ಬಿರುವೆರುಕುಡ್ಲ ಉಡುಪಿಘಟಕ

  • Home
  • India
  • Udupi
  • ಬಿರುವೆರುಕುಡ್ಲ ಉಡುಪಿಘಟಕ

ಬಿರುವೆರುಕುಡ್ಲ ಉಡುಪಿಘಟಕ Contact information, map and directions, contact form, opening hours, services, ratings, photos, videos and announcements from ಬಿರುವೆರುಕುಡ್ಲ ಉಡುಪಿಘಟಕ, Social service, Udupi.

15/08/2026
02/08/2026

ಮಾನವೀಯತೆಯ ಒಂದು ಶ್ರೇಷ್ಠ ಕಾರ್ಯ..!

ಶ್ರೀ ದಿನಕರ ಜೆ. ಪೂಜಾರಿ ಹಾಗೂ ಶ್ರೀಮತಿ ಸೌಮ್ಯಾ ಪೂಜಾರಿ ಅವರ ಪುಟ್ಟ ಮಗುವಿಗೆ ಗಂಭೀರವಾದ ಬೋನ್ ಮ್ಯಾರೋ (ಮೂಳೆಮಜ್ಜೆ) ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿದ್ದು, ಜೀವ ಉಳಿಸುವ ಚಿಕಿತ್ಸೆಗೆ ತುರ್ತಾಗಿ ₹18 ಲಕ್ಷದ ಅಗತ್ಯವಿತ್ತು.

ಈ ಮಾನವೀಯ ಮನವಿಗೆ ಸ್ಪಂದಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು, ಶಾಸಕ ಶ್ರೀ ವೇದವ್ಯಾಸ ಕಾಮತ್ ಹಾಗೂ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ (ರಿ) ಸಂಸ್ಥಾಪಕ ಅಧ್ಯಕ್ಷ ಶ್ರೀ ಉದಯ್ ಪೂಜಾರಿ ಅವರ ಮನವಿಯ ಮೇರೆಗೆ ಸ್ವತಃ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಮಗುವಿನ ಆರೋಗ್ಯ ಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬಳಿಕ ತಮ್ಮ ವೈಯಕ್ತಿಕ ನೆರವನ್ನು ನೀಡಿ, ಮಗುವಿನ ಚಿಕಿತ್ಸೆಯು ಯಾವುದೇ ವಿಳಂಬವಿಲ್ಲದೆ ಆರಂಭವಾಗುವಂತೆ ಮಹತ್ವದ ಪಾತ್ರ ವಹಿಸಿದರು.

ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿದ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ (ರಿ) – ದುಬೈ ಘಟಕದ "ಸ್ಪಂದನ ಹೆಲ್ಪಿಂಗ್ ಹ್ಯಾಂಡ್ಸ್" ವತಿಯಿಂದಲೂ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.

ಈ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಸಂಕಷ್ಟದ ಸಮಯದಲ್ಲಿ ಕುಟುಂಬಗಳೊಂದಿಗೆ ನಿಂತು ನೆರವಾಗುವ ನಾಯಕತ್ವವು ಸಮಾಜದಲ್ಲಿ ಆಶಾಭರವನ್ನೂ ವಿಶ್ವಾಸವನ್ನೂ ಮೂಡಿಸುತ್ತದೆ.

"ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ."

ಈ ಆದರ್ಶ ವಾಕ್ಯವನ್ನು ತಮ್ಮ ಕರುಣೆ, ಸೇವಾ ಮನೋಭಾವ ಮತ್ತು ಜನಪರ ಬದ್ಧತೆಯ ಮೂಲಕ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ನಿಜಾರ್ಥದಲ್ಲಿ ಸಾಕಾರಗೊಳಿಸಿದ್ದಾರೆ.

ಅವರ ಈ ಆದರ್ಶ ಮಾನವೀಯ ಸೇವೆಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅನಂತ ಕೃತಜ್ಞತೆಗಳು.

10/06/2026

ಬಿಲ್ಲವ ಮುಖಂಡರಾದ ಪದ್ಮರಾಜ್ ಆರ್ ಮತ್ತು ಪ್ರತಿಭಾ ಕುಳಾಯಿ ಅವರನ್ನು ನಿಂದಿಸುತ್ತಿರುವ ಅನಿತಾ ಕಾಸರಗೋಡು

ಬಿಲ್ಲವ, ಬಂಟ ಸಮುದಾಯ ಹಾಗೂ ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಅಶ್ಲೀಲ ಮತ್ತು ಜಾತಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ಅನಿತಾ ಕಾಸರಗೋಡು ಎಂ...
09/06/2026

ಬಿಲ್ಲವ, ಬಂಟ ಸಮುದಾಯ ಹಾಗೂ ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಅಶ್ಲೀಲ ಮತ್ತು ಜಾತಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ(ರಿ) ಉಡುಪಿ ಘಟಕ ಪದಾಧಿಕಾರಿಗಳು ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿ ಪ್ರಭಾರ ಇನ್ಸೆಕ್ಟರ್ ಮಹೇಶ್ ಪ್ರಸಾದ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ಅನಿತಾ ಕಾಸರಗೋಡು ಎಂಬ ಮಹಿಳ ಬಿರುವೆ‌ರ್ ಕುಡ್ಲ ಸಂಸ್ಥೆಯ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಅಲ್ಲದೆ ಜಿಲ್ಲೆಯ ಪ್ರಮುಖ ಬಿಲ್ಲವ ಹಾಗೂ ಬಂಟ ಸಮುದಾಯಗಳ ವಿರುದ್ಧವೂ ಜಾತಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಇಂತಹ ಹೇಳಿಕೆಗಳು ಅತ್ಯಂತ ಆಕ್ಷೇಪಾರ್ಹ, ಖಂಡನೀಯವಾಗಿದ್ದು, ಸಂಬಂಧಿತ ಸಮುದಾಯಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ. ಹಾಗಾಗಿ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಿತ ಮಹಿಳೆಯ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘಟನೆಯ ಪರವಾಗಿ ಮನವಿ ಮಾಡಲಾಯಿತು.

08/06/2026

*ಪ್ರತಿಭಾ ಕುಲಯಿ ಅವರ ಜೊತೆ ಬಿಲ್ಲವರ ಕುರಿತು ಹೀನಾಯವಾಗಿ ಮಾತನಾಡಿದ ಅನಿತಾ ಕಾಸರಗೋಡು ಎದ್ದೇಳಿ ಬಿಲ್ಲವ ಸಮಾಜ ಕೈ ಕಟ್ಟಿ ಕೂತು ನಿದ್ದೆ ಮಾಡಿದ್ದೂ ಸಾಕು ಇನ್ನಾದರೂ ಎಚ್ಚತ್ತು ಕೊಳ್ಳೋಣ.*🔥

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹತ್ವದ ತತ್ವದಲ್ಲಿಸಾಗುತ್ತಿರುವ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ...
28/05/2026

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ
ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹತ್ವದ ತತ್ವದಲ್ಲಿ
ಸಾಗುತ್ತಿರುವ ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ರಿ
ಉಡುಪಿ ಘಟಕದ ವತಿಯಿಂದ ಸಮಾಜಮುಖಿ ಕಾರ್ಯಗಳು
ನಿರಂತರವಾಗಿ ನಡೆಯುತ್ತಿವೆ.

ಅದರ ಭಾಗವಾಗಿ 52ನೇ ಸ್ಪಂದನ ನಿಧಿಯನ್ನು
ಅಗತ್ಯವಿರುವ ಯಶೋಧ ಅವರಿಗೆ ಗೌರವಪೂರ್ವಕವಾಗಿ
ನೀಡಲಾಯಿತು.

ಈ ಸೇವಾ ಕಾರ್ಯದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ
ಸದಸ್ಯರು ಉಪಸ್ಥಿತರಿದರು....

ಹೆಬ್ರಿ ಮೂಲದ ಗುಂಡು ಪರವ ಎಂಬವನಿಂದ ಬಿಲ್ಲವ ಸಮಾಜ ಹಾಗೂ ಬಿಲ್ಲವ ದೈವ ಚಾಕಿರಿಯವರಿಗೆ ಹಾಗೂ  ಬಿಲ್ಲವ ಸಂಘಗಳ ಬಗ್ಗೆ ಅವಹೇಳನಕಾರಿ ಮಾತುಗಳು ಮತ್ತ...
27/05/2026

ಹೆಬ್ರಿ ಮೂಲದ ಗುಂಡು ಪರವ ಎಂಬವನಿಂದ ಬಿಲ್ಲವ ಸಮಾಜ ಹಾಗೂ ಬಿಲ್ಲವ ದೈವ ಚಾಕಿರಿಯವರಿಗೆ ಹಾಗೂ ಬಿಲ್ಲವ ಸಂಘಗಳ ಬಗ್ಗೆ ಅವಹೇಳನಕಾರಿ ಮಾತುಗಳು ಮತ್ತು ಅಶಾಂತಿ ಉಂಟುಮಾಡುತ್ತಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ಬಿರುವೆರ್ ಕುಡ್ಲ ಉಡುಪಿ ಘಟಕದ ವತಿಯಿಂದ ದೂರು ಹಾಗೂ ಮನವಿ ಸಲ್ಲಿಸಲಾಯಿತು.

ನೀವು ನಮ್ಮನಗಲೀ ಇಂದಿಗೆ ಒಂದು ವರುಷ..."ಕಣ್ಣೆದುರಿನಿಂದ ಮರೆಯಾಗಿ ಪಂಚಭೂತಗಳಲ್ಲಿ ಲೀನವಾದರೂ, ನಮ್ಮ ಮನಸ್ಸಿನಲ್ಲಿ ಎಂದಿಗೂ ಜೀವಂತ. ನಿಮ್ಮ ಪ್ರೀ...
29/04/2026

ನೀವು ನಮ್ಮನಗಲೀ ಇಂದಿಗೆ ಒಂದು ವರುಷ..."ಕಣ್ಣೆದುರಿನಿಂದ ಮರೆಯಾಗಿ ಪಂಚಭೂತಗಳಲ್ಲಿ ಲೀನವಾದರೂ, ನಮ್ಮ ಮನಸ್ಸಿನಲ್ಲಿ ಎಂದಿಗೂ ಜೀವಂತ. ನಿಮ್ಮ ಪ್ರೀತಿ ಮತ್ತು ಮಾರ್ಗದರ್ಶನ ನಮಗೆ ಸದಾ ದಾರಿ ದೀಪ. ಪ್ರಥಮ ವರ್ಷದ ಪುಣ್ಯ ಸ್ಮರಣೆ."💐💐

02/03/2026

ಮಾನ್ಯ ಲೋಕಾಯುಕ್ತ ನ್ಯಾಯಾಮೂರ್ತಿಗಳೇ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಗೆ ನಿಮ್ಮ ಭೇಟಿ ಯಾವಾಗ.....🤔🤔
ಇಲ್ಲಿಯ ಅಧಿಕಾರಿಗಳಿಂದ ಆರೋಗ್ಯ ಇಲಾಖೆಯ ಆರೋಗ್ಯ ಹದಗೆಟ್ಟಿದೆ.......
Karnataka Lokayuktha

Address

Udupi
576101

Telephone

+916366906666

Website

Alerts

Be the first to know and let us send you an email when ಬಿರುವೆರುಕುಡ್ಲ ಉಡುಪಿಘಟಕ posts news and promotions. Your email address will not be used for any other purpose, and you can unsubscribe at any time.

Shortcuts

Share

Category