Dept. Of Handloom and Textiles

Dept. Of Handloom and Textiles The Department of Handlooms and Textiles was set up during 1991-92 in Karnataka.

ಕರ್ನಾಟಕದ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಜವಳಿ ಮತ್ತು ಉಡುಪು ನೀತಿಯಲ್ಲಿ ವಿಶೇಷ ಆದ್...
11/08/2026

ಕರ್ನಾಟಕದ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಜವಳಿ ಮತ್ತು ಉಡುಪು ನೀತಿಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಸಲು ಬೆಂಗಳೂರಿನ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (VTPC)ನಲ್ಲಿ ಮೂರು ದಿನಗಳ ವಿಶೇಷ ರಫ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜ್ ಚಾಲನೆ ನೀಡಿದರು. ತರಬೇತಿಯ ಮೂಲಕ ರಫ್ತು ಪ್ರಕ್ರಿಯೆಗಳು, ಜಾಗತಿಕ ಮಾರುಕಟ್ಟೆ ಅವಕಾಶಗಳು ಹಾಗೂ ಕರ್ನಾಟಕದ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವ ಕುರಿತು ಅಧಿಕಾರಿಗಳಿಗೆ ಅಗತ್ಯ ಜ್ಞಾನ ಮತ್ತು ಕೌಶಲ್ಯ ಒದಗಿಸಲಾಗುತ್ತಿದೆ.

ತರಬೇತಿಯ ಮೂಲಕ ಪಡೆದ ಜ್ಞಾನವನ್ನು ನೇಕಾರರು, ಕುಶಲಕರ್ಮಿಗಳು ಹಾಗೂ ಜವಳಿ ಉದ್ಯಮಿಗಳಿಗೆ ತಲುಪಿಸಿ, ಕರ್ನಾಟಕದ ಕೈಮಗ್ಗ ಮತ್ತು ಜವಳಿ ರಫ್ತಿಗೆ ಮತ್ತಷ್ಟು ವೇಗ ನೀಡುವುದು ಇಲಾಖೆಯ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ VTPC ನಿರ್ದೇಶಕರಾದ ಶ್ರೀ ರಮೇಶ್ ಹಾಗೂ ಹೆಚ್ಚುವರಿ ನಿರ್ದೇಶಕರಾದ ಶ್ರೀ ಸಿ.ಎಸ್. ಯೋಗೇಶ್ ಉಪಸ್ಥಿತರಿದ್ದರು.

🌍 Taking Karnataka's Handlooms & Textiles to Global Markets

The forthcoming Karnataka Textile & Apparel Policy places special emphasis on strengthening the export potential of the State's handloom and textile sector.

As part of this effort, a three-day export-oriented training programme for officials of the Department of Handlooms & Textiles is being conducted at the Visvesvaraya Trade Promotion Centre (VTPC), Bengaluru.

The programme was inaugurated by A.B. Basavaraju, Textile Development Commissioner. The training is aimed at strengthening officials' understanding of export processes, global market opportunities and the requirements for taking Karnataka's handloom and textile products to international markets.

The knowledge gained through the programme will be taken to weavers, artisans and textile entrepreneurs, helping them better understand export opportunities and strengthening Karnataka's presence in global textile markets.

VTPC Director Shri Ramesh and Additional Director Shri C.S. Yogesh were present at the programme.

🧵 Skilled hands. Global markets. Karnataka's textile journey continues.


Vtpc Karnataka Chief Minister of Karnataka DIPR Karnataka Ministry of Textiles, Government of India

09/08/2026

🧵 ನೂಲಿನಲ್ಲಿ ನಮ್ಮ ಇತಿಹಾಸ… ಜವಳಿಯಲ್ಲಿ ನಮ್ಮ ಭವಿಷ್ಯ

12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಕ್ರಮದ ಸಂಭ್ರಮದ ಕ್ಷಣಗಳು.

ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಸಿಂಧೂರಿ, ಐಎಎಸ್, ಜವಳಿ ಅಭಿವೃದ್ಧಿ ಆಯುಕ್ತ ಎ. ಬಿ. ಬಸವರಾಜು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ. ಜೆ. ಗಣೇಶ್, ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಕಾವೇರಿ ಹ್ಯಾಂಡ್‌ಲೂಮ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಕೈಮಗ್ಗ – ನಮ್ಮ ಹೆಮ್ಮೆ. ❤️



🧵 Our Heritage. Our Threads. Our Future.

Glimpses from the State-level celebrations of the 12th National Handloom Day held in Bengaluru.

The event was attended by Smt. Rohini Sindhuri, IAS, Secretary, Department of Handlooms & Textiles; A. B. Basavaraju, Textile Development Commissioner; Nagendra Kumar, Chairman, Karnataka Handloom Development Corporation; B. J. Ganesh, Chairman, Karnataka State Cooperative Handloom Weavers’ Federation; Garima Pansar, Managing Director; Soumya, Managing Director, Cauvery Handlooms; and Umashree, former Minister and MLC, among other dignitaries.

Our Handlooms. Our Pride. ❤️



Chief Minister of Karnataka DIPR Karnataka Ministry of Textiles, Government of India Khana Weaves

🧵 ನೂಲಿನಲ್ಲಿ ನಮ್ಮ ಇತಿಹಾಸ… ಜವಳಿಯಲ್ಲಿ ನಮ್ಮ ಭವಿಷ್ಯ 🇮🇳🪡12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವ...
07/08/2026

🧵 ನೂಲಿನಲ್ಲಿ ನಮ್ಮ ಇತಿಹಾಸ… ಜವಳಿಯಲ್ಲಿ ನಮ್ಮ ಭವಿಷ್ಯ 🇮🇳🪡

12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಸಿಂಧೂರಿ, ಐಎಎಸ್ ಅವರು ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಬದುಕನ್ನು ಮತ್ತಷ್ಟು ಸದೃಢಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

✨ ಪ್ರಮುಖ ಘೋಷಣೆಗಳು:
🔹 ಮುಂಬರುವ ಕರ್ನಾಟಕ ಜವಳಿ ಮತ್ತು ಉಡುಪು ನೀತಿಯಲ್ಲಿ ಕೈಮಗ್ಗ ಕ್ಷೇತ್ರದ ಪ್ರಚಾರ, ಬ್ರ್ಯಾಂಡಿಂಗ್, ವಿನ್ಯಾಸ ಅಭಿವೃದ್ಧಿ, ಡಿಜಿಟಲ್ ಮಾರುಕಟ್ಟೆ, ಇ-ಕಾಮರ್ಸ್ ಹಾಗೂ ಮಾರುಕಟ್ಟೆ ವಿಸ್ತರಣೆಗಾಗಿ ವಿಶೇಷ ಅನುದಾನ ಮೀಸಲಿಡಲಾಗಿದೆ.
🔹 ರಾಜ್ಯದ ಕೈಮಗ್ಗ ಪರಂಪರೆಯನ್ನು ದೇಶ ಮತ್ತು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ "ನೂಲಿನಲ್ಲಿ ನಮ್ಮ ಇತಿಹಾಸ… ಜವಳಿಯಲ್ಲಿ ನಮ್ಮ ಭವಿಷ್ಯ" (Our Heritage. Our Threads. Our Future.) ಎಂಬ ಶೀರ್ಷಿಕೆಯಡಿ ಒಂದು ವಾರದ ರಾಜ್ಯವ್ಯಾಪಿ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

🧶 ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ. ಗಣೇಶ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಕಾವೇರಿ ಹ್ಯಾಂಡ್‌ಲೂಮ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಜವಳಿ ಇಲಾಖೆಯ ಅಪರ ನಿರ್ದೇಶಕರಾದ ಸಿಎಸ್‌ ಯೋಗೀಶ್‌, ಶ್ರೀಧರ್‌ ನಾಯರ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಉಪಸ್ಥಿತರಿದ್ದರು.

ಕೈಮಗ್ಗವು ಕೇವಲ ಒಂದು ವೃತ್ತಿಯಲ್ಲ...
ಅದು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಮತ್ತು ನಮ್ಮ ಹೆಮ್ಮೆ.

ಬನ್ನಿ, ನಮ್ಮ ನೇಕಾರರನ್ನು ಬೆಂಬಲಿಸೋಣ...
ಕರ್ನಾಟಕದ ಕೈಮಗ್ಗ ವೈಭವವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸೋಣ.

#ನೂಲಿನಲ್ಲಿ_ನಮ್ಮ_ಇತಿಹಾಸ #ಜವಳಿಯಲ್ಲಿ_ನಮ್ಮ_ಭವಿಷ್ಯ

🧵 Our Heritage. Our Threads. Our Future.🇮🇳🪡

The State-level National Handloom Day (12th National Handloom Day) celebrations were organised today in Bengaluru by the Department of Handlooms & Textiles, Government of Karnataka.

On the occasion, Smt. Rohini Sindhuri, IAS, Secretary, Department of Handlooms & Textiles, reaffirmed the Government's commitment to preserving Karnataka's rich handloom heritage while strengthening the livelihoods of the State's weaving community.

✨ Key Announcements:

🔹 The upcoming Karnataka Textile & Apparel Policy will provide special support for the promotion of the handloom sector, with a strong focus on branding, design development, digital marketing, e-commerce and market expansion.
🔹 A week-long statewide social media campaign titled "Our Heritage. Our Threads. Our Future." (ನೂಲಿನಲ್ಲಿ ನಮ್ಮ ಇತಿಹಾಸ… ಜವಳಿಯಲ್ಲಿ ನಮ್ಮ ಭವಿಷ್ಯ) was launched to showcase Karnataka's rich handloom legacy to audiences across India and the world.

🧶 On the occasion, the Handloom Products Exhibition and Sales Stalls organised as part of the National Handloom Day celebrations were inaugurated.

The programme was attended by Textiles Development Commissioner A.B. Basavaraju, Nagendra Kumar, Chairman, Karnataka Handloom Development Corporation B. J. Ganesh, Chairman, Karnataka State Cooperative Handloom Weavers' Federation Garima Pansar, Managing Director, Karnataka Handloom Development Corporation Soumya, Managing Director, Cauvery Handlooms C. S. Yogeesh and Sridhar Nayak, Additional Directors of the Department of Textiles, along with senior departmental officials, representatives of handloom cooperative societies, weavers and artisans from across the State.

Handloom is not merely an occupation...

It is **our culture, our heritage and our pride.**

Let us support our weavers and take Karnataka's extraordinary handloom legacy to every corner of the world.


Ministry of Textiles, Government of India DIPR Karnataka DK Shivakumar Chief Minister of Karnataka

"ಕರ್ನಾಟಕದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ!"ರಾಜ್ಯದ ಜವಳಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಗ್ರೀನ್ ಫೀಲ್ಡ್ ಟೆಕ್ಸ್ ಟೈಲ್ ಪ...
21/05/2026

"ಕರ್ನಾಟಕದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ!"

ರಾಜ್ಯದ ಜವಳಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಗ್ರೀನ್ ಫೀಲ್ಡ್ ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥಾಪನೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ವಿಶೇಷ ರಿಯಾಯಿತಿ ಮತ್ತು ಸಹಾಯಧನವನ್ನು ಘೋಷಿಸಿದೆ.

ಪ್ರಮುಖ ವಿವರಗಳು:

- ಮೂಲಸೌಕರ್ಯಕ್ಕೆ ಬಲ: ಪ್ರತಿ ಗ್ರೀನ್ ಫೀಲ್ಡ್ ಪಾರ್ಕ್ ಗೆ ಗರಿಷ್ಠ ₹40 ಕೋಟಿ ವರೆಗೆ (ಯೋಜನಾ ವೆಚ್ಚದ ಶೇ. 40) ಆರ್ಥಿಕ ನೆರವು.
- ಕೇಂದ್ರ-ರಾಜ್ಯ ಸಹಯೋಗ: ಕೇಂದ್ರ ಸರ್ಕಾರದ ನೆರವು ಪಡೆಯುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ. 10 ರಷ್ಟು ಆರ್ಥಿಕ ಬೆಂಬಲ.
- ಉದ್ಯೋಗಾವಕಾಶ: ಈ ಯೋಜನೆಯು ರಾಜ್ಯದಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ನವೀನ ಮತ್ತು ಆಧುನಿಕ ಜವಳಿ ಪಾರ್ಕ್ ಗಳ ಸ್ಥಾಪನೆಯ ಮೂಲಕ ಕರ್ನಾಟಕದ ಕೈಗಾರಿಕಾ ಬೆಳವಣಿಗೆಯಲ್ಲಿ ಪಾಲುದಾರರಾಗಿ.

ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಇಲಾಖೆಯನ್ನು ಸಂಪರ್ಕಿಸಿ:

ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳಿಗೆ ವಿಶೇಷ ಸಬ್ಸಿಡಿ - ಪರಿಸರ ಸಂರಕ್ಷಣೆಯೊಂದಿಗೆ ನಿಮ್ಮ ಉದ್ದಿಮೆಯನ್ನು ಬೆಳೆಸಿ!ಕರ್ನಾಟಕ ಸರ್ಕಾರವ...
14/05/2026

ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳಿಗೆ ವಿಶೇಷ ಸಬ್ಸಿಡಿ - ಪರಿಸರ ಸಂರಕ್ಷಣೆಯೊಂದಿಗೆ ನಿಮ್ಮ ಉದ್ದಿಮೆಯನ್ನು ಬೆಳೆಸಿ!

ಕರ್ನಾಟಕ ಸರ್ಕಾರವು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ, ರಾಜ್ಯದ ಎಲ್ಲಾ ಉದ್ದಿಮೆಗಳಿಗೆ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಭಾರಿ ಧನಸಹಾಯವನ್ನು ಘೋಷಿಸಿದೆ.

ವಿವರಗಳು:

- ಅರ್ಹತೆ: ಹೊಸ ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೈಗಾರಿಕೆಗಳು.
- ಸಹಾಯಧನ: ಘಟಕ ಸ್ಥಾಪನೆಯ ವೆಚ್ಚದಲ್ಲಿ 50% ಅಥವಾ ಗರಿಷ್ಠ 5 ಕೋಟಿ ರೂಪಾಯಿಗಳವರೆಗೆ ಸಹಾಯಧನ ಲಭ್ಯ.
- ವಿಶೇಷತೆ: ಪರಿಸರ ಸ್ನೇಹಿ ತಂತ್ರಜ್ಞಾನ ಹಾಗೂ ಇಟಿಪಿ (ETP) ಘಟಕಗಳ ಸ್ಥಾಪನೆಗೆ ಆದ್ಯತೆ.

ನಿಮ್ಮ ಉದ್ದಿಮೆಯನ್ನು ಹಸಿರು ಉದ್ದಿಮೆಯನ್ನಾಗಿ ಪರಿವರ್ತಿಸಿ, ಪರಿಸರ ಉಳಿಸಿ ಮತ್ತು ಸರ್ಕಾರದ ಈ ಯೋಜನೆಯ ಲಾಭ ಪಡೆಯಿರಿ.

"ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ, ಪ್ರೀತಿ ಮತ್ತು ಮಮತೆಯ ಸಾಕಾರ ಮೂರ್ತಿಯಾಗಿರುವ ಜಗತ್ತಿನ ಎಲ್ಲಾ ತಾಯಂದಿರಿಗೂ 'ವಿಶ್ವ ತಾಯಂದಿರ ದಿ...
10/05/2026

"ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ, ಪ್ರೀತಿ ಮತ್ತು ಮಮತೆಯ ಸಾಕಾರ ಮೂರ್ತಿಯಾಗಿರುವ ಜಗತ್ತಿನ ಎಲ್ಲಾ ತಾಯಂದಿರಿಗೂ 'ವಿಶ್ವ ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳು. ನಮ್ಮ ಬದುಕಿಗೆ ಅರ್ಥ ನೀಡುವ ಶಕ್ತಿ 'ತಾಯಿ'."

ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು."ಶಾಂತಿ ಮತ್ತು ಸೌಹಾರ್ದತೆಯ ದೀಪವನ್ನು ಬೆಳಗಿಸಿದ ಬುದ್ಧರ ತತ್ವಗಳನ್ನು ಪಾಲಿಸೋಣ...
01/05/2026

ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

"ಶಾಂತಿ ಮತ್ತು ಸೌಹಾರ್ದತೆಯ ದೀಪವನ್ನು ಬೆಳಗಿಸಿದ ಬುದ್ಧರ ತತ್ವಗಳನ್ನು ಪಾಲಿಸೋಣ." ವಿಶ್ವಕ್ಕೆ ಅಹಿಂಸೆ ಮತ್ತು ಪ್ರೀತಿಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧರ ತತ್ವಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಈ ಪವಿತ್ರ ದಿನದಂದು ಆಶಿಸೋಣ.

ನೂಲಿನ ನಂಟು, ಶ್ರಮದ ಕಟ್ಟು - ಎಲ್ಲರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!ತಮ್ಮ ಕೈಚಳಕದಿಂದ ನಾಡಿನ ಸಂಸ್ಕೃತಿಯನ್ನು ಉಡುಪಾಗಿಸುವ ನೇಯ್ಗ...
01/05/2026

ನೂಲಿನ ನಂಟು, ಶ್ರಮದ ಕಟ್ಟು - ಎಲ್ಲರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

ತಮ್ಮ ಕೈಚಳಕದಿಂದ ನಾಡಿನ ಸಂಸ್ಕೃತಿಯನ್ನು ಉಡುಪಾಗಿಸುವ ನೇಯ್ಗೆಯ ಬಂಧುಗಳು ನಮ್ಮ ಹೆಮ್ಮೆ. ಹಗಲಿರುಳು ಮಗ್ಗದ ಮುಂದೆ ಕುಳಿತು ಶ್ರಮಿಸುವ ನೇಕಾರರ ಬೆವರಿನ ಹನಿಗಳು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ. ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಮಸ್ತ ಕೈಮಗ್ಗ ಮತ್ತು ಜವಳಿ ಕಾರ್ಮಿಕ ಬಂಧುಗಳಿಗೆ ಗೌರವಪೂರ್ವಕ ವಂದನೆಗಳು.

ನಾಡಿನ ಸಮಸ್ತ ಜನತೆಗೆ ಜಗನ್ಮಾತೆ ತಾಯಿ ಶ್ರೀ ವಾಸವಿ ದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.
26/04/2026

ನಾಡಿನ ಸಮಸ್ತ ಜನತೆಗೆ ಜಗನ್ಮಾತೆ ತಾಯಿ ಶ್ರೀ ವಾಸವಿ ದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.

"ಸಿದ್ಧ ಉಡುಪು ವಲಯದ ಕಾರ್ಮಿಕರಿಗೆ ವೇತನ ಸಹಾಯಧನ"ಸಿದ್ದ ಉಡುಪು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಇದು ಒಂ...
23/04/2026

"ಸಿದ್ಧ ಉಡುಪು ವಲಯದ ಕಾರ್ಮಿಕರಿಗೆ ವೇತನ ಸಹಾಯಧನ"

ಸಿದ್ದ ಉಡುಪು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಇದು ಒಂದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ನಮ್ಮ ಸರ್ಕಾರದ ನೂತನ ಯೋಜನೆಯಡಿ ಸಿದ್ಧ ಉಡುಪು ಘಟಕಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ ವೇತನ ಸಹಾಯಧನವನ್ನು ನೀಡಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಸಿದ್ಧ ಉಡುಪು ವಿಭಾಗದ ವಲಯವಾರು ವಿವರಗಳು ಈ ಕೆಳಗಿನಂತಿವೆ:

- ವಲಯ 1 ರಲ್ಲಿ ಕಾರ್ಯನಿರ್ವಹಿಸುವ ಪ್ರತಿ ಕಾರ್ಮಿಕರಿಗೆ ರೂ. 3000/-
- ವಲಯ 2 ರಲ್ಲಿ ಕಾರ್ಯನಿರ್ವಹಿಸುವ ಪ್ರತಿ ಕಾರ್ಮಿಕರಿಗೆ ರೂ. 2000/- ಗಳ ಸಹಾಯಧನ ಲಭ್ಯವಿದೆ.
- ವಲಯ 3 ಮತ್ತು 4 ಕ್ಕೆ ಈ ಸೌಲಭ್ಯ ಅನ್ವಯಿಸುವುದಿಲ್ಲ.

ಕೈಗಾರಿಕಾ ಪ್ರಗತಿ ಮತ್ತು ಕಾರ್ಮಿಕರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತಂದಿರುವ ಈ ಮಹತ್ವದ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ತಕ್ಷಣವೇ ತಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ (DIC) ಅಥವಾ ಸಮೀಪದ ಕೈಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿ.

Address

Bangalore
560020

Alerts

Be the first to know and let us send you an email when Dept. Of Handloom and Textiles posts news and promotions. Your email address will not be used for any other purpose, and you can unsubscribe at any time.

Shortcuts

Share