾಗೂ ಅದಕ್ಕೂ ಮುನ್ನ ಹುಟ್ಟಿದವರಿಗೆ ತುಂಬಾ ಚನ್ನಾಗಿ ಗೊತ್ತಿರುವ ಕಾಲವದು. ಆ ಕಾಲದಲ್ಲಿ...
09/10/2020

#ವಿಶ್ವ_ಅಂಚೆ_ದಿನ 😍🙏

ಅದೊಂದು ಕಾಲವಿತ್ತು. 1980ರ ದಶಕ ಹಾಗೂ ಅದಕ್ಕೂ ಮುನ್ನ ಹುಟ್ಟಿದವರಿಗೆ ತುಂಬಾ ಚನ್ನಾಗಿ ಗೊತ್ತಿರುವ ಕಾಲವದು. ಆ ಕಾಲದಲ್ಲಿ ಅಂಚೆಗಿದ್ದ ಮಹತ್ವ, ಇವತ್ತಿನ ವಾಟ್ಸಪ್ಪಿಗೂ ಇಲ್ಲ! ಊರಿಗೊಂದು ಪೋಸ್ಟ್‌ ಆಫೀಸ್‌ ಇದ್ದರೆ ಅದೇ ದೊಡ್ಡ ಹೆಮ್ಮೆ. ಗೋಡೆಗೆ, ಕಂಬಕ್ಕೆ ಕಟ್ಟಿರುತ್ತಿದ್ದ ಕೆಂಪು ಡಬ್ಬಿಯೇ ಜಗತ್ತಿನ ಸಂವಹನ ಸಾಧನ! ಊರಿಗೆ ಹೊರಟು ನಿಂತವರಿಗೆ ಕಾಗದ ಬರೆಯೋದು ಮರೆಯಬೇಡ ಎಂದು ಹಿರಿಯರು ತಪ್ಪದೇ ಹೇಳುತ್ತಿದ್ದರು. ಹಿರಿಯರ ಮಾತಿಗೆ ಕಟ್ಟುಬಿದ್ದು ತೀರ್ಥರೂಪು ಸಮಾನರಾದ.. ಎಂದು ಆರಂಭಿಸಿ ಉದ್ದನೆಯ ಕಾಗದವೊಂದನ್ನು ಬರೆದೇ ಬಿಡುತ್ತಿದ್ದರು. ಆ ಕಾಗದ ಓದುತ್ತಿದ್ದರೆ, ಬರೆದವರೇ ಎದುರು ನಿಂತು ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವಂಥಾ ದಿವ್ಯಾನುಭವ!

ಇಷ್ಟೆಲ್ಲಾ ಹಳೇ ಕಥೆ ಕೆದಕೋಕೆ ಕಾರಣ, ಇಂದು ವಿಶ್ವ ಅಂಚೆ ದಿನ. ಪ್ರತಿವರ್ಷ ಅಕ್ಟೋಬರ್ 9ರಂದು ಜಾಗತಿಕ ಅಂಚೆ ಸಂಘಟನೆಯ ವಾರ್ಷಿಕೋತ್ಸವ ಆಚರಿಸಲಾಗುತ್ತೆ. 1874ರಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ಆರಂಭವಾದ ಈ ಅಂಚೆ ದಿನ, ಇಂದು ವಿಶ್ವವ್ಯಾಪಿ. 1969ರಲ್ಲಿ ವಿಶ್ವಾದ್ಯಂತ ಅಂಚೆ ದಿನ ಆಚರಿಸಲು ನಿರ್ಧರಿಸಲಾಯ್ತು.

ಅಂಚೆ.. ಅಂದು.. ಇಂದು.
ಅಪ್ಪಾ.. ಇಲ್ಲಿ ನಾವು ಕೆಂಪು ಡಬ್ಬಿಗೆ ಹಾಕಿದ ಪೋಸ್ಟು ಅಲ್ಲಿ ಆ ಊರಲ್ಲಿ ತಾತನಿಗೆ ಹೇಗೆ ಸಿಗುತ್ತೆ ಎಂದು ಬೆರಗುಗಣ್ಣಿನಲ್ಲಿ ಪ್ರಶ್ನೆ ಕೇಳುತ್ತಿದ್ದ ಪುಟಾಣಿಗಳೇ ಇಂದು ಸೆಲ್‌ಫೋನ್ ಹಿಡಿದಿದ್ದಾರೆ. ಅದ್ಯಾವುದೋ ಮಾಯದಲ್ಲಿ ಪೋಸ್ಟ್‌ ಬಾಕ್ಸ್‌ ತೆಗೆದು ಅದರೊಳಗಿಂದ ಪತ್ರಗಳನ್ನು ತೆಗೆದುಕೊಂಡು ಹೋಗಿಬಿಡುತ್ತಿದ್ದರು! ಅಂಚೆಯಣ್ಣ ಪೋಸ್ಟ್‌ ಡಬ್ಬಿ ತೆಗೆಯೋದನ್ನೇ ಕಾದು ಕುಳಿತಿರುತ್ತಿದ್ದ ಪುಟಾಣಿಗಳು, ಅದರೊಳಗೇನೋ ಬ್ರಹ್ಮಾಂಡ ರಹಸ್ಯ ಇರಬಹುದೇ ಎಂದು ಇಣುಕಿ ನೋಡಿದ್ದೇ ನೋಡಿದ್ದು! ಹಳ್ಳಿಗಳಲ್ಲಿ ಊರಿಗೊಂದು, ಬೆಂಗಳೂರಿನಂಥಾ ನಗರಗಳಲ್ಲಿ ಗಲ್ಲಿಗೊಂದರಂತೆ ಇದ್ದ ಪೋಸ್ಟ್‌ ಡಬ್ಬಿಗಳು ಇಂದು ಕಣ್ಣಿಗೆ ಬೀಳೋದೇ ವಿರಳ. ಕೆಂಪು ಡಬ್ಬಿಗಳ ಜಾಗದಲ್ಲಿ ಹಳದಿ ಬಣ್ಣದ ಕಾಯಿನ್ ಫೋನ್ ಬೂತ್‌ ಬಂತು, ಇದೀಗ ಸೆಲ್‌ಫೋನ್ ಭರಾಟೆಯ ನಡುವೆ, ಹಳದಿ ಕಾಯಿನ್ ಬೂತ್‌ಗಳೂ ಮಾಸಿ ಹೋದವು.

ಪೋಸ್ಟ್‌, ಪೋಸ್ಟ್‌ ಎಂದು ಸೈಕಲ್ ಏರಿ ಅಂಚೆಯಣ್ಣ ಮನೆ ಬಾಗಿಲಿಗೆ ಬಂದರೆ ಸಾಕು ಎಷ್ಟೊಂದು ಸಂಭ್ರಮ! ಯಾರು ಪತ್ರ ಬರೆದಿರಬಹುದು? ಹೀಗೆ ಊಹೆ ಮಾಡುತ್ತಲೇ ಏಳು ತಲೆಮಾರು ಹಿಂದಿನವರೆಲ್ಲಾ ಸಡನ್‌ ಆಗಿ ನೆನಪಿಗೆ ಬಂದು ಬಿಡುತ್ತಿದ್ದರು! ಅಂಚೆಯಣ್ಣ ಕೊಟ್ಟುಹೋದ ಪತ್ರವನ್ನ ಓದುವಾತ ವಿದ್ಯಾವಂತನೇ ಆಗಿರಬೇಕಲ್ಲಾ! ಅದರಲ್ಲೂ ತಾತನೆದುರು ಪತ್ರ ಓದುವ ಮೊಮ್ಮಗನಿಗೆ ಎಷ್ಟೊಂದು ಗೌರವ! ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಬರುವ ಪತ್ರಗಳನ್ನು ಕೊಂಕಿಗೆ ಸಿಕ್ಕಿಸಿ ಮನೆಯ ಮಾಡಿನಲ್ಲಿರೋ ಜಂತೆಗೆ ನೇತು ಹಾಕಿ ಇಟ್ಟಿರುತ್ತಿದ್ದರು. ಆ ಕಾಲದಲ್ಲಿ ಅವುಗಳೇ ‘ಇಮೇಲ್ ಇನ್‌ಬಾಕ್ಸ್‌’! ಮೊದಲು ನೀವು ಪತ್ರ ಬರೆಯಿರಿ, ಅದನ್ನು ಓದಿ ನಾವು ಕ್ಷೇಮವಾಗಿದ್ದೇವೆ ಅಂತಾ ಪ್ರತ್ಯುತ್ತರ ಬರೆಯುತ್ತೇವೆ.. ಅಲ್ಲಿಗೆ ಉಭಯ ಕುಶಲೋಪರಿ ಸಾಂಪ್ರತ..!

ಆದರೇನಾಯ್ತು.. 80ರ ದಶಕದಿಂದಲೇ ನಿಧಾನವಾಗಿ ಪತ್ರ ವ್ಯವಹಾರ ಕಡಿಮೆಯಾಗುತ್ತಾ ಬಂತು. ಇಂಗ್ಲೆಂಡ್‌ ಲೆಟರ್‌ ಎಂದೇ ಜನಪ್ರಿಯವಾಗಿದ್ದ ಇನ್‌ ಲ್ಯಾಂಡ್‌ ಲೆಟರ್‌ ಕಣ್ಣಿಗೆ ಬೀಳೋದೇ ವಿರಳವಾಯ್ತು. ಪೋಸ್ಟ್‌ ಕಾರ್ಡ್‌ಗಳಂತೂ ಬ್ಯಾಂಕು, ಪತ್ತಿನ ಸಹಕಾರ ಸಂಘದ ಸೂಚನಾ ಪತ್ರಗಳಿಗೆ ಸೀಮಿತವಾಯ್ತು. ಗಾಂಧಿ ತಾತನ ಮುಖವಿದ್ದ ಅಂಚೆ ಚೀಟಿಗಳನ್ನು ಅಂಟಿಸಿಕೊಂಡು ಬರುತ್ತಿದ್ದ ಪತ್ರಗಳು ಸರ್ಕಾರಿ ಮಾಹಿತಿ ರವಾನೆಗಷ್ಟೇ ಸೀಮಿತವಾಗಿಬಿಡ್ತು. ಪತ್ರಗಳನ್ನು ಊರಿಂದೂರಿಗೆ ರವಾನಿಸುವ ರೇಲ್ವೇ ಮೇಲ್‌ ಸರ್ವೀಸ್ ಕೂಡಾ ಮಂಕಾಯ್ತು. ಹಾಗೆಂದ ಮಾತ್ರಕ್ಕೆ ಸಂವಹನ ನಿಲ್ಲಿಸೋಕೆ ಸಾಧ್ಯವೇ..? ಅದು ಲ್ಯಾಂಡ್‌ ಲೈನ್ ಯುಗ. ಟ್ರಂಕ್‌ ಕಾಲು, ಲೈಟ್ನಿಂಗ್ ಕಾಲುಗಳೇ ಕಾಲು ಮುರಿದು ಮೂಲೆಗೆ ಬಿದ್ದದ್ದ ಯುಗ ಅದು! ಮನೆ ಮನೆಗೂ ಲ್ಯಾಂಡ್‌ ಲೈನ್‌ ಫೋನ್‌ಗಳು ಬಂದವು. ಎಸ್‌ಟಿಡಿ, ಐಎಸ್‌ಡಿ ಎಂಬ ಹೊಸ ಪದಗಳು ಬಂದವು. ದೂರದಲ್ಲಿದ್ದವರನ್ನು ದೂರವಾಣಿಯಲ್ಲಿ ಜೋರಾಗಿ ಕೂಗಿ ಮಾತನಾಡುವ ತೊಂದರೆಯೂ ಇಲ್ಲವಾಯ್ತು. ಇಲ್ಲಿ ಮೆಲ್ಲಗೆ ಆಡಿದ ಮಾತೇ ಅಲ್ಲಿಯೂ ಹಿತಕರವಾಗಿ ಕೇಳಿಸುವಂತಾ ತಂತ್ರಜ್ಞಾನ ವಿಕಸನವಾಯ್ತು.

ಸ್ಥಾವರಕ್ಕಳಿವುಂಟು.. ಜಂಗಮಕ್ಕಳಿವಿಲ್ಲ!
ಹೌದು.. ವಚನಗಳ ಸಾರ ಎಷ್ಟು ಸತ್ಯ! ಸ್ಥಾವರದಂತಿದ್ದ ಲ್ಯಾಂಡ್‌ ಲೈನ್‌ ಬದಲಿಗೆ ಪೇಜರ್‌ ಬಂತು, ಮೊಬೈಲ್‌ ಬಂತು.. ಈಗ ಸೆಲ್‌ಫೋನ್‌ ಯುಗ. ಆಂಡ್ರಾಯ್ಡ್‌ ಜಮಾನ. ವಾಟ್ಸಪ್, ಮೆಸೆಂಜರ್, ವೀಡಿಯೋ ಕಾಲ್ ಮೇನಿಯಾದಲ್ಲಿ ಕೂಲ್‌ ಆಗಿಬಿಟ್ಟಿದೆ ಕಮ್ಯುನಿಕೇಷನ್ನು! ಆದ್ರೆ ಅಂಚೆ ಇಲಾಖೆ ಕಥೆ ಏನಾಯ್ತು?
ಅಂದಿನ ಅಂಚೆ ಕಚೇರಿ.. ಇಂದಿನ ಇಂಡಿಯಾ ಪೋಸ್ಟ್‌!
ಅಂಚೆ ಕಚೇರಿ ಅಂದ್ರೆ ಏನು? ಗಮ್ಮಿನ ಗಮಲು, ಪುಸ್ತಕ, ಹಾಳೆ, ರಸೀತಿ, ಅಂಚೆ ಚೀಟಿ. ಅದೊಂದು ಕಪ್ಪನೆಯ ಡಬ್ಬಿ! ಅದಕ್ಕೆ ಗುದ್ದೋದಕ್ಕಾಗಿಯೇ ಒಂದು ಸೀಲು! ನಾವು ನಮ್ಮವರಿಗೆ ರವಾನಿಸಿದ ಎಲ್ಲಾ ಕಾಗದಗಳ ಮೇಲೂ ವೃತ್ತಾಕಾರದ ಕಪ್ಪುಬಿಲ್ಲೆ. ಅದರೊಳಗೆ ಊರಿನ ಹೆಸರು. ಚೆಂದದ ಅಂಚೆ ಚೀಟಿಗಳಲ್ಲಿ ಮೂಡಿರುತ್ತಿದ್ದ ಚಿತ್ರಗಳ ಮೇಲೂ ಕಪ್ಪನೆಯ ಸೀಲು! ಗಾಂಧಿ ತಾತ, ಸುಭಾಷ್‌ ಚಂದ್ರ ಬೋಸ್‌ಗೂ ಸೀಲ್ ಗುದ್ದಿ ಕಳಿಸಿರುತ್ತಿದ್ದ ಅಂಚೆಯಣ್ಣ. ಆದರೆ ಇಂದು? ಈಗ ಅಂಚೆ ಇಲಾಖೆ ಬದಲಾಗಿದೆ. ಸೀಲ್‌ಗಳ ಬದಲಿಗೆ ಕಂಪ್ಯೂಟರ್‌ ಪ್ರಿಂಟ್‌ ಔಟ್‌ ಬಂದುಬಿಟ್ಟಿದೆ. ನಾವು, ನೀವು ಇಂದು ಇಮೇಲ್, ವಾಟ್ಸಪ್, ವೀಡಿಯೋ ಕಾಲ್‌ಗೆ ಬಂದು ನಿಂತಿರುವಾಗ ಮನೆ ಮನೆಗೆ ಪತ್ರ ಬರೆಯೋರು ಯಾರು? ಹಾಗಾಗಿಬಿಟ್ರೆ ಅಂಚೆಯಣ್ಣನಿಗೆ ಕೆಲಸವೇನು? ಗೂಗಲ್ ಪೇ, ಫೋನ್ ಪೇನಿಂದಾಗಿ ಮನಿ ಆರ್ಡರ್ ಕೂಡಾ ಮೂಲೆಗುಂಪಾಗಿದೆ. ಎಲ್‌ಐಸಿ, ಸರ್ಕಾರಿ ಕಾಗದ ಪತ್ರ, ಆಧಾರ್ ಕಾರ್ಡ್‌ ಹಂಚಲಷ್ಟೇ ಅಂಚೆ ಇಲಾಖೆ ಸೀಮಿತವೇ? ಇಲ್ಲವೇ ಇಲ್ಲ, ಇಂದು ಅಂಚೆ ಇಲಾಖೆ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ! ಹಿಂದೆ ಇದ್ದ ಎನ್‌ಎಸ್‌ಸಿ, ಆರ್‌ಡಿ, ಪಿಪಿಎಫ್‌ ಅಷ್ಟೇ ಅಲ್ಲ, ಸುಕನ್ಯಾ ಸಮೃದ್ದಿ ಯೋಜನೆಯಂತಾ ಸ್ಕೀಂಗಳೂ ಪೋಸ್ಟ್‌ ಆಫೀಸ್‌ನಲ್ಲಿವೆ. ಗೂಗಲ್‌ ಪೇಗೆ ಸಡ್ಡು ಹೊಡೆಯಬಲ್ಲ ತಂತ್ರಜ್ಞಾನವೂ ಇಂಡಿಯಾ ಪೋಸ್ಟ್‌ನಲ್ಲಿದೆ..

ಅಂಚೆಯಣ್ಣ ಈಗ ಹೇಗಿದ್ದಾನೆ?
ಜನರೇನೋ ಬದಲಾದರು. ಅಂಚೆಯಣ್ಣ ಬದಲಾಗುವನೇ? ಮನೆ ಮನೆಗೆ ಮೊಬೈಲು ಬಂದ ಮೇಲೆ ಪತ್ರದ ಗೊಡವೆಯೇಕೆ? ಅಂಚೆಯಣ್ಣನ ಜೊತೆ ಮಾತೇಕೆ? ಆದರೆ, ಆತ ಇಂದಿಗೂ ಇದ್ದಾನೆ. ಆಧಾರ್ ಕಾರ್ಡುಗಳು, ರಿಜಿಸ್ಟರ್ಡ್‌ ಪೋಸ್ಟ್‌ಗಳು, ಸ್ಪೀಡ್ ಪೋಸ್ಟ್‌ಗಳು, ಎಲ್‌ಐಸಿಯಂಥಾ ಸೇವೆಗಳ ಎಚ್ಚರಿಕೆ ಪತ್ರಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾನೆ. ಆದ್ರೆ, ಹಿಂದೆ ಅಂಚೆಯಣ್ಣ ಬಂದಾಗ ಇರುತ್ತಿದ್ದ ಸುಗ್ಗಿ ಈಗಿಲ್ಲ....

ಶತಮಾನಗಳ ಇತಿಹಾಸವಿರುವ ಭಾರತೀಯ ಅಂಚೆ ಇಲಾಖೆ, ಆಗ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಅಂಗಿ ಹರಿದುಕೊಂಡ ಮಗುವಿಗೆ ಪೋಸ್ಟಾಪೀಸ್‌ ಎಂದು ಲೇವಡಿ ಮಾಡುವಷ್ಟರ ಮಟ್ಟಿಗೆ ಮನೆಮನೆಯಲ್ಲೂ ಫೇಮಸ್‌ ಆಗಿತ್ತು ಅಂಚೆ ಇಲಾಖೆ! ಆದ್ರೆ, ದಿನಗಳೆದಂತೆ ಅಂಚೆ ಇಲಾಖೆ ಕಳೆಗುಂದಿದೆ. ಆದ್ರೆ, ಅಂಚೆ ಇಲಾಖೆಗೆ ಇರುವ ವಿಶ್ವಾಸಾರ್ಹತೆ ಮಾತ್ರ ಕಡಿಮೆಯಾಗಿಲ್ಲ. ಇದೇ ವಿಶ್ವಾಸಾರ್ಹತೆಯನ್ನು ಬಳಕೆ ಮಾಡಿಕೊಂಡು ಆನ್‌ ಲೈನ್‌ ಬ್ಯಾಂಕಿಂಗ್ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಮುಂದಿನ ದಿನಗಳಲ್ಲಿ ಜನಮಾನಸಕ್ಕೆ ಪರಿಚಯಿಸಲಿ...👏🙏

ವಿಶ್ವ ಅಂಚೆ ದಿನದಂದು ಭಾರತೀಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು...🙇👏🙏

ಬೆಂಗಳೂರು ಮೂಲದ ಐಸ್ಐಸ್ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎನ್ಐಎ ಇಬ್ಬರು ಆರೋಪಿಗಳಾದ ಅಹಮದ್ ಅಬ್ದುಲ್ ಕೇಡರ್ ಮತ್ತು ಇರ್ಫಾನ್ ನಾ...
08/10/2020

ಬೆಂಗಳೂರು ಮೂಲದ ಐಸ್ಐಸ್ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎನ್ಐಎ ಇಬ್ಬರು ಆರೋಪಿಗಳಾದ ಅಹಮದ್ ಅಬ್ದುಲ್ ಕೇಡರ್ ಮತ್ತು ಇರ್ಫಾನ್ ನಾಸಿರ್ ಅವರನ್ನು ಬಂಧಿಸಿದೆ. ಅಹ್ಮದ್ ಅಬ್ದುಲ್ ಕೇಡರ್ ಚೆನ್ನೈನ ಬ್ಯಾಂಕಿನಲ್ಲಿ ವ್ಯವಹಾರ ವಿಶ್ಲೇಷಕರಾಗಿದ್ದಾರೆ, ಇರ್ಫಾನ್ ನಾಸಿರ್ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರಿಯಾಗಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ...👍✌️



Great Job by NIA team... 🇮🇳💪

IndiGo ವಿಮಾನ ಸಿಬ್ಬಂದಿಗಳಿಂದ ದೇವರು ಮೆಚ್ಚುವ ಕಾರ್ಯ....🙇😍🙏ಆದರೆ ತುಂಬು ಗರ್ಭಿಣಿಯನ್ನು ವಿಮಾನದಲ್ಲಿ ಪಯಣ ಬೆಳೆಸಲು ಅನುಮತಿ ನೀಡಿರುವುದು ತಪ...
07/10/2020

IndiGo ವಿಮಾನ ಸಿಬ್ಬಂದಿಗಳಿಂದ ದೇವರು ಮೆಚ್ಚುವ ಕಾರ್ಯ....🙇😍🙏

ಆದರೆ ತುಂಬು ಗರ್ಭಿಣಿಯನ್ನು ವಿಮಾನದಲ್ಲಿ ಪಯಣ ಬೆಳೆಸಲು ಅನುಮತಿ ನೀಡಿರುವುದು ತಪ್ಪು.... 😉

ಅಮರ್ ರಹೇ... 🙇🙏
07/10/2020

ಅಮರ್ ರಹೇ... 🙇🙏

ಪಾಕಿಗಳನ್ನ ಅಟ್ಟಾಡಿಸಿ ಹೊಡೆದಿದ್ದ  #ಸರ್ಜಿಕಲ್_ಸ್ಟ್ರೈಕ್ ಗೆ ಇಂದಿಗೆ ನಾಲ್ಕು ವರ್ಷ...😍💪🙏 #ಪರಾಕ್ರಮ_ಪರ್ವ 💪🏼😍 #ಜೈ_ಜವಾನ್ 🙏⛳
29/09/2020

ಪಾಕಿಗಳನ್ನ ಅಟ್ಟಾಡಿಸಿ ಹೊಡೆದಿದ್ದ #ಸರ್ಜಿಕಲ್_ಸ್ಟ್ರೈಕ್ ಗೆ ಇಂದಿಗೆ ನಾಲ್ಕು ವರ್ಷ...😍💪🙏

#ಪರಾಕ್ರಮ_ಪರ್ವ 💪🏼😍
#ಜೈ_ಜವಾನ್ 🙏⛳

Address

Udupi
574102

Alerts

Be the first to know and let us send you an email when Suketh Shetty posts news and promotions. Your email address will not be used for any other purpose, and you can unsubscribe at any time.

Share

Category