15/10/2026
ಇಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ “ಮಾದಕ ದ್ರವ್ಯ ವಿರುದ್ಧದ ಹೋರಾಟ” ಘೋಷ ವಾಕ್ಯದಡಿಯಲ್ಲಿ ಕರ್ನಾಟಕ ಪೊಲೀಸರ ಜಾಗೃತಿ ಅಭಿಯಾನ ಮತ್ತು ರಾಷ್ಟ್ರೀಯ ಏಕತಾ ದಿವಸ್ ಪ್ರಯುಕ್ತ ಏಕತಾ ಪರೇಡ್ ಮೋಟರ್ ಸೈಕಲ್ ಜಾಥಾಗೆ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ, ಡಾ. ಎಂ. ಎ ಸಲೀಂ ಡಿಜಿ ಮತ್ತು ಐಜಿಪಿ, ಪೊಲೀಸ್ ಪಡೆಯ ಮುಖ್ಯಸ್ಥರು, ಕರ್ನಾಟಕ ರಾಜ್ಯ, ಡಾ. ಪ್ರಣವ್ ಮೊಹಂತಿ ಡಿಜಿಪಿ ಸಿಐಡಿ, ಶ್ರೀ ಬಿ. ಕೆ ಸಿಂಗ್, ಎಡಿಜಿಪಿ, ಸಿಐಡಿ ಡಾ. ವಿಪುಲ್ ಕುಮಾರ್ ಎಡಿಜಿಪಿ, ಸಿ.ಆರ್.ಪಿ.ಎಫ್ ಬೆಂಗಳೂರು.ಶ್ರೀ ಅಮಿತ್ ಸಿಂಗ್, ಐಜಿಪಿ ಕೆ.ಎಸ್.ಆರ್.ಪಿ, ಶ್ರೀ ಸಿ.ಕೆ. ಬಾಬಾ, ಡಿಐಜಿಪಿ, ಕೆ.ಎಸ್.ಆರ್.ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.