Hejamadi Grameena Congress Samithi

Hejamadi Grameena Congress Samithi Official social media page of Hejamadi Grameena Congress Samithi.

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಗಮನ ಸೆಳೆದ ಹೋರಾಟ ಸಮಿತಿವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಲೋಕ...
04/08/2026

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಗಮನ ಸೆಳೆದ ಹೋರಾಟ ಸಮಿತಿ

ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ

ಬೆಂಗಳೂರು, ಆ. 4: ಹೆಜಮಾಡಿ–ಪಡುಬಿದ್ರಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಜನರು ಹಲವು ವರ್ಷಗಳಿಂದ ಟೋಲ್ ಸಂಗ್ರಹಣೆಯಿಂದ ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದ ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಕಾರ್ಯಕಾರಿ ಸಮಿತಿ ಬೆಂಗಳೂರಿನಲ್ಲಿ ಕರ್ನಾಟಕ ಲೋಕೋಪಯೋಗಿ (PWD) ಸಚಿವರಾದ ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಹಾಗೂ ಕರ್ನಾಟಕ ಆರೋಗ್ಯ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಯು.ಟಿ. ಖಾದರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಹೆಜಮಾಡಿ–ಪಡುಬಿದ್ರಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಟೋಲ್ ಸಂಗ್ರಹಣೆಯಿಂದ ಎದುರಿಸುತ್ತಿರುವ ದೈನಂದಿನ ತೊಂದರೆಗಳು, ಆರ್ಥಿಕ ಹೊರೆ ಹಾಗೂ ಜನಸಾಮಾನ್ಯರ ನ್ಯಾಯಸಮ್ಮತ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಸ್ಥಳೀಯ ನಿವಾಸಿಗಳಿಗೆ ಶಾಶ್ವತ ಟೋಲ್ ವಿನಾಯಿತಿ, ಜನಸ್ನೇಹಿ ಟೋಲ್ ವ್ಯವಸ್ಥೆ ಹಾಗೂ ಸಮಸ್ಯೆಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಕಲ್ಪಿಸುವಂತೆ ಹೋರಾಟ ಸಮಿತಿಯು ಒತ್ತಾಯಿಸಿತು.

ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷರಾದ ವೈ. ಸುಕುಮಾರ್, ಕೆಪಿಸಿಸಿ ಕೋಆರ್ಡಿನೇಟರ್‌ಗಳಾದ ನವೀನ್ ಚಂದ್ರ ಜೆ. ಶೆಟ್ಟಿ ಹಾಗೂ ಅಬ್ದುಲ್ ಅಜೀಜ್ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಭೋದ್ ಚಂದ್ರ ಹೆಜಮಾಡಿ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೀಜ್ ಹುಸೇನ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ್ ಸಿ. ಸಾಲ್ಯಾನ್ ಹಾಗೂ ಲಕ್ಷ್ಮೀಶ ತಂತ್ರಿ ಉಪಸ್ಥಿತರಿದ್ದರು.

ಹೋರಾಟ ಕಾರ್ಯಕಾರಿ ಸಮಿತಿಯ ಮನವಿಯನ್ನು ಸ್ವೀಕರಿಸಿದ ಉಭಯ ಸಚಿವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೆಜಮಾಡಿ–ಪಡುಬಿದ್ರಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಜನರಿಗೆ ನ್ಯಾಯ ದೊರೆಯುವವರೆಗೆ ಹಾಗೂ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಕಾಂಗ್ರೆಸ್ ಪಕ್ಷ ಮತ್ತು ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಕಾರ್ಯಕಾರಿ ಸಮಿತಿಯ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

*🔥 ಹೆಜಮಾಡಿ–ಪಡುಬಿದ್ರಿ ಎದ್ದಿದೆ… ಸ್ಥಳೀಯರ ಹಕ್ಕಿಗಾಗಿ ಬೃಹತ್ ಹೋರಾಟ! 🔥*🚨 ನಮ್ಮ ರಸ್ತೆ… ನಮ್ಮ ಹಕ್ಕು… ಕಿರುಕುಳ ಇನ್ನು ಸಹಿಸುವುದಿಲ್ಲ! 🚨ಹೆ...
04/08/2026

*🔥 ಹೆಜಮಾಡಿ–ಪಡುಬಿದ್ರಿ ಎದ್ದಿದೆ… ಸ್ಥಳೀಯರ ಹಕ್ಕಿಗಾಗಿ ಬೃಹತ್ ಹೋರಾಟ! 🔥*

🚨 ನಮ್ಮ ರಸ್ತೆ… ನಮ್ಮ ಹಕ್ಕು… ಕಿರುಕುಳ ಇನ್ನು ಸಹಿಸುವುದಿಲ್ಲ! 🚨

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸ್ಥಳೀಯ ವಾಹನ ಸವಾರರ ನ್ಯಾಯಸಮ್ಮತ ಹಕ್ಕಿಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಹೆಜಮಾಡಿ ಹಾಗೂ ನಡ್ಸಾಲು ಭಾಗದ ಸ್ಥಳೀಯರಿಗೆ ಈಗಾಗಲೇ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ವಿನಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ವಾಹನ ಸವಾರರಿಗೆ ಆರ್.ಸಿ. ಸೇರಿದಂತೆ ವಿವಿಧ ದಾಖಲೆಗಳನ್ನು ಪದೇಪದೇ ಕೇಳುವ ಮೂಲಕ ಅನಗತ್ಯ ತೊಂದರೆ ಹಾಗೂ ವಿಳಂಬ ಉಂಟು ಮಾಡಲಾಗುತ್ತಿದೆ.

ಅದೇ ರೀತಿ ಶಾಸ್ತಾನ ಟೋಲ್ ಪ್ಲಾಜಾದಲ್ಲಿ ಟೋಲ್‌ನಿಂದ 6 ಕಿ.ಮೀ. ಎಡ ಹಾಗೂ 6 ಕಿ.ಮೀ. ಬಲ ವ್ಯಾಪ್ತಿಯ ಗ್ರಾಮಗಳ ಸ್ಥಳೀಯ ವಾಹನಗಳಿಗೆ Local Pass ಮೂಲಕ ಟೋಲ್ ವಿನಾಯಿತಿ ಸೌಲಭ್ಯ ನೀಡಲಾಗಿದೆ. ಇದೇ ಮಾದರಿಯ ವ್ಯವಸ್ಥೆಯನ್ನು ಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಸ್ಥಳೀಯರಿಗೂ ಜಾರಿಗೊಳಿಸಬೇಕು.

✊ ನಮ್ಮ ಪ್ರಮುಖ ಬೇಡಿಕೆಗಳು

✅ ಹೆಜಮಾಡಿ ಸ್ಥಳೀಯರಿಗೆ ಹಿಂದಿನಂತೆ ಯಾವುದೇ ತೊಂದರೆಯಿಲ್ಲದೆ ಟೋಲ್ ವಿನಾಯಿತಿ ಮುಂದುವರಿಯಬೇಕು.

✅ ಸ್ಥಳೀಯರಿಂದ ಪ್ರತಿದಿನ ಆರ್.ಸಿ. ಹಾಗೂ ಇತರೆ ದಾಖಲೆಗಳನ್ನು ಕೇಳುವ ಕಿರುಕುಳ ತಕ್ಷಣ ನಿಲ್ಲಬೇಕು.

✅ ಶಾಸ್ತಾನ ಟೋಲ್ ಮಾದರಿಯಲ್ಲಿ ಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಸ್ಥಳೀಯ ವಾಹನಗಳಿಗೆ ಶಾಶ್ವತ Local Pass ವ್ಯವಸ್ಥೆ ಜಾರಿಯಾಗಬೇಕು.

✅ ಪಡುಬಿದ್ರಿ ಭಾಗದ ಸ್ಥಳೀಯ ವಾಹನ ಸವಾರರಿಗೂ ಟೋಲ್ ವಿನಾಯಿತಿ ಅಥವಾ Local Pass ಸೌಲಭ್ಯ ಕಲ್ಪಿಸಬೇಕು.

✅ PWD ರಸ್ತೆಯಲ್ಲಿ ಇರುವ ಅನಧಿಕೃತ ಟೋಲ್ ವ್ಯವಸ್ಥೆಯನ್ನು ತಕ್ಷಣ ತೆರವುಗೊಳಿಸಬೇಕು.

✅ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರ ನ್ಯಾಯಯುತ ಬೇಡಿಕೆಗಳಿಗೆ ಶಾಶ್ವತ ಪರಿಹಾರ ನೀಡಬೇಕು.

⚠️ ಇದು ಕೇವಲ ಟೋಲ್ ಸಮಸ್ಯೆಯಲ್ಲ…

ಇದು ಸ್ಥಳೀಯರ ಹಕ್ಕು, ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ!

ಶಾಸ್ತಾನದಲ್ಲಿ ಒಂದು ನಿಯಮ… ಹೆಜಮಾಡಿ–ಪಡುಬಿದ್ರಿಯಲ್ಲಿ ಇನ್ನೊಂದು ನಿಯಮ ಯಾಕೆ?

ಸ್ಥಳೀಯರಿಗೆ ನ್ಯಾಯ ಬೇಕು… ತಾರತಮ್ಯ ಬೇಡ!

📢 ಸಾರ್ವಜನಿಕರಿಗೆ ಕರೆ

🚗 ವಾಹನ ಮಾಲೀಕರು
👨‍👩‍👧‍👦 ಸ್ಥಳೀಯ ನಿವಾಸಿಗಳು
🤝 ಸಂಘ-ಸಂಸ್ಥೆಗಳ ಪ್ರತಿನಿಧಿಗಳು
✊ ಯುವಕರು, ಮಹಿಳೆಯರು ಹಾಗೂ ಎಲ್ಲಾ ಸಾರ್ವಜನಿಕರು

ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಈ ಬೃಹತ್ ಜನಾಂದೋಲನವನ್ನು ಯಶಸ್ವಿಗೊಳಿಸೋಣ.

🔥 ನಮ್ಮ ರಸ್ತೆ – ನಮ್ಮ ಹಕ್ಕು!
✊ Local Pass ನಮ್ಮ ಹಕ್ಕು – ಕಿರುಕುಳಕ್ಕೆ ಕೊನೆ ಬೇಕು!
⚖️ ಸ್ಥಳೀಯರಿಗೆ ನ್ಯಾಯ ಬೇಕು – ತಾರತಮ್ಯ ಬೇಡ!
💪 ಒಗ್ಗಟ್ಟೇ ನಮ್ಮ ಶಕ್ತಿ… ಹೋರಾಟವೇ ನಮ್ಮ ಉತ್ತರ!

*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ*

🔴 *ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಆಚರಣೆ*https://v4news.com/hejamady-rural-congress-celebrates-atidonji-d...
04/08/2026

🔴 *ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಆಚರಣೆ*

https://v4news.com/hejamady-rural-congress-celebrates-atidonji-day/

⏩ *For more such videos, subscribe to our YouTube channel ►https://bit.ly/2Omfzlb Don't forget to push the Bell 🔔 icon to never miss an update*

🔵 *V4 NEWS* 🔵

⏩ 🔘 *ಕ್ಷಣ ಕ್ಷಣದ ಸುದ್ದಿ, ಮಾಹಿತಿ ಅಪ್ಡೇಟ್ಗಾಗಿ ನಮ್ಮ Whatsapp ಗ್ರೂಪ್ಗೆ ಜಾಯಿನ್ ಆಗಿ ಹಾಗೂ Instagram ಪೇಜನ್ನು ಪಾಲೋ ಮಾಡಿ*

💥*WHATSAPP*►
https://chat.whatsapp.com/I7xEdFgbL9h8EE0n8BDyBO

💥*INSTAGRAM*► https://www.instagram.com/v4news24x7/reels/

ಹೆಜಮಾಡಿ, ಜು.19: ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಆಟಿಡೊಂಜಿ ದಿನ .....

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನ
04/08/2026

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನ

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನಕ್ಕೆ ಸಕಲ ಸಿದ್ಧತೆ*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 19-07-2026 (ಭಾನುವಾರ) ಹೆಜಮಾಡಿಯ ಬಿಲ್ಲವ...
17/07/2026

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನಕ್ಕೆ ಸಕಲ ಸಿದ್ಧತೆ*

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 19-07-2026 (ಭಾನುವಾರ) ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಸಾಂಪ್ರದಾಯಿಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ .

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ್ ಕತ್ತಲ್‌ಸರ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ತುಳುನಾಡಿನ ಆಟಿ ತಿಂಗಳ ಸಾಂಸ್ಕೃತಿಕ ಮಹತ್ವ, ನಮ್ಮ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳ ಸಂರಕ್ಷಣೆ ಹಾಗೂ ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಕುರಿತು ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ SIZZLING GUYS MANGALURU ತಂಡದಿಂದ ತುಳುನಾಡಿನ ಜಾನಪದ ಸಾಂಸ್ಕೃತಿಕ ವೈಭವ ಮೂಡಿಬರಲಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ. ಅಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಆಟಿ ತಿಂಗಳ ವಿಶೇಷ ಆಹಾರಗಳ ಸವಿಯನ್ನೂ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ವೈ. ಸುಕುಮಾರ್, ಶಾಂತಲಾ ಶೆಟ್ಟಿ, ಗುಲಾಂ ಮೊಹಮ್ಮದ್, ಶಿವರಾಮ ಶೆಟ್ಟಿ, ಮೋಹನದಾಸ್ ಹೆಜಮಾಡಿ, ಹಾಜಿ ಶೇಕಬ್ಬ, ಅಬ್ದುಲ್ ಅಜೀಜ್ ಹೆಜಮಾಡಿ, ಸೌಜನ್ ಕುಮಾರ್ ಸಾಲಿಗ್ರಾಮ, ದಯಾನಂದ್ ಹೆಜಮಾಡಿ, ರೋಲ್ಫ್ ಡಿ’ಕೋಸ್ಟಾ ಹಾಗೂ ಜಯಶ್ರೀ ಶರತ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸಂಯೋಜಕರಾದ ದೀಕ್ಷಾ ಕೆ ಹಾಗೂ ವಿಶಾಲ್ ವಿ. ಬಂಗೇರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಬೋಧ್ ಚಂದ್ರ ಹೆಜಮಾಡಿ ಅವರು ಮನವಿ ಮಾಡಿದ್ದಾರೆ.

23/06/2026

*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*

📢 ಆತ್ಮೀಯ ಕಾಂಗ್ರೆಸ್ ಬಂಧುಗಳೇ,

ಇಂದು 23.06.2026 ರ ಸಂಜೆ ನಮ್ಮ ಜನಪ್ರಿಯ ನಾಯಕರು, ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ *ಶ್ರೀ ವಿನಯ್ ಕುಮಾರ್ ಸೊರಕೆ* ಅವರು ಹೆಜಮಾಡಿ ವಾರ್ಡ್‌ಗಳಿಗೆ ಭೇಟಿ ನೀಡಿ, ಚುನಾವಣಾ ಆಯೋಗದ ಎಸ್.ಐ.ಆರ್. (SIR) ಪ್ರಕ್ರಿಯೆ, ಮತದಾರರ ಪಟ್ಟಿಯ ಪರಿಷ್ಕರಣೆ, ಬೂತ್ ಮಟ್ಟದ ಜವಾಬ್ದಾರಿಗಳು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕರ್ತರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.

ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಬಿ.ಎಲ್.ಎ.-2 ಸದಸ್ಯರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ SC ST ಘಟಕ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

🕒 ಕಾರ್ಯಕ್ರಮದ ವೇಳಾಪಟ್ಟಿ (ಸಂಜೆ)

📍 *ಸಂಜೆ 3:00 ಗಂಟೆಗೆ – 1ನೇ ವಾರ್ಡ್, ಹೆಜಮಾಡಿ*
🏠 ಸ್ಥಳ : *ಗಜಾನನ ಮಂದಿರ, ಬೊರುಗುಡ್ಡೆ*
👥 ವಾರ್ಡ್ ಪ್ರತಿನಿಧಿಗಳು :
*ಶಿವರಾಮ ಶೆಟ್ಟಿ,*
*ವಿದ್ಯಾ,*
*ಮೊಹಮ್ಮದ್ ಷರೀಫ್*

📍 *ಸಂಜೆ 3:45 ಗಂಟೆಗೆ – 4ನೇ ವಾರ್ಡ್*
🏠 ಸ್ಥಳ : *ವಿಲ್ಸನ್ ಹಾಗೂ ಜೇಮ್ಸ್ ಡಿಸೋಜಾ ಅವರ ಮನೆ, ಬಲ್ಲಾಳ್ ಕನ್‌ಸ್ಟ್ರಕ್ಷನ್ ಸಮೀಪ, ಎನ್.ಎಚ್.-66, ಹೆಜಮಾಡಿ*
👥 ವಾರ್ಡ್ ಪ್ರತಿನಿಧಿಗಳು :
*ಲೀಡಿಯಾ ಪೋರ್ಟಾಡೋ,*
*ರೀನಾ ವಿನುತ ಡಿಸೋಜಾ,*
*ಸುದೀರ್ ಕರ್ಕೇರ,*
*ಧೋಂಬ ಪೂಜಾರಿ*

📍 *ಸಂಜೆ 4:30 ಗಂಟೆಗೆ – 5ನೇ ಹಾಗೂ 7ನೇ ವಾರ್ಡ್*
🏠 ಸ್ಥಳ : *ಅಬ್ದುಲ್ ರಝಾಕ್ ಅವರ ಮನೆ, ಎಸ್.ಎಸ್. ರಸ್ತೆ, ಹೆಜಮಾಡಿ*
👥 ವಾರ್ಡ್ ಪ್ರತಿನಿಧಿಗಳು :
*ಅಬ್ದುಲ್ ರಝಾಕ್,*
*ಸುಭಾಷ್ ಜಿ. ಸಾಲಿಯಾನ್,*
*ಮೊಹಮ್ಮದ್ ಕಬೀರ್*
ಸನಾ ಇಬ್ರಾಹಿಂ, ಶ್ರೀಮತಿ ಫರಿದ, ಜಯಶ್ರೀ, ಕೇಶವ ಸಾಲಿಯಾನ್
🙏🏻 ನಮ್ಮ ನಾಯಕರು *ಶ್ರೀ ವಿನಯ್ ಕುಮಾರ್ ಸೊರಕೆ* ಅವರ ಮಾರ್ಗದರ್ಶನದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ, ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ.

ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

*ಜೈ ಕಾಂಗ್ರೆಸ್*

*ಪ್ರಬೋಧ್ ಚಂದ್ರ ಹೆಜಮಾಡಿ*
*ಅಧ್ಯಕ್ಷರು*
*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*
ಕೇಶವ. ಸಿ ಸಾಲಿಯಾನ್
ಕಾರ್ಯದರ್ಶಿ
ಹಾಗೂ ಸರ್ವ ಸದಸ್ಯರು ಗ್ರಾಮೀಣ ಕಾಂಗ್ರೆಸ್ ಹೆಜಮಾಡಿ.

ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಮ್ಮ ಜನಪ್ರಿಯ ನಾಯಕರಾ...
20/06/2026

ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಮ್ಮ ಜನಪ್ರಿಯ ನಾಯಕರಾದ ಶ್ರೀ ವಿನಯ ಕುಮಾರ್ ಸೊರಕೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

17/06/2026

ಹೃತ್ಪೂರ್ವಕ ಅಭಿನಂದನೆಗಳು

Address

Hejamadi
Udupi
574103

Website

Alerts

Be the first to know and let us send you an email when Hejamadi Grameena Congress Samithi posts news and promotions. Your email address will not be used for any other purpose, and you can unsubscribe at any time.

Shortcuts

Share