Madivala PS

Directions

Madivala PS Contact information, map and directions, contact form, opening hours, services, ratings, photos, videos and announcements from Madivala PS, Police station, Madiwala, Bangalore.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂ...
03/11/2026

ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತ್ವರಿತ ಕ್ರಮ ಕೈಗೊಂಡರು. ತಾಂತ್ರಿಕ ಮಾಹಿತಿಗಳ ನೆರವಿನಿಂದ ಕಳೆದುಹೋದ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಪತ್ತೆಹಚ್ಚಿ,ಪರಿಶೀಲನೆ ನಡೆಸಿದ ನಂತರ ಅದರ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು

ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಜಿಆರ್ ಲೇಔಟ್‌ನಲ್ಲಿ, 2 ವರ್ಷದ ಮಗು ಆಕಸ್ಮಿಕವಾಗಿ ರೂಮಿನ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದ ತ...
26/10/2026

ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಜಿಆರ್ ಲೇಔಟ್‌ನಲ್ಲಿ, 2 ವರ್ಷದ ಮಗು ಆಕಸ್ಮಿಕವಾಗಿ ರೂಮಿನ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದ ತಂದೆ ಸಿಲುಕಿಕೊಂಡಿದ್ದರು. ಸಾರ್ವಜನಿಕರು 112ಕ್ಕೆ ಕರೆ ಮಾಡಿದ ತಕ್ಷಣ, ಹೊಯ್ಸಳ 194 ಸಿಬ್ಬಂದಿ ASI ಮೊಹಮ್ಮದ್ ಹಾಶಿಮ್
PC-23270 ಲಚಮಪ್ಪ ಸ್ಥಳಕ್ಕೆ ಧಾವಿಸಿ, ಕಿಟಕಿಯ ಮೂಲಕ 10 ಅಡಿ ಉದ್ದದ ಕಂಬದ ಸಹಾಯದಿಂದ ಬಾಗಿಲು ತೆರೆದು ತಂದೆಯನ್ನು ಸುರಕ್ಷಿತವಾಗಿ ರಕ್ಷಿಸಿದರು.ಸಾರ್ವಜನಿಕರ ತುರ್ತು ಕರೆಗೆ ತಕ್ಷಣ ಸ್ಪಂದಿಸಿ ಮಾನವೀಯ ಸೇವೆ ಸಲ್ಲಿಸಿದ ಹೊಯ್ಸಳ ಸಿಬ್ಬಂದಿಗೆ ಅಭಿನಂದನೆಗಳು.

ಮಡಿವಾಳ ಪೊಲೀಸ್ ಠಾಣೆಯಲ್ಲಿ  ಮೊಬೈಲ್ ಮತ್ತು ಬ್ಯಾಗ್ ಕಳೆದುಕೊಂಡಿರುವ ಕುರಿತು  ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಠಾಣೆಯ ಅಧಿಕಾರಿಗಳು...
08/10/2026

ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಮತ್ತು ಬ್ಯಾಗ್ ಕಳೆದುಕೊಂಡಿರುವ ಕುರಿತು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತ್ವರಿತ ಕ್ರಮ ಕೈಗೊಂಡರು. ತಾಂತ್ರಿಕ ಮಾಹಿತಿಗಳ ನೆರವಿನಿಂದ ಕಳೆದುಹೋದ ವಸ್ತುಗಳ ಪತ್ತೆಹಚ್ಚಿ, ಪರಿಶೀಲನೆ ನಡೆಸಿದ ನಂತರ ಅದರ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು.

14/09/2026

ಆಗ್ನೇಯ ವಿಭಾಗದ Hsrlayoutps Bcp ಪೊಲೀಸ್ ಠಾಣೆಯ ಅಧಿಕಾರಿಗಳು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ 'ಆಸರೆ' ಸಮುದಾಯ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರ ನಿವಾಸಗಳಿಗೆ ಭೇಟಿ ನೀಡಿ, ಅವರ ಆರೋಗ್ಯ, ಯೋಗಕ್ಷೇಮ ಹಾಗೂ ಸುರಕ್ಷತೆಯ ಕುರಿತು ಆತ್ಮೀಯವಾಗಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಆಲಿಸಿ, ಆರೋಗ್ಯ ತುರ್ತು ಪರಿಸ್ಥಿತಿಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯುವಂತೆ ತಿಳಿಸಿ, ಪೊಲೀಸ್‌ ಇಲಾಖೆ ಸದಾ ಅವರ ಅಗತ್ಯವಿರುವ ಎಲ್ಲ ಸಹಕಾರವನ್ನು ನಿರಂತರವಾಗಿ ಒದಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Karnataka State Police BENGALURU CITY POLICE

14/09/2026
🚨 ಬಾಲ ಕಾರ್ಮಿಕರ ವಿಶೇಷ ಕಾರ್ಯಾಚರಣೆ 🚨ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. 👮‍♂️👮‍♂️🔍 ಹೋಟೆಲ್‌ಗಳು...
13/09/2026

🚨 ಬಾಲ ಕಾರ್ಮಿಕರ ವಿಶೇಷ ಕಾರ್ಯಾಚರಣೆ 🚨
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. 👮‍♂️👮‍♂️
🔍 ಹೋಟೆಲ್‌ಗಳು, ಅಂಗಡಿಗಳು, ಗ್ಯಾರೇಜ್‌ಗಳು, ವರ್ಕ್‌ಶಾಪ್‌ಗಳು ಹಾಗೂ ಇತರೆ ವಾಣಿಜ್ಯ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, ಬಾಲಕಾರ್ಮಿಕ ನಿಯೋಜನೆ ಕುರಿತು ತಪಾಸಣೆ ಕೈಗೊಳ್ಳಲಾಯಿತು.

02/09/2026

🚫 ಮಾದಕ ವಸ್ತುಗಳಿಗೆ "ಇಲ್ಲ" ಹೇಳಿ. ಜೀವನಕ್ಕೆ "ಹೌದು" ಹೇಳಿ. 💙

ಯುವಕರೇ ನಮ್ಮ ಶಕ್ತಿ. ನೀವು ಅಥವಾ ನಿಮ್ಮ ಪರಿಚಯದ ಯಾರಾದರೂ ಮಾದಕ ವಸ್ತುಗಳ ವ್ಯಸನ, ಒತ್ತಡ, ಆತಂಕ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ, ನೆನಪಿರಲಿ—ನೀವು ಒಬ್ಬರೇ ಅಲ್ಲ.

📞 ಕರ್ನಾಟಕ ಟೆಲಿ-ಮಾನಸ್ ಸಹಾಯವಾಣಿ: 14416
🚨 ಪೊಲೀಸ್ ತುರ್ತು ಸಹಾಯವಾಣಿ: 112
ಅರ್ಹ ತಜ್ಞರು ನಿಮಗೆ:
✅ ಗೌಪ್ಯತೆಯೊಂದಿಗೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತಾರೆ.
✅ ಒತ್ತಡ, ಆತಂಕ, ಖಿನ್ನತೆ ಹಾಗೂ ವ್ಯಸನ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಮಾರ್ಗದರ್ಶನ ನೀಡುತ್ತಾರೆ.
✅ ನಿಮ್ಮ ಮಾನಸಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಸೂಕ್ತ ಸಲಹೆ ಹಾಗೂ ನೆರವು ಒದಗಿಸುತ್ತಾರೆ.

⚠️ ಒತ್ತಡ ಅಥವಾ ಭಾವನಾತ್ಮಕ ಸಂಕಷ್ಟದಲ್ಲಿರುವಾಗ ತಪ್ಪು ಅಥವಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅಂತಹ ಒಂದು ನಿರ್ಧಾರ ನಿಮ್ಮ ಜೀವನದ ಜೊತೆಗೆ ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮನ್ನು ಪ್ರೀತಿಸುವ ಎಲ್ಲರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
💙 ಮಾತನಾಡಿ. ಸಹಾಯ ಕೇಳಿ. ದೃಢವಾಗಿರಿ.
ಪ್ರತಿ ಸಮಸ್ಯೆಗೆ ಪರಿಹಾರವಿದೆ. ಸಹಾಯ ಕೇವಲ ಒಂದು ಕರೆ ದೂರದಲ್ಲಿದೆ.
Karnataka State Police BENGALURU CITY POLICE
#14416

02/09/2026

ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು ವ್ಯಾಪ್ತಿಯ ಪಿ.ಯು. ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ತಡೆಗಟ್ಟುವಿಕೆ, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ ಹಾಗೂ ಸ್ವಯಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಹಾಗೂ ತುರ್ತು ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ KSP App, Dial 112 ಹಾಗೂ 1930 ಸೈಬರ್ ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಅರಿವು ಮೂಡಿಸಿದರು.
Karnataka State Police BENGALURU CITY POLICE
#ಬೇಡಾBro

Address

Madiwala
Bangalore

Website

Alerts

Be the first to know and let us send you an email when Madivala PS posts news and promotions. Your email address will not be used for any other purpose, and you can unsubscribe at any time.

Shortcuts

Share

Category