ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್

  • Home
  • India
  • Vijayapura
  • ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್

ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ Contact information, map and directions, contact form, opening hours, services, ratings, photos, videos and announcements from ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್, Social service, Vijayapura.

05/07/2026
_"ಮನ–ಮನಕ್ಕೂ ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ"_ *ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ_ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡ...
03/07/2026

_"ಮನ–ಮನಕ್ಕೂ ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ"_ *ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ

_ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ (ರಿ.), ವಿಜಯಪುರ ಹಾಗೂ ಬಂಜಾರಾ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ_* ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 03-07-2026 ರಂದು ಬಂಜಾರಾ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ
> "ಮನ–ಮನಕ್ಕೂ ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ" ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಯಶ್ರೀ ಎಂ. ಪಾಟೀಲ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ (ರಿ.) ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುನೀಲ ರಾ. ಜೈನಾಪೂರ ವಹಿಸಿ, 2019ರಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳು, ರಾಷ್ಟ್ರಪ್ರೇಮ ಹಾಗೂ ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಆರಂಭವಾದ ಈ ಸಂಘಟನೆ ಇಂದು ತನ್ನ 48ನೇ "ಮನ–ಮನಕ್ಕೂ ವಿವೇಕ ಅಭಿಯಾನ"ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
> ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಅದು ಯುವ ಮನಸ್ಸುಗಳಿಂದಲೇ ಆರಂಭವಾಗಬೇಕು ಎಂಬ ಸಂದೇಶವನ್ನು ಅವರು ಹಂಚಿಕೊಂಡರು.
> ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಮುಸ್ತಾಕ್ ಹಾದಿಮನಿ (ಶ್ರೀ ಪಟ್ಟಣಶೆಟ್ಟಿ ಅವರ ನೆಚ್ಚಿನ ಶಿಷ್ಯರು) ಅವರು ಸ್ವಾಮಿ ವಿವೇಕಾನಂದರ ಆದರ್ಶ ಜೀವನ, ಯುವಕರ ಜವಾಬ್ದಾರಿ, ದೇಶಭಕ್ತಿ, ವ್ಯಕ್ತಿತ್ವ ನಿರ್ಮಾಣ ಹಾಗೂ ಜೀವನದಲ್ಲಿ ಶಿಸ್ತು ಮತ್ತು ಸೇವಾಭಾವದ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಅವರ ಪ್ರೇರಣಾದಾಯಕ ಮಾತುಗಳು ಪ್ರಶಿಕ್ಷಣಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ದೇಶಸೇವೆಯ ಸಂಕಲ್ಪವನ್ನು ಮೂಡಿಸಿತು.
*ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಟಿ. ಬಿ. ಪವಾರ, ಉಪ ಪ್ರಾಚಾರ್ಯರು, ಅವರು ವಿದ್ಯಾರ್ಥಿಗಳು ಕೇವಲ ಪದವಿ ಗಳಿಸುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ, ಮಾನವೀಯ ಮೌಲ್ಯಗಳು ಹಾಗೂ ರಾಷ್ಟ್ರಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
> ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ, ಅವರ ಚಿಂತನೆಗಳು, ಯುವಶಕ್ತಿಯ ಮಹತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಸಮಗ್ರವಾಗಿ ತಿಳಿಸಿಕೊಡಲಾಯಿತು. ಅವರಲ್ಲಿ ಆತ್ಮವಿಶ್ವಾಸ, ಸೇವಾ ಮನೋಭಾವ ಹಾಗೂ ದೇಶಕ್ಕಾಗಿ ಬದುಕುವ ಸ್ಪೂರ್ತಿಯನ್ನು ಮೂಡಿಸುವ ಉದ್ದೇಶದಿಂದ ರಾಷ್ಟ್ರ ಜಾಗೃತಿ ಪುಸ್ತಕಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಶಿಕ್ಷಣಾರ್ಥಿಗಳು ಅಪಾರ ಆಸಕ್ತಿಯಿಂದ ಉಪನ್ಯಾಸಗಳನ್ನು ಆಲಿಸಿ, ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು. ಅವರ ಉತ್ಸಾಹ ಮತ್ತು ಸ್ಪಂದನೆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಬಂಜಾರಾ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಹಾಗೂ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್‌ನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವ ಮನಸ್ಸುಗಳನ್ನು ಜಾಗೃತಗೊಳಿಸುತ್ತಲೇ ಇರಲಿ, ರಾಷ್ಟ್ರಭಕ್ತಿ ಮತ್ತು ಮಾನವೀಯ ಮೌಲ್ಯಗಳು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಲಿ ಎಂಬ ಆಶಯದೊಂದಿಗೆ ಈ 48ನೇ "ಮನ–ಮನಕ್ಕೂ ವಿವೇಕ ಅಭಿಯಾನ" ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಅಮರೇಶ್ ಸಾಲಕ್ಕಿ,ಸಂಘಟನೆ ಪದಾಧಿಕಾರಿಗಳಾದ ಜಗದೀಶ್ ಮನಗೂಳಿ,ರವಿ ಸಿಂಹಾಸನ್, ಜಗದೀಶ ಬಿರಾದಾರ,ಶ್ರೀಶೈಲ್ ಮೇತ್ರಿ,ರಂಜಿತ ಮುಂತಾದವರು ಉಪಸ್ಥಿತರಿದ್ದರು.

🇮🇳 *"ಮನ – ಮನಕ್ಕೂ ವಿವೇಕ ಹಾಗೂ ರಾಷ್ಟ್ರ ಜಾಗೃತಿ ಅಭಿಯಾನ" ಭಾವಪೂರ್ಣವಾಗಿ ಸಂಪನ್ನ* ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ (ರಿ), ವಿಜಯಪುರ...
26/06/2026

🇮🇳 *"ಮನ – ಮನಕ್ಕೂ ವಿವೇಕ ಹಾಗೂ ರಾಷ್ಟ್ರ ಜಾಗೃತಿ ಅಭಿಯಾನ" ಭಾವಪೂರ್ಣವಾಗಿ ಸಂಪನ್ನ*

ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ (ರಿ), ವಿಜಯಪುರ ಹಾಗೂ ವಿಶ್ವಾಸ ಕರಿಯರ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ *_"ಮನ – ಮನಕ್ಕೂ ವಿವೇಕ ಹಾಗೂ ರಾಷ್ಟ್ರ ಜಾಗೃತಿ ಅಭಿಯಾನ"_* ಕಾರ್ಯಕ್ರಮವು ಇಂದು ವಿಶ್ವಾಸ ಕರಿಯರ್ ಅಕಾಡೆಮಿ ಸಭಾಭವನದಲ್ಲಿ ಅತ್ಯಂತ ಅರ್ಥಪೂರ್ಣ ಹಾಗೂ ಭಾವಪೂರ್ಣವಾಗಿ ನೆರವೇರಿತು.
ಈ ಕಾರ್ಯಕ್ರಮವು ಕೇವಲ ಒಂದು ಸಭೆಯಾಗಿರಲಿಲ್ಲ; *_ದೇಶಕ್ಕಾಗಿ ಬದುಕುವ, ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಿರುವ ಭಾವಿ ಸೈನಿಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮದ ಜ್ಯೋತಿಯನ್ನು ಬೆಳಗಿಸಿದ ಒಂದು ಪವಿತ್ರ ಕ್ಷಣವಾಗಿತ್ತು.*

🌹✨🇮🇳🙏🇮🇳✨🌹

ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ವಿಜಯಪುರ ನಗರದ ವೀರಶೈವ ಲಿಂಗಾಯತ ಮಹಾಸಭಾದ ಸಭಾಭವನದಲ್ಲಿ "ಕಾರ್ಮಿಕ ದಿನಾಚರಣೆ" ಆಚರಿಸಲಾಯಿತ...
01/05/2026

ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ವಿಜಯಪುರ ನಗರದ ವೀರಶೈವ ಲಿಂಗಾಯತ ಮಹಾಸಭಾದ ಸಭಾಭವನದಲ್ಲಿ "ಕಾರ್ಮಿಕ ದಿನಾಚರಣೆ" ಆಚರಿಸಲಾಯಿತು.ಕಡಿಮೆ ಸಂಬಳದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರ ಜೊತೆಗೆ ಅಪ್ಪ ಬಸವಣ್ಣನವರ 'ಕಾಯಕವೇ ಕೈಲಾಸ' ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಾಹಿತಿಗಳಾದ ಶ್ರೀ ಆರ್.ಎಸ್.ಪಟ್ಟಣಶೆಟ್ಟಿ,ಭಾರತ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುನೀಲ ಜೈನಾಪೂರ,ಸಮಾಜ ಸೇವಕ ಶ್ರೀ ಸಂಗಮೇಶ ಜಾಧವ,ಶ್ರೀ ಪ್ರಶಾಂತ ಕಿರಣಗಿ ಮುಂತಾದವರು ಉಪಸ್ಥಿತರಿದ್ದರು....

ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು.ಸಂವ...
14/04/2026

ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು.

ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಲವಾದ ಅಡಿಪಾಯ ಕಟ್ಟಿದ ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ನಾವೆಲ್ಲರೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಸಂಕಲ್ಪ ಮಾಡೋಣ.

ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಸ್ತ್ರೀ ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ, ಮಹಾತ್ಮ ಜ್...
11/04/2026

ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಸ್ತ್ರೀ ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು..!!@ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಸ್ತ್ರೀ ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ, ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು..!!

ಕ್ಷಮಿಸಿ ಬಿಡಿ,ನಮ್ಮನ್ನು, ನಿಮ್ಮ ತ್ಯಾಗಕ್ಕೆ ನಾವು ಯೋಗ್ಯರಲ್ಲ, ನೀವು ಮಾಡಿದ sacrifice ಸಕ್ಕರೆ ಪಾಯಸದಂತೆ ತಿಂದು ಹೊಟ್ಟೆ ತುಂಬಿಸಿಕೊಂಡೆವು,...
23/03/2026

ಕ್ಷಮಿಸಿ ಬಿಡಿ,ನಮ್ಮನ್ನು, ನಿಮ್ಮ ತ್ಯಾಗಕ್ಕೆ ನಾವು ಯೋಗ್ಯರಲ್ಲ, ನೀವು ಮಾಡಿದ sacrifice ಸಕ್ಕರೆ ಪಾಯಸದಂತೆ ತಿಂದು ಹೊಟ್ಟೆ ತುಂಬಿಸಿಕೊಂಡೆವು, ಅದರ ಸವಿ ಇನ್ನೂ ಗೊತ್ತೇ ಆಗಲಿಲ್ಲ, ದಯಮಾಡಿ ಮತ್ತೆ ಹುಟ್ಟಿ ಬರಲೇಬೇಡಿ.......... 🙏🙏

ದೇಶದ ಯುವ ಸಮುದಾಯದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಹುಟ್ಟಡಗಿಸಿದ ಕ್ರಾಂತಿಕಾರಿ, ಹುತಾತ್ಮ ಭಗತ್ ಸಿಂಗ್ ...
28/09/2025

ದೇಶದ ಯುವ ಸಮುದಾಯದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಹುಟ್ಟಡಗಿಸಿದ ಕ್ರಾಂತಿಕಾರಿ, ಹುತಾತ್ಮ ಭಗತ್ ಸಿಂಗ್ ಅವರ ಜನ್ಮ ದಿನದಂದು ಅವರಿಗೆ ಶತಕೋಟಿ ನಮನಗಳು!
ಅವರ ಜೀವನ ಮತ್ತು ತ್ಯಾಗವು 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಘೋಷಣೆ ಭವಿಷ್ಯದ ಪೀಳಿಗೆಯನ್ನು ಜಾಗೃತಗೊಳಿಸುತ್ತಲೇ ಇರುತ್ತದೆ.

ಇಂದು ನಡೆದ ಬಸವ ಜನ್ಮ ಭೂಮಿ ಪ್ರತಿಷ್ಠಾನ ಬಸವ ಜನ್ಮಸ್ಥಳ ಬಸನ ಬಾಗೇವಾಡಿ ಜಿಲ್ಲಾ ಘಟಕ ವಿಜಯಪುರ 14ನೇ ವಾರ್ಷಿಕೋತ್ಸವದ ನಿಮಿತ್ಯವಾಗಿ ರಾಜಮಟ್ಟದ ...
25/12/2024

ಇಂದು ನಡೆದ ಬಸವ ಜನ್ಮ ಭೂಮಿ ಪ್ರತಿಷ್ಠಾನ ಬಸವ ಜನ್ಮಸ್ಥಳ ಬಸನ ಬಾಗೇವಾಡಿ ಜಿಲ್ಲಾ ಘಟಕ ವಿಜಯಪುರ 14ನೇ ವಾರ್ಷಿಕೋತ್ಸವದ ನಿಮಿತ್ಯವಾಗಿ ರಾಜಮಟ್ಟದ ವಚನ ವೈಭವ 2024 ನೇ ಸಾಲಿನ "ರಾಷ್ಟ್ರಮಟ್ಟದ ಪ್ರತಿಷ್ಠಿತ ಬಸವ ವಿಭೂಷಣ" ಹಾಗೂ "ರಾಜ್ಯಮಟ್ಟದ ಪ್ರತಿಷ್ಠಿತ ಬಸವಭೂಷಣ" ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಂದು ಹೆಮ್ಮೆಯ ನಮ್ಮ ಸಂಘಟನೆಯಾದ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಕಾರ್ಯವೈಖರಿಯನ್ನು ಮೆಚ್ಚಿಗೆ ವ್ಯಕ್ತಪಡಿಸಿ ರಾಜ್ಯದ ಪ್ರತಿಷ್ಠಿತ ಕೊಡ ಮಾಡುವ ಬಸವ ಭೂಷಣ ಪ್ರಶಸ್ತಿ ಇಂದು ಪ್ರದಾನ ಮಾಡಲಾಯಿತು, ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಹೀಗೆ ಮುಂದುವರಿಯಲಿ ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಲ್ಲಬೇಕಾದ ಪ್ರಶಸ್ತಿ ಎಲ್ಲರಿಗೂ ಧನ್ಯವಾದಗಳು 🙏🙏

ಸುವರ್ಣ ಕರ್ನಾಟಕ ಸಂಭ್ರಮ-50 ರ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರಿಗೆ ಭಾರತ ಯುವ ವೇದಿಕ...
09/11/2024

ಸುವರ್ಣ ಕರ್ನಾಟಕ ಸಂಭ್ರಮ-50 ರ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರಿಗೆ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಇಂದು ಅವರ ಮನೆಯಲ್ಲಿ ಸನ್ಮಾನಿಸಿದ ಸಂದರ್ಭ.

Address

Vijayapura
577228

Website

Alerts

Be the first to know and let us send you an email when ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category