Greater Bangalore JDS

Greater Bangalore JDS Janata Dal (Secular), JDS IT WING Bengaluru official page under the parent body of Bengaluru Mahanagara Janata Dal (Secular).

Social Media team dedicated to communicate the Party Decisions, Programs and its idelogies to each & every corner of the country.

ಬೆಂಗಳೂರಿನ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನಕ್ಕೆ ಮಾನ್ಯ ಕೇಂ...
27/09/2026

ಬೆಂಗಳೂರಿನ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನಕ್ಕೆ ಮಾನ್ಯ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಣ್ಣನವರೊಂದಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಆಶೀರ್ವಾದ ಹಾಗೂ ಅನುಗ್ರಹ ಪಡೆದೆ. 🙏

ಈ ಪವಿತ್ರ ಸಂದರ್ಭದಲ್ಲಿ ದೇವರ ಕೃಪೆ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಿದೆ. 🙏✨

ತುಮಕೂರು ರಸ್ತೆಯ ಮಾದಾವರ ಬಳಿ ಕೊನೆಗೊಳ್ಳುವ ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (PRR)ಗೆ ಸಂಪರ್ಕಿಸುವ **ಇಂಟಿಗ್ರೇಶನ್ ಲಿಂಕ್ ರಸ್ತೆ...
27/09/2026

ತುಮಕೂರು ರಸ್ತೆಯ ಮಾದಾವರ ಬಳಿ ಕೊನೆಗೊಳ್ಳುವ ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (PRR)ಗೆ ಸಂಪರ್ಕಿಸುವ **ಇಂಟಿಗ್ರೇಶನ್ ಲಿಂಕ್ ರಸ್ತೆ ಯೋಜನೆಯಿಂದ ಬಾಧಿತರಾದ ನಿವೇಶನದಾರರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ**, ಭಾರತ ಸರ್ಕಾರದ ಮಾನ್ಯ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ **ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಣ್ಣನವರ** ಜೊತೆ ಭಾಗವಹಿಸಿದೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ **ಶ್ರೀ ಟಿ.ಎನ್. ಜವರಾಯಗೌಡರು, ಶ್ರೀ ಇ. ಕೃಷ್ಣಪ್ಪ**, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ **ಶ್ರೀ ಎಂ. ಮುನಿಸಾಮಪ್ಪ**, ಯಲಹಂಕ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ **ಶ್ರೀ ವೇಣುಗೋಪಾಲ್**, ಗ್ರೇಟರ್ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ **ಶ್ರೀಮತಿ ಶೈಲಜಾ ರಾವ್**, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ **ಶ್ರೀ ಕೆ.ಎನ್. ಪುಟ್ಟೇಗೌಡರು**, ಪಕ್ಷದ ಮುಖಂಡರು ಹಾಗೂ ಬಾಧಿತ ನಿವೇಶನದಾರರು ಉಪಸ್ಥಿತರಿದ್ದರು.

ಬಾಧಿತ ನಿವೇಶನದಾರರ ಸಮಸ್ಯೆಗಳನ್ನು ಆಲಿಸಿ, ಅವರ ಅಹವಾಲುಗಳನ್ನು ದಾಖಲಿಸಿಕೊಂಡು, ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟವರ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಯಿತು. 🙏

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಮಾನ್ಯ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾ...
27/09/2026

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಮಾನ್ಯ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಣ್ಣನವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದೆ. 🙏

27/09/2026

ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರೊಂದಿಗೆ ಸಭೆ, ತೋಟದಗುಡ್ಡದಹಳ್ಳಿ, ಮಾದಾವರ.

26/09/2026

ಹೊಸಕೇರಹಳ್ಳಿಯ ಗಜಪಡೆ ಗೆಳೆಯರು ಆಯೋಜಿಸಿದ್ದ ಗಣಪತಿ ಕಾರ್ಯಕ್ರಮಕ್ಕೆ ನನ್ನನ್ನು ಆತ್ಮೀಯವಾಗಿ ಆಹ್ವಾನಿಸಿ, ಮಾತನಾಡಲು ಅವಕಾಶ ನೀಡಿದದ್ದು ತುಂಬಾ ಸಂತೋಷ ತಂದಿತು. 🙏

ಅದೇ ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸಿ ಗೌರವಿಸಿದ ಗಜಪಡೆ ಗೆಳೆಯರಿಗೆ ಹೃತ್ಪೂರ್ವಕ ಧನ್ಯವಾದಗಳು. ❤️🙏

ಶ್ರೀ H.M. ರಮೇಶ್ ಗೌಡ್ರು
ಮಾಜಿ ಶಾಸಕರು ಹಾಗೂ ಗ್ರೇಟರ್ ಬೆಂಗಳೂರು ಜಿಲ್ಲಾ ಅಧ್ಯಕ್ಷರು

26/09/2026

ಪೊಲೀಸರ ವಶದಲ್ಲಿರುವ ಬಿಡದಿ ರೈತರ ಭೇಟಿ. ಚನ್ನಪಟ್ಟಣ

25/09/2026

ಕಾಂಗ್ರೆಸ್‌ ಬೋಗಸ್‌ ಗ್ಯಾರಂಟಿಗಳ ಬಗ್ಗೆ Indian National Congress - Karnataka ಶಾಸಕರೇ ತಿರುಗಿಬಿದ್ದಿದ್ದಾರೆ.
ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲವಿದ್ದರೂ ಸರ್ಕಾರ ನಯಾಪೈಸೆ ಅನುದಾನ ನೀಡುತ್ತಿಲ್ಲ, ರೈತರಿಗೆ ಪರಿಹಾರ ಘೋಷಿಸುತ್ತಿಲ್ಲ.
ಗ್ಯಾರಂಟಿಗಳೆಲ್ಲಾ ಬರೀ ವೇಸ್ಟ್‌ ! ಅಭಿವೃದ್ಧಿಯ ಅರ್ಧ ಹಣ ಅದಕ್ಕೆ ವ್ಯರ್ಥವಾಗುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷದ ಸದಸ್ಯ ತಿಪ್ಪಣ್ಣ ಕಮಕನೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

25/09/2026

ಕಡೇಚೂರು ಬಾದ್ಯಾಲ ಕೈಗಾರಿಕಾ ಪ್ರದೇಶದಲ್ಲಿ ಕೊರೆಸಿದ 12 ಬೋರ್‌ವೆಲ್‌ಗಳಲ್ಲಿ ರಾಸಾಯನಿಕಯುಕ್ತ ನೀರು ಬರುತ್ತಿದ್ದು, ಇದನ್ನು ಕುಡಿದು ಕಳೆದ ತಿಂಗಳು ಮೂವರು ಅಮಾಯಕರು ಸಾವನ್ನಪ್ಪಿದ್ದಾರೆ.
ಈ ಭಾಗದ ನೀರು ಕುಡಿಯಲು ಯೋಗ್ಯವಲ್ಲ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ವರದಿ ನೀಡಿದರೂ ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಭಾಗದ ರೈತರಿಗೆ 7 ಗಂಟೆ ತ್ರೀಫೇಸ್ ಕರೆಂಟ್‌ ನೀಡುವ ಭರವಸೆ ಸಂಪೂರ್ಣ ಸುಳ್ಳಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ 50ಕ್ಕೂ ಹೆಚ್ಚು ಬಾರಿ ಕಡಿತ ಉಂಟಾಗುತ್ತಿದೆ. ಸುಟ್ಟುಹೋದ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಲು ಕನಿಷ್ಠ 20-25 ದಿನಗಳು ಬೇಕಾಗುತ್ತಿದ್ದು, ಟ್ರಾನ್ಸ್‌ಫಾರ್ಮರ್ ನೀಡಲು ಅಧಿಕಾರಿಗಳು ಲಂಚ ಕೇಳುವ ಭ್ರಷ್ಟ ವ್ಯವಸ್ಥೆ ನಿರ್ಮಾಣವಾಗಿದೆ. ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ.
- ಶ್ರೀ ಶರಣಗೌಡ ಕಂದಕೂರ, ಶಾಸಕರು , ಗುರುಮಿಟ್ಕಲ್‌ ವಿಧಾನಸಭಾ ಕ್ಷೇತ್ರ
#ವಿಧಾನಸಭೆ

25/09/2026

ಕಾಂಗ್ರೆಸ್ ಸರ್ಕಾರದ ಕಳ್ಳಾಟ ಬಯಲಾಗುವ ಭಯವೇ? KPSC ಹಗರಣದ ಸತ್ಯವನ್ನು ಮುಚ್ಚಿಹಾಕುವ ಷಡ್ಯಂತ್ರ!
ಉಚ್ಚ ನ್ಯಾಯಾಲಯವೇ ರಚಿಸಿರುವ SIT, ನೇರವಾಗಿ ನ್ಯಾಯಾಲಯದ ನಿಗಾ ಹಾಗೂ ಉಸ್ತುವಾರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಸಚಿವ Priyank Kharge ಯವರ ಹಸ್ತಕ್ಷೇಪಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎನ್ನುವುದು ಭ್ರಷ್ಟ Indian National Congress - Karnataka ನಾಯಕರಿಗೆ ಚೆನ್ನಾಗಿ ಗೊತ್ತಿದೆ.
ಒಂದು ವೇಳೆ ತನಿಖೆ ತೀವ್ರಗೊಂಡು “ಸರ್ಕಾರಿ ಹುದ್ದೆಗಳ ಮಾರಾಟ” ಹಗರಣದಲ್ಲಿ ಸರ್ಕಾರದ ಶಾಸಕರು, ಸಚಿವರ ಹೆಸರುಗಳು ಬಯಲಾದರೆ, ಈ SIT ತಂಡದ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರಲು ಸಾಧ್ಯವಿಲ್ಲ ಎನ್ನುವ ಭಯ DK Shivakumar ಸರ್ಕಾರವನ್ನು ಕಾಡುತ್ತಿದೆ.
ಇದಕ್ಕೆ ಬದಲಾಗಿ, ಪ್ರಕರಣದ ತನಿಖೆ CID ಬಳಿಯೇ ಇದ್ದರೆ, ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿರುತ್ತದೆ ಹಾಗೂ ಬೇಕಾದಂತೆ ಪ್ರಕರಣವನ್ನು ತಿರುಚಬಹುದು, ತಮಗೆ ಬೇಕಾದವರನ್ನು ರಕ್ಷಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು.
ಈಗ ಹೈಕೋರ್ಟ್ ತಾನೇ ಖುದ್ದಾಗಿ SIT ರಚನೆ ಮಾಡಿರುವುದರಿಂದ, ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಆತಂಕದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹೈಕೋರ್ಟ್ ಆದೇಶದ ವಿರುದ್ಧವೇ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿರುವುದು ಅತ್ಯಂತ ಹೇಡಿತನ ಮತ್ತು ನಾಚಿಗೇಡಿನ ಸಂಗತಿ.
ಸರ್ಕಾರಿ ಅಧಿಕಾರಿಗಳಿಗೆ ನೀಡುವ ಲಂಚವನ್ನು "ಗೌರವ ಧನ" ಎಂದು ವಿಜೃಂಭಿಸಿದ ಈ ಭ್ರಷ್ಟರ “ಕೈ” ಸರ್ಕಾರದಿಂದ KPSC ಹಗರಣದ ಬಗ್ಗೆ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವೇ ? ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಶೀಘ್ರದಲ್ಲೇ ಬಯಲಾಗಲಿದೆ.

25/09/2026

ಭೀಕರ ಬರದಿಂದ ನಲುಗಿರುವ ರೈತರು ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬೇಕು.
- ಶ್ರೀ ಸಮೃದ್ಧಿ ಮಂಜುನಾಥ್‌, ಶಾಸಕರು, ಮುಳಬಾಗಿಲು ವಿಧಾನಸಭಾ ಕ್ಷೇತ್ರ
#ವಿಧಾನಸಭೆ

Address

No. 19/1, JP BHAVAN, Platform Road, Next To Krishna Flour Mill, Sheshadripuram
Bangalore
560020

Alerts

Be the first to know and let us send you an email when Greater Bangalore JDS posts news and promotions. Your email address will not be used for any other purpose, and you can unsubscribe at any time.

Shortcuts

Share