SFI Karnataka

SFI Karnataka SFI Karnataka

UGC ಮತ್ತು NEP ವಿದ್ಯಾರ್ಥಿಗಳ ಕಣ್ಣೋಟ ಕುರಿತು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಹಾಗೂ ಬೆಂಗಳೂರು ಜಿಲ್...
06/09/2026

UGC ಮತ್ತು NEP ವಿದ್ಯಾರ್ಥಿಗಳ ಕಣ್ಣೋಟ ಕುರಿತು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಹಾಗೂ ಬೆಂಗಳೂರು ಜಿಲ್ಲಾ ಸಮಿತಿ ಆಯೋಜಿಸಿದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ದೇಶಿಸಿ JNSU ಮಾಜಿ ಅಧ್ಯಕ್ಷೆ, SFI ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಕಾಮ್ರೇಡ್ ಐಯಿಷಿ ಗೋಷ್ ವಿಷಯ ಮಂಡನೆ ಮಾಡಿದರು. ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಮಾತನಾಡಿದರು.

CEC ಸದಸ್ಯರಾದ ಸುಜಾತಾ ವೈ, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್, ಬಸವರಾಜ ಎಸ್, ದೊಡ್ಡ ಬಸವರಾಜ ಗುಳೆದಾಳ, ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಆರ್ಪಿತಾ ಗ್ರೇಸಿ, ರಾಜ್ಯ ಸಮಿತಿ ಸದಸ್ಯರಾದ ಇಮಾಮ್ ಸಾಬ್ ನಾಧಫ್, ಶಿವರೆಡ್ಡಿ, ವಿರೇಶ ರಾಠೋಡ್, ಅನಿಲ ಆರ್, ಮುಖಂಡರಾದ ರಾಜಿ, ಅಂಕಿತಾ, ಸೋನಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

SFI - Students' Federation of India
SFI Karnataka Aishe Ghosh Adarsh M Saji

ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿ ರಂಜಿತಾ  ಶಂಕಾಸ್ಪದ ಅನುಮಾನಾಸ್ಪದ ಸಾವು ಪ್ರಕರಣ ಕುರಿತು.   ಹಾಸ್ಟೆಲ್ ವಿದ್ಯಾ...
05/09/2026

ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿ ರಂಜಿತಾ ಶಂಕಾಸ್ಪದ ಅನುಮಾನಾಸ್ಪದ ಸಾವು ಪ್ರಕರಣ ಕುರಿತು.
ಹಾಸ್ಟೆಲ್ ವಿದ್ಯಾರ್ಥಿಗಳ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ಕುಮಾರ್ ನಗವತ್ ಅವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ರಂಜಿತರವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

SFI - Students' Federation of India
SFI Karnataka

SFI ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಸಮಿತಿಗೆಕ್ರಾಂತಿಕಾರಿ ಅಭಿನಂದನೆಗಳು✊🚩SFI - Students'...
26/08/2026

SFI ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಸಮಿತಿಗೆ

ಕ್ರಾಂತಿಕಾರಿ ಅಭಿನಂದನೆಗಳು✊🚩
SFI - Students' Federation of India
Sfi haveri ✊🚩❤

26/08/2026
26/08/2026

ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಬಸವರಾಜ ಕೋರಿಮಠ ಮಾತನಾಡಿದರು.

#ಎಸ್ಎಫ್ಐ
#ಹಾವೇರಿವಿದ್ಯಾರ್ಥಿಗಳ9ನೇಜಿಲ್ಲಾಸಮ್ಮೇಳನ

SFI - Students' Federation of India
SFI Karnataka Sfi haveri Sfi Haveri

"ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಿಲ್ಲೆಯ ಸೌಹಾರ್ದತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ" ಘೊಷಣೆಯಡಿ ಇಂದ...
26/08/2026

"ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಿಲ್ಲೆಯ ಸೌಹಾರ್ದತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ" ಘೊಷಣೆಯಡಿ ಇಂದು ದಿನಾಂಕ: 25.08.2026 ರಂದು ಎಸ್ಎಫ್ಐ ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನವು ಹಾವೇರಿ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸದಸ್ಯರೂ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟ ರಾಜ್ಯ ಜಂಟಿ ಕಾರ್ಯದರ್ಶಿಯವರಾದ ಶ್ರೀಯುತ ಬಸವರಾಜ ವೀ ಕೋರಿಮಠ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಎಫ್ಐ ರಾಜ್ಯ ಅಧ್ಯಕ್ಷರಾದ ಕಾಂ. ಶಿವಪ್ಪ ಅಂಬ್ಲಿಕಲ್, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರೂ ಹಾಗೂ #ಇಡಾರಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಪರಿಮಳ ಜೈನ್, #ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲರಾದ ನಾರಾಯಣ ಕಾಳೆ, ರಾಜ್ಯ ಸಮಿತಿ ಸದಸ್ಯೆ ಕಾಂ. ರೇಣುಕಾ ಕಹಾರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಹಿರಿಯ ರೈತ-ಕಾರ್ಮಿಕ ಮುಖಂಡರಾದ ಕಾಂ. ರುದ್ರಪ್ಪ ಜಾಬೀನ, ಶ್ರೀಮತಿ ರೆಹಾನಾ ಚನ್ನಪಟ್ಟಣ, ಎಸ್ಎಫ್ಐ ಜಿಲ್ಲಾ ಮುಖಂಡರಾದ ಕಾಂ. ಅರುಣ ನಾಗವತ್, ಕಾಂ. ಚೈತ್ರ ಕೊರವರ ವೇದಿಕೆ ಮೇಲಿದ್ದರು.

ವಿವಿಧ ತಾಲೂಕಿನಿಂದ ಎಸ್ಎಫ್ಐ ಪ್ರತಿನಿಧಿಗಳು ಆಗಮಿಸಿದ್ದರು.

#ಎಸ್ಎಫ್ಐ

25/08/2026

SFI ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ

Address

SFI Karnataka State Committee. No 12, 18th Cross, Sampangiramanagara
Bangalore
560027

Alerts

Be the first to know and let us send you an email when SFI Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to SFI Karnataka:

Shortcuts

Share